ರಾಘಣ್ಣ ಐಸಿಯುನಲ್ಲಿ ಇದ್ದಾಗ ಪುನೀತ್ ರಾಜ್‌ಕುಮಾರ್ ಯಾಕೆ ಬಂದಿಲ್ಲ? ಆಗ ಅಪ್ಪುಗೆ ಶಿವಣ್ಣ ಹೇಳಿದ್ದಿದ್ದೇನು?

ಕರ್ನಾಟಕ ರತ್ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಪಾರ ಅಭಿಮಾನಿಗಳನ್ನು ಅಗಲಿ ಮೂರು ವರ್ಷಗಳಾಗಿದೆ. ಅಪ್ಪು ದಿಢೀರನೇ ಅಭಿಮಾನಿಗಳಿಂದ ಕಣ್ಮರೆಯಾದ ನೋವು ಇನ್ನೂ ಅವರ ಅಭಿಮಾನಿಗಳಿಂದ ಇನ್ನೂ ಮರೆಯಾಗಿಲ್ಲ. ಆ ನೋವಿನಲ್ಲಿಯೇ ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬವನ್ನು ಆಚರಿಸುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಪುನೀತ್ ಚೊಚ್ಚಲ ಚಿತ್ರ ಅಪ್ಪು ಸಿನಿಮಾವನ್ನು ಕಣ್ತುಂಬಿ ಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

ಪುನೀತ್ ನಗುಮುಖದ ಸರದಾರ. ಬದುಕಿದ್ದಾಗ ಅವರು ಮಾಡಿ ಸಾಮಾಜಿಕ ಕೆಲಸಗಳು ಇಂದಿಗೂ ನೆನಪಿಸಿಕೊಂಡು ಕಣ್ಣೀರು ಹಾಕುವವರು ಕಮ್ಮಿಯೇನಿಲ್ಲ. ಅದೆಷ್ಟೋ ಅಸಹಾಯಕರಿಗೆ ಪುನೀತ್ ರಾಜ್‌ಕುಮಾರ್ ತಮ್ಮ ಕೈಯಲ್ಲಾದ ಸಹಾಯ ಮಾಡಿದ್ದಾರೆ. ಅದು ಅವರು ಅಗಲಿದ ಬಳಿಕವೇ ಬೆಳಕಿಗೆ ಬಂದಿತ್ತು. ಅಲ್ಲಿವರೆಗೂ ಅಪ್ಪು ಮಾಡಿದ ಸಹಾಯ ಯಾರಿಗೂ ಗೊತ್ತಿರಲೂ ಇಲ್ಲ.

When Raghavendra Rajkumar was in the ICU in a Bengaluru Puneeth Rajkumar didn t visit the hospital

ಕಷ್ಟ ಅಂದಾಗ ಅವರ ನೆರವಿಗೆ ಬರುತ್ತಿದ್ದ ಪುನೀತ್ ರಾಜ್‌ಕುಮಾರ್ ತನ್ನ ಅಣ್ಣ ಐಸಿಯುನಲ್ಲಿ ಇದ್ದಾಗ ಜೊತೆಯಲ್ಲಿ ಇರಲಿಲ್ಲ. ಆ ವೇಳೆ ಅಪ್ಪು ಅಮೆರಿಕದಲ್ಲಿ ಇದ್ದರು. ಪರಿಸ್ಥಿತಿ ಗಂಭೀರ ಇದ್ದರೂ ಪುನೀತ್ ಯಾಕೆ ಹಿಂತಿರುಗಲಿಲ್ಲ? ಅನ್ನೋ ಪ್ರಶ್ನೆನೂ ಎದ್ದಿತ್ತು. ಈ ಎಲ್ಲಾ ಗೊಂದಲಗಳ ಬಗ್ಗೆ ರಾಘಣ್ಣ ಹಾಗೂ ಪುನೀತ್ ರಾಜ್‌ಕುಮಾರ್ ಇಬ್ಬರೂ ಓಪನ್ ಆಗಿ ಮಾತಾಡಿದ್ದರು. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.

