ಪದ್ಮಭೂಷಣ ಅನಂತ್‌ನಾಗ್ ಮುಂಬೈನಲ್ಲಿ ಏನು ಕೆಲಸ ಮಾಡ್ತಿದ್ರು ಗೊತ್ತೇ?

ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಹಾಗೂ ಸ್ಪುರದ್ರೂಪಿ ನಟಿ ಅನಂತ್‌ನಾಗ್. ಅವರ ವೃತ್ತಿ ಬದುಕಿನ ಬಗ್ಗೆ ಮತ್ತೆ ಹೇಳಬೇಕಿಲ್ಲ. ಆದರೆ, ಸಿನಿಮಾಗೆ ಬರುವುದಕ್ಕೂ ಮುನ್ನ ಅವರು ಒಂದು ವೃತ್ತಿಯಲ್ಲಿ ಇದ್ದರು. ಇದು ಬಹುತೇಕ ಮಂದಿಗೆ ಗೊತ್ತಿರಲಿಕ್ಕಿಲ್ಲ. ಆನಂತ್‌ನಾಗ್‌ ಹೊನ್ನಾವರದಲ್ಲಿ ಓದುತ್ತಿದ್ದರು. ಬಳಿಕ ಅವರನ್ನು ಮುಂಬೈಗೆ ಸಂಬಂಧಿಕರ ಮನೆಗೆ ಕಳುಹಿಸಿ ಕೊಡಲಾಯ್ತು. ಇಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ್ದ ಅನಂತ್‌ನಾಗ್ ಶಾಲೆಯಲ್ಲಿ ಮೊದಲ ಐದು ರ್‍ಯಾಂಕ್ ಒಳಗೆ ಬರುತ್ತಿದ್ದರು. ಆದರೆ, ಅದ್ಯಾವಾಗ ಮುಂಬೈಗೆ ಶಿಫ್ಟ್ ಆದರೋ ಅಲ್ಲಿ ಆಂಗ್ಲ ಮಾಧ್ಯಮದಲ್ಲಿ ಓದಬೇಕಾಯ್ತು. ಆದರೆ, ಅದು ತುಂಬಾನೇ ಕಷ್ಟಕರ ಅನಿಸಿತ್ತು. ಕೊನೆಯ ರ್‍ಯಾಂಕ್ ಬರುತ್ತಿದ್ದರು. ಅಲ್ಲದೆ ಒಂದು ವರ್ಷ ಶಾಲೆಯಲ್ಲಿ ಫೇಲ್ ಕೂಡ ಆದರು.

ಹೀಗಾಗಿ ಅನಂತ್‌ನಾಗ್ ಅವರಿಗೆ ಓದುವುದರಲ್ಲಿ ಆಸಕ್ತಿಯೇ ಕಳೆದು ಹೋಗಿತ್ತು. ಅತ್ತ ಅವರ ತಂದೆಯವರು ಮಗ ಇಂಜಿನಿಯರ್, ಇಲ್ಲವೇ ಡಾಕ್ಟರ್ ಆಗುತ್ತಾನೆ ಎಂದು ಕನಸು ಕಂಡಿದ್ದರು. ಆದರೆ, ಅನಂತ್‌ನಾಗ್ ಅವರಿಗೆ ಯಾಕೋ ಓದುವುದಕ್ಕೆ ಆಗುತ್ತಿರಲಿಲ್ಲ. ಓದುವಾಗ ಎನ್‌ಸಿಸಿಗೆ ಸೇರಿಕೊಂಡಿದ್ದರು. ಆ ವೇಳೆ 1965ನಲ್ಲಿ ಪಾಕಿಸ್ತಾನದ ಜೊತೆ ಯುದ್ಧವಾದಾಗ ಎನ್‌ಸಿಸಿ ಸರ್ಟಿಫಿಕೇಟ್ ಇಟ್ಟುಕೊಂಡು ಆರ್ಮಿ ಸೇರುವುದಕ್ಕೆ ಹೋಗಿದ್ದರು. ಗೇಟ್ ವೇ ಆಫ್ ಇಂಡಿಯಾದಲ್ಲಿ ದಾಖಲಾತಿ ಮಾಡುತ್ತಿದ್ದರು. ಆರ್ಮಿಯವರು 10 ಪೌಂಡು ಜಾಸ್ತಿ ಮಾಡಿಕೊಂಡು ಬಾ ಅಂದಿದ್ದರು. ಏರ್‌ಫೋರ್ಸ್‌ನವರು ಎಡಗಣ್ಣು ವೀಕ್ ಇದೆ ಎಂದಿದ್ದರು.

