ಮಾಲಾಶ್ರೀ ಜೊತೆ ನಟಿಸುವಾಗ ಕಾಲು ಮೇಲೆ ಕಾರು ಪಲ್ಟಿ: ಸರಿಗಮ ವಿಜಿ ಸ್ಪಾಟ್ ಡೆಡ್ ಅಂತ ಸುದ್ದಿ ಹಬ್ಬಿದ್ದೇಗೆ?

ಸ್ಯಾಂಡಲ್‌ವುಡ್‌ನಲ್ಲಿ ಹಾಸ್ಯ ನಟನಾಗಿ, ಲೇಖಕನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದವರು ಸರಿಗಮ ವಿಜಿ. ಸುಮಾರು 400ಕ್ಕೂ ಅಧಿಕ ಸಿನಿಮಾಗಳಿಗೆ ಕೆಲಸ ಮಾಡಿರುವ ಸರಿಗಮ ವಿಜಿ ಇಂದು (ಜನವರಿ 15) ಇಹಲೋಕ ತ್ಯಜಿಸಿದ್ದಾರೆ. ಚಿತ್ರರಂಗದ ಗಣ್ಯರು ವಿಜಿಯವರ ನಿಧನಕ್ಕೆ ಸಂತಾಪವನ್ನು ಸೂಚಿಸುತ್ತಿದ್ದಾರೆ. ತಮ್ಮೊಂದಿಗೆ ಕಳೆದ ದಿನಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಸರಿಗಮ ವಿಜಿ ಕನ್ನಡದ ಸಿನಿಮಾವೊಂದರಲ್ಲಿ ನಟಿಸುವಾಗಲೇ ಸ್ಪಾಟ್ ಡೆತ್ ಅನ್ನುವ ಸುದ್ದಿ ಹಬ್ಬಿತ್ತು. ಈ ಸುದ್ದಿ ಕನ್ನಡ ಚಿತ್ರರಂಗದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಕನ್ನಡ ಚಿತ್ರರಂಗವೇ ಈ ಸುದ್ದಿಯನ್ನು ಕೇಳಿ ಬೆಚ್ಚಿಬಿದ್ದಿದ್ದರು. ಹಾಗೇ ಬೆಚ್ಚಿ ಬೀಳುವುದಕ್ಕೆ ಕಾರಣ ಚಿತ್ರೀಕರಣದ ವೇಳೆ ನಡೆದ ಭೀಕರ ಅಪಘಾತ. ಆ ಘಟನೆ ಏನು ಅನ್ನೋದನ್ನು ಸರಿಗಮ ವಿಜಿಯವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

While shooting with Malashree in an action scene news spreaded that Sarigama Viji was spot dead

'ಕಿರಣ್ ಬೇಡಿ' ಅನ್ನುವ ಸಿನಿಮಾದಲ್ಲಿ ಮಾಲಾಶ್ರೀ ನಟಿಸುತ್ತಿದ್ದರು. ಈ ವೇಳೆ ಕಾರ್‌ ಚೇಸಿಂಗ್ ಸೀನ್ ಒಂದರಲ್ಲಿ ಮಾಲಾಶ್ರೀ ನಟಿಸುತ್ತಿದ್ದರು. ಅದಕ್ಕೆ ಸರಿಗಮ ವಿಜಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಪಳನಿರಾಜ್ ಎಂಬುವವರು ಸಾಹಸ ನಿರ್ದೇಶನ ಮಾಡುತ್ತಿದ್ದರು. ಆ ವೇಳೆ ಮಾಲಾಶ್ರೀ ಕಾರು ಚೇಸ್ ಮಾಡುತ್ತಿದ್ದ ಇನ್ನೊಂದು ಕಾರು ಅಪಘಾತಕ್ಕೀಡಾಗಿ ವಿಜಿ ಮೈ ಮೇಲೆ ಬಂದು ಬಿದ್ದಿತ್ತು. ಆಗ ಅವರ ಕಾಲು ಮೂರು ಪೀಸ್ ಆಗಿತ್ತು. ಈ ವಿಷಯವನ್ನು ಕೇವಲ 10 ತಿಂಗಳ ಹಿಂದಷ್ಟೇ ಸ್ಪೀಡ್ ಪ್ಲಸ್ ಕರ್ನಾಟಕಕ್ಕೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದರು.

ಮಾಲಾಶ್ರೀ ಸಿನಿಮಾ ಮಾಡುವಾಗ ನಡೆದ ಘಟನೆಯನ್ನು ಸರಿಗಮ ವಿಜಿ ಇಂಚಿಂಚಾಗಿ ಬಿಚ್ಚಿಟ್ಟಿದ್ದರು. ಮಾಲಾಶ್ರೀ ಒಂದು ಜೀಪ್‌ನಲ್ಲಿ ಹೋಗುತ್ತಿರುತ್ತಾರೆ. ಆಗ ಹಿಂದಿದ ಇನ್ನೊಂದು ಅಟ್ಟಿಸಿಕೊಂಡು ಬರುತ್ತಿರುತ್ತೆ. ಆಗ ಅದು ಬಿದ್ದು ಹೋಗುತ್ತೆ. ರೊಟೇಟ್ ಆಗುತ್ತೆ. ಹೀಗಾಗಿ ಐರನ್ ರೋಪ್ ಕಟ್ಟಿ ಉರುಳುವಂತೆ ಮಾಡಲು ಬುಲ್ಡೋಜರ್‌ನಲ್ಲಿ ಎಳೆದುಕೊಂಡು ಹೋಗುತ್ತಾರೆ. ಅದು ಉರುಳಿಕೊಂಡು ಬರುತ್ತೆ. ಅದಕ್ಕೆ ಸ್ಪ್ರಿಂಗ್‌ಗಳನ್ನು ಕೊಟ್ಟು ಬ್ಲಾಸ್ಟ್ ಮಾಡುತ್ತಾರೆ. ಅದು ಮೇಲಕ್ಕೆ ಹೋಗುತ್ತೆ. ಈ ಸೀನ್ ನಡೀಯತಿತ್ತು. ಆ ವೇಳೆ ದುರಂತ ನಡೆದು ಹೋಯ್ತು.

While shooting with Malashree in an action scene news spreaded that Sarigama Viji was spot dead

"ನಾನು ಒಂದು ಕಡೆ ಸ್ಟಡಿ ಕ್ಯಾಮ್‌ನಲ್ಲಿ ಇದ್ದೆ. ಅದಕ್ಕೆ ನಾನೇ ಕೋ ಡೈರೆಕ್ಟರ್. ಆ ವೇಳೆ ರಾಂಗ್ ಥ್ರೆಡ್ ಮಾಡಿಬಿಟ್ಟಿದ್ದಾರೆ. ಅದೇನಾಗಿದೆ ಜೋರಾಗಿ ಬಂದು ಕಂಬಕ್ಕೆ ಹೊಡೆದು ವಾಪಾಸ್ ಬಂದು ಬಿಟ್ಟಿದೆ. ನಾವು ನಿರೀಕ್ಷೆಯನ್ನೇ ಮಾಡಿರಲಿಲ್ಲ. ನೋಡ್ತೀನಿ ಮೇಲೆ ಕಾರು ಬರುತ್ತಿದೆ. ನಾನು ತಪ್ಪಿಸಿಕೊಂಡರೂ ನನ್ನ ಜೊತೆ ಸೇರಿ ಐದು ಮಂದಿಗೆ ಏಟು ಬಿತ್ತು." ಎಂದು ಸರಿಗಮ ವಿಜಿ ಹೇಳಿದ್ದರು.

ಈ ಅವಘಡದಲ್ಲಿ ವಿಜಿ ಗಂಭೀರವಾಗಿ ಗಾಯಗೊಂಡಿದ್ದರು. "ನನ್ನ ಕಾಲು ಮೂರು ಪೀಸ್ ಆಯ್ತು. ತಗಡು ಬಂದು ಮೂಗಿಗೆ ಹೊಡೆದು ಮುಖ ಪೂರ್ತಿ ಬ್ಲಡ್. ನನ್ನ ಎತ್ತಿ ಕಾರಿಗೆ ಹಾಕಿದಾಗ ಸರಿಗಮ ವಿಜಿ ಸ್ಪಾಟ್ ಡೆತ್ ಅಂತ ನ್ಯೂಸ್ ಬಂದು ಬಿಟ್ಟಿತ್ತು. ಜಯಮಾಲಾ ಅವರು ಫಿಲ್ಮ್ ಚೇಂಜರ್ ಅಧ್ಯಕ್ಷರಾಗಿದ್ದರು. ಮಾರನೇ ದಿನೇ ಆಸ್ಪತ್ರೆಗೆ ಓಡಿ ಬಂದಿದ್ದರು. ನಿನ್ನೆ ಸುದ್ದಿ ಕೇಳಿ ಶಾಕ್ ಆಗಿತ್ತು. ನಿನ್ನನ್ನು ದೇವರು ಬಚಾವ್ ಮಾಡಿದ್ದಾನೆ. ಸ್ಪಾಟ್ ಔಟ್ ಅಂತ ಹೇಳಿದ್ರಲ್ಲಪ್ಪ ಅಂತ ಹೇಳಿದ್ದರು." ಎಂದು ಆ ಘಟನೆಯನ್ನು ನೆನಪಿಸಿಕೊಂಡಿದ್ದರು.

ಇಲ್ಲಿಂದ ಸರಿಗಮ ವಿಜಿಯ ಕಾಲು ಸರಿ ಹೋಗಲೇ ಇಲ್ಲ. ಮೂರು ಬಾರಿ ಅದೇ ಕಾಲಿಗೆ ಪೆಟ್ಟಾಗಿತ್ತು. ಮನೆಯಲ್ಲಿ ಜಾರಿ ಬಿದ್ದಿದ್ದರು. ಇನ್ನೊಮ್ಮೆ ದುನಿಯಾ ವಿಜಯ್ ನಟಿಸುತ್ತಿದ್ದ 'ಭೀಮಾ ತೀರದ ಹಂತಕರು' ಸಿನಿಮಾ ಮಾಡುವಾಗಲೂ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದರು. ಒಮ್ಮೆ ವಿಜಿ ಅವರ ಕಾಲು ಸರಿ ಮಾಡಿಸಲು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ರಜನಿ ಹಾಗೂ ಅಂಬರೀಶ್‌ಗೆ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ವಯಸ್ಸಿನ ಕಾರಣ ಬೇಡ ಅಂದಿದ್ದರಿಂದ ಕಾಲಿಗೆ ಚಿಕಿತ್ಸೆ ನಡೆದಿರಲಿಲ್ಲ.

More from Filmibeat

English summary
While shooting with Malashree in an action scene, news spreaded that Sarigama Viji was spot dead.
Read more about: actor malashree filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X