ಕಂಠೀರವ ಸ್ಟೇಡಿಯಂನಲ್ಲಿ ವಿಷ್ಣುದಾದ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದಾಗ ಅಣ್ಣಾವ್ರು ಹೇಳಿದ್ದಿದ್ದೇನು?
ಯಾವುದೇ ಚಿತ್ರರಂಗ ತೆಗೆದುಕೊಂಡರೂ ಇಬ್ಬರು ದಿಗ್ಗಜರ ನಡುವೆ ಪೈಪೋಟಿ ಇದ್ದೇ ಇರುತ್ತೆ. ಅದು 70, 80ರ ದಶಕ ಇರುಬಹುದು. ಇಲ್ಲ ಪ್ರಸ್ತುತ ಕಾಲಘಟ್ಟವೇ ಆಗಿರಬಹುದು. ಕನ್ನಡ ಚಿತ್ರರಂಗ ಕೂಡ ಇಂತಹದ್ದೊಂದು ಪೈಪೋಟಿಯನ್ನು ಹಿಂದೆನೂ ನೋಡಿತ್ತು. ಇಂದು ಕೂಡ ನೋಡುತ್ತಿದೆ.
ಡಾ.ರಾಜ್‌ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ನಡುವೆ ಪೈಪೋಟಿ ಇತ್ತು ಅನ್ನೋದು ಗೊತ್ತಿರುವ ವಿಷಯವೇ. ಆದರೆ, ಇಬ್ಬರ ನಡುವೆ ವೈರತ್ವ ಇತ್ತು ಅನ್ನೋದನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ. ಇಬ್ಬರ ಕೆಲವು ಅಭಿಮಾನಿಗಳು ಇಂತಹದ್ದೊಂದು ವಾತಾವರಣವನ್ನು ಸೃಷ್ಟಿಸಿದ್ದರು ಅನ್ನೋರು ಬಹಳ ಮಂದಿದ್ದಾರೆ.

ಒಮ್ಮೆ ರಾಜ್‌ಕುಮಾರ್ ಅವರಿಗೆ ಪದ್ಮಭೂಷಣ ಬಂದ ಸಂದರ್ಭದಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭಕ್ಕೆ ವಿಷ್ಣುವರ್ಧನ್ ಕೂಡ ಅತಿಥಿಯಾಗಿ ಬಂದಿದ್ದರು. ಆ ವೇಳೆ ಯಾರೋ ಕಿಡಿಗೇಡಿಗಳು ವಿಷ್ಣುದಾದಾ ಮೇಲೆ ಚಪ್ಪಲಿ ಎಸೆದಿದ್ದರು. ಆ ಸಂದರ್ಭದಲ್ಲಿ ಅಣ್ಣಾವ್ರು ವೇದಿಕೆ ಮೇಲೆ ಏನು ಹೇಳಿದ್ದರು ಅನ್ನೋದನ್ನು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಹಿರಿಯ ಪತ್ರಕರ್ತರಾದ ಹರಿಹರಪುರ ಮಂಜುನಾಥ್ ವಿವರಿಸಿದ್ದಾರೆ.
1983ರಲ್ಲಿ ಅಣ್ಣಾವ್ರ ಕಲಾಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿತ್ತು. ಹೀಗಾಗಿ ಕನ್ನಡ ಚಿತ್ರರಂಗದ ವತಿಯಿಂದ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಆ ಸಮಾರಂಭಕ್ಕೆ ವಿಷ್ಣುದಾದ ಕೂಡ ಅತಿಥಿಯಾಗಿ ಹೋಗಿದ್ದರು. ಆಗ ಕಿಡಿಗೇಡಿ ಚಪ್ಪಲಿ ಎಸೆದಿದ್ದ. ಆಗ ಅಣ್ಣಾವ್ರು ಎದ್ದು ನಿಂತು ಹೀಗೆ ಹೇಳುತ್ತಾರೆ.
"ರಾಜ್‌ಕುಮಾರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಾಗ ಕಂಠೀರವ ಕ್ರೀಡಾಂಗಣದಲ್ಲಿ ಸನ್ಮಾನ ಸಮಾರಂಭ ನಡೆಯುತ್ತಿತ್ತು. ಅಲ್ಲಿ ವಿಷ್ಣುವರ್ಧನ್ ಅವರು ಕೂಡ ಇರುತ್ತಾರೆ. ಆಗ ಯಾರೋ ಚಪ್ಪಲಿ ಎಸೆಯುತ್ತಾರೆ. ರಾಜ್‌ಕುಮಾರ್ ಅವರು ಎದ್ದು ಹೇಳುತ್ತಾರೆ. ನೀವು ಎಸೆಯುತ್ತಿರೋದು ಅವರಿಗಲ್ಲ ನನಗೆ. ಇದನ್ನು ನೀವು ನಿಲ್ಲಿಸದೇ ಇದ್ದರೆ ಕಷ್ಟ ಆಗುತ್ತೆ ಅಂತಾರೆ. ಆಮೇಲೆ ಅದು ನಿಂತು ಹೋಗುತ್ತೆ. " ಎಂದು ಹರಿಹರಪುರ ಮಂಜುನಾಥ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ.

ಚಪ್ಪಲಿ ಎಸೆತಕ್ಕಷ್ಟೇ ನಿಂತಿರಲಿಲ್ಲ. ಕಂಠೀರವ ಸ್ಟುಡಿಯೋ ಎದುರಿಗಿದ್ದ ಪಲ್ಲವಿ ಚಿತ್ರಮಂದಿರದಲ್ಲಿ ವಿಷ್ಣುವರ್ಧನ್ ಸಿನಿಮಾ ಹಾಕಿದ್ದರು. ಆ ಪೋಸ್ಟರ್‌ಗೂ ಬೆಂಕಿ ಹಚ್ಚಿದ್ದರು. "ಅಲ್ಲೆ ಎದುರುಗಡೆ ಇದ್ದ ವಿಷ್ಣುವರ್ಧನ್ ಪೋಸ್ಟರ್‌ಗೆ ಬೆಂಕಿ ಹಚ್ಚಲಾಗುತ್ತೆ. ವಿಷ್ಣುವರ್ಧನ್ ಹಾಗೂ ರಾಜ್‌ಕುಮಾರ್ ಇಬ್ಬರೂ ಸಮಾರಂಭದಲ್ಲಿ ಇದ್ದಾರೆ. ರಾಜ್‌ಕುಮಾರ್ ಅವರಿಗೂ ಥಿಯೇಟರ್‌ನಲ್ಲಿ ನಡೆದ ಘಟನೆಗೂ ಸಂಬಂಧವಿದೆಯೇ? ಇದನ್ನು ನಾವು ಕೇಳಿಕೊಳ್ಳಬೇಕು." ಎಂದು ಹೇಳಿದ್ದಾರೆ.
ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಇಬ್ಬರ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ, ಕೆಲವರು ಇವರ ಜನಪ್ರಿಯತೆಯ ಲಾಭ ಪಡೆದು ದ್ವೇಷ ಹಂಚುವ ಕೆಲಸ ಮಾಡಿದ್ದರೆಂದು ಹಲವು ಮಂದಿ ಅಭಿಪ್ರಾಯ ಪಟ್ಟಿದ್ದಾರೆ. ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಕೂಡ ಇಂತಹದ್ದೇ ಉದಾಹರಣೆ ಕೊಡುತ್ತಾರೆ.
"ರಾಜ್‌ಕುಮಾರ್ ಅಭಿಮಾನಿಗಳು ಅಂತ ಹೇಳಿಕೊಳ್ಳುವ ಸಮಯ ಸಾಧಕರು ವಿಷ್ಣುವರ್ಧನ್ ಅವರಿಗೆ ತೊಂದರೆ ಕೊಟ್ಟಿದ್ದು ಉಂಟು. ಅದೇ ರೀತಿ ವಿಷ್ಣುವರ್ಧನ್ ಉಗ್ರ ಅಭಿಮಾನಿಗಳು ಅಂತ ಹೇಳಿಕೊಳ್ಳುವಂತಹ ಸಮಾಜ ಘಾತುಕರು ರಾಜ್‌ಕುಮಾರ್ ಅವರ ಪೋಸ್ಟರ್‌ಗಳಿಗೆ ಸಗಣಿ ಹಚ್ಚಿದ್ದು ಉಂಟು. ರಾಜ್‌ಕುಮಾರ್ ಸಿನಿಮಾ ಪ್ರದರ್ಶನ ಆಗುವಾಗ ಕಲ್ಲು ಎಸೆದಿದ್ದು ಉಂಟು. ಈ ಘಟನೆಗಳಿಗೆ ವಿಷ್ಣುವರ್ಧನ್ ಅವರು ಕಾರಣರಲ್ಲ. ರಾಜ್‌ಕುಮಾರ್ ಅವರೂ ಕಾರಣರಲ್ಲ." ಎಂದು ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.


Click it and Unblock the Notifications











