ಶಿವಣ್ಣ 'ಜೋಗಿ' ಸಿನಿಮಾ ನೋಡಿ ಮೌನಕ್ಕೆ ಜಾರಿದ್ದೇಕೆ ವಿಷ್ಣುದಾದ? ಅಂತಹದ್ದೇನಾಗಿತ್ತು?
ಶಿವರಾಜ್‌ಕುಮಾರ್ ಹಾಗೂ ಪ್ರೇಮ್ ಕಾಂಬಿನೇಷನ್‌ನಲ್ಲಿ ಬಂದಿರೋ ಬ್ಲಾಕ್ ಬಸ್ಟರ್ ಸಿನಿಮಾ 'ಜೋಗಿ'. ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾಗಳಲ್ಲಿ ಇದೂ ಒಂದು. ಪ್ರೇಮ್ ನಿರ್ದೇಶಿಸಿ ಹ್ಯಾಟ್ರಿಕ್ ಯಶಸ್ಸು ಕಂಡ ಸಿನಿಮಾವಿದು. ಶಿವಣ್ಣನಿಗೆ ತಮ್ಮ ವೃತ್ತಿ ಬದುಕಿನಲ್ಲಿ ಹೊಸ ಹುರುಪು ಕೊಟ್ಟಿದ್ದೇ 'ಜೋಗಿ'.
'ಜೋಗಿ' ಕನ್ನಡದ ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆದಿತ್ತು. 'ಜೋಗಿ'ಯ ಹಾಡುಗಳು ಬಿಡುಗಡೆಗೂ ಮುನ್ನವೇ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಸಿನಿಮಾ ಟಿಕೆಟ್‌ಗಳು ಬ್ಲಾಕ್‌ನಲ್ಲಿ ಮಾರಾಟ ಆಗುವುದಕ್ಕೆ ಶುರುವಾಗಿದ್ದವು. ಆ ಮಟ್ಟಿಗೆ ಹೈಪ್ ಪಡೆದುಕೊಂಡಿದ್ದ ಸಿನಿಮಾ 'ಜೋಗಿ'.

ಈ ಸಿನಿಮಾವನ್ನು ನೋಡುವುದಕ್ಕೆ ವಿಷ್ಣುದಾದಗೆ ಆಹ್ವಾನ ನೀಡಲಾಗಿತ್ತು. ಬಿಡುಗಡೆಯಾದ ಒಂದೆರಡು ದಿನಗಳಲ್ಲಿ ಸಾಹಸ ಸಿಂಹನಿಗಾಗಿ 'ಜೋಗಿ'ಯ ವಿಶೇಷ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಪ್ರತಿಷ್ಠಿತ ರೇಣುಕಾಂಬ ಸ್ಟುಡಿಯೋದಲ್ಲಿ ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಸಿನಿಮಾ ಮುಗಿದ ಬಳಿಕ ವಿಷ್ಣುದಾದ ಏನಾದರೂ ಹೇಳಬಹುದು ಎಂದು ಭಾವಿಸಿದ್ದರು. ಆದರೆ, ಸಿನಿಮಾ ಬಗ್ಗೆ ಒಂದೇ ಒಂದು ಮಾತೂ ಆಡದೇ ಅಲ್ಲಿಂದ ಹೊರಟು ಹೋಗಿದ್ದರು.
'ಜೋಗಿ' ಸಿನಿಮಾವನ್ನು ವಿಷ್ಣುವರ್ಧನ್ ಅವರಿಗೆ ತೋರಿಸಿ, ಕಾರ್ಯಕ್ರಮ ಮಾಡುವ ಆಲೋಚನೆ ಇತ್ತು. ನಿರ್ದೇಶಕ ಕಮ್ ನಿರೂಪಕ ರಘುರಾಮ್ ಆಗಿನ ಈಟಿವಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೆ 'ಜೋಗಿ'ಯಲ್ಲಿ ಚಿಕ್ಕದೊಂದು ಪಾತ್ರವನ್ನು ಮಾಡಿದ್ದರು. ಹೀಗಾಗಿ ವಿಷ್ಣುವರ್ಧನ್ ಅವರನ್ನು ಸಂದರ್ಶನ ಮಾಡುವ ಅವಕಾಶ ಸಿಕ್ಕಿತ್ತು ಆದರೆ, ಸಿನಿಮಾ ನೋಡಿ ಸಾಹಸ ಸಿಂಹ ಒಂದೇ ಒಂದು ಮಾತು ಕೂಡ ಆಡದೆ ಮನೆಗೆ ಬನ್ನಿ ಎಂದು ಹೊರಟಿದ್ದರು. ಅದ್ಯಾಕೆ ಅನ್ನೋದನ್ನು ರಘುರಾಮ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ.

'ಜೋಗಿ' ಸಿನಿಮಾ ಶುಕ್ರವಾರ ರಿಲೀಸ್ ಆಗಿತ್ತು. ಶನಿವಾರವೇ ವಿಷ್ಣುದಾದಗೆ ಈ ಸಿನಿಮಾವನ್ನು ತೋರಿಸಿದ್ದರು. "ವಿಷ್ಣು ಸರ್ ಜೋಗಿ ಸಿನಿಮಾ ನೋಡಿದ್ರು. ಶುಕ್ರವಾರ ಜೋಗಿ ಸಿನಿಮಾ ರಿಲೀಸ್ ಆಯ್ತು. ಶನಿವಾರ ವಿಷ್ಣು ಸರ್‌ಗಾಗಿಯೇ ರೇಣುಕಾಂಬದಲ್ಲಿ ಪ್ರಿವ್ಯೂ ಹಾಕಿದ್ದರು. ಭಾನುವಾರ ನಾ ಕಂಡ ಜೋಗಿ ಅಂತ ಒಂದು ಕಾರ್ಯಕ್ರಮ ಮಾಡಿದ್ದೆ. ಸಿನಿಮಾ ನೋಡಿ ಯಾರ ಹತ್ತಿರನೂ ಏನೂ ಮಾಡಿಲ್ಲ. ನಾನಿದ್ದೆ, ಪ್ರೇಮ್ ಅವರು ಇದ್ದರು. ಅಲ್ಲಿ ನಿರ್ಮಾಪಕ ರಾಮ್ ಪ್ರಸಾದ್ ಅವರು ಮಾತಾಡಿದ್ದಕ್ಕೆ ಮನೆಗೆ ಬನ್ನಿ. ನಾನು ಇಲ್ಲಿ ಮಾತಾಡೋದಿಲ್ಲ ಅಂತ ಹೇಳಿ ಹೊರಟು ಹೋದರು." ಎಂದು ಆಕ್ಷಣವನ್ನು ನೆನೆದಿದ್ದಾರೆ.
ಮರು ದಿನವೇ ಕ್ಯಾಮರಾ ಜೊತೆ ಇಡೀ ಸಿನಿಮಾ ತಂಡ ಹಾಗೂ ರಘುರಾಮ್ ವಿಷ್ಣುವರ್ಧನ್ ಅವರ ಮನೆಗೆ ಪಯಣ ಬೆಳೆಸಿದ್ದರು. ಕಾರ್ಯಕ್ರಮ ಶುರುವಾದ ಮೇಲೂ ವಿಷ್ಣುದಾದ ಮೌನಕ್ಕೆ ಜಾರಿದ್ದರು.
"ಕ್ಯಾಮರಾ ತೆಗೆದುಕೊಂಡು ಅವರ ಮನೆಗೆ ಹೋದಾಗ ನೀವು ನಂಬುವುದಿಲ್ಲ. 25 ರಿಂದ 30 ನಿಮಿಷ ಸುಮ್ಮನೆ ಕೂತಿದ್ದರು. ನಾವು ಮುಖ ಮುಖ ನೋಡಿಕೊಳ್ಳುತ್ತಿದ್ದೇವು. ಆಮೇಲೆ ಮಾತಾಡುವುದಕ್ಕೆ ಶುರು ಮಾಡಿದ್ರು. ಅದನ್ನೇ ಪ್ರೋಗ್ರಾಂ ಮಾಡಿದ್ವಿ. ನಾ ಕಂಡ ಜೋಗಿ ವಿಷ್ಣುವರ್ಧನ್ ಅಂತ." ಎಂದು ರಘುರಾಮ್ ಹೇಳಿಕೊಂಡಿದ್ದಾರೆ.
"ಆ ವೇಳೆ ಸಿನಿಮಾ ಅನ್ನೋದು ಒಂದು ದೈವಿಕವಾದ ಕೆಲಸ. ಕೆಲವರು ಸಿನಿಮಾದವರಾ? ಅಂದುಬಿಡುತ್ತಾರಲ್ಲ. ನೋಡಿ ಸಿನಿಮಾವನ್ನು ನಾನು ಬೆಳಕಲ್ಲಿ ಮಾಡುತ್ತೇವೆ. ಆದರೆ ಕತ್ತಲಲ್ಲಿ ತೋರಿಸುತ್ತೇವೆ. ಎಲ್ಲರೂ ಸೇರಿ ಮ್ಯಾಜಿಕ್ ಮಾಡುವುದೇ ಸಿನಿಮಾ. ಶಿವಣ್ಣ ಅವರ ಕೆಲಸವನ್ನು ಚೆನ್ನಾಗಿ ಮಾಡಿದ್ದಾರೆ. ಪ್ರೇಮ್ ಅವರ ಕೆಲಸವನ್ನು ಚೆನ್ನಾಗಿ ಮಾಡಿದ್ದಾರೆ. ನನ್ನಂಥ ಚಿಕ್ಕ ಪಾತ್ರವನ್ನು ನೋಡಿ ಮಾಡಿದ್ರು. ಅದಕ್ಕಿಂತ ಏನು ಬೇಕು." ಎಂದು ಜೋಗಿಯ ದಿನಗಳನ್ನು ನೆನೆದಿದ್ದಾರೆ.


Click it and Unblock the Notifications











