ಈ ಸಿನಿಮಾದ ಕಥೆ ವಿದೇಶದಲ್ಲೇ ಬ್ಯಾನ್ ಆಗಿತ್ತು; ಅದನ್ನೇ ಪುಟ್ಟಣ್ಣ ಕಣಗಲ್ ಸಿನಿಮಾ ಮಾಡಿದ್ದೇಕೆ?

ಕನ್ನಡ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಸಿನಿಮಾ ಕೊಟ್ಟ ಹೆಗ್ಗಳಿಕೆ ಪುಟ್ಟಣ್ಣ ಕಣಗಾಲ್‌ಗೆ ಸಲ್ಲಲೇಬೇಕು. 70ರ ದಶಕದಲ್ಲಿಯೇ ಗಂಭೀರ ವಿಷಯಗಳನ್ನು ಸಿನಿಮಾ ಮಾಡುವುದಕ್ಕೆ ಆಯ್ಕೆ ಮಾಡಿಕೊಂಡ ನಿರ್ದೇಶಕರಲ್ಲಿ ಪುಟ್ಟಣ್ಣ ಕಣಗಾಲ್ ಮುಂದೆ ನಿಲ್ಲುತ್ತಾರೆ. ಅದೇ ಕಾರಣಕ್ಕೆ ಇಂದಿಗೂ ಇವರ ಸಿನಿಮಾಗಳು ಜೀವಂತವಾಗಿ ಉಳಿದಿದೆ.

ಅದರಲ್ಲೂ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ 'ಎಡಗಲ್ಲು ಗುಡ್ಡದ ಮೇಲೆ' ಇಂದಿಗೂ ಚರ್ಚೆಯಲ್ಲಿರುವ ಸಿನಿಮಾ. ಆಗಿನ ಕಾಲಕ್ಕೆ ಅಂತಹ ಗಂಭೀರ ವಿಷಯಗಳನ್ನು ತೆರೆ ಮೇಲೆ ತರುವುದಕ್ಕೆ ಇಂದಿಗೂ ಕೆಲವರು ಹಿಂದೇಟು ಹಾಕುತ್ತಾರೆ. ಅಂತಹದ್ರಲ್ಲಿ 70ರ ದಶಕದಲ್ಲೇ ಪುಟ್ಟಣ್ಣ ಕಣಗಾಲ್ ಎಡಕಲ್ಲು ಗುಡ್ಡದ ಮೇಲೆ' ಅಂತಹ ಪ್ರಬುದ್ಧ ಕಥೆಯನ್ನು ತೆರೆಮೇಲೆ ತರುವುದಕ್ಕೆ ಮುಂದಾಗಿದ್ದರು. ಇದರ ಹಿಂದೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ಇವೆ.

Why Puttanna Kanagal made Edakallu Guddada Mele movie while the original story was banned worldwide

ಇಂಗ್ಲಿಷ್‌ನಲ್ಲಿ ಡಿ ಎಚ್ ಲಾರೆನ್ಸ್ ಅವರು ಬರೆದ 'ಲೇಡಿ ಚಾಟರ್ಲೀಸ್ ಲವರ್' ಎನ್ನುವ ಕಾದಂಬರಿಯನ್ನು ಬರದಿದ್ದರು. ಈ ಕಾದಂಬರಿ ಹಲವು ದೇಶಗಳಲ್ಲಿ ಬ್ಯಾನ್ ಮಾಡಲಾಗಿತ್ತು. ಆ ಕಾದಂಬರಿಯಿಂದ ಪ್ರೇರಣೆ ಪಡೆದು ಭಾರತಿಸುತ ಕನ್ನಡದಲ್ಲಿ ಕಾದಂಬರಿಯನ್ನು ಬರೆದಿದ್ದರು. ಅದನ್ನೇ ಪುಟ್ಟಣ್ಣ ಕಣಗಾಲ್ ಸಿನಿಮಾ ಮಾಡುವ ಧೈರ್ಯ ಮಾಡಿದ್ದರು. ಈ ಸಿನಿಮಾ ಬಗ್ಗೆ ಟೋಟಲ್ ಕನ್ನಡದಲ್ಲಿ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

'ಎಡಕಲ್ಲು ಗುಡ್ಡದ ಮೇಲೆ ಪುಟ್ಟಣ್ಣ ಕಣಗಾಲ್ ಅವರ ಏಳನೇ ಕಾದಂಬರಿ ಆಧಾರಿತ ಚಿತ್ರ. ಡಿ ಎಚ್ ಲಾರೆನ್ಸ್ ಅವರು ಬರೆದ 'ಲೇಡಿ ಚಾಟರ್ಲೀಸ್ ಲವರ್' ಕಾದಂಬರಿಯಿಂದ ಸ್ಪೂರ್ತಿ ಪಡೆದು ಭಾರತೀಸುತ ಅವರು ಈ ಕಾದಂಬರಿಯನ್ನು ಬರೆಯುತ್ತಾರೆ. ಸುಧಾ ವಾರ ಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ 'ಎಡಕಲ್ಲು ಗುಡ್ಡದ ಮೇಲೆ ಬಹುಮಾನವನ್ನು ಗಳಿಸುತ್ತೆ. ಅದನ್ನು ಪುಟ್ಟಣ್ಣ ಕಣಗಾಲ್ ಅವರು ತೆರೆಮೇಲೆ ತರುತ್ತಾರೆ.

