ರಜನಿಕಾಂತ್‌ಗಾಗಿ ಅತಿಲೋಕ ಸುಂದರಿ ಶ್ರೀದೇವಿ 7 ದಿನ ಉಪವಾಸ: ಸಾಯಿಬಾಬಾ ಸನ್ನಿಧಿಗೂ ಹೋಗಿದ್ದೇಕೆ?
ಸೂಪರ್‌ಸ್ಟಾರ್ ರಜನಿಕಾಂತ್ ಫ್ರೆಂಡ್‌ಶಿಪ್ ಬಗ್ಗೆನೇ ನೂರೆಂಟು ಕಥೆಗಳಿವೆ. ಕಷ್ಟದಲ್ಲಿರೋ ತನ್ನ ಸ್ನೇಹಿತರಿಗೆ ರಜನಿ ಗೊತ್ತಿಲ್ಲದೆ ಸಹಾಯ ಹಸ್ತ ಚಾಚುತ್ತಾರೆ. ಅದ್ಯಾವಾಗ ಬಂದು ಸಹಾಯ ಮಾಡುತ್ತಾರೆ ಅನ್ನೋದೇ ಗೊತ್ತಾಗುವುದಿಲ್ಲ. ಇಂತಹ ಒಂದಿಷ್ಟು ಕಥೆಗಳು ಅವರ ಸ್ನೇಹಿತರ ವರ್ಗದಲ್ಲಿ ಆಗಾಗ ಕೇಳಿ ಬರುತ್ತಲೇ ಇರುತ್ತೆ.
ಇದು ಸಿನಿಮಾರಂಗದಿಂದ ಹೊರತಾದ ಕಥೆಯಾದರೆ, ಮತ್ತೊಂದು ಕಡೆ ರಜನಿಕಾಂತ್‌ಗೆ ಚಿತ್ರರಂಗದಲ್ಲೂ ಉತ್ತಮ ಸ್ನೇಹಿತರಿದ್ದರು. ಸೂಪರ್‌ಸ್ಟಾರ್‌ಗಾಗಿ ಪ್ರಾಣವನ್ನೇ ಕೊಡುವ ಸ್ನೇಹಿತರು. ಅದರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಕೂಡ ಒಬ್ಬರು. ಇವರ ಜೊತೆಗೆ ಲೇಡಿ ಸೂಪರ್‌ಸ್ಟಾರ್ ಶ್ರೀದೇವಿ ಕೂಡ ರಜನಿಯ ಬೆಸ್ಟ್ ಫ್ರೆಂಡ್ ಆಗಿದ್ದರು ಅನ್ನೋದನ್ನು ನೀವು ನಂಬಲೇ ಬೇಕು.

ರಜನಿಕಾಂತ್ ಸದ್ಯ 'ಜೈಲರ್' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ರಜನಿ ಹಾಗೂ ಶ್ರೀದೇವಿಯ ಸ್ನೇಹದ ಬಗ್ಗೆ ಒಂದು ಸುದ್ದಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ರಜನಿಕಾಂತ್‌ಗಾಗಿ ದಿವಂಗತ ನಟಿ ಶ್ರೀದೇವಿ ಉಪವಾಸ ಕೈಗೊಂಡಿದ್ದೇಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಆಸ್ಪತ್ರೆಗೆ ದಾಖಲಾಗಿದ್ದ ರಜನಿಕಾಂತ್
ಕೆಲವು ವರ್ಷಗಳ ಹಿಂದೆ ರಜನಿಕಾಂತ್ ಆರೋಗ್ಯ ಗಂಭೀರವಾಗಇ ಹದಗೆಟ್ಟಿತ್ತು. ಆ ವೇಳೆ ಸೂಪರ್‌ಸ್ಟಾರ್ 'ರಾಣಾ' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇನ್ನೇನು ಶೂಟಿಂಗ್ ಶುರುವಾಗಬೇಕು ಅನ್ನುವಾಗಲೇ ರಜನಿಕಾಂತ್ ಆರೋಗ್ಯದಲ್ಲಿ ಏರುಪೇರಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ರಜನಿಕಾಂತ್ ಪರಿಸ್ಥಿತಿ ಗಂಭೀರ ಅನ್ನೋ ಮಾತು ಕೇಳಿ ಬಂದಿತ್ತು. ಇದು ರಜನಿಕಾಂತ್ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು.

