'ಸಂಭ್ರಮ' ಸಿನಿಮಾದ ನಟಿ ಕಾವೇರಿ ದಿಢೀರನೇ ಕಣ್ಮರೆಯಾಗಿದ್ದೇಕೆ? ವಿಚ್ಛೇದನ..ಸೋಲು ಕಂಗೆಡಿಸಿತೇ?
ಈ ನಟಿ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಿಗೂ ಚೆನ್ನಾಗಿ ಗೊತ್ತಿದೆ. ಮಲಯಾಳಂ, ಕನ್ನಡ, ತೆಲುಗು ತಮಿಳು ಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೇರಳ ಮೂಲದವರಾದರೂ ಸೌತ್ ಸಿನಿಮಾ ಇಂಡಸ್ಟ್ರಿಗೆ ತುಂಬಾನೇ ಪರಿಚಯ. ಅದರಲ್ಲೂ ಕನ್ನಡಿಗರಿಗೂ ಕಾವೇರಿ ಪರಿಚಯವಿಲ್ಲದವರೇನೂ ಅಲ್ಲ.
ಕನ್ನಡದಲ್ಲಿ ಕಾವೇರಿ ನಟಿಸಿದ ಮೊದಲ ಸಿನಿಮಾ 'ಸಂಭ್ರಮ'. ರಮೇಶ್ ಅರವಿಂದ್ ನಟಿಸಿದ್ದ ಈ ಸಿನಿಮಾದಲ್ಲಿ ಕಾವೇರಿ ನಾಯಕಿಯಾಗಿದ್ದರು. ಆ ಬಳಿಕ 'ರಾಮ ಕೃಷ್ಣ', 'ಚೈತ್ರದ ಚಿಗುರು' ಹಾಗೂ ಕೆಲವೇ ವರ್ಷಗಳ ಹಿಂದಷ್ಟೇ ರಿಲೀಸ್ ಆಗಿದ್ದ 'ಹೆಬ್ಬುಲಿ' ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ನಟಿ ಕಾವೇರಿ ನೋಡಿದರೆ ಕನ್ನಡಿಗರು ಗುರುತು ಹಿಡಿಯುತ್ತಾರೆ.

ಮಲಯಾಳಂ ಹಾಗೂ ತೆಲುಗು ಸಿನಿಮಾಗಳಲ್ಲೇ ಕಾವೇರಿಗೆ ಹೆಚ್ಚು ಸಕ್ಸಸ್ ಸಿಕ್ಕಿತ್ತು. ಆದ್ರೀಗ ದಿಢೀರನೇ ಕಣ್ಮರೆಯಾಗಿದ್ದಾರೆ. ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕಾವೇರಿ ಸಿನಿಮಾಗಳಲ್ಲಿ ಸಕ್ಸಸ್ ಕಂಡರೂ, ವೈಯಕ್ತಿಕ ಜೀವನದಲ್ಲಿ ಸೋತಿದ್ರು. ಒಂದು ದುಡುಕಿನ ನಿರ್ಧಾರದಿಂದ ದುಡಿದಿದ್ದನ್ನು ಕಳೆದುಕೊಂಡರು. ಪತಿಯಿಂದಲೂ ದೂರ ಆದರು. ಅಷ್ಟಕ್ಕೂ ಆಗಿದ್ದೇನು? ತಿಳಿಯಲು ಮುಂದೆ ಓದಿ.
ಪಕ್ಕದ ಮನೆ ಹುಡುಗಿ ಪಾತ್ರದಲ್ಲಿ ಕಾವೇರಿ
ಮಲಯಾಳಂ ನಟಿ ಕಾವೇರಿ ಗ್ಲಾಮರಸ್ ರೋಲ್‌ಗಳಲ್ಲೇನು ಕಾಣಿಸಿಕೊಂಡಿಲ್ಲ. ಟ್ರೆಡಿಷನಲ್ ಲುಕ್‌ನಲ್ಲಿಯೇ ಕಾವೇರಿ ಹೆಚ್ಚಾಗಿ ನಟಿಸಿದ್ದರು. ಸೀರೆ, ಲಂಗ-ದಾವಣಿಯಿಟ್ಟು ಪ್ರೇಕ್ಷಕರ ಮನ ಸೆಳೆದಿದ್ದೇ ಹೆಚ್ಚು. ಇವರ ಸಹಜ ಅಭಿನಯಕ್ಕೆ, ದೇಸಿ ಲುಕ್‌ಗೆ ಸಿನಿಮಾ ಪ್ರಿಯರು ಮೆಚ್ಚುಗೆ ಸೂಚಿಸಿದ್ದರು. ಹೀಗಾಗಿ ಮಲಯಾಳಂ, ತೆಲುಗು, ತಮಿಳು ಹಾಗೂ ಕನ್ನಡ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಆದರೆ, ವೈಯಕ್ತಿಕ ಬದುಕಿನಲ್ಲಿ ಮಾತ್ರ ಈ ಮಟ್ಟಿಗೆ ಸಕ್ಸಸ್ ಸಿಗಲೇ ಇಲ್ಲ.

