"ಹೌದು..ನಟಿ ಸೌಂದರ್ಯಾ ಬಗ್ಗೆ ನನಗೆ ಒಲವಿತ್ತು": ಈ ಬಗ್ಗೆ ಜಗಪತಿ ಬಾಬು ಕೊಟ್ಟ ಪ್ರತಿಕ್ರಿಯೆ ಏನಾಗಿತ್ತು?

ಚಿತ್ರರಂಗ ಅಂದ್ಮೇಲೆ ಅಲ್ಲಿ ಗಾಳಿಸುದ್ದಿಗಳಿಗೇನು ಕಮ್ಮಿ ಇರಲ್ಲ. ಒಬ್ಬ ನಟಿ ಒಂದಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಒಬ್ಬ ನಟನೊಂದಿಗೆ ನಟಿಸಿದರೆ ಅಲ್ಲೊಂದು ಸುದ್ದಿ ಬೇಡ ಅಂದರೂ ಹುಟ್ಟಿಕೊಳ್ಳುತ್ತೆ. ಹಾಗೇ ಭಾರತೀಯ ಚಿತ್ರರಂಗದಲ್ಲಿ ಇಂತಹ ಗಾಳಿ ಸುದ್ದಿಗಳಿಗೇನು ಕಮ್ಮಿ ಇರುವುದಿಲ್ಲ.

ರೂಮರ್‌ಗಳಿಗೆ ಸಿಕ್ಕಿ ಬೀಳಲೇ ಬಾರದು ಅಂತ ಅದೆಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗುವುದೇ ಇಲ್ಲ. ದಿವಂಗತ ನಟಿ ಸೌಂದರ್ಯಾ ವಿಚಾರದಲ್ಲೂ ಹಾಗೇ ಆಗಿತ್ತು. ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದ ಸೌಂದರ್ಯಾ ತೆಲುಗಿನ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗಾಗಿ ಟಾಲಿವುಡ್ ನಟನೊಂದಿಗೆ ಇವರ ಹೆಸರು ತಳುಕು ಹಾಕಿಕೊಂಡಿತ್ತು.

Viral When Jagapathi Babu had admitted that he was good bonding with actress Soundarya

ನಟಿ ಸೌಂದರ್ಯಾಗೆ ಸಂಬಂಧಿಸಿದ ಗಾಸಿಪ್‌ಗಳಲ್ಲಿ ನಟ ಜಗಪತಿ ಬಾಬು ಜೊತೆಗಿನ ಪ್ರೇಮ ಪ್ರಕರಣವೂ ದೊಡ್ಡ ಸುದ್ದಿಯಾಗಿತ್ತು. ಸೌಂದರ್ಯಾ ನಿಧನದ ಬಳಿಕ ಜಗಪತಿ ಬಾಬು ಈ ವಿಷಯವನ್ನು ಒಪ್ಪಿಕೊಂಡಿದ್ದರು. ಆದರೆ ಇಲ್ಲಿ ಚಿಕ್ಕದೊಂದು ಟ್ವಿಸ್ಟ್ ಇದೆ.

ದಕ್ಷಿಣ ಭಾರತದ ಮಿನುಗುತಾರೆ ಸೌಂದರ್ಯಾ

ದಕ್ಷಿಣ ಭಾರತದ ಮಿನುಗುತಾರೆ ಸೌಂದರ್ಯಾ. ಹೆಸರಿಗೆ ತಕ್ಕಂತೆ ನಟಿ ಸೌಂದರ್ಯಾವತಿಯಾಗಿದ್ದರು. ಹಳ್ಳಿ ಪಾತ್ರಗಳ ಮೂಲಕವೇ ಸಿನಿಮಾ ಪ್ರೇಮಿಗಳನ್ನು ರಂಜಿಸುತ್ತಿದ್ದ ಬ್ಯೂಟಿ ಈಕೆ. ಕನ್ನಡ ಸೇರಿದಂತೆ ತೆಲುಗು, ತಮಿಳು ಭಾಷೆಗಳಲ್ಲಿ ಸೌಂದರ್ಯಾಗೆ ಯಶಸ್ಸು ಸಿಕ್ಕಿತ್ತು. ಮೂರು ಭಾಷೆಯ ದಿಗ್ಗಜರೊಂದಿಗೆ ಸೌಂದರ್ಯಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ತನ್ನ ವೃತ್ತಿ ಬದುಕಿನಲ್ಲಿ ಉತ್ತುಂಗದಲ್ಲಿರುವಾಗಲೇ ಸೌಂದರ್ಯಾ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆದರೆ, ಅವರ ಜೊತೆ ಸುತ್ತಿಕೊಂಡ ರೂಮರ್‌ಗಳು ಮಾತ್ರ ಹಾಗೇ ಉಳಿದುಕೊಂಡಿದ್ದವು.

