Junior Silk Smitha: ಪರದೆ ಮೇಲೆ ಜೂನಿಯರ್ ಸಿಲ್ಕ್ ಸ್ಮಿತಾ ಕಂಡು ಕೇಕೆ ಹಾಕಿದ ತಮಿಳು ಫ್ಯಾನ್ಸ್.. ವಿಡಿಯೋ ವೈರಲ್!

ತಮಿಳಿನ ಸ್ಟಾರ್ ನಟ ವಿಶಾಲ್ ನಟನೆಯ 'ಮಾರ್ಕ್ ಆಂಟೋನಿ' ಇಂದು (ಸೆಪ್ಟೆಂಬರ್ 15) ಅದ್ಧೂರಿಯಾಗಿ ರಿಲೀಸ್ ಆಗಿದೆ. ಈ ಸಿನಿಮಾ ಬಗ್ಗೆ ಕಳೆದ ಕೆಲವು ದಿನಗಳಿಂದ ದಿಢೀರನೇ ಕ್ರೇಜ್ ಹೆಚ್ಚಾಗಿತ್ತು. ಅದಕ್ಕೆ ಕಾರಣ ಸಿಲ್ಮ್ ಸ್ಮಿತಾ ಅನ್ನೋ ಒಂದು ಹೆಸರು.

ಅಧಿಕ್ ರವಿಚಂದ್ರನ್ ನಿರ್ದೇಶಿಸಿದ 'ಮಾರ್ಕ್ ಆಂಟೋನಿ'ಗೆ ಮೊದಲ ದಿನ ಥಿಯೇಟರ್‌ನಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ವಿಶಾಲ್, ಸೂರ್ಯ, ರಿತು ವರ್ಮಾ, ಅಭಿನಯ, ಸೆಲ್ವರಾಘವನ್ ಸೇರಿದಂತೆ ಹಲವು ಮಂದಿ ದಿಗ್ಗಜರೇ ಈ ಸಿನಿಮಾದಲ್ಲಿ ನಟಿಸಿದ್ದಾರೆ.

Tamil Audience thrilled after Junior Silk Smitha scene in Vishals Mark Antony Movie

'ಮಾರ್ಕ್ ಆಂಟೋನಿ' ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತಿದೆ. ಈ ಸಿನಿಮಾದ ದ್ವಿತೀಯಾರ್ಧ ಫುಲ್ ಕಾಮಿಡಿನೇ ತುಂಬಿದೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ ಜೂನಿಯರ್ ಸಿಲ್ಮ್ ಸ್ಮಿತಾ ಸೀನ್‌ಗೆ ತಮಿಳಿ ಪ್ರೇಕ್ಷಕರ ಥ್ರಿಲ್ ಆಗಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ? ತಿಳಿಯಲು ಮುಂದೆ ಓದಿ.

ಥಿಯೇಟರ್‌ನಲ್ಲಿ ಸಿಲ್ಮ್ ಸ್ಮಿತಾ ಸಂಭ್ರಮ

'ಮಾರ್ಕ್ ಆಂಟೋನಿ' ಸಿನಿಮಾದಲ್ಲಿ ಜೂನಿಯರ್ ಸಿಲ್ಮ್ ಸ್ಮಿತಾ ಕಂಡು ತಮಿಳು ಪ್ರೇಕ್ಷಕರು ಹುಚ್ಚರಂತೆ ಕಿರುಚಾಡಿದ್ದಾರೆ. ಚಪ್ಪಾಳೆ ತಟ್ಟಿ, ಕೂಗಾಡಿ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ. ಅಕ್ಷರಶ: ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಜೂನಿಯರ್ ಸಿಲ್ಮ್ ಸ್ಮಿತಾರನ್ನು ಕಂಡು ಸಂಭ್ರಮಿಸಿದ್ದಾರೆ. ಪ್ರೇಕ್ಷಕರು ಸಿಲ್ಕ್ ಸಿಲ್ಕ್ ಎಂದು ಕಿರುಚಾಡಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಿಲ್ಕ್ ಸ್ಮಿತಾ ಬರುತ್ತಿದ್ದಂತೆ ಚಪ್ಪಾಳೆ

ದಕ್ಷಿಣ ಭಾರತದ ಮಾದಕ ನಟಿ ಸಿಲ್ಕ್ ಸ್ಮಿತಾ. ಬೋಲ್ಡ್‌ನೆಸ್‌ಗೆ, ಗ್ಲಾಮರ್‌ಗೆ 80 ಹಾಗೂ 90ರ ದಶಕದಲ್ಲಿಯೇ ಹೆಸರು ಮಾಡಿದ ನಟಿಯೀಕೆ. ಈಕೆಯನ್ನೇ ಹೋಲುವ ಜೂನಿಯರ್ ಸಿಲ್ಕ್ ಸ್ಮಿತಾ ಈಗ 'ಮಾರ್ಕ್ ಆಂಟೋನಿ'ಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ದ್ವಿತೀಯಾರ್ಧದಲ್ಲಿ ಎಂಟ್ರಿ ಕೊಡುವ ಸಿಲ್ಕ್ ಸ್ಮಿತಾ ಕಂಡ ಕೂಡಲೇ ತಮಿಳು ಪ್ರೇಕ್ಷಕರು ಹುಚ್ಚರಂತಾಗಿದ್ದಾರೆ. ಸಿನಿಮಾ ನೋಡಿ ಹೊರಬರುತ್ತಿದ್ದಂತೆ ಪ್ರೇಕ್ಷಕರು ಸಿಲ್ಕ್ ಸ್ಮಿತಾ ಜಪ ಮಾಡುತ್ತಾ ಹೊರಬರುತ್ತಿರುವ ದೃಶ್ಯ ಕಂಡು ಬಂದಿದೆ.

ಸೋಶಿಯಲ್ ಮೀಡಿಯಾದಲ್ಲಿ ಕ್ರೇಜಿ ವಿಡಿಯೋ

'ಮಾರ್ಕ್ ಆಂಟೋನಿ'ಯಲ್ಲಿ ವಿಶಾಲ್ ಹಾಗೂ ಎಸ್‌ಜೆ ಸೂರ್ಯ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಸ್‌ನಲ್ಲಿ ಇಬ್ಬರೂ ಸಿಲ್ಮ್ ಸ್ಮಿತಾರೊಂದಿಗೆ ಸಂಭಾಷಣೆ ಮಾಡುವ ದೃಶ್ಯಕ್ಕೆ ಪ್ರೇಕ್ಷಕರು ಶಿಳ್ಳೆ ಹಾಕಿದ್ದಾರೆ. ಪ್ರೇಕ್ಷಕರೊಬ್ಬರು ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಟ್ವಿಟರ್ (X)ನಲ್ಲಿ ಅಪ್‌ಲೋಟ್ ಮಾಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದು ಸಿಲ್ಕ್ ಸ್ಮಿತಾರನ್ನು ನೆನೆದಿದ್ದಾರೆ.

ಯಾರೀ ಜೂನಿಯರ್ ಸಿಲ್ಕ್ ಸ್ಮಿತಾ

ಜೂನಿಯರ್ ಸಿಲ್ಕ್ ಸ್ಮಿತಾ ಪಾತ್ರದಲ್ಲಿ ಗಮನ ಸೆಳೆದಿರುವ ನಟಿಯ ಹೆಸರು ವಿಷ್ಣು ಪ್ರಿಯಾ ಗಾಂಧಿ. ತೆಲುಗು ಮೂಲದ ನಟಿಯೀಗೆ. ಹಾಗೇ ಸೋಶಿಯಲ್ ಮೀಡಿಯಾ ಇನ್ಫ್ಯೂಯೆನ್ಸರ್ ಆಗಿಯೂ ಜನಪ್ರಿಯರಾಗಿದ್ದಾರೆ. 80ರ ದಶಕದಲ್ಲಿ ಸಿನಿಮಾಪ್ರಿಯರ ಮನಗೆದ್ದ ನಟಿ ನೆನಪನ್ನು ಮತ್ತೆ ಮರುಕಳಿಸಿದ್ದಕ್ಕೆ ನಿರ್ದೇಶಕ ಅಧಿಕ್ ರವಿಚಂದ್ರನ್‌ಗೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

More from Filmibeat

English summary
Tamil Audience thrilled for Junior Silk Smitha scene in Mark Antony Movie:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X