"ಸಿಲ್ಕ್ ಸ್ಮಿತಾ ಸತ್ತಾಗ 5 ಜನರೂ ಇರಲಿಲ್ಲ.. ಮೃತದೇಹದಲ್ಲಿ ಬಟ್ಟೆನೂ ಇರಲಿಲ್ಲ": ಸಿಲ್ಕ್ ನೆನೆದು ಕಣ್ಣೀರಿಟ್ಟ ಗೆಳತಿ
ಸಿಲ್ಕ್ ಸ್ಮಿತಾ ಇಂದಿಗೂ ತೆರೆ ಮರೆಯಲ್ಲಿ ಈಕೆಯನ್ನು ಆರಾಧಿಸುವವರು ಅದೆಷ್ಟೋ ಮಂದಿ ಇದ್ದಾರೆ. ಒಂದು ಕಾಲದಲ್ಲಿ ನಟಿಯರ ಕಾಲ್‌ಶೀಟ್ ಸಿಗದೇ ಇದ್ದರೂ ನಿರ್ಮಾಪಕರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅದೇ ಸಿಲ್ಮ್ ಸ್ಮಿತಾ ಕಾಲ್‌ಶೀಟ್ ಸಿಕ್ಕಿಲ್ಲ ಅಂದರೆ, ಟೆನ್ಷನ್ ಆಗಿ ಬಿಡೋರು.
ಅದೇ ಮತ್ತೊಂದು ಕಡೆ ಸಿಲ್ಮ್ ಸ್ಮಿತಾ ಜನಪ್ರಿಯತೆಯನ್ನು ಕಂಡು ನಾಯಕಿಯರು ಅಸೂಯೆ ಪಟ್ಟುಕೊಳ್ಳುತ್ತಿದ್ದ ಕಾಲವದು. ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳಿಗೆ ತಮ್ಮ ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ ಹೆಜ್ಜೆ ಹಾಕಲೇ ಬೇಕಿತ್ತು. ಯಾಕಂದ್ರೆ, ಜನರು ಸಿಲ್ಕ್ ಸ್ಮಿತಾ ಸಾಂಗ್ ಇದ್ದರೆ, ಅದನ್ನು ನೋಡುವುದಕ್ಕೆ ಅಂತಲೇ ಬರುತ್ತಿದ್ದರು.

ಅದಕ್ಕೆ ನಿರ್ಮಾಪಕರು ಸಿಲ್ಮ್ ಸ್ಮಿತಾ ಮನೆ ಮುಂದೆ ಕಾಲ್‌ಶೀಟ್‌ಗಾಗಿ ಸಾಲುಗಟ್ಟಿ ನಿಲ್ಲುತ್ತಿದ್ದ ದಿನಗಳನ್ನು ಸಿನಿಮಾ ಮಂದಿ ಹಲವು ಸಂದರ್ಶನಗಳಲ್ಲಿ ನೆನಪಿಸಿಕೊಂಡಿದ್ದಾರೆ. ಅಷ್ಟೊಂದು ಜನಪ್ರಿಯತೆ, ಹಣ ಎಲ್ಲೂ ಸಿಲ್ಕ್ ಸ್ಮಿತಾ ಬಳಿ ಇತ್ತು. ಆದರೆ, ಕೊನೆಯ ದಿನಗಳು ಮಾತ್ರ ಭಯಾನಕ. ಆಕೆ ಸತ್ತಾಗ ಮೃತದೇಹದ ಮುಂದೆ ಚಿತ್ರರಂಗದಿಂದ 5 ಮಂದಿ ಕೂಡ ಇರಲಿಲ್ಲ ಎಂದು ಗೆಳತಿ ನೆನಪಿಸಿಕೊಂಡು ಕಣ್ಣೀರು ಇಟ್ಟಿದ್ದಾರೆ.
ಸಿಲ್ಕ್ ಸಿನಿಮಾಗೆ ಕಾಲಿಟ್ಟಿದ್ದೇ ಒಂದು ಕಥೆ
ಸಿಲ್ಮ್ ಸ್ಮಿತಾ ಬದುಕು ಯಾವ ಸಿನಿಮಾಗೂ ಕಮ್ಮಿಯಿಲ್ಲ ಅನ್ನೋದು ಫಿಲ್ಮ್ ಮೇಕರ್‌ಗಳಿಗೆ ಗೊತ್ತಿದೆ. ಅದಕ್ಕೆ ಆಕೆಯ ಬದುಕನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದು ಆಗಿದೆ. ಆಂಧ್ರ ಪ್ರದೇಶದ ಈ ಸುಂದರಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಲಾಗಿತ್ತು. ಗಂಡ ಹಾಗೂ ಅವರ ಮನೆಯವರ ಕಾಟ ತಡೆಯಲಾರದೆ ಸಿಲ್ಕ್ ಸ್ಮಿತಾ ಚೆನ್ನೈಗೆ ಬಂದಿದ್ದರು. ಸಿನಿಮಾರಂಗದಲ್ಲಿ ಅವಕಾಶವನ್ನು ಹುಡುಕಿ ಬಂದ ಸಿಲ್ಕ್ ನಿರ್ದೇಶಕ ವಿನು ಚಕ್ರವರ್ತಿ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಅವರು ಈಕೆಯನ್ನು ಗಮನಿಸಿ, ಸಿಲ್ಕ್ ಅನ್ನುವ ಪಾತ್ರವನ್ನು ಕೊಟ್ಟಿದ್ದರು. ಅಲ್ಲಿಂದ ಸಿಲ್ಕ್ ಸ್ಮಿತಾ ಆಗಿಯೇ ಜನಪ್ರಿಯರಾದರು.
200ಕ್ಕೂ ಹೆಚ್ಚು ಸಿನಿಮಾದಲ್ಲಿ ನಟನೆ
ಕೃಷ್ಣ ಸುಂದರಿಯಾಗಿದ್ದ ಸಿಲ್ಮ್ ಸ್ಮಿತಾ ತನ್ನ ಮಾದಕ ನೋಟದಿಂದಲೇ ಅಭಿಮಾನಿಗಳನ್ನು ಸಂಪಾದಿಸಿದ್ದರು. ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿ ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಷ್ಟೊಂದು ಬ್ಯುಸಿಯಾಗಿದ್ದ ನಟಿ ಇದ್ದಕ್ಕಿಂತ ಅವಕಾಶಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣ ಆಗಿತ್ತು. ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದರು. ಅಲ್ಲೂ ಮೋಸ ಮಾಡಲಾಯ್ತು. ವೈಯಕ್ತಿಕ ಬದುಕು, ಪ್ರೀತಿ ಎಲ್ಲದರಲ್ಲೂ ಮೋಸ ಹೋದ ನಟಿ ಆತ್ಮಹತ್ಯೆಗೆ ಶರಣಗಾಗಿದ್ದರು. ಇದು ಗೊತ್ತಿರುವ ಸಂಗತಿ. ಆದರೆ, ಸಿಲ್ಕ್ ಸತ್ತಾಗ ಚಿತ್ರರಂಗ ಆಕೆಯನ್ನು ನೋಡುವುದಕ್ಕೂ ಬಂದಿರಲಿಲ್ಲ. ಈ ಘಟನೆಯನ್ನು ಆಕೆಯ ಗೆಳೆತಿ ಪುಲಿಯುರ್ ಸರೋಜಾ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