ರಾಘಣ್ಣ ಐಸಿಯುನಲ್ಲಿ ಇದ್ದಾಗ ಅಪ್ಪು ಇಲ್ಲದ ಆ ಕ್ಷಣ ಹೇಗಿತ್ತು ಅಂತ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಹೇಳಿದ್ದರು. ಅಪ್ಪು ಮುಂದೇನೆ ಆ ಕ್ಷಣವನ್ನು ಮೆಲುಕು ಹಾಕಿದ್ದರು. ಆ ವೇಳೆ ಕಣ್ಣೀರು ಹಾಕಿದ್ದನ್ನೂ ರಾಘಣ್ಣ ಹೇಳಿಕೊಂಡಿದ್ದರು. ಅದಕ್ಕೆ ಪುನೀತ್ ರಾಜ್‌ಕುಮಾರ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಅಮೆರಿಕದಿಂದ ಯಾಕೆ ಹಿಂತಿರುಗಿ ಬರಲಿಲ್ಲ ಅನ್ನುವುದಕ್ಕೆ ಕಾರಣ ಕೊಟ್ಟಿದ್ದರು.

When Raghavendra Rajkumar was in the ICU in a Bengaluru Puneeth Rajkumar didn t visit the hospital

"ಇನ್ನೊಂದು ಮಾತು ಈ ಸಮಯದಲ್ಲಿ ಹೇಳುತ್ತಿದ್ದೇನೆ ಅಂತ ಬೇಜಾರು ಮಾಡಿಕೊಳ್ಳಬೇಡ. ನನಗೆ ಹಿಂದಿನ ವರ್ಷ ಹುಷಾರು ತಪ್ಪಿದಾಗ ನಾನು ಐಸಿಯುನಲ್ಲಿ ಇದ್ದೆ. ಅಲ್ಲಿ ನೀವು ಇರಲಿಲ್ಲ. ಅದು ನನಗೆ ತುಂಬಾನೇ ಕಷ್ಟ ಆಗಿತ್ತು. ಶೂಟಿಂಗ್‌ಗೆ ಅಂತ ಫಾರಿನ್‌ಗೆ ಹೋಗಿದ್ರಿ. ಆ ವೇಳೆ ನಿಮ್ಮನ್ನು ಹೇಗೆ ಕರೆಸೋದು ಅಂತ ಬೇಜಾರು. ಶೂಟಿಂಗ್ ಬಿಟ್ಟು ಬಂದರೆ ಲಾಸ್ ಆಗುತ್ತೆ. ಆಗ ನನ್ನ ಹೆಂಡ್ತಿ ಅಪ್ಪು ಬೇಕಾ ಅಂತ ಹೇಳಿದ್ಲಂತೆ. ಅಪ್ಪು ಬೇಕಾ ಅಂದಾಗ ನನ್ನ ಕಣ್ಣಲ್ಲಿ ನೀರು ಬಂದುಬಿಡ್ತಂತೆ. ಅಮೆರಿಕದಲ್ಲಿ ನೀವು ಎಷ್ಟು ಕಷ್ಟಪಟ್ರಿ ಅಂತ ನನಗೆ ಗೊತ್ತು. ನಿಮ್ಮ ಫ್ರೆಂಡ್ ನ್ಯೂಯಾರ್ಕ್‌ನಿಂದ ಫೋನ್ ಮಾಡಿ ಹೇಳಿದ್ರು. ಎರಡು ಮೂರು ದಿನ ಅಪ್ಪುಗೆ ಕಂಟ್ರೋಲ್ ಮಾಡುವುದಕ್ಕೆ ಆಗುತ್ತಿರಲಿಲ್ಲ ಅಂತ ಹೇಳಿದ್ದರು." ಎಂದು ವೀಕೆಂಡ್ ವೀತ್ ರಮೇಶ್ ಕಾರ್ಯಕ್ರಮದಲ್ಲಿ ರಾಘಣ್ಣ ಹೇಳಿದ್ದರು.

