ಅಣ್ಣಾವ್ರ ಬಿಡುಗಡೆ ವೇಳೆ ವೀರಪ್ಪನ್ ಕೊಟ್ಟು ಕಳುಹಿಸಿದ್ದ ಉಡುಗೊರೆಯೇನು? ಆ ದಿನ ನಡೆದಿದ್ದೇನು?
ಕನ್ನಡಿಗರ ಆರಾಧ್ಯ ದೈವ, ಅಭಿಮಾನಿಗಳ ಪಾಲಿಗೆ ವರನಟ ಡಾ.ರಾಜ್‌ಕುಮಾರ್. ಇದೇ 24 ವರ್ಷಗಳ ಹಿಂದೆ ಅಣ್ಣಾವ್ರನ್ನು ಅವರ ತೋಟದ ಮನೆಯಿಂದ ಕಾಡುಗಳ್ಳ, ನರಹಂತಕ ವೀರಪ್ಪನ್ ಅಪಹರಣ ಮಾಡಿದ್ದ. ಈ ಸುದ್ದಿ ಬೆಳಕಾಗುವುದರೊಳಗೆ ಕಾಡ್ಬಿಚ್ಚಿನಂತೆ ಹಬ್ಬಿತ್ತು. ಅಭಿಮಾನಿಗಳಲ್ಲಿ ಆತಂಕ ಹೆಚ್ಚಿತ್ತು. ಆಕ್ರೋಶ, ಪ್ರತಿಭಟನೆಗಳು ಶುರುವಾಗಿದ್ದವು.
ಅಣ್ಣಾವ್ರು ನಟನೆಯಿಂದ ದೂರವಿದ್ದ ಕಾಲವದು. ಹೀಗಾಗಿ ಬೆಂಗಳೂರಿನಲ್ಲಿ ಬೇಸರವಾದರೆ, ತಮ್ಮ ಹುಟ್ಟೂರು ಗಾಜನೂರಿಗೆ ಹೋಗುತ್ತಿದ್ದರು. ಅಲ್ಲಿ ಕೆಲವು ದಿನಗಳು ಇದ್ದು ಬರುತ್ತಿದ್ದರು. ಅದು 2000ನೇ ಇಸವಿ ಜುಲೈ 30. ಡಾ.ರಾಜ್‌ಕುಮಾರ್ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಅವರೊಂದಿಗೆ ಹುಟ್ಟೂರು ಗಾಜನೂರಿಗೆ ಹೋಗಿದ್ದರು. ಈ ದಿನ ರಾತ್ರಿ ಅಣ್ಣಾವ್ರು ಊಟ ಮಾಡಿ ಕೂತಿದ್ದರು. ಈ ವೇಳೆ ವೀರಪ್ಪನ್ ತನ್ನ ಸಹಚರರೊಂದಿಗೆ ಬಂದು ಅಪರಣ ಮಾಡಿದ್ದ.

ಸುಮಾರು 108 ದಿನಗಳ ಕಾಲ ಅಣ್ಣಾವ್ರು ಕಾಡುಗಳ್ಳ ವೀರಪ್ಪನ್ ಅವರೊಂದಿಗೆ ಕಾಡುನಲ್ಲಿಯೇ ಇರಬೇಕಾಯ್ತು. ಇಷ್ಟೂ ದಿನ ರಾಜ್ಯದಲ್ಲಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ರಾಜ್ಯದಾದ್ಯಂತ ಪ್ರತಿಭಟನೆಯನ್ನು ಮಾಡುತ್ತಿದ್ದರು. ಹೆಚ್ಚು ಕಡಿಮೆ ಮೂರುವರೆ ತಿಂಗಳುಗಳ ಕಾಲ ರಾಜ್‌ಕುಮಾರ್ ಕಾಡಿನಲ್ಲಿ ಬಂಧಿಯಾಗಿದ್ದರು. ಆದರೆ, ಮರಳುವಾಗ ವೀರಪ್ಪನ್ ಪ್ರೀತಿಯಿಂದ ಅಣ್ಣಾವ್ರಿಗೆ ಉಡುಗೊರೆಯೊಂದನ್ನು ಕೊಟ್ಟಿದ್ದ. ಆ ಉಡುಗೊರೆಯೇನು? ಬರುವ ದಿನ ನಡೆದಿದ್ದೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಅಣ್ಣಾವ್ರಿಗೆ ಹುಟ್ಟೂರಿನ ಮೇಲೆ ಬಲು ಪ್ರೀತಿ. ಹೀಗಾಗಿ ಗಾಜನೂರಿನ ತೋಟದ ಮನೆಗೆ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಸಂಬಂಧಿಯೊಂದಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸುಳಿವು ಪಡೆದ ವೀರಪ್ಪನ್, ರಾತ್ರೋ ರಾತ್ರಿ ಅಪಹರಣ ಮಾಡಿ ರಾಜ್ಯ ಸರ್ಕಾರಕ್ಕೆ ಬೇಡಿಕೆಯನ್ನು ಸಲ್ಲಿಸಿದ್ದ. ಇವರೊಂದಿಗೆ ಅಳಿಯ ಎಸ್ ಎ ಗೋವಿಂದರಾಜು, ಸಹ ನಿರ್ದೇಶಕ ನಾಗಪ್ಪ ಮಾರಡಗಿ, ಸಂಬಂಧಿ ನಾಗೇಶ್ ಕೂಡ ಇದ್ದರು.