ಜಗಪತಿಬಾಬು ಜೊತೆ ಸೌಂದರ್ಯಾ ಅಫೇರ್?

ತೆಲುಗು ನಟ ಜಗಪತಿ ಬಾಬು ಕನ್ನಡಿಗರಿಗೂ ತುಂಬಾನೇ ಚಿರಪರಿಚಿತ. ಕನ್ನಡದಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ದರ್ಶನ್ ನಟಿಸಿದ 'ರಾಬರ್ಟ್' ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದರು. ಹಾಗೇ 'ಮದಗಜ' ವಿಶಿಷ್ಠ ಪಾತ್ರದಲ್ಲಿ ನಟಿಸಿದ್ದರು. ಹಾಗೇ 'ಬಚ್ಚನ್', 'ಜಾಗ್ವರ್' ಅಂತಹ ಸಿನಿಮಾಗಳಲ್ಲೂ ನಟಿಸಿರೋದ್ರಿಂದ ನಮ್ಮವರಿಗೂ ಪರಿಚಿತರೇ. ಇದೇ ನಟನೊಂದಿಗೆ ಸೌಂದರ್ಯಾ ಅಫೇರ್ ಇತ್ತು ಅನ್ನೋ ಮಾತು ಕೇಳಿ ಬಂದಿದ್ದವು. ಅದಕ್ಕೆ ಜಗಪತಿ ಬಾಬು ಕೂಡ ಪ್ರತಿಕ್ರಿಯೆ ನೀಡಿದ್ದರು.

Viral When Jagapathi Babu had admitted that he was good bonding with actress Soundarya

"ನಾನು-ಸೌಂದರ್ಯಾ ಆತ್ಮೀಯರಾಗಿದ್ದೆವು"

ಸೌಂದರ್ಯಾ ಜೊತೆಗಿನ ಸಂಬಂಧದ ಬಗ್ಗೆ ಜಗಪತಿ ಬಾಬು ಪ್ರತಿಕ್ರಿಯೆ ನೀಡಿದ್ದರು. "ಹೌದು.. ಸೌಂದರ್ಯ ಹಾಗೂ ನಾನು ಆತ್ಮೀಯರಾಗಿ ಇದ್ದಿದ್ದು ನಿಜ. ಸೌಂದರ್ಯಾ ಸಹೋದರ ಹಾಗೂ ನಾನು ಉತ್ತಮ ಸ್ನೇಹಿತರಾಗಿದ್ದೆವು. ಅವರ ಮನೆಗೆ ಆಗಾಗ ಹೋಗುತ್ತಿದ್ದೆ. ಜನರು ಸೌಂದರ್ಯಾ ಬಗ್ಗೆ ವಿಭಿನ್ನವಾಗಿ ಯೋಚಿಸುತ್ತಿದ್ದರು. ನಾವಿಬ್ಬರೂ ಆತ್ಮೀಯರಾಗಿದ್ದಿದ್ದನ್ನು ಹಲವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದರು" ಎಂದು ಜಗಪತಿ ಬಾಬು ಹೇಳಿದ್ದರು.

"ನಾನು ಏನೂ ಮರೆ ಮಾಡುವುದಿಲ್ಲ"

"ಸೌಂದರ್ಯಾ ಹಾಗೂ ನಾನು ಬಗ್ಗೆ ಹರಿದಾಡಿದ ಸುದ್ದಿಯನ್ನು ಅಭಿನಂದನೆ ಅಂತ ತೆಗೆದುಕೊಳ್ಳುತ್ತೇನೆ. ಸೌಂದರ್ಯ ಮತ್ತು ನಾನು ತುಂಬಾ ಆತ್ಮೀಯರಾಗಿದ್ದಿದ್ದು ನಿಜ." ಎಂದು ಜಗಪತಿ ಬಾಬು ಒಪ್ಪಿಕೊಂಡಿದ್ದಾರೆ. ಒಮ್ಮೆ ಜಗಪತಿ ಬಾಬು ಮತ್ತು ಸೌಂದರ್ಯ ಒಟ್ಟಿಗೆ ಪ್ರಯಾಣ ಮಾಡಿದ್ದರ ಬಗ್ಗೆನೂ ಸುದ್ದಿಯಾಗಿತ್ತು. " ನಾವು ರೈಲ್ವೆ ನಿಲ್ದಾಣದಲ್ಲಿ ಸ್ವಲ್ಪ ಹೊತ್ತು ಮಾತಾಡಿದೆವು. ಆ ಬಳಿಕ ತಾವು ಹೋಗಬೇಕಿದ್ದ ಕಡೆ ಹೋದರು. ಅದಕ್ಕೂ ಜನರು ಮಸಾಲೆ ಸೇರಿಸಿದರು." ಎಂದು ಜಗಪತಿ ಬಾಬು ಹೇಳಿದ್ದರು.

More from Filmibeat

English summary
Viral:Jagapathi Babu had admitted about his affair with Soundarya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X