'ಕ್ರಾಂತಿವೀರ ಸಂಗೊಳ್ಳಿರಾಯಣ್ಣ' ಸಿನಿಮಾ ಮಾಡಲು ವಿಷ್ಣುದಾದ ಒಪ್ಪಿಲ್ಲ ಯಾಕೆ? ದರ್ಶನ್ ಪಾಲಾಗಿದ್ದೇಗೆ?
ದರ್ಶನ್ ವೃತ್ತಿ ಬದುಕಿಗೆ ಹೊಸ ಇಮೇಜ್ ಕೊಟ್ಟಿದ್ದ ಸಿನಿಮಾ 'ಕ್ರಾಂತಿವೀರ ಸಂಗೊಳ್ಳಿರಾಯಣ್ಣ'. ಈ ಐತಿಹಾಸಿಕ ಸಿನಿಮಾಗೆ ಕನ್ನಡದ ಹಿರಿಯ ನಿರ್ದೇಶಕ ನಾಗಣ್ಣ ಆಕ್ಷನ್ ಕಟ್ ಹೇಳಿದ್ದರು. ಸಂಗೊಳ್ಳಿರಾಯಣ್ಣ ಚರಿತ್ರೆ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ರಾಯಣ್ಣನ ಅಭಿಮಾನಿಗಳೂ ದರ್ಶನ್ ಫ್ಯಾನ್ಸ್ ಆಗಿದ್ದೂ ಗೊತ್ತೇ ಇದೆ.
ದರ್ಶನ್ ಹೈಟ್‌ಗೆ, ಇಮೇಜ್ ಸಂಗೊಳ್ಳಿರಾಯಣ್ಣ ಇಮೇಜ್ ಸಖತ್ ಆಗಿಯೇ ಸೂಟ್ ಆಗಿತ್ತು. ಅವರ ಅಭಿಮಾನಿಗಳಂತೂ ಸಂಗೊಳ್ಳಿರಾಯಣ್ಣ ಅಂದರೆ ದರ್ಶನ್ ಅನ್ನುವಷ್ಟು ಪ್ರಭಾವ ಬೀರಿದ್ದರು. ಈ ಸಿನಿಮಾಗೆ ಕಿಚ್ಚ ಸುದೀಪ್ ಧ್ವನಿಯನ್ನೂ ನೀಡಿದ್ದರು. ಸಿನಿಮಾನೂ ಸೂಪರ್ ಹಿಟ್ ಆಯ್ತು. ಆದರೆ, ದರ್ಶನ್‌ಗೂ ಮೊದಲು ಸಂಗೊಳ್ಳಿರಾಯಣ್ಣ ಸಿನಿಮಾವನ್ನು ಸಾಹಸ ಸಿಂಹ ವಿಷ್ಣುವರ್ಧನ್ ಮಾಡಬೇಕಿತ್ತು.

ಹೌದು, ಈ ಮಾತನ್ನು ಸ್ವತ: 'ಕ್ರಾಂತಿವೀರ ಸಂಗೊಳ್ಳಿರಾಯಣ್ಣ' ಸಿನಿಮಾ ನಿರ್ದೇಶಿಸಿದ್ದ ನಾಗಣ್ಣ ಅವರೇ ಹೇಳಿಕೊಂಡಿದ್ದರು. ಕೆಲವು ವರ್ಷಗಳ ಹಿಂದೆ ಚಿತ್ರಲೋಕ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ ವೇಳೆ ನಾಗಣ್ಣ ವಿಷಯವನ್ನು ಪ್ರಸ್ತಾಪ ಮಾಡಿದ್ದರು. ದರ್ಶನ್‌ಗೂ ಮೊದಲು ವಿಷ್ಣುದಾದಗೆ ಈ ಕಥೆಯನ್ನು ಹೇಳಲಾಗಿತ್ತು.
ನಾಗಣ್ಣ ಸಂಗೊಳ್ಳಿರಾಯಣ್ಣ ಸಿನಿಮಾ ಮಾಡಲು ಕಥೆಯನ್ನು ಮಾಡಿಕೊಂಡಿದ್ದರು. ಬಳಿಕ ಈ ಪಾತ್ರದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರೇ ಮಾಡಬೇಕು ಅಂತ ಅನಿಸಿತ್ತು. ಹಾಗಾಗಿ ವಿಷ್ಣುದಾದ ಬಳಿ ಬಂದು ಸಂಗೊಳ್ಳಿರಾಯಣ್ಣ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದರು. ಕಥೆಯನ್ನು ಕೇಳಿದ್ಮೇಲೆ ವಿಷ್ಣುವರ್ಧನ್ ಅವರಿಗೆ ಇಷ್ಟ ಆಗಿತ್ತು. ಸಿನಿಮಾ ಮಾಡುತ್ತೇನೆ ಎಂದು ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದರು.

ವಿಷ್ಣುದಾದನೇ ಒಪ್ಪಿದ ಮೇಲೆ ಇನ್ನೇನಿದೆ. ಸಿನಿಮಾ ಶುರು ಮಾಡುವುದಕ್ಕಿಂತ ಮುನ್ನ ತಮ್ಮದೇ ಬ್ಯಾನರ್‌ನಲ್ಲಿ ನಾಗಣ್ಣ ಟೈಟಲ್ ರಿಜಿಸ್ಟರ್ ಮಾಡುವುದಕ್ಕೆ ಫಿಲ್ಮ್ ಚೇಂಬರ್‌ಗೆ ಹೋಗಿದ್ದರು. ಆದರೆ, ಅಲ್ಲಿಗೆ ಹೋದಾಗ ಈ ಟೈಟಲ್ ಅನ್ನು ಮೊದಲೇ ಯಾರೋ ರಿಜಿಸ್ಟರ್ ಮಾಡಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆ ನಾಗಣ್ಣಗೆ ಸಿಕ್ಕಾಪಟ್ಟೆ ನಿರಾಸೆ ಆಗಿತ್ತು. ತಕ್ಷಣವೇ ಬಂದು ವಿಷ್ಣುದಾದ ಬಳಿ ಹೇಳಿದ್ದರು.
ಆಗ ವಿಷ್ಣುವರ್ಧನ್ ಆ ಬಗ್ಗೆ ಮಾಹಿತಿ ಪಡೆದುಕೊಂಡದ್ದರು. ಸಂಗೊಳ್ಳಿರಾಯಣ್ಣ ಟೈಟಲ್ ಅನ್ನು ಬೆಳಗಾವಿಯ ನಿರ್ಮಾಪಕ ಆನಂದ್ ಅಪ್ಪುಗೋಳ್ ಎಂಬುವವರು ರಿಜಿಸ್ಟರ್ ಮಾಡಿದ್ದಾರೆ ಅಂತ ಹೇಳಿದ್ದರು. ಆಗ ವಿಷ್ಣುವರ್ಧನ್ ಸಿನಿಮಾ ಮಾಡುವುದಿಲ್ಲ ಅಂತ ಹಿಂದೇಟು ಹಾಕಿದ್ದರು. ಯಾರೋ ಇಷ್ಟಪಟ್ಟು ಸಿನಿಮಾ ಮಾಡುವುಕ್ಕೆ ಹೊರಟಿದ್ದಾರೆ. ಅವರ ಕನಸನ್ನು ಕೆಡಿಸುವುದು ಬೇಡವೆಂದು ಹೇಳಿದ್ದರು. ಹೀಗಾಗಿ ಆ ಪ್ರಾಜೆಕ್ಟ್ ಅಲ್ಲಿಗೆ ನಿಂತು ಹೋಗಿತ್ತು.
ವಿಚಿತ್ರ ಅಂದರೆ, ಇದೆಲ್ಲ ನಡೆದು ಸುಮಾರು 15 ವರ್ಷಗಳ ಬಳಿಕ ಅದೇ ನಿರ್ಮಾಪಕರಿಂದ ನಾಗಣ್ಣಗೆ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ ಮಾಡುವುದಕ್ಕೆ ಆಫರ್ ಬಂದಿತ್ತು. ಅದಕ್ಕೆ ದರ್ಶನ್ ಹೀರೊ ಆಗಿ ಆಯ್ಕೆ ಆದರು. ಬಳಿಕ ಆ ಸಿನಿಮಾ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದು ಗೊತ್ತೇ ಇದೆ. ಆದರೆ, ನಾಗಣ್ಣ ಜೊತೆ ಮತ್ತೊಬ್ಬ ