"ನನ್ನ ಹೆಂಡತಿಯನ್ನು ಏಕವಚನದಲ್ಲಿ ಕರೀತಾನೆ?"; ಪ್ರಸಿದ್ಧ ಲೇಖಕನ ವಿರುದ್ಧ ಚಿರಂಜೀವಿ ಗರಂ

ಮೆಗಾಸ್ಟಾರ್ ಚಿರಂಜೀವಿ ವಿವಾದಗಳಿಂದ ಸದಾ ದೂರ ಉಳಿದಿದ್ದಾರೆ. ಆಗೊಮ್ಮೆ ಈಗೊಮ್ಮೆ ಚಿರಂಜೀವಿ ಹೆಸರು ಹೇಳಿ ಬಂದಿದ್ದು ಬಿಟ್ಟರೆ, ವಿವಾದಗಳಿಂದ ಅವರು ದೂರ. ಆದರೆ, ಒಮ್ಮೆ ಜನಪ್ರಿಯ ಲೇಖಕ ಯಂಡಮೂರಿ ವೀರೇಂದ್ರನಾಥ ವಿರುದ್ಧ ಕಿಡಿಕಾರಿದ್ದರು. ಅಂದು ಚಿರಂಜೀವಿ ಕೊಟ್ಟ ಹೇಳಿಕೆ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸದ್ದಾಗುತ್ತಿದೆ.

ಯಂಡಮೂರಿ ವೀರೇಂದ್ರನಾಥ್ ಬಗ್ಗೆ ಕಾದಂಬರಿ ಪ್ರಿಯರಿಗೆ ವಿಶೇಷವಾಗಿ ಹೇಳಬೇಕಿಲ್ಲ. ಇವರು ಬರೆದ ಕಾದಂಬರಿಗೆ ತೆಲುಗು ಹಾಗೂ ಕನ್ನಡದಲ್ಲಿ ಸಿನಿಮಾಗಳಾಗಿವೆ. ಅದರಲ್ಲೂ ತೆಲುಗು ಜನರಿಗೆ, ಚಿರಂಜೀವಿ ಅಭಿಮಾನಿಗಳಿಗೆ ಇವರ ಕಾದಂಬರಿಗಳ ಬಗ್ಗೆ ಚೆನ್ನಾಗಿಯೇ ಗೊತ್ತಿದೆ.

Why mega star Chiranjeevi was angry at novelist Yandamuri Veerendranath here are the details

ಯಂಡಮೂರಿಯವರು ಬರೆದ ಕಾದಂಬರಿಗಳು ಸಾಹಿತ್ಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಿವೆ. ವಿಶೇಷವಾಗಿ ಇವರ ಕಾದಂಬರಿಗಳು ಸಿನಿಮಾಗಳಾಗಿವೆ. ಅದರಲ್ಲಿ ಹೆಚ್ಚು ಮೆಗಾಸ್ಟಾರ್ ಚಿರಂಜೀವಿಯೇ ನಟಿಸಿದ್ದಾರೆ. ಆ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿವೆ. ಇನ್ನೊಂದು ವಿಶೇಷ ಅಂದರೆ, ಚಿರಂಜೀವಿ ಹಾಗೂ ಯಂಡಮೂರಿ ವೀರೇಂದ್ರನಾಥ್ ಇಬ್ಬರೂ ಆತ್ಮೀಯ ಗೆಳೆಯರು. ಇಂತಹ ಸ್ನೇಹಿತರ ವಿರುದ್ಧವೇ ಚಿರಂಜೀವಿ ಗಂಭೀರ ಆರೋಪ ಮಾಡಿದ್ದರು. ಅಷ್ಟಕ್ಕೂ ಆ ಘಟನೆಯೇನು? ಇಬ್ಬರ ನಡುವೆ ಅಂತಹದ್ದೇನು ನಡೀತು? ತಿಳಿಯಲು ಮುಂದೆ ಓದಿ.

ಚಿರಂಜೀವಿ, ಯಂಡಮೂರಿ ವೀರೇಂದ್ರನಾಥ್, ಕೋದಂಡರಾಮಿ ರೆಡ್ಡಿ ಹಾಗೂ ಕೆ ಎಸ್ ರಾಮರಾವ್ ಈ ನಾಲ್ಕು ಮಂದಿ ಒಟ್ಟಿಗೆ ಸೇರಿದರೆ, ಆ ಸಿನಿಮಾ ಬ್ಲಾಕ್‌ಬಸ್ಟರ್ ಅಂತಲೇ ಭಾವಿಸಲಾಗಿತ್ತು. ಅದರಲ್ಲೂ ಚಿರಂಜೀವಿ ಹಾಗೂ ಯಂಡಮೂರಿ ವೀರೇಂದ್ರನಾಥ್ ಕಾಂಬಿನೇಷನ್ ಸಿನಿಮಾಗಳು ಬ್ಲಕ್‌ಬಸ್ಟರ್ ಲಿಸ್ಟ್‌ ಸೇರಿದ್ದೇ ಹೆಚ್ಚು.

