ವಿಷ್ಣುದಾದ ಜೊತೆಗೆ ನಟಿಸಿದ ಸಿನಿಮಾ ನೆನೆದ ಅಕ್ಷಯ್ ಕುಮಾರ್.. ಶ್ರುತಿ ಹಾಸನ್ ವರ್ತನೆಗೆ ಕನ್ನಡಿಗರ ಕಿಡಿಕಾರಿದ್ದೇಕೆ?

ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟ ಅಕ್ಷಯ್ ಕುಮಾರ್. ಇತ್ತೀಚೆಗೆ ಸಾಲು ಸಾಲು ಸಿನಿಮಾಗಳು ಸೋಲುಂಡಿದ್ದರೂ ಅಕ್ಷಯ್ ಕುಮಾರ್ ಖದರ್ ಏನೂ ಕಮ್ಮಿಯಾಗಿಲ್ಲ. ಇಷ್ಟೇ ಅಲ್ಲದೆ ಬಾಲಿವುಡ್‌ನ ಅತ್ಯಂತ ಶಿಸ್ತಿನ ನಟ ಕೂಡ ಇವರೇ.

ಸಮಯಕ್ಕೆ ಸರಿಯಾಗಿ ಶೂಟಿಂಗ್‌ಗೆ ಹೋಗುತ್ತಾರೆ. ಕತ್ತಲಾಗುವುದರೊಳಗೆ ಮನೆ ಸೇರಿಕೊಳ್ಳುತ್ತಾರೆ. 7 ಗಂಟೆಯೊಳಗೆ ಊಟ ಮುಗಿಸುತ್ತಾರೆ. ಬೇಗನೆ ನಿದ್ದೆ, ಕೋಳಿ ಕೂಗುವುದಕ್ಕೂ ಮುನ್ನವೇ ಎದ್ದು ಬಿಡುತ್ತಾರೆ. ಇದು ಅಕ್ಷಯ್ ಕುಮಾರ್ ದೈನಂದಿನ ಜೀವನ. ಅದಕ್ಕೆ ಅಕ್ಷಯ್ ಕುಮಾರ್ ಜೀವನದಲ್ಲಿ ಯಶಸ್ಸು ಕಂಡಿದ್ದಾರೆ.

ಬಾಲಿವುಡ್‌ನ ಈ ಸಕ್ಸಸ್‌ಫುಲ್ ನಟ ಒಮ್ಮೆ ತಮ್ಮದೇ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಶನದಲ್ಲಿ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಕೂಡ ಇದ್ದರು. ಈ ವೇಳೆ ಅಕ್ಷಯ್ ಕುಮಾರ್ ನಟಿಸಿದ ಕನ್ನಡ ಸಿನಿಮಾ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಬಗ್ಗೆ ಮಾತಾಡುತ್ತಿದ್ದರು. ಈ ವೇಳೆ ಶ್ರುತಿ ಹಾಸನ್ ಕೊಟ್ಟ ಪ್ರತಿಕ್ರಿಯೆ ಕನ್ನಡಿಗರನ್ನು ಕೆರಳಿಸಿತ್ತು. ಅಸಲಿಗೆ ಆ ಘಟನೆ ಏನು? ಅಂದು ಏನಾಯ್ತು ? ಅನ್ನೋದನ್ನು ತಿಳಿಯಲು ಮುಂದೆ ಓದಿ.

Akshay kumar Shruti Haasan vishnuvardhan display

56ನೇ ವರ್ಷಕ್ಕೆ ಕಾಲಿಟ್ಟ ಅಕ್ಷಯ್ ಕುಮಾರ್

ಇಂದು (ಸೆಪ್ಟೆಂಬರ್ 9) ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ಹುಟ್ಟುಹಬ್ಬದ ಸಂಭ್ರಮ. 56ನೇ ವರ್ಷಕ್ಕೆ ಕಾಲಿಟ್ಟಿರೋ ಅಕ್ಷಯ್ ಕುಮಾರ್ ಸೂಪರ್‌ಸ್ಟಾರ್ ಪಟ್ಟಕ್ಕೇರಿದ್ದಾರೆ. ಚಿತ್ರರಂಗದಲ್ಲಿ ಇಷ್ಟೊಂದು ಯಶಸ್ಸು ಕಂಡಿದ್ದರೂ, ಅಕ್ಷಯ್ ಕುಮಾರ್ ಗರ್ವ, ಅಹಂಕಾರ ಅನ್ನೋದನ್ನೇ ಮೈಗೂಡಿಸಿಕೊಂಡಿಲ್ಲ. ಅದೇ ಎನರ್ಜಿಯಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಬರ್ತ್‌ಡೇ ದಿನವೇ ಅಕ್ಷಯ್ ಕುಮಾರ್ ಅಭಿನಯದ ಹೊಸ ಸಿನಿಮಾಗಳು ಅನೌನ್ಸ್ ಆಗಿವೆ. ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಹಳೇ ವಿಡಿಯೋ ವೈರಲ್ ಆಗುತ್ತಿದ್ದು, ಅಕ್ಷಯ್‌ಗೆ ಮೆಚ್ಚುಗೆ ಹಾಗೂ ಶ್ರುತಿ ಹಾಸನ್‌ಗೆ ಬೈಗುಳಗಳು ಸಿಗುತ್ತಿವೆ.