What was Padmabhushan Anantnag doing in Mumbai before entering the film industry

ಅಷ್ಟರೊಳಗೆ ಅನಂತ್‌ನಾಗ್ ಆರ್ಟ್ಸ್ ಹಾಗೂ ಸೈನ್ಸ್ ಅಂತ ಓದಿಕೊಂಡಿದ್ದರು. ಈ ವೇಳೆ ಅನಂತ್‌ನಾಗ್ ಕೆಲಸಕ್ಕೆ ಸೇರುವುದಕ್ಕೆ ಮುಂದಾಗಿದ್ದರು. ಆಗಿನ್ನೂ ಅನಂತ್‌ನಾಗ್‌ಗೆ ಸಿನಿಮಾದಲ್ಲಿ ನಟಿಸುವ ಆಲೋಚನೆ ಏನ್ನೂ ಬಂದಿರಲಿಲ್ಲ. ಆಗಿನ್ನೂ ಜೀವನದಲ್ಲಿ ಗೊಂದಲವೇ ಇತ್ತು. ಏನು ಮಾಡುವುದು ಎನ್ನುವಾಗ ಅವರು ಮುಂಬೈನಲ್ಲಿಯೇ ಒಂದು ಕೆಲಸಕ್ಕೆ ಸೇರಿಕೊಂಡರು. ಆ ಕೆಲಸ ಯಾವುದು? ಆಮೇಲೆ ಹೇಗೆ ನಾಟಕ, ಸಿನಿಮಾ ಕಡೆಗೆ ಎಂಟ್ರಿ ಕೊಟ್ಟರು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ನಾಟಕ ಅಂತ ಒಡಾಡಿಕೊಂಡಿದ್ದಾಗ ಅನಂತ್‌ನಾಗ್‌ ಅವರಿಗೆ ಬ್ಯಾಂಕ್‌ನಲ್ಲಿ ವೆಕೆಷನ್‌ ಜಾಬ್ ಸಿಕ್ಕಿತ್ತು. ಅದನ್ನು ಮಾಡುತ್ತಲೇ ಅನಂತ್‌ನಾಗ್ ನಾಟಕಗಳಲ್ಲಿ ನಟನೆ ಮಾಡುವುದಕ್ಕೆ ಶುರು ಮಾಡಿದ್ದರು. ಮುಂಬೈನ ಯೂನಿಯನ್ ಬ್ಯಾಂಕ್‌ನಲ್ಲಿ ಅನಂತ್‌ನಾಗ್ ವೆಕೇಷನ್‌ ಜಾಬ್‌ಗೆ ಸೇರಿಕೊಂಡಿದ್ದರು. ಅದನ್ನು ಮುಂದುವರೆಸುವಂತೆ ಒತ್ತಡ ಬಂದಿತ್ತು. ಇತ್ತ ನಾಟಕದ ಮೇಲೆ ಒಲವು ಬೆಳೆದಿತ್ತು.

