ಅಪಘಾತದಲ್ಲಿ ಅಗಲಿದ ಮಗಳ ಪುನರ್ಜನ್ಮ ತಿಳಿಯಲು ಹೊರಟ ಕನ್ನಡದ ನಟಿಗೆ ಸಿಕ್ಕಿದ ಉತ್ತರವೇನು?
ಕನ್ನಡ ಕಿರುತೆರೆ ನಟಿ ಅಮೃತಾ ನಾಯ್ಡು ಅವರ ಜೀವನದಲ್ಲಿ ಮೂರು ವರ್ಷಗಳ ಹಿಂದೆ ಒಂದು ದುರ್ಘಟನೆ ನಡೆದಿತ್ತು. ಕಲರ್ಸ್ ಕನ್ನಡದ 'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೊನಲ್ಲಿ ಅಮೃತಾ ನಾಯ್ಡು ಹಾಗೂ ಅವರ ಪುತ್ರಿ ಸಮನ್ವಿ ಕಾಣಿಸಿಕೊಂಡಿದ್ದರು. ಇದೇ ರಿಯಾಲಿಟಿ ಶೋ ಮುಗಿಸಿ ಮನೆ ಕಡೆಗೆ ಹೊರಡುವಾಗ ಅಪಘಾತದಲ್ಲಿ ಪುತ್ರಿ ಕೊನೆಯುಸಿರೆಳೆದಿದ್ದರು. ಈ ದುರ್ಘಟನೆಯಿಂದ ಹೊರ ಬರುವುದಕ್ಕೆ ಅಮೃತಾ ನಾಯ್ಡು ಸಾಕಷ್ಟು ಕಷ್ಟ ಪಟ್ಟಿದ್ದರು.
ಅಗಲಿದ ಮಗಳ ನೋವು ಇವರನ್ನು ಕಾಡುತ್ತಲೇ ಇತ್ತು. ಹೀಗಾಗಿ ಅಮೃತಾ ನಾಯ್ಡು ಮಗಳ ಸಾವಿನ ಬಗ್ಗೆ ತಿಳಿದುಕೊಳ್ಳುವುದಕ್ಕೆ ಮುಂದಾಗಿದ್ದರು. ಆ ವೇಳೆ ಅಮೃತಾ ನಾಯ್ಡು ಗರ್ಭಿಣಿಯಾಗಿದ್ದರು. ಹೀಗಿದ್ದರೂ, ಅಮೃತಾ ನಾಯ್ಡು ಮಗಳ ಬಗ್ಗೆ ತಿಳಿದುಕೊಳ್ಳಲೇ ಬೇಕು ನಿರ್ಧರಿಸಿದ್ದರು. ಮಗಳ ಬಗ್ಗೆ ಕೇಳಿದವರೆಲ್ಲರೂ ಮತ್ತೆ ಮಗನ ರೂಪದಲ್ಲಿ ಹುಟ್ಟಿ ಬರುತ್ತಾಳೆ ಎಂದಿದ್ದರು. ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಇಂತಹ ಮೂರು ಸನ್ನಿವೇಶಗಳನ್ನು ಅಮೃತಾ ಗೌಡ ಹಂಚಿಕೊಂಡಿದ್ದಾರೆ.

ಕಾಶಿಯಲ್ಲಿ ನಡೆದ ಘಟನೆಯೇನು?