"ಮೃತದೇಹದ ಮುಂದೆ 5 ಜನ ಇರಲಿಲ್ಲ"
ಸಿಲ್ಮ್ ಸ್ಮಿತಾ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಪುಲಿಯುರ್ ಸರೋಜಾ ಮೃತದೇಹವನ್ನು ನೋಡುವುದಕ್ಕೆ ಹೋಗಿದ್ದರು. ಆದರೆ, ಮೃತದೇಹ ಅನಾಥವಾಗಿತ್ತು. ಐದೇ ಐದು ಮಂದಿ ಕೂಡ ಇರಲಿಲ್ಲ. ಅಲ್ಲದೆ ಸಿಲ್ಮ್ ಸ್ಮಿತಾ ಮೃತದ ದೇಹ ಕೆಟ್ಟ ಪರಿಸ್ಥಿತಿಯಲ್ಲಿ ಇತ್ತು. ಅದನ್ನು ನೋಡಿ ನೃತ್ಯ ನಿರ್ದೇಶಕಿ ಸರೋಜಾ 10 ದಿನ ನಿದ್ದೆನೇ ಮಾಡಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಸಿಲ್ಕ್ ಸ್ಮಿತಾ ಮೃತದೇಹ ರಾಯಪೆಟ್ಟ ಆಸ್ಪತ್ರೆಯಲ್ಲಿ ಅನಾಥವಾಗಿತ್ತು ಎಂದು ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಮೃತ ದೇಹವನ್ನೂ ಬಿಡಲಿಲ್ಲ ಕಾಮುಖರು
ಸಿಲ್ಮ್ ಸ್ಮಿತಾ ಆತ್ಮಹತ್ಯೆ ಮಾಡಿಕೊಂಡಾಗ ರಾಯಪೆಟ್ಟ ಆಸ್ಪತ್ರೆಯ ಶವಗಾರದಲ್ಲಿ ಮೃತದೇಹವನ್ನು ಇರಿಸಲಾಗಿತ್ತು. ಈ ಹಿಂದೆ ಆಕೆ ಮೃತದೇಹಕ್ಕೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಕೆಲವರು ಹೇಳಿಕೆ ಕೊಟ್ಟಿದ್ದರು. ಸಿಲ್ಕ್ ಸ್ಮಿತಾಗೆ ಆತ್ಮೀಯರಾಗಿದ್ದರೂ ಕೂಡ ಇದೇ ಮಾತನ್ನು ಹಲವು ಸಂದರ್ಶನಗಳಲ್ಲಿ ಹೇಳಿದ್ದಾಗಿ ವರದಿಯಾಗಿದೆ. ಆದರೆ, ಇದೂವರೆಗೂ ಸಿಲ್ಮ್ ಸ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ? ಆಕೆ ಅಂತಹದ್ದೇನಾಗಿತ್ತು? ಅಂತ್ಯ ಸಂಸ್ಕಾರ ಎಲ್ಲಾಯ್ತು? ಮೃತದೇಹವನ್ನು ಕೆಟ್ಟ ಉದ್ದೇಶಕ್ಕೆ ಬಳಸಿಕೊಂಡರಾ? ಇದ್ಯಾವುದಕ್ಕೂ ನಿರ್ಧಿಷ್ಟ ಉತ್ತರ ಸಿಕ್ಕಿಲ್ಲ.


Click it and Unblock the Notifications











