ಅಮಿತಾಭ್-ಜಯಾ ಬಚ್ಚನ್ ಮದುವೆಗೆ ಹೋಗಿದ್ದ ಏಕೈಕ ಬಾಲಿವುಡ್ ನಟಿ ಯಾರು? ಅವರಿಗಷ್ಟೇ ಆಹ್ವಾನ ಯಾಕೆ?

ಬಾಲಿವುಡ್‌ನ ಪವರ್‌ಫುಲ್ ಜೋಡಿ ಅಮಿತಾಭ್ ಬಚ್ಚನ್ ಹಾಗೂ ಜಯಾ ಬಚ್ಚನ್. 70ರ ದಶಕದಲ್ಲಿ ಅಮಿತಾಭ್ ಬಚ್ಚನ್ ಬಹು ಬೇಡಿಕೆಯ ನಟನಾಗಿ ಹೊರಹೊಮ್ಮಿದ್ದರು. ಅದಾಗಲೇ ಬಿಗ್ ಬಿ ಜನಪ್ರಿಯರ ನಟಿಯರೊಂದಿಗೆ ನಟಿಸಿ ಆಗಿತ್ತು. ಇತ್ತ ಜಯ ಬಚ್ಚನ್ ಕೂಡ ಜನಪ್ರಿಯ ನಟಿಯ ಸಾಲಿಗೆ ಸೇರ್ಪಡೆ ಆಗಿದ್ದಾಗಿತ್ತು.

ಇದೇ ವೇಳೆ ಅಮಿತಾಭ್ ಬಚ್ಚನ್‌ಗೂ, ಜಯಾಗೂ ಪ್ರೇಮಾಂಕುರವಾಗಿತ್ತು. ಈ ಜೋಡಿ ಕಾಫಿ, ಟೀ, ಡಿನ್ನರ್ ಅಂತ ಭೇಟಿ ಮಾಡುವುದಕ್ಕೆ ಶುರು ಮಾಡಿದ್ದರು. ಒಂದ್ಮೇಳೆ ಈಗಿನ ಹಾಗೇ ಸೋಶಿಯಲ್ ಮೀಡಿಯಾ ಇದ್ದಿದ್ದರೆ, ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತೇನೋ. ಒಂದಿಷ್ಟು ದಿನ ಡೇಟಿಂಗ್ ಮಾಡಿದ ಬಳಿಕ ಈ ಜೋಡಿ ಮದುವೆ ಆಗಬೇಕು ಅಂತ ನಿರ್ಧರಿಸಿತ್ತು.

Who is the only Bollywood actress to attend the Amitabh Bachchan-Jaya wedding

1973, ಜೂನ್ ತಿಂಗಳಲ್ಲಿ ಅಮಿತಾಭ್ ಬಚ್ಚನ್ ಹಾಗೂ ಜಯ ಬಚ್ಚನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಈ ಜೋಡಿ ಬಾಲಿವುಡ್‌ನ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಆಹ್ವಾನ ನೀಡಿತ್ತು. ಅದರಲ್ಲೂ ಬಾಲಿವುಡ್‌ನ ಏಕೈಕ ನಟಿ ಮಾತ್ರ ಈ ಜನಪ್ರಿಯ ಜೋಡಿಯ ಮದುವೆಗೆ ಸಾಕ್ಷಿಯಾಗಿತ್ತು. ಆ ನಟಿ ಯಾರು ಗೊತ್ತಾ? ತಿಳಿಯಲು ಮುಂದೆ ಓದಿ..

ಅಮಿತಾಭ್ ಬಚ್ಚನ್ ಮದುವೆ ಮುಂಬೈನಲ್ಲಿ ನಡೆದಿತ್ತು. ಜಯಾ ಬಚ್ಚನ್ ಅವರ ಗಾಡ್‌ಮದರ್ (godmother) ಮನೆಯಲ್ಲಿಯೇ ಚಿಕ್ಕದಾಗಿ ಕೇವಲ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಈ ಮದುವೆ ಸಮಾರಂಭದಲ್ಲಿ ಕೇವಲ ಬಾಲಿವುಡ್ ಕಡೆಯಿಂದ ಕೇವಲ ಮೂರು ಮಂದಿ ಮಾತ್ರ ಭಾಗಿಯಾಗಿದ್ದರು ಎಂದು ವರದಿಯಾಗಿತ್ತು. ಅದರಲ್ಲಿ ಒಬ್ಬರೇ ಒಬ್ಬ ಬಾಲಿವುಡ್ ನಟಿಗೆ ಆಹ್ವಾನವಿತ್ತು.