ಮಗಳ ಸಾವಿನ ಬಗ್ಗೆ, ಅವಳ ಆಯಸ್ಸಿನ ಬಗ್ಗೆ ಕಾಶಿಯಲ್ಲಿ ಒಬ್ಬರು ಹೇಳುತ್ತಾರೆಂದು ಅಮೃತಾ ನಾಯ್ಡುಗೆ ಪರಿಚಯದವರು ಹೇಳಿದ್ದರು. ಆಗ ಅವರನ್ನು ಸಂಪರ್ಕಿಸಿದಾಗ ಏನು ನಡೀತು ಅನ್ನೋದನ್ನು ಹೇಳಿದ್ದಾರೆ. "ಯಾರೋ ಒಬ್ಬರು ಹೇಳಿದರು. ಕಾಶಿಯಲ್ಲಿ ಯಾರೋ ಒಬ್ಬರು ಇದ್ದಾರೆ. ಅವರ ಹತ್ತಿರ ಹೋದರೆ, ಯಾಕೆ ಹೀಗಾಯ್ತು? ಏನಕ್ಕೆ ಹೀಗಾಯ್ತು? ಮಗುಗೆ ಆಯಸ್ಸು ಕಮ್ಮಿಯಿತ್ತಾ ಅಂತೆಲ್ಲ ಹೇಳುತ್ತಾರೆ ಅಂತ ಹೇಳಿದರು. ನಾನು ಆಗ ಪ್ರೆಗ್ನೆಂಟ್ ಇದ್ದೆ. ಆ ಸಂದರ್ಭದಲ್ಲಿಯೂ ಎಲ್ಲಿಯೂ ನಾನು ಹೋಗುವ ಹಾಗೆ ಇರಲಿಲ್ಲ. ಆಗಲೂ ರೂಪೇಶ್ ಧೈರ್ಯ ಮಾಡಿ ಆ ವ್ಯಕ್ತಿಯನ್ನು ಹುಡುಕುವುದಕ್ಕೆ ಕಾಶಿಗೆಲ್ಲ ಹೋದರು. ನಾನು ಹೋಗಿಲ್ಲ, ಆದರೆ, ರೂಪೇಶ್ ಹೋದರು." ಎಂದು ಆ ಘಟನೆಯನ್ನು ವಿವರಿಸಿದ್ದಾರೆ. ಆದರೆ, ಅವರ ಪತಿ ಹೋದಾಗ ಆ ವ್ಯಕ್ತಿ ಅಲ್ಲಿ ಸಿಗಲೇ ಇಲ್ಲ.
ಕಾಶಿಯ ವ್ಯಕ್ತಿ ನಾಪತ್ತೆ
"ಅಲ್ಲಿವರೆಗೂ ಅವರು ಕಾಂಟೆಕ್ಟ್‌ನಲ್ಲಿ ಇದ್ದರು. ನಾವು ಅಲ್ಲಿಗೆ ಹೋದ್ಮೇಲೆ ಆ ಮನುಷ್ಯ ನಮಗೆ ಸಿಗಲೇ ಇಲ್ಲ. ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಅಲ್ಲಿಗೆ ಹೋಗಿದ್ದೂ ವ್ಯರ್ಥವಾಯ್ತು. ಸುಮ್ಮನೆ ವಾಪಸ್ ಬಂದುಬಿಟ್ವಿ. ಒಂದು ತಿಂಗಳು ಆಗಿತ್ತಷ್ಟೇ. ಸತ್ಯ ಟೀಮ್‌ನವರು ನನ್ನನ್ನು ಮಾತಾಡಿಸುವುದಕ್ಕೆ ಬಂದರು. ಸತ್ಯ ಸೀರಿಯಲ್‌ನಲ್ಲಿ ಗೌತಮಿ ಇದ್ದಾರಲ್ಲ ಅವರು ಒಂದು ದೇವಸ್ಥಾನ ಹೇಳಿದರು. ವನದುರ್ಗ ದೇವಿಯ ಅಮ್ಮನ ದೇವಸ್ಥಾನ. ಇದರ ಬಗ್ಗೆ ಶೂಟಿಂಗ್‌ನಲ್ಲಿ ಇದ್ದಾಗಲೂ ತುಂಬಾನೇ ಮಾತಾಡುತ್ತಿದ್ವಿ. ಇದು ಮಂಗಳೂರಿನಲ್ಲಿ ಇರೋದು ನನಗೆ ಸರಿಯಾದ ಲೋಕೇಶನ್ ಗೊತ್ತಿಲ್ಲ. ನಾನು ತುಂಬಾ ನಂಬುತ್ತೇನೆ. ತುಂಬಾ ಶಕ್ತಿ ಕೊಡುತ್ತೆ ಅಮ್ಮ ಅಂತ ಹೇಳುತ್ತಿದ್ದಳು. ಏನೇ ಆಗುತ್ತೆ? ನನಗೆ ಯಾರಾದರೂ ರಕ್ಷಣೆ ಕೊಡಬೇಕು ಅಂತ ರೂಪೇಶ್‌ಗೆ ಹೇಳಿದೆ. ಆದರೂ ರಾತ್ರೋ ರಾತ್ರಿ ಟೈನ್ ಬುಕ್ ಮಾಡಿಕೊಂಡು ಹೋದ್ವಿ." ಎಂದಿದ್ದಾರೆ.

ವನದುರ್ಗ ದೇವಿಯ ದೇವಸ್ಥಾನದಲ್ಲಿ ಏನಾಯ್ತು?
"ಅಲ್ಲಿಗೆ ಹೋದ ತಕ್ಷಣ ತೀರ್ಥ ಸ್ನಾನ ಅಂತ ಮಾಡಿಸುತ್ತಾರೆ. ಇದನ್ನು ನಂಬಿಕೆ ಅಂತ ಕರೀತಿರೋ? ಇಲ್ಲ ಆ ಕ್ಷಣಕ್ಕೆ ಬಂದಿರೋ ಸಪೋರ್ಟ್ ಸಿಸ್ಟಂ ಅಂತಿರೋ? ಏನಾದರೂ ಅಂದುಕೊಳ್ಳಬಹುದು. ಅವರು ನಮಗೆ ಸ್ವಲ್ಪ ಕಾಯಿಸಿ, ಎಲ್ಲರಿಗೂ ಮಾಡಿ ಮುಗಿಸಿದ ಮೇಲೆ ಮಾಡಿ ಕಳಿಸಿದರು. ರೂಪೇಶ್ ತುಂಬಾ ದೇವರನ್ನು ನಂಬುವ ವ್ಯಕ್ತಿಯಲ್ಲ. ರೂಪೇಶ್ ಅವರನ್ನು ಕೂರಿಸಿ, ತಣ್ಣೀರು ಹಾಕಿದ ಕೂಡಲೇ ಅವರು ನಡುಗಿ ಹೋದರು. ನಿಮ್ಮ ಫ್ಯಾಮಿಲಿ ಮೇಲೆ ತುಂಬಾನೇ ಕಣ್ಣಿನ ದೃಷ್ಠಿಯಿತ್ತು. ಇನ್ಮೇಲೆ ಎಲ್ಲಾ ಪರಿಹಾರ ಆಗುತ್ತೆ ಅಂದರು. ಅಲ್ಲಿಗೆ ಹೋದಾಗ ಒಂದು ಪರ್ಸೆಂಟ್ ಆಚೆ ಬಂದ್ವಿ" ಎನ್ನುತ್ತಾರೆ.
ಮಂತ್ರಾಲಯಲ್ಲಿ ತಾತಪ್ಪ ಹೇಳಿದ್ದೇನು?
"ಅಲ್ಲಿಗೆ ಕೇಳಿದರೆ, ನಿಮಗೆ ಗಂಡು ಮಗು ಆಗುತ್ತೆ ಅಂದರು. ಆದರೆ, ಯಾರನ್ನೇ ಕೇಳಿದರೂ ಅವಳೇ ಹುಟ್ಟಿ ಬರುತ್ತಾಳೆ ಹೋಗಿ ಅನ್ನೋರು. ನಾವು ತುಂಬಾ ನಂಬೋದು ರಾಯರನ್ನು. ಹಾಗಾಗಿ ಮಂತ್ರಾಲಯಕ್ಕೆ ಹೋಗೋಣ ಅಂತ ನಿರ್ಧರಿಸಿದೆ. ಅಲ್ಲಿಗೆ ಹೋದಾಗ ಒಬ್ಬರು ತಾತಪ್ಪ ಸಿಕ್ಕಿದರು. ಎಷ್ಟೋ ಜನಕ್ಕೆ ನೀವು ಚೆನ್ನಾಗಿರೋದು ಇಷ್ಟವಿಲ್ಲ. ನೀವು ಈ ಊರಿನಲ್ಲೇ ಇರಬೇಡಿ. ನಿಮ್ಮ ಯಜಮಾನದರು ವಿದೇಶಕ್ಕೆ ಹೋಗುವ ಅವಕಾಶವಿದ್ದರೆ ಹೋಗಿ, ಇಲ್ಲಾ ಅಂದರೆ, ಜನ ನಿಮ್ಮನ್ನು ಬದುಕುವುದಕ್ಕೆ ಬಿಡುವುದಿಲ್ಲ. ನಿಮಗೆ ಪದೇ ಪದೆ ಆಗುತ್ತೆ. ನಿಮಗೆ ಗಂಡು ಮಗು ಆಗುತ್ತೆ. ಮಗಳೇ ಹುಟ್ಟಿ ಬರುತ್ತಾಳೆ ಅಂತ ಅವರೂ ಹೇಳಿದರು." ಎಂದು ಅಮೃತಾ ನಾಯ್ಡು ಹೇಳಿದ್ದರು.


Click it and Unblock the Notifications











