'ಹುಚ್ಚ'ದಲ್ಲಿ ಸುದೀಪ್ ಫ್ರೆಂಡ್ ಪಾತ್ರ ಕೇಳಿದ್ದ ದರ್ಶನ್; ನಿರ್ಮಾಪಕ ರೆಹಮಾನ್ ಕೊಡಲಿಲ್ಲ ಅಂಥ ಕಾಲ್‌ಶೀಟ್ ಕೊಡಲಿಲ್ವೇ?
ಕನ್ನಡದಲ್ಲಿ ನೇರ ನುಡಿಯ ನಿರ್ಮಾಪಕ 'ಯಜಮಾನ'. ನಾಲಿಗೆಗೆ ಫಿಲ್ಟರ್ ಇಲ್ಲದೆ ಇದ್ದಿದ್ದನ್ನು ಇದ್ದಂಗೆ ಹೇಳುತ್ತಾಳೆ. ಇದು ಕೆಲವೊಮ್ಮೆ ವಿವಾದವಾಗಿ ಬದಲಾಗಿದ್ದು ಕೂಡ ಇದೆ. ಆದರೆ, ತಮ್ಮ ಹಾಗೂ ಕನ್ನಡ ಸೂಪರ್‌ಸ್ಟಾರ್‌ಗಳ ನಡುವಿನ ಮಾತುಕಥೆಯನ್ನು ಕೆಲವು ಸಂದರ್ಶನಗಳಲ್ಲಿ ನೇರವಾಗಿ ಹೇಳಿಕೊಂಡಿದ್ದಾರೆ.
ಲಾಲ್‌ಬಾಗ್ ಲೈಬ್ರೈರಿಯಲ್ಲಿ ಹುಚ್ಚ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಅಲ್ಲಿಗೆ ನಿರ್ಮಾಪಕ ರೆಹಮಾನ್‌ಗೆ ಹತ್ತಿರವಾಗಿದ್ದ ವ್ಯಕ್ತಿಯೊಬ್ಬರು ದರ್ಶನ್ ಅವರನ್ನು ಕರೆದುಕೊಂಡು ಬಂದಿದ್ದರು. ಆ ವೇಳೆ ಸುದೀಪ್, ನಿರ್ದೇಶಕ, ನಿರ್ಮಾಪಕ ಎಲ್ಲರೂ ಇದ್ದರು. ಆಗ ಆ ವ್ಯಕ್ತಿ ಇವರು ತೂಗುದೀಪ ಶ್ರೀನಿವಾಸ್ ಅವರ ಪುತ್ರ ದರ್ಶನ್ ಎಂದು ಪರಿಚಯಿಸಿದ್ದರು. ದರ್ಶನ್ ಬಂದು ನಿಂತಾಗ ಅವರ ಹೈಟ್ ನೋಡಿ ನಿರ್ಮಾಪಕ ರೆಹಮಾನ್ ಗಾಬರಿಯಾಗಿದ್ದರಂತೆ. ಈ ವಿಷಯವನ್ನು ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಬಿಯೊಂಡ್ ಲಿಮಿಟ್ಸ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

"ಸರ್ ಇವರು ತೂಗುದೀಪ್ ಶ್ರೀನಿವಾಸ್ ಅವರ ಮಗ ಅಂದರು. ನಾನು ಹೀಗೆ ನೋಡಿದೆ. ಏನ್ರಿ ಹೈಟ್ ಹೀಗೆ ಇದ್ದಾರೆ. ಓ ಬನ್ನಿ ಕೂತುಕೊಳ್ಳಿ ಅಂದೆ. ಇರಲಿ ಪರ್ವಾಗಿಲ್ಲ ಅಂದರು. ಇಲ್ಲ, ಬನ್ನಿ ದೊಡ್ಡ ಕಲಾವಿದರ ಮಗ ನೀವು ಕೂತುಕೊಳ್ಳಿ, ಏನು ಬಂದಿದ್ದು ಅಂದೆ? ಸರ್ ಸುದೀಪ್ ಫ್ರೆಂಡ್ ಕ್ಯಾರೆಕ್ಟರ್ ಇದೆಯಲ್ಲ ಕೊಡಿ, ನಾನು ಮಾಡುತ್ತೇನೆ ಎಂದು ಹೇಳಿದ್ದರು. ಅದರಲ್ಲಿ ತಾರಕೇಶ್ ಪಟೇಲ್ ಆ ಪಾತ್ರವನ್ನು ಮಾಡಿದ್ದಾರೆ." ಎಂದು ಹೇಳಿದ್ದಾರೆ.
"ನಾನು ಬೇಡ. ನೀವೇ ಹೀರೋ ಇದ್ದ ಹಾಗೇ ಇದ್ದೀರ. ಮುಂಚೆ ಏನಾದರೂ ಬಂದಿದ್ದರೆ, ನಿಮ್ಮನ್ನೇ ಹೀರೋ ಮಾಡಿಬಿಡುತ್ತಿದ್ದೆ. ಸಪೋರ್ಟಿಂಗ್ ಕ್ಯಾರೆಕ್ಟರ್ ಮಾಡಿದರೆ, ಅದಕ್ಕೆ ಬ್ರ್ಯಾಂಡ್ ಆಗಿ ಬಿಡುತ್ತೀರ. ದಯವಿಟ್ಟು ಬೇಡ ಅಂದೆ. ಇನ್ನೂ ಮೆಜೆಸ್ಟಿಕ್ ಸಿನಿಮಾ ಕೂಡ ಬಂದಿರಲಿಲ್ಲ. ಅಷ್ಟೊತ್ತಿಗೆ ಅಣಜಿ ನಾಗರಾಜ್ ಬಂದ. ನೋಡಣ್ಣ ಏನಾದರೂ ಮಾಡು ಅಂದ. ಇತ್ತ ಡೈರೆಕ್ಟರ್ ತಾರಕೇಶ್ ಪಾಟೇಲ್ ಜೊತೆ ಕಮಿಟ್ ಆಗ್ಬಿಟ್ಟಿದ್ದಾನೆ. ನಾನು ಡೈರೆಕ್ಟರ್‌ಗೆ ಹೇಳಿದೆ. ಹುಡುಗ ಚೆನ್ನಾಗಿದ್ದಾನೆ ಅಂತ. ಡೈರೆಕ್ಟರ್ ಸುಮ್ಮನಿರಿ ಸರ್, ಹೀರೋ ಡಲ್ ಆಗಿಬಿಡುತ್ತಾರೆ ಅಂದರು."
ಆಗ ನಿರ್ಮಾಪಕ ರೆಹಮಾನ್ ನೇರವಾಗಿ ದರ್ಶನ್ ಅವರಿಗೆ ಈ ಸಿನಿಮಾ ಬೇಡ. ಸುದೀಪ್‌ಗಿಂತ ಮುಂಚಿತವಾಗಿ ನೀವು ಸಿಕ್ಕಿದ್ದರೆ, ನಿಮಗೆ ಸಿನಿಮಾವನ್ನು ಮಾಡುತ್ತಿದ್ದೆ ಎಂದು ಹೇಳಿದ್ದರು. ಆಗ ದರ್ಶನ್ ಸರಿ ಎಂದು ಒಪ್ಪಿಕೊಂಡು ಹೋಗಿದ್ದರಂತೆ. ಆ ವೇಳೆ ಇನ್ನೂ ದರ್ಶನ್ ನಟಿಸಿದ ಮೊದಲ ಸಿನಿಮಾ ಮೆಜೆಸ್ಟಿಕ್ ಕೂಡ ಆರಂಭ ಆಗಿರಲಿಲ್ಲ. ಒಂದು ವೇಳೆ ಅಂದೇ ನಿರ್ದೇಶಕ ಓಂ ಪ್ರಕಾಶ್ ರಾವ್ ಒಪ್ಪಿದಿದ್ದರೆ, ಹುಚ್ಚ ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದರು.
"ದರ್ಶನ್ ದಯಮಾಡಿ ಬೇಜಾರು ಆಗಬೇಡಿ. ಮುಂದೆ ನಿಮ್ಮನ್ನು ಹಾಕಿಕೊಂಡು ಒಂದು ಸಿನಿಮಾ ಮಾಡುತ್ತೇನೆ. ಮುಂಚೆ ಸಿಕ್ಕಿದ್ದರೆ, ಹುಚ್ಚ ಸಿನಿಮಾವನ್ನು ನಿಮ್ಮಿಂದಲೇ ಮಾಡಿಸುತ್ತಿದ್ದೆ. ನಾನು ಬೇರೆಯವರ ಹಾಗೆ ಸುಳ್ಳು ಹೇಳಲ್ಲ ಅಂದೆ. ಆಯ್ತು ಅಂತ ಹೋದರು. ಆದಾದ್ಮೇಲೆ ಮದ್ರಾಸ್‌ನಲ್ಲಿ ಅಯ್ಯ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಆಗ ಅಣಜಿ ನಾಗರಾಜ್ ಊಟಕ್ಕೆ ಕರೆದ. ಆಗ ಯಜಮಾನರು ಮುಂದೆ ಬರಬೇಕು ಅಂದಿದ್ರು."
ಈ ವೇಳೆ ಅಣಜಿ ನಾಗರಾಜ್ ಬಳಿ ದರ್ಶನ್ ಅವರದ್ದು ಒಂದು ಡೇಟ್ ಕೇಳುವಂತೆ ಹೇಳಿದ್ದರು. ಆದರೆ, ಯಜಮಾನ ನಿರ್ಮಾಪಕ ರೆಹಮಾನ್‌ಗೆ ದರ್ಶಶ್ ಡೇಟ್ ಕೊಡುವುದಕ್ಕೆ ಹಿಂದೇಟು ಹಾಕಿದ್ದರು. ಅದಕ್ಕೆ ಕಾರಣ ಹುಚ್ಚ ಸಿನಿಮಾದಲ್ಲಿ ಅವಕಾಶ ಕೊಡದೇ ಇರೋದು ಎನ್ನುತ್ತಾರೆ ರೆಹಮಾನ್.
"ಅಣಜಿ ನಾಗರಾಜ್ ಸಂಜೆ ಫೋನ್ ಮಾಡಿದ್ದರು. ಸಂಜೆ ನೀವು ಬರಬೇಡಿ ಅಂದರು. ಇಲ್ಲ ನಾನು ಒಂದು ಕ್ಯಾರೆಕ್ಟರ್ ಕೇಳುವುದಕ್ಕೆ ಹೋಗಿದ್ದೆ. ರೆಹಮಾನ್ ಸರ್ ಕೊಡಲಿಲ್ಲ. ನನ್ನ ಹತ್ತಿರ ಡೇಟ್‌ಗೆ ಬರಲಿ ಆಗ ಹೇಳುತ್ತೇನೆ ಅಂದರು. ಅದಕ್ಕೆ ಅವರು ಕೊಡಲ್ಲ ಬರಬೇಡಿ ಅಂದರು. ನಾನು ಒಳ್ಳೆಯದ್ದು ಹೇಳಿದ್ದು, ಇದೇನು ಉಲ್ಟಾ? ಸತ್ಯ ನುಡಿಯಲೇ ಬಾರದಾ? ಬೇಡ ಬಿಡು ಅಂತ ಸುಮ್ಮನಾದೆ" ಎಂದು ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.


Click it and Unblock the Notifications