Who is the only Bollywood actress to attend the Amitabh Bachchan-Jaya wedding

ಆ ಬಾಲಿವುಡ್ ನಟಿ ಪರ್ವಿನ್ ಬಾಬಿನೂ ಅಲ್ಲ. ಜೀನತ್ ಅಮನ್ ಕೂಡ ಅಲ್ಲ. ರೇಖಾ, ಹೇಮಮಾಲಿನಿನೂ ಅಲ್ಲ. ಇಂದಿಗೂ ಪೋಷಕ ಪಾತ್ರಗಳಲ್ಲಿ ನಟಿಸುತ್ತಿರುವ ನಟಿ ಫರಿದಾ ಜಲಾಲ್. ಈ ನಟಿ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ', 'ಕುಚ್ ಕುಚ್ ಹೋತಾ ಹೇ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ 'ಹೀರಾಮಂಡಿ'ಯಲ್ಲಿಯೂ ನಟಿಸಿದ್ದಾರೆ.

ಈ ನಟಿಗೆ ಮಾತ್ರ ಆಹ್ವಾನ ನೀಡಿದ್ದಕ್ಕೆ ಕಾರಣವಿತ್ತು. ಫರಿದಾ ಜಲಾಲ್ ಹಾಗೂ ಜಯಾ ಬಚ್ಚನ್ ಇಬ್ಬರೂ ಕ್ಲೋಸ್ ಫ್ರೆಂಡ್ಸ್ ಆಗಿದ್ದರು. ಹೀಗಾಗಿ ಅಮಿತಾಭ್ ಹಾಗೂ ಜಯಾ ಬಚ್ಚನ್ ಡೇಟಿಂಗ್ ನಡೆಯುತ್ತಿದ್ದಾಗ, ಈ ಜೋಡಿ ಜೊತೆ ಫರಿದಾ ಜಲಾಲ್ ಕೂಡ ಇರುತ್ತಿದ್ದರು. ಜಯಾ ಬಚ್ಚನ್ ಗೆಳತಿಯಾಗಿ ಸಾಥ್ ಕೊಡುತ್ತಿದ್ದರು. ಈ ವಿಷಯವನ್ನು ಸ್ವತ: ಫರಿದಾ ಜಲಾಲ್ ಅವರೇ ಹೇಳಿಕೊಂಡಿದ್ದಾರೆ.

ಅಮಿತಾಭ್ ಬಚ್ಚನ್ ಹಾಗೂ ಜಯಾ ಬಚ್ಚನ್ ಇಬ್ಬರೂ ಕಾಫಿ, ಟೀ ಕುಡಿಯುವುದಕ್ಕೆ ಮುಂಬೈನ ತಾಜ್ ಹೋಟೆಲ್‌ಗೆ ಹೋಗುತ್ತಿದ್ದರು. ಜಯಾ ಬಚ್ಚನ್‌ಗೆ ಬಹುಬೇಗನೇ ಕೋಪ ಬರುತ್ತಿತ್ತಂತೆ. ಹೀಗಾಗಿ ಅವರನ್ನು ಸಮಧಾನ ಪಡಿಸಲು ಅಮಿತಾಭ್ ಬಚ್ಚನ್ ತಾಜ್‌ ಬರುತ್ತಿದ್ದರು. ಆಗ ಜಯಾ ಬಚ್ಚನ್ ಜೊತೆ ಫರಿದಾ ಜಲಾಲ್ ಕೂಡ ಬರುತ್ತಿದ್ದರು. ಇದೇ ಕಾರಣಕ್ಕೆ ಇಬ್ಬರ ಮದುವೆಯಲ್ಲಿ ಫರಿದಾ ಜಲಾಲ್‌ಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಇವರೊಂದಿಗೆ ಗುಲ್ಜಾರ್ ಹಾಗೂ ನಟಿ ಅಸ್ರಾನಿ ಭಾಗವಹಿಸಿದ್ದ ಇನ್ನಿಬ್ಬರು ಬಾಲಿವುಡ್ ಮಂದಿ ಎನ್ನಲಾಗಿದೆ.

More from Filmibeat

English summary
Bollywood actress to attend the Amitabh Bachchan-Jaya wedding?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X