ಸಿಂಗಾಪುರದಲ್ಲಿ ರಜನಿಕಾಂತ್‌ಗೆ ಚಿಕಿತ್ಸೆ
ರಜನಿಕಾಂತ್ ದಿಢೀರನೇ ಮಧ್ಯಪಾನ ಮಾಡುವುದನ್ನು ತ್ಯಜಿಸಿದ್ದರು. ಅಲ್ಲದೆ ಕಟ್ಟುನಿಟ್ಟ ಆಹಾರ ಕ್ರಮವನ್ನು ಪಾಲಿಸಲು ಆರಂಭಿಸಿದ್ದರು. ಇದು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿತು ಎಂದು ಸುದ್ದಿ ಹಬ್ಬಿತ್ತು. ಅಲ್ಲದೆ ರಜನಿಯನ್ನು ಸಿಂಗಾಪುರ ಶಿಫ್ಟ್ ಮಾತಾಡಿದಾಗ ಅಭಿಮಾನಿಗಳ ಆತಂಕ ಮತ್ತಷ್ಟು ಹೆಚ್ಚಾಗಿತ್ತು. ರಜನಿಕಾಂ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿತ್ತು. ಈ ವೇಳೆ ಸೂಪರ್‌ಸ್ಟಾರ್ ಸ್ನೇಹಿತೆ ಶ್ರೀದೇವಿ ಉಪವಾಸ ವೃತ ಮಾಡಿದ್ದರು.
ಏಳು ದಿನ ಉಪವಾಸವಿದ್ದ ಶ್ರೀದೇವಿ
ರಜನಿಕಾಂತ್ ಆರೋಗ್ಯ ಸುಧಾರಿಸಲಿ. ಮತ್ತೆ ಚೇತರಿಸಿಕೊಂಡು ಎಂದಿನಂತೆ ಗುಣಮುಖರಾಗಿ ಬರಲಿ ಅಂತ ಶ್ರೀದೇವಿ ಏಳು ದಿನಗಳ ಕಾಲ ಉಪವಾಸ ಕೈಗೊಂಡಿದ್ದಾರೆ ಎಂದು ವರದಿಯಾಗಿತ್ತು. ಸಾಯಿ ಬಾಬಾ ಭಕ್ತೆಯಾಗಿದ್ದ ಶ್ರೀದೇವಿ ಪುಣೆಗೆ ತೆರಳಿ ಸಾಯಿಬಾಬಾ ದರ್ಶನ ಪಡೆದು ಬಂದಿದ್ದರು. ಅಲ್ಲದೆ ಸ್ನೇಹಿತ ರಜನಿಕಾಂತ್ ಆರೋಗ್ಯ ಸುಧಾರಿಸಲಿ ಎಂದು ಪ್ರಾರ್ಥನೆ ಮಾಡಿದ್ದರು. ಅಂದು ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ರಜನಿ ಜೊತೆ ಶ್ರೀದೇವಿ ನಟನೆ
ಶ್ರೀದೇವಿಯ ಆರಂಭದ ದಿನಗಳಲ್ಲಿ ರಜನಿಕಾಂತ್ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ವೇಳೆ ರಜನಿ ಹಾಗೂ ಶ್ರೀದೇವಿ ಸಿಕ್ಕಾಪಟ್ಟೆ ಆತ್ಮೀಯರಾಗಿದ್ದರು. ಈ ಕಾರಣಕ್ಕೆ ಶ್ರೀದೇವಿ ಕೂಡ ಉಪವಾಸ ಮಾಡಿದ್ದರು. ರಜನಿಕಾಂತ್ ಸದ್ಯ 'ಜೈಲರ್' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. 'ಜೈಲರ್' ಸಿನಿಮಾ ಇದೇ ಆಗಸ್ಟ್ 10ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.


Click it and Unblock the Notifications