ಶ್ರುತಿ ಹಾಸನ್ ವಿರುದ್ಧ ಕನ್ನಡಿಗರು ಕಿಡಿಕಾರಿದ್ದೇಕೆ?

ಸುಮಾರು ಎಂಟು ವರ್ಷಗಳ ಹಿಂದೆ ಅಕ್ಷಯ್ ಕುಮಾರ್ ಹಾಗೂ ಶ್ರುತಿ ಹಾಸನ್ ಜೋಡಿಯಾಗಿ 'ಗಬ್ಬರ್ ಈಸ್ ಬ್ಯಾಕ್' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ 2015ರಲ್ಲಿ ತೆರೆಕಂಡಿತ್ತು. ಈ ವೇಳೆ ಅಕ್ಷಯ್ ಕುಮಾರ್ ಹಾಗೂ ಶ್ರುತಿ ಹಾಸನ್ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಆಗ ಅಕ್ಷಯ್ ಕುಮಾರ್ ಸಾಹಸ ಸಿಂಹ ವಿಷ್ಣುದಾದ ಜೊತೆ ನಟಿಸಿದ್ದ 'ವಿಷ್ಣು ವಿಜಯ'ವನ್ನು ನೆನಪಿಸಿಕೊಂಡಿದ್ದರು. ಆ ಮಾತನ್ನು ಹೇಳುತ್ತಿದ್ದಂತೆ ಶ್ರುತಿ ಹಾಸನ್ ಕೊಟ್ಟ ಪ್ರತಿಕ್ರಿಯೆ ಕನ್ನಡಿಗರನ್ನು ಕೆರಳಿಸಿತ್ತು. ಈಗ ಅಕ್ಷಯ್ ಕುಮಾರ್ ಹುಟ್ಟುಹಬ್ಬದ ಸಂದರ್ಭದಲ್ಲಿಯೇ ಆ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ.

ವಿಷ್ಣುದಾದ ಬಗ್ಗೆ ಅಕ್ಷಯ್ ಹೇಳಿದ್ದೇನು?

"ನಾನು ಹಿಂದಿ ಸಿನಿಮಾ ಮಾಡುತ್ತಿದೆ. ಅದು ಇಬ್ಬರು ಹೀರೊಗಳಿದ್ದ ಸಿನಿಮಾ. ಇನ್ನೊಬ್ಬ ಹೀರೊ ಕನ್ನಡದ ನಟ (ಡಾ.ವಿಷ್ಣುವರ್ಧನ್) ಆಗಿದ್ದರು. ಅವರು ಈ ಸಿನಿಮಾವನ್ನು ಕನ್ನಡದಲ್ಲಿ ಮಾಡುತ್ತೇನೆ ಎಂದು ಹೇಳಿದ್ರು. ನನ್ನ ಪಾತ್ರವನ್ನು ನಾನೇ ಕನ್ನಡದಲ್ಲಿ ಮಾಡುತ್ತೇನೆ ಎಂದು ಹೇಳಿದ್ದೆ. ಆ ಸಿನಿಮಾ ಹೆಸರೇ ವಿಷ್ಣು ವಿಜಯ" ಎಂದು ಅಕ್ಷಯ್ ಕುಮಾರ್ ಹೇಳುತ್ತಿದ್ದಂತೆ.. ಓ ಆ ಸಿನಿಮಾದಲ್ಲಿ ನಟಿಸಿದ್ರಾ ಅಂತ ಮುಸಿ ಮುಸಿ ನಕ್ಕಿದ್ದರು. ಆ ವಿಡಿಯೋದಲ್ಲಿ ಶ್ರುತಿ ಹಾಸನ್ ವರ್ತನೆ ಅಂದು ಕನ್ನಡಿಗರನ್ನು ಕೆಂಗಣ್ಣಿಗೆ ಗುರಿಯಾಗಿತ್ತು.

ಹಳೇ ವಿಡಿಯೋ ಮತ್ತೆ ವೈರಲ್

ಅಕ್ಷಯ್ ಕುಮಾರ್ ಹುಟ್ಟುಹಬ್ಬದ ದಿನದಂದೇ ಮತ್ತೆ ಹಳೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ ಮತ್ತೆ ಶ್ರುತಿ ಹಾಸನ್ ವಿರುದ್ಧ ಕನ್ನಡಿಗರು ತಮ್ಮ ಅಸಮಧಾನವನ್ನು ಹೊರ ಹಾಕುತ್ತಿದ್ದಾರೆ.

More from Filmibeat

English summary
Viral Shruti Haasan Trolled When Akshay Kumar talks about Dr.Vishnuvardhan and Vishnu Vijay
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X