ಪತಿಯಿಂದ ವಿಚ್ಛೇದನ ಪಡೆದಿರೋ ನಟಿ ಕಾವೇರಿ
ಕಾವೇರಿ ತೆಲುಗು ನಿರ್ದೇಶಕ ಸೂರ್ಯ ಕಿರಣ್ ಎಂಬುವವರನ್ನು ವಿವಾಹವಾಗಿದ್ದರು. ಸೂರ್ಯ ಕಿರಣ್ ದಕ್ಷಿಣ ಭಾರತದ ನಟಿ ಸುಚಿತ್ರಾ ಸಹೋದರ. ಆಗ ಸೂರ್ಯ ಕಿರಣ್ ಹಾಗೂ ಕಾವೇರಿ ನಡುವೆ ಏನಾಯ್ತು? ವಿಚ್ಛೇದನಕ್ಕೆ ಕಾರಣವೇನು? ಅನ್ನೋದು ಸ್ಪಷ್ಟವಾಗಿ ಗೊತ್ತಾಗಿರಲಿಲ್ಲ. ಆದರೆ, ನಟಿ ಸುಚಿತ್ರಾ ಈಗ ಇಬ್ಬರ ನಡುವೆ ಏನು ನಡೀತು? ವಿಚ್ಛೇದನಕ್ಕೆ ಕಾರಣವಾಗಿದ್ದೇನು? ಅನ್ನೋದನ್ನು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
ಆರ್ಥಿಕ ಸಮಸ್ಯೆಯೇ ಕಾರಣ
90ರ ದಶಕದಲ್ಲಿ ಕಾವೇರಿ (ಕಲ್ಯಾಣಿ) ಸ್ಟಾರ್ ನಟಿಯಾಗಿದ್ದರು. ದಕ್ಷಿಣ ಭಾರತದಲ್ಲಿ ಬಹುಬೇಡಿಕೆ ಇತ್ತು. ಮದುವೆ ಬಳಿಕ ಕಾವೇರಿ ಹಾಗೂ ಪತಿ ಸೂರ್ಯ ಕಿರಣ್ ಇಬ್ಬರೂ ಸೇರಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದರು. ಆ ಸಿನಿಮಾ ಹೀನಾಯವಾಗಿ ಸೋತಿತ್ತು. ಈ ಸೋಲಿನಿಂದ ಇಬ್ಬರೂ ನಷ್ಟ ಅನುಭವಿಸಿದರು. ಇದರಿಂದ ಹೊರ ಬರೋಕೆ ನಟಿ ಕಾವೇರಿ ಶತ ಪ್ರಯತ್ನ ಪಟ್ಟರೂ ಸಾಧ್ಯವಾಗಲೇ ಇಲ್ಲ. ಇದೇ ವಿಚ್ಚೇದನಕ್ಕೆ ಪ್ರಮುಖ ಕಾರಣವೆಂದು ನಟಿ ಸುಚಿತ್ರಾ ಧನುಷ್ ಹೇಳಿದ್ದಾರೆ.
'ಯಾತ್ರ' ಸಿನಿಮಾದಲ್ಲೇ ಕೊನೆಯ ಬಾರಿ ನಟನೆ
ಕಾವೇರಿ ಹಾಗೂ ಪತಿ ಸೂರ್ಯ ಕಿರಣ್ ನಡುವೆ ದೀರ್ಘಕಾಲದ ಹಣಕಾಸಿನ ಸಮಸ್ಯೆ ಉದ್ಭವವಾಗಿತ್ತು. ಹೀಗಾಗಿ ದಾಂಪತ್ಯದಲ್ಲಿ ಕಲಹ ಏರ್ಪಟ್ಟಿತ್ತು. ಈ ಕಾರಣಕ್ಕೆ ಇಬ್ಬರು ಬೇರೆಯಾಗಬೇಕಾಗಿ ಬಂದಿತ್ತು ಎಂದು ಸುಚಿತ್ರಾ ಹೇಳಿಕೊಂಡಿದ್ದಾರೆ. ಕಾವೇರಿ 2019ರಲ್ಲಿ 'ಯಾತ್ರ' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಅದೇ ಕೊನೆ. ಆ ಮೇಲೆ ಕಾಣಿಸಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಇದ್ದರೂ, ಆಕ್ಟೀವ್ ಆಗಿಲ್ಲ.


Click it and Unblock the Notifications











