ಸಾವಿನ ದೃಶ್ಯವನ್ನು ಚಿತ್ರೀಕರಿಸಿದ ಬಳಿಕ ನಗುವ ಸೀನ್‌ ಅನ್ನು ಶೂಟ್ ಮಾಡೋದ್ಯಾಕೆ? ಏನಿದು ನಂಬಿಕೆ?

ನೀವು ಅದೆಷ್ಟು ಸಿನಿಮಾಗಳನ್ನು ನೋಡಿರುತ್ತೀರಿ. ಅವುಗಳಲ್ಲಿ ಲವಲವಿಕೆಯ ದೃಶ್ಯಗಳನ್ನು ನೋಡಿ ಖುಷಿ ಪಟ್ಟಿರುತ್ತೀರಿ. ಅದೇ ನಿಮ್ಮ ಮೆಚ್ಚಿನ ಹೀರೋ ಅಥವಾ ಹೀರೋಯಿನ್ ಅಥವಾ ಪೋಷಕ ಪಾತ್ರಧಾರಿಗಳು ತೆರೆಮೇಲೆ ಸಾವಿನ ದೃಶ್ಯಗಳಲ್ಲಿ ಕಂಡರೆ, ನಿಮ್ಮ ಕಣ್ಣುಗಳು ಒದ್ದೆ ಆಗುತ್ತವೆ. ಇಂತಹ ದುರಂತದ ದೃಶ್ಯಗಳನ್ನು ಕೆಲವರು ನೋಡುವುದಕ್ಕೂ ಇಷ್ಟ ಪಡುವುದಿಲ್ಲ.

ಈ ಸೀನ್‌ಗಳನ್ನು ನೋಡುವಾಗ ಕೆಲವು ಪ್ರೇಕ್ಷಕರಿಗೆ ಕುತೂಹಲ ಮೂಡುವುದು ಸಹಜ. ಸಾವು ಅಂದರೆ ಭಯ. ಅಂತಹ ದೃಶ್ಯದಲ್ಲಿ ಕಲಾವಿದರು ಹೇಗೆ ನಟಿಸುತ್ತಾ? ಅಷ್ಟೊಂದು ದೃಶ್ಯ ಎಲ್ಲಿಂದ ಬರುತ್ತೆ? ಅನ್ನೋ ಪ್ರಶ್ನೆ ತಲೆಯೊಳಗೆ ಓಡಾಡಬಹುದು. ಅದು ಪ್ರತಿಯೊಬ್ಬ ಕಲಾವಿದರು ಎದುರಿಸೋ ಬಿಗ್ಗೆಸ್ಟ್ ಚಾಲೆಂಜ್ ಆಗಿರಲೂ ಬಹುದು.

Why movie makers shoot laughing scene after shooting the death sequence in the movie

ಆದರೆ, ತೆರೆಮೇಲೆ ಕಲಾವಿದರು ಸಾಯುವ ದೃಶ್ಯವನ್ನು ಹೇಗೆ ಚಿತ್ರೀಕರಿಸುತ್ತಾರೆ? ಸಾವಿನ ದೃಶ್ಯವನ್ನು ಚಿತ್ರೀಕರಿಸಿದ ಬಳಿಕ ಮತ್ತೊಂದು ಸೀನ್‌ ಅನ್ನು ಶೂಟ್ ಮಾಡಲಾಗುತ್ತೆ. ಆದರೆ, ದೃಶ್ಯ ಸಿನಿಮಾದಲ್ಲಿ ಇರುವುದಿಲ್ಲ. ಅದ್ಯಾಕೆ ಅನ್ನೋದು ನಿಮಗೆ ಗೊತ್ತಾ? ಶಂಕರ್ ನಾಗ್ ಇಂತಹ ಸಾವಿನ ದೃಶ್ಯದಲ್ಲಿ ನಟಿಸಿದ ಮಾರನೇ ದಿನ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದೆಲ್ಲವೂ ಚಿತ್ರರಂಗದಲ್ಲಿರುವ ನಂಬಿಕೆ.

ಚಿತ್ರರಂಗದಲ್ಲಿ ಒಂದು ನಂಬಿಕೆ ಇದೆ. ಸಾವಿನ ದೃಶ್ಯವನ್ನು ಸುಖಾ ಸುಮ್ಮನೆ ಚಿತ್ರೀಕರಣ ಮಾಡುವುದಿಲ್ಲ. ಅವರಲ್ಲಿ ಒಂದು ನಂಬಿಕೆಯಿದೆ. ಸಿನಿಮಾಗಾಗಿ ಕಲಾವಿದರ ಸಾವಿನ ದೃಶ್ಯವನ್ನು ಚಿತ್ರೀಕರಣದ ಮಾಡಿದ ಬಳಿಕ ಟೇಕ್ ಓಕೆ ಆಗುತ್ತಿದ್ದಂತೆ ತಕ್ಷಣವೇ ಇನ್ನೊಂದು ಸೀನ್‌ ಅನ್ನು ಶೂಟ್ ಮಾಡುತ್ತಾರೆ. ಆದರೆ, ಡಮ್ಮಿ ದೃಶ್ಯ. ಅದನ್ನು ಸಿನಿಮಾದಲ್ಲಿ ತೋರಿಸುವುದಕ್ಕಾಗಿ ಶೂಟಿಂಗ್ ಮಾಡುವುದಿಲ್ಲ. ಅಷ್ಟಕ್ಕೂ ಹೀಗ್ಯಾಕೆ ಮಾಡುತ್ತಾರೆ ಅನ್ನೋದು ಗೊತ್ತೇ?

ಕನ್ನಡದ ನಿರೂಪಕ ಕಮ್ ನಿರ್ದೇಶಕ ರಾಘು ರಾಮ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಸಾವಿನ ದೃಶ್ಯವನ್ನು ಚಿತ್ರೀಕರಿಸಿದ ಬಳಿಕ ಅದೇ ವೃಕ್ತಿ ನಗು ನಗುತ್ತಾ ಎದ್ದು ಬರುವ ಸೀನ್‌ ಅನ್ನು ಶೂಟ್ ಮಾಡುತ್ತಾರೆ. ಅದ್ಯಾಕೆ ಅನ್ನೋದನ್ನು ಶಂಕರ್ ನಾಗ್‌ ಜೊತೆ 'ಎಸ್‌ಪಿ ಸಾಂಗ್ಲಿಯಾನ' ಚಿತ್ರದಲ್ಲಿ ಹಿರಿಯ ನಟಿ ಶಿವರಂಜಿನಿ ಸಂದರ್ಶನದ ವೇಳೆ ರಿವೀಲ್ ಮಾಡಿದ್ದಾರೆ.

Why movie makers shoot laughing scene after shooting the death sequence in the movie

"ನಮ್ಮ ಸಿನಿಮಾಗಳಲ್ಲಿ ಒಂದು ಡೆಡ್ ಬಾಡಿ ಶಾಟ್, ಇಲ್ಲ ಚಟ್ಟದ ಮೇಲೆ ಮಲಗಿಕೊಂಡು ಹೋಗುವ ಶಾಟ್ ಅದನ್ನು ತೆಗೆದುಕೊಂಡಾಗ ಒಂದು ಸೆಂಟಿಮೆಂಟ್ ಇದೆ. ಅದೇ ವ್ಯಕ್ತಿ ಮತ್ತೆ ಎದ್ದು ಒಂದು ಸ್ಮೈಲ್ ಮಾಡುವಂತೆ ಒಂದು ಶಾಟ್ ತೆಗೆಯುತ್ತೇವೆ. ಅದನ್ನು ಸಿನಿಮಾದಲ್ಲಿ ಬಳಸಿಕೊಳ್ಳುವುದಿಲ್ಲ. ಆದರೆ ಆ ಶಾಟ್ ತೆಗೆಯುತ್ತೇವೆ." ಎಂದು ರಘುರಾಮ್ ಹೇಳಿದ್ದಾರೆ. ಅಷ್ಟಕ್ಕೂ ಈ ಶಾಟ್ ಅನ್ನು ತೆಗೆಯಲು ಕಾರಣ ಅದು ಯಾವ ಕಲಾವಿದರಿಗೆ ಮುಂದೆ ಯಾವುದೇ ತೊಂದರೆ ಆಗಬಾರದು ಅಂತ.

ಶಂಕರ್ ನಾಗ್‌ ನಟಿಸಿದ ಕೊನೆಯ ಸಿನಿಮಾ 'ಸುಂದರ ಕಾಂಡ'. ಶಂಕರ್ ನಾಗ್ ಕಾರು ಅಪಘಾತದಲ್ಲಿ ಸಾವನ್ನಪ್ಪುವುದಕ್ಕೂ ಇದೇ ಸಿನಿಮಾದಲ್ಲಿ ಸಾವಿನ ದೃಶ್ಯದಲ್ಲಿ ನಟಿಸಿದ್ದರು. "ಸುಂದರಕಾಂಡ ಸಿನಿಮಾದಲ್ಲಿ ಶಂಕರ್‌ ನಾಗ್ ಸರ್ ಡೆತ್ ಎಪಿಸೋಡ್ ಸೀನ್ ಶೂಟ್ ಆದ್ಮೇಲೆ ಮತ್ತೆ ಅವರು ಸ್ಮೈಲ್ ಕೊಡುವಂತಹ ಅಥವಾ ಜೀವಂತವಾಗಿರುವ ಶಾಟ್ ಸೆರೆ ಹಿಡಿದಿಲ್ಲ. ಇದು ಕಾಕತಾಳೀಯವೋ? ಸೆಂಟಿಮೆಂಟೋ? ಗೊತ್ತಿಲ್ಲ. ಆದರೆ ನಾವು ಸಿನಿಮಾದವರು ಇದನ್ನು ತುಂಬಾ ನಂಬುತ್ತೇವೆ." ಎಂದು ರಘುರಾಮ್ ಹೇಳುತ್ತಾರೆ.

More from Filmibeat

English summary
Shankar Nag last scene was death sequence. Do you which movie?;
Read more about: shankar nag death filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X