ಇತ್ತ ವಿಷಯ ತಿಳಿಯುತ್ತಿದ್ದಂತೆ ರಾಜ್‌ಕುಮಾರ್ ಅಭಿಮಾನಿಗಳು ಪ್ರತಿಭಟನೆಗಳು ಶುರುವಾಗಿತ್ತು. ಚಿತ್ರರಂಗ ಬಂದ್ ಆಗಿತ್ತು. ರಾಜ್‌ಕುಮಾರ್ ಬಿಡುಗಡೆಗೆ ಬೇಡಿಕೆಗಳು ಹೆಚ್ಚಾಗುವುದಕ್ಕೆ ಶುರುವಾಗಿತ್ತು. ಇದೇ ಬೆನ್ನಲ್ಲೇ ಸತತ ಪ್ರಯತ್ನಗಳ ಬಳಿಕ ವೀರಪ್ಪನ್ ಜೊತೆ ಸಂಧಾನ ಯಶಸ್ವಿಯಾಗಿತ್ತು. ಸುಮಾರು 108 ದಿನಗಳ ಬಳಿಕ ರಾಜ್‌ಕುಮಾರ್ ಅನ್ನು ಬಿಡುವುದಕ್ಕೆ ವೀರಪ್ಪನ್ ಮುಂದಾಗಿದ್ದ. 200ನೇ ಇಸವಿಯ ನವೆಂಬರ್ 15ರಂದು ಅಣ್ಣಾವ್ರು ಬಿಡುಗಡೆಯಾಗಿದ್ದರು.
ಸುಮಾರು 108 ದಿನಗಳ ಕಾಲ ಅಣ್ಣಾವ್ರ ಜೊತೆಯಲ್ಲಿ ವೀರಪ್ಪನ್ ಚೆನ್ನಾಗಿ ನೋಡಿಕೊಂಡಿದ್ದ. ಅಣ್ಣಾವ್ರನ್ನು ಯಾವಾಗಲೂ ದೊಡ್ಡವರು ಎಂದೇ ಕರೆಯುತ್ತಿದ್ದ. ಅವರಿಗೆ ದಿನ ನಿತ್ಯ ಬೇಕಿದ್ದ ಅಗತ್ಯ ಅವಶ್ಯಕತೆಗಳಿಗೆ ಸ್ಪಂದಿಸಿದ್ದ ಅನ್ನೋದನ್ನು ಅಣ್ಣಾವ್ರು ಬಿಡುಗಡೆ ಬಳಿಕ ಹೇಳಿಕೊಂಡಿದ್ದರು. ಆದರೆ, ಇದೇ ವೇಳೆ ವೀರಪ್ಪನ್ ವರನಟ ರಾಜ್‌ಕುಮಾರ್ ಅವರಿಗೆ ಉಡುಗೊರೆಯನ್ನು ಕೊಟ್ಟು ಕಳುಹಿಸಿದ್ದ. ಆ ಉಡುಗೊರೆಯೇನು? ಅನ್ನೋ ಬಗ್ಗೆ ಸರಿಯಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಆದರೆ, ಅಣ್ಣಾವ್ರ ಜೊತೆಗೆ ಕಾಡಿಗೆ ತೆರಳಿದ್ದ ಸಂಬಂಧಿ ನಾಗೇಶ್ ಈ ಹಿಂದೆ ಕೆಲವು ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಣ್ಣಾವ್ರನ್ನು ಬಿಗಿದಪ್ಪಿ ವೀರಪ್ಪನ್ ಬಿಡುಗಡೆ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಈ ಅಪರಣವನ್ನು ಹತ್ತಿರದಿಂದ ಅಧ್ಯಯನ ನಡೆಸಿದವರು ಕೊನೆಯ ದಿನ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕೆಲವರು ಅಣ್ಣಾವ್ರನ್ನು ಬಿಡುಗಡೆಗೊಳಿಸುವ ದಿನ ಬಿಳಿ ಪಂಚೆ, ಶಾಲು ನೀಡಿ ಗೌರವಿಸಿದ್ದ. ಹಾಗೇ ವೀರಪ್ಪನ್ ಸಹಚರ ಸೇತುಕುಳಿ ಆನೆದಂತದಿಂದ ಮಾಡಿದ್ದ ಶಿವಲಿಂಗವನ್ನು ಉಡುಗೊರೆಯಾಗಿ ನೀಡಿದ್ದ ಎಂದು ಸಂದರ್ಶನವೊಂದರಲ್ಲಿ ನಾಗೇಶ್ ರಿವೀಲ್ ಮಾಡಿದ್ದಾರೆ.
ಆದರೆ, ಅಣ್ಣಾವ್ರ ಕುಟುಂಬವಾಗಲಿ, ಸಂಬಂಧ ಪಟ್ಟವರೇ ಆಗಲಿ ವೀರಪ್ಪನ್ ಕೊಟ್ಟ ಉಡುಗೊರೆ ಏನು? ಅನ್ನೋದನ್ನು ರಿವೀಲ್ ಮಾಡಿಲ್ಲ. ಸದ್ಯಕ್ಕೆ ಈ ರಹಸ್ಯ ಅಧಿಕೃತವಾಗಿ ಇನ್ನೂ ಬಹಿರಂಗವಾಗಿಲ್ಲ.


Click it and Unblock the Notifications











