Madhuri Dixit:ದೃಶ್ಯವೊಂದಕ್ಕೆ ಕುಪ್ಪುಸ ಬಿಚ್ಚಬೇಕೆಂಬ ಒಪ್ಪಂದವಾಗಿತ್ತು..ಸೆಟ್ಟಿಗೆ ಬಂದ್ಮೇಲೆ ಮಾಧುರಿ ಒಪ್ಪಲಿಲ್ಲ;ಮುಂದೇನಾಯ್ತ?
ಮಾಧುರಿ ದೀಕ್ಷಿತ್ ಬಾಲಿವುಡ್ ಕಂಡ ಅತ್ಯದ್ಭುತ ನಟಿಯರಲ್ಲಿ ಒಬ್ಬರು. ಮಾಧುರಿ ಡ್ಯಾನ್ಸ್‌ಗೆ, ಲುಕ್‌ಗೆ, ನಟನೆಗೆ ಫಿದಾ ಆಗದವರೇ ಇಲ್ಲ. ತನ್ನ ವೃತ್ತಿ ಬದುಕಿನಲ್ಲಿ ಈಕೆ ನಟಿಸಿದ ಬಹುತೇಕ ಎಲ್ಲಾ ಸಿನಿಮಾಗಳು ನೆನಪಿನಲ್ಲಿ ಉಳಿಯುತ್ತವೆ. ವಿವಾದವನ್ನು ಮೈ ಮೇಲೆ ಎಳೆದುಕೊಳ್ಳದೆ ನಾಜೂಕಾಗಿ ವೃತ್ತಿ ಜೀವನ ನಡೆಸಿದ್ದಾರೆ.
ಸಿನಿಮಾರಂಗದಲ್ಲಿ ಅದೆಷ್ಟೇ ಜಾಗರೂಕರಾಗಿ ಹೆಜ್ಜೆ ಇಟ್ಟಿದ್ದರೂ ಒಮ್ಮೆ ಮಾಧುರಿ ವಿವಾದದಲ್ಲಿ ಸಿಕ್ಕಿಕೊಂಡಿದ್ದರು. ಆ ಘಟನೆಯನ್ನು ಸುಮಾರು 34 ವರ್ಷಗಳ ಬಳಿಕ ಬಾಲಿವುಡ್ ನಿರ್ದೇಶಕ ಟಿನು ಆನಂದ್ ರಿವೀಲ್ ಮಾಡಿದ್ದಾರೆ.

1989ರಲ್ಲಿ ಟಿನು ಆನಂದ್ ನಿರ್ದೇಶಿಸುತ್ತಿದ್ದ 'ಶನಖ್ತ್' ಸಿನಿಮಾ ವೇಳೆ ಒಂದು ಘಟನೆ ನಡೆದಿತ್ತು. ಅದೊಂದು ದೃಶ್ಯದಲ್ಲಿ ಮಾಧುರಿ ದೀಕ್ಷಿತ್ ಬ್ರಾ ತೊಟ್ಟು ನಟಿಸಬೇಕಿತ್ತು. ಅದಕ್ಕೆ ತಕರಾರು ತೆಗೆದಿದ್ದರು. ಆ ದೃಶ್ಯದ ಚಿತ್ರೀಕರಣದ ವೇಳೆ ನಡೆದ ಘಟನೆಯನ್ನು ಟಿನು ಆನಂದ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಏನಿದು ಮಾಧುರಿ ದೀಕ್ಷಿತ್ ಗಲಾಟೆ
ಮಾಧುರಿ ದೀಕ್ಷಿತ್ ಆಗ ಯಶಸ್ಸಿನ ಉತ್ತುಂಗದಲ್ಲಿದ್ದರು. ಇತ್ತ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್. ಇಬ್ಬರೂ ಅದೇ ಮೊದಲ ಬಾರಿಗೆ 'ಶನಖ್ತ್' ಅನ್ನೋ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದರು. ಈ ಸಿನಿಮಾವನ್ನು ಟಿನು ಆನಂದ್ ನಿರ್ದೇಶನ ಮಾಡುತ್ತಿದ್ದರು. ಸಿನಿಮಾಗೆ ಸಿಹಿ ಮಾಡುವ ಮೊದಲೇ ಒಂದು ದೃಶ್ಯದಲ್ಲಿ ಬ್ರಾನಲ್ಲಿ ಕಾಣಿಸಿಕೊಳ್ಳಬೇಕು ಎಂದು ಒಪ್ಪಂದ ಆಗಿತ್ತು. ಆದರೆ, ಶೂಟಿಂಗ್ ಸೆಟ್ಟಿಗೆ ಬರುತ್ತಿದ್ದಂತೆ ಮಾಧುರಿ ದೀಕ್ಷಿತ್ ಉಲ್ಟಾ ಹೊಡೆದಿದ್ದರು. ಆ ವೇಳೆ ಟಿನು ಆನಂದ್ ಹಾಗೂ ಮಾಧುರಿಗೆ ಗಲಾಟೆ ನಡೆದಿತ್ತು.

'ಶನಖ್ತ್' ಸಿನಿಮಾದ ದೃಶ್ಯ ಯಾವುದು?
ನಿರ್ದೇಶಕ ಟಿನು ಆನಂದ್ ರೇಡಿಯೊ ನಶಾಗೆ ಸಂದರ್ಶನ ನೀಡಿದ್ದರು. ಈ ವೇಳೆ 'ಶನಖ್ತ್' ಸಿನಿಮಾದ ಆ ದೃಶ್ಯವೇನು? ಅನ್ನೋದನ್ನು ವಿವರಿಸಿದ್ದಾರೆ. "ಒಂದು ದೃಶ್ಯದಲ್ಲಿ ಅಮಿತಾಭ್ ಬಚ್ಚನ್ ಅನ್ನು ವಿಲನ್ ಕಟ್ಟಿ ಹಾಕಿರುತ್ತಾರೆ. ಮಾಧುರಿಯನ್ನು ರಕ್ಷಣೆ ಮಾಡುವುದಕ್ಕೆ ಯತ್ನಿಸುತ್ತಾರೆ. ಆದರೆ, ವಿಲನ್‌ಗಳ ಬಲವೇ ಹೆಚ್ಚಿರುತ್ತೆ. ಆ ಮಾಧುರಿ ವಿಲನ್‌ಗಳಿಗೆ ಎದುರಿಗೆ ಹೆಣ್ಣು ನಿಂತಿರುವಾಗ ಆ ವ್ಯಕ್ತಿಯನ್ನು ಯಾಕೆ ಕಟ್ಟು ಹಾಕಿದ್ದಾರಾ? ಎಂದು ಕೇಳುವ ದೃಶ್ಯವಿತ್ತು." ಎಂದು ನಿರ್ದೇಶಕ ಟಿನು ಆನಂದ್ ವಿವರಿಸಿದ್ದಾರೆ.
ಗಲಾಟೆ ನಡೆದಿದ್ದು ಯಾಕೆ?
ಈ ದೃಶ್ಯದಲ್ಲಿ ಮಾಧುರಿ ದೀಕ್ಷಿತ್ ಬ್ರಾನಲ್ಲಿ ಕಾಣಿಸಿಕೊಳ್ಳಬೇಕಿತ್ತು. ಇದನ್ನು ಟಿನು ಆನಂದ್ ಸಿನಿಮಾ ಆರಂಭ ಆಗುವುದಕ್ಕೂ ಮೊದಲೇ ಮಾಧುರಿಗೆ ವಿವರಿಸಿದ್ದರು. ಮಾಧುರಿ ಕೂಡ ಈ ದೃಶ್ಯದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದರು ಎಂದು ಟಿನು ಆನಂದ್ ಈ ಸಂದರ್ಶನದಲ್ಲಿ ಹೇಳಿದ್ದಾರೆ. ಆದರೆ, ಸಿನಿಮಾ ಸೆಟ್ಟಿಗೆ ಬಂದಾಗ, ಮಾಧುರಿ ದೀಕ್ಷಿತ್ ಈ ದೃಶ್ಯದಲ್ಲಿ ನಟಿಸಲಿ ಒಪ್ಪಲಿಲ್ಲ. ಹೀಗಾಗಿ ಮೊದಲ ದಿನವೇ ರಾದ್ಧಾಂತ ನಡೆದಿತ್ತು.
ಒಳ ಉಡುಪಿನಲ್ಲಿ ಯಾಕೆ ಕಾಣಿಸಿಕೊಳ್ಳಬೇಕಿತ್ತು?
ನಿರ್ದೇಶಕ ಟಿನು ಆನಂದ್ ಹೇಳುವ ಪ್ರಕಾರ, ಮಾಧುರಿ ದೀಕ್ಷಿತ್ ಸಹಾಯಕ್ಕೆ ಬಂದಿದ್ದ ಹೀರೊ ಸಂಕಷ್ಟದಲ್ಲಿದ್ದಾನೆ. ಹೀಗಾಗಿ ಆತನನ್ನು ರಕ್ಷಿಸಲು ಖಳನಾಯಕರಿಗೆ ತನ್ನನ್ನು ಅರ್ಪಿಸಿಕೊಳ್ಳಲು ಸಿದ್ಧಳಾಗುವ ದೃಶ್ಯವದು. ಈ ಕಾರಣಕ್ಕೆ ಮಾಧುರಿ ದೀಕ್ಷಿತ್ ಬ್ರಾ ನಲ್ಲಿ ಕಾಣಿಸಿಕೊಳ್ಳಬೇಕಿತ್ತು ಎಂಬುದು ಟಿನು ಆನಂದ್ ವಾದ. ಈ ವೇಳೆ ಅಮಿತಾಭ್ ಬಚ್ಚನ್ ಮಧ್ಯಸ್ಥಿಕೆ ವಹಿಸಿದ್ದರು ಎಂದು ಟಿನು ಆನಂದ್ ಸಂದರ್ಶನದಲ್ಲಿ ವಿವರಿಸಿದ್ದಾರೆ. ಅಂದ್ಹಾಗೆ 'ಶನಖ್ತ್' ಮಾಧುರಿ ದೀಕ್ಷಿತ್ ಹಾಗೂ ಟಿನು ಆನಂದ್ ಒಟ್ಟಿಗೆ ಕೆಲಸ ಮಾಡಿದ ಮೊದಲ ಹಾಗೂ ಕೊನೆಯ ಸಿನಿಮಾ ಆಯ್ತು.


Click it and Unblock the Notifications