ರಾಘಣ್ಣ ಹೇಳಿದ ಈ ಮಾತುಗಳಿಗೆ ಪುನೀತ್ ರಾಜ್‌ಕುಮಾರ್ ಪ್ರತಿಕ್ರಿಯೆ ನೀಡಿದ್ದರು. "ಆ ಸಂದರ್ಭ ಹಾಗಿತ್ತು. ಆ ವೇಳೆ ತುಂಬಾನೇ ಕನ್ಫ್ಯೂಸ್ ಆಗಿತ್ತು. ಆಗ ನನ್ನ ಹೆಂಡ್ತಿ, ಮಕ್ಕಳು ನನ್ನ ಜೊತೆನೇ ಇದ್ದರು. ಶಿವಣ್ಣ ನನಗೆ ಏನೂ ತೊಂದರೆ ಇಲ್ಲ. ಏನಾಗಿದೆ ಅದು ಆಗುತ್ತೆ. ಅದಕ್ಕೆ ಟ್ರೀಟ್ಮೆಂಟ್ ಆಗುತ್ತೆ. ಈಗ ಇಲ್ಲಿಗೆ ಬಂದರೂ ನೀನು ಏನು ಮಾಡುವುದಕ್ಕೆ ಆಗುವುದಿಲ್ಲ ಅಂತ ಹೇಳಿದ್ರು. ಶಿವಣ್ಣ ಅವರೊಂದಿಗೆ ಸಂಪೂರ್ಣವಾಗಿ ಇದ್ದರು. ನಿನ್ನ ಕೆಲಸ ಮುಗಿಸಿಕೊಂಡು ಬಾ ಅಂತ ಹೇಳಿದ್ರು. ನಮ್ಮ ಇಡೀ ಕುಟುಂಬ ಎಲ್ಲರೂ ರಾಘಣ್ಣನ ಜೊತೆ ಇದ್ದರು." ಎಂದು ಪುನೀತ್ ಪ್ರತಿಕ್ರಿಯೆ ನೀಡಿದ್ದರು.

ಆದರೆ, ವೇಳೆ ರಾಘಣ್ಣ ಹಾಗೂ ಅಪ್ಪು ಬಗ್ಗೆ ಇಲ್ಲ ಸಲ್ಲದ ವದಂತಿಗಳನ್ನು ಹಬ್ಬಿಸಿದ್ದರು. ರಾಘಣ್ಣ ಹಾಗೂ ಪುನೀತ್ ರಾಜ್‌ಕುಮಾರ್ ಇಬ್ಬರೂ 'ವೀಕೆಂಡ್ ವಿತ್ ರಮೇಶ್' ಶೋನಲ್ಲಿ ಆ ಎಲ್ಲಾ ಊಹಾಪೋಹಗಳಿಗೆ ಸ್ಪಷ್ಟನೆ ಕೊಟ್ಟಿದ್ದರು. ಅಲ್ಲದೆ ಅಪ್ಪು ಸರಳತೆಯನ್ನು ರಾಘಣ್ಣ ಹಾಡಿಹೊಗಳಿದ್ದರು. "ಅಪ್ಪು ಸಿಂಪ್ಲಿಸಿಟಿ ತುಂಬಾನೇ ಇಷ್ಟ ನನಗೆ. ತುಂಬಾನೇ ಸಿಂಪಲ್ ಆಗಿ ತೆಗೆದುಕೊಳ್ಳುತ್ತೀರ. ಯಾರು ಏನೇ ಹೊಗಳಿದರೂ ನಕ್ಕು ಬಿಡುತ್ತೀರ. ಆಮೇಲೆ ನಿಮಗೆ ತುಂಬಾ ಹೊಗಳಿದರೆ ಆಗುವುದಿಲ್ಲ. ಅವನನ್ನು ಜಾಗ ಖಾಲಿ ಮಾಡಿಸು ಅಂತ ಹೇಳುತ್ತೀರ." ಎಂದು ಹೇಳಿದ್ದರು.

More from Filmibeat

English summary
When Raghavendra Rajkumar was in the ICU in a Bengaluru Puneeth Rajkumar didn't visit the hospital;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X