"ಲೇಡಿ ಚಾಟರ್ಲೀಸ್ ಲವರ್' ಅನ್ನು ಸುಮಾರು ನಾಲ್ಕು ದಶಕಗಳ ಕಾಲ ಮುದ್ರಣ ಆಗುವುದಕ್ಕೆ ಬಿಟ್ಟಿರುವುದಿಲ್ಲ. ಅದರಲ್ಲಿ ಅಷ್ಟೊಂದು ಅಡಲ್ಟ್ ಕಂಟೆಂಟ್ ಇತ್ತು ಅನ್ನುವ ಕಾರಣಕ್ಕೆ ಕೆಲವು ದೇಶಗಳಲ್ಲಿ ಅದನ್ನು ಬ್ಯಾನ್ ಮಾಡಿದ್ದರು. ಭಾರತದಲ್ಲಿ ಕೂಡ ಬ್ಯಾನ್ ಮಾಡಿರುತ್ತಾರೆ. ಅಂತಹದ್ದೊಂದು ಕಥೆಯ ಸ್ಪೂರ್ತಿಯಿಂದ ಭಾರತೀಸುತ ಅವರು ಸುಂದರವಾದ ಕಥೆಯನ್ನು ಹೆಣೆಯುತ್ತಾರೆ. ಅದನ್ನು ಪುಟ್ಟಣ್ಣನವರು ಮತ್ತಷ್ಟು ಜಾಗರೂಕರಾಗಿ ತೆರೆಯ ಮೇಲೆ ತರುತ್ತಾರೆ." ಎಂದು ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ಬಗ್ಗೆ ಹರಿಹರಪುರ ಮಂಜುನಾಥ್ ಹೇಳುತ್ತಾರೆ.

Why Puttanna Kanagal made Edakallu Guddada Mele movie while the original story was banned worldwide

'ಎಡಕಲ್ಲು ಗುಡ್ಡದ ಮೇಲೆ' ಸಿನಿಮಾದ ಟೈಟಲ್ ಕಾರ್ಡ್ ಮುಗಿಯುತ್ತಿದ್ದಂತೆ "ವಿರಹ ನೂರು ನೂರು ತರಹ.." ಹಾಡು ಆರಂಭ ಆಗುತ್ತೆ. ಯುದ್ಧದಲ್ಲಿ ತನ್ನ ಕಾಲಿನ ಜೊತೆಗೆ ಪುರುಷತ್ವವನ್ನೂ ಕಳೆದುಕೊಂಡಿರುವ ಕ್ಯಾಪ್ಟನ್ ಕುಮಾರ್ ತನ್ನ ಪತ್ನಿಗೆ ಬೇರೆ ಮದುವೆ ಆಗುವಂತೆ ಹೇಳುತ್ತಾನೆ. ಆದರೆ, ದೇಶಕ್ಕಾಗಿ ಹೋರಾಡಿದ ಪತಿಯ ಸೇವೆ ಮಾಡುವುದಕ್ಕೆ ಪತ್ನಿ ಮಾಧವಿ ನಿರ್ಧರಿಸುತ್ತಾಳೆ. ಇಲ್ಲಿ ಕ್ಯಾಪ್ಟನ್ ಕುಮಾರ್ ಪಾತ್ರದಲ್ಲಿ ರಂಗ ನಟಿಸಿದ್ದರೆ, ಪತ್ನಿ ಮಾಧವಿ ಪಾತ್ರದಲ್ಲಿ ಜಯಂತಿ ನಟಿಸಿದ್ದಾರೆ. ಬಳಿಕ ನಂಜುಂಡನ ಮೋಹದಲ್ಲಿ ಬೀಳುವ ಮಾಧವಿ, ನಂತರ ಆಕೆಯ ಬಾಳಲ್ಲಿ ಏನೆಲ್ಲ ನಡೆಯುತ್ತೆ ಅನ್ನೋದೇ ಕಥೆ.

ಈ ಸಿನಿಮಾ ಬಿಡುಗಡೆಯಾದಾಗ ಉತ್ತಮ ಪ್ರತಿಕ್ರಿಯೆ ಸಿಗುತ್ತೆ. ಆದರೆ, ಚಿತ್ರಮಂದಿರದಲ್ಲಿ 100 ದಿನ ಪ್ರದರ್ಶನ ಆಗುವುದಕ್ಕೆ ಬಿಡುವುದಿಲ್ಲ. ಅಲ್ಲದೆ ಇದು ಪುಟ್ಟಣ್ಣ ಕಣಗಾಲ್ ನಟಿಸಿದ ಎರಡನೇ 'ಎ' ಸರ್ಟಿಫಿಕೇಟ್ ಪಡೆದಿದ್ದ ಸಿನಿಮಾ. "ಎಡಕಲ್ಲುಗುಡ್ಡದ ಮೇಲೆ ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನೇ ಪಡೆಯುತ್ತೆ. ಬೆಂಗಳೂರಿನ ಅಲಂಕಾರ್ ಚಿತ್ರಮಂದಿರದಿಂದ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ. ಬೋಸನ್ ಕೊಡಬೇಕಾಗುತ್ತೆ ಅಂತ ನೂರು ದಿನಗಳನ್ನು ಓಡುವುದಕ್ಕೆ ಬಿಡುವುದಿಲ್ಲ" ಎಂದು ಹರಿಹರಪುರ ಮಂಜುನಾಥ್ ಹೇಳಿದ್ದಾರೆ.

More from Filmibeat

English summary
Puttanna Kanagal took inspiration from Lady Chatterley's Lover novel to make the Endakallu Guddada Mele movie. At that time, this novel was banned worldwide
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X