What was Padmabhushan Anantnag doing in Mumbai before entering the film industry

"ಬ್ಯಾಂಕ್‌ನಲ್ಲಿ ವೇಕೆಷನ್‌ ಜಾಬ್‌ಗಳು ಸಿಗುತ್ತಿದ್ದವು. ನೀನು ಈ ರೀತಿ ಮಾಡುವ ಹಾಕಿದ್ದರೆ, ನಿನ್ನ ಕಾಲ ಮೇಲೆ ನಿಂತು ಏನು ಮಾಡಬೇಕೋ ಅದನ್ನು ಮಾಡು. ಕಲಿಕೆನೂ ಮಾಡು ಹಾಗೇ ದುಡಿ ಅದು ನಿನ್ನಿಷ್ಟ ಎಂದು ತಂದೆಯವರು ಹೇಳಿದ್ದರು. ಅಷ್ಟು ಹೇಳಿದ್ದು ನನಗೆ ಬೆಳಕು ಕಂಡಂತೆ ಆಯ್ತು. ಯಾರೋ ನಾಟಕ ಮಾಡುತ್ತಿದ್ದಾರೆ. ನೀನು ಹೋಗಿ ಕಾಣು ಎಂದರು. ಆಗ ಪ್ರಭಾಕರ್ ಮುದೂರ್ ಅಂತ ನಾಟಕದ ಬರಹಗಾರರು. ಇವರೆಲ್ಲ ಕರ್ನಾಟಕದವರೇ. ನನಗೆ ಬಾಲ್ಯದಿಂದ ಮಿಮಿಕ್ರಿ ಮಾಡೋದು ಚಟವಾಗಿಬಿಟ್ಟಿತ್ತು. ಹೊನ್ನಾವರದಲ್ಲೂ ಚಿಕ್ಕ ಪುಟ್ಟ ಪಾರ್ಟ್ ಮಾಡುತ್ತಿದ್ದೆ. ಮುಂಬೈಗೆ ಬಂದ್ಮೇಲೆ ಎಲ್ಲಾ ಹೊರಟು ಹೋಗಿತ್ತು." ಎಂದು ಆನಂತ್‌ನಾಗ್ ದೂರದರ್ಶನಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.

ಅನಂತ್‌ನಾಗ್ ಚಿತ್ರರಂಗಕ್ಕೆ ಬಾರದೇ ಇದ್ದಿದ್ದರೆ, ಬಹುಶ: ಬ್ಯಾಂಕ್ ಉದ್ಯೋಗಿಯಾಗಿ ಮುಂಬೈನಲ್ಲಿಯೇ ನೆಲೆಸುತ್ತಿದ್ದರೇನೋ. ಯಾಕಂದ್ರೆ, ಬ್ಯಾಂಕ್‌ನ ವ್ಯವಸ್ಥಾಪಕರು ಈ ಕೆಲಸವನ್ನು ಸಿನಿಮಾ ಗೀಳು ಬೆಳೆಸಿಕೊಂಡು ಬಿಡಬೇಡ ಎಂದಿದ್ದರು. "ಬ್ಯಾಂಕ್‌ನಲ್ಲಿ ವೆಕೇಷನ್ ಜಾಬ್ ಅಂತ ಇದ್ದಿದ್ದನ್ನು ಮುಂದುವರೆಸು ಎಂದು ಹೇಳಿದ್ದರು. ಸುಮ್ಮನೆ ಏನೇನೋ ಕನಸನ್ನು ಕಾಣಬೇಡ. ಆಗಿನ್ನೂ ಬ್ಯಾಂಕ್‌ಗಳು ರಾಷ್ಟ್ರೀಕೃತವಾಗಿರಲಿಲ್ಲ. ಯೂನಿಯನ್ ಬ್ಯಾಂಕ್‌ನಲ್ಲಿ ನನಗೆ ಅವಕಾಶ ಕೊಟ್ಟಿದ್ದರು. ಇದೆಲ್ಲ ಸರಿ, ಆದರೆ, ದುಡುಕಬೇಡ. ಸಿನಿಮಾವೆಲ್ಲ ಆಫರ್ ಬಂದರೆ, ಯೋಚನೆ ಮಾಡಿ ಮಾಡು. 10 ಲಕ್ಷದಲ್ಲಿ ಒಬ್ಬನು ಯಶಸ್ವಿಯಾಗುತ್ತಾನೆ. ಇದ್ದ ಕೆಲಸ ಬಿಟ್ಟು ಹೋಗಿ ಜೀವನ ಹಾಳು ಮಾಡಿಕೊಳ್ಳಬೇಡ ಅಂತ ಬ್ಯಾಂಕ್‌ನವರು ಹೇಳುತ್ತಿದ್ದರು." ಎಂದು ಆ ಘಟನೆಯನ್ನು ಅನಂತ್‌ನಾಗ್ ನೆನೆಪಿಸಿಕೊಂಡಿದ್ದಾರೆ.

More from Filmibeat

English summary
What was Padmabhushan Anantnag doing in Mumbai before entering the film industry?;
Read more about: anant nag actor sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X