ಇವರಿಬ್ಬರು ಅದೆಷ್ಟೇ ಒಳ್ಳೆಯ ಸ್ನೇಹಿತರಾಗಿದ್ದರೂ, ಇಬ್ಬರ ನಡುವೆ ವೈಮನಸ್ಸು ಇತ್ತು. ಯಂಡಮೂರಿ ವೀರೇಂದ್ರನಾಥ್ ವಿರುದ್ಧ ಮೆಗಾಸ್ಟಾರ್ ಚಿರಂಜೀವಿ ಕುಟುಂಬವೇ ತಿರುಗಿಬಿದ್ದಿತ್ತು. 8 ವರ್ಷಗಳ ಹಿಂದೆ ಚಿತ್ತೂರು ಜಿಲ್ಲೆಯ ಕಾಲೇಜ್ ಒಂದರಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಯಂಡಮೂರಿ ವೀರೇಂದ್ರನಾಥ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಚಿರಂಜೀವಿ ಪುತ್ರ ರಾಮ್ ಚರಣ್ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದರು.

Why mega star Chiranjeevi was angry at novelist Yandamuri Veerendranath here are the details

ಆ ವೇದಿಕೆಯಲ್ಲಿ ರಾಮ್ ಚರಣ್‌ಗೆ ಡ್ಯಾನ್ಸ್ ಕಲಿಸುವುದಕ್ಕೆ ಅವರ ತಾಯಿ ಸುರೇಖಾ ಬಹಳ ಕಷ್ಟಪಟ್ಟಿದ್ದಾರೆ. ಅದೇ 8 ವರ್ಷದ ಬಾಲಕನೊಬ್ಬ ಶಿವರಂಜನಿ ರಾಗದಲ್ಲಿ ಹಾಡಿ ಇಳಯರಾಜ ಮನಸ್ಸು ಗೆದ್ದಿದ್ದ. ಸ್ವಂತ ಪ್ರತಿಭೆಯಿಂದ ಬೆಳೆದು ಬಂದವನು. ಆತನೇ ದೇವಿಶ್ರೀ ಪ್ರಸಾದ್ ಎಂದು ಹೇಳಿದ್ದರು. ಇದು ಮೆಗಾ ಕುಟುಂಬದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಮೆಗಾಸ್ಟಾರ್ ಚಿರಂಜೀವಿ ರಾಜಕೀಯದಿಂದ ದೂರು ಉಳಿದು ಸಿನಿಮಾ ಕಡೆ ಮುಖ ಮಾಡಲು ನಿರ್ಧರಿಸಿದ್ದರು. ಚಿರಂಜೀವಿ ರೀ ಎಂಟ್ರಿ ಮಾಡಿದ 'ಖೈದಿ ನಂ.150' ಸಿನಿಮಾದ ವೇದಿಕೆಯಲ್ಲಿ ನಾಗಬಾಬು ಪರೋಕ್ಷವಾಗಿ ಕಿಡಿಕಾರಿದ್ದರು. ಪ್ರಬಂಧ ತಜ್ಞ ಕಣ್ಣಿಗೆ ಬಿದ್ದರೆ ಹೊಡೆಯುತ್ತೇನೆ ಎಂದಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಯಂಡಮೂರಿ ವೀರೇಂದ್ರನಾಥ್ ಕೂಡ ಪ್ರತಿಕ್ರಿಯಿಸಿದ್ದರು.

ಆಗ ಮೆಗಾಸ್ಟಾರ್ ಚಿರಂಜೀವಿ ಎಂಟ್ರಿ ಆಗಿತ್ತು. ನಾಲ್ವರಿಗೆ ಸ್ಪೂರ್ತಿಯಾಗುವಂತೆ ಕಾಮೆಂಟ್ ಮಾಡಬೇಕಿತ್ತು. ಆದರೆ ಸಂಸ್ಕಾರವಿಲ್ಲದೇ ವ್ಯಂಗ್ಯವಾಗಿ ಮಾತನಾಡಿದ್ದಾರೆ ಎಂದು ಮೆಗಾಸ್ಟಾರ್ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಪತ್ನಿ ಸುರೇಖಾ ಅವರನ್ನು "ಏಕವಚನದಲ್ಲಿ ಸಂಬೋಧಿಸಿರುವುದು ಸರಿಯಲ್ಲ" ಎಂದು ಕಿಡಿಕಾರಿದ್ದರು. ಇಷ್ಟೆಲ್ಲ ಆದರೂ ಸ್ವತಃ ಚಿರಂಜೀವಿಯೇ ತಮ್ಮ ಆತ್ಮಕಥನ ಬರೆಯುವ ಜವಾಬ್ದಾರಿಯನ್ನು ಯಂಡಮೂರಿ ವೀರೇಂದ್ರನಾಥ್‌ಗೆ ಕೊಟ್ಟಿದ್ದರು. ಆದರೆ, ಇಂದಿಗೂ ಚಿರು ಮಾಡಿದ ಈ ಕಾಮೆಂಟ್‌ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

More from Filmibeat

English summary
Is novelist Yandamuri Veerendranath called Chiranjeevi wife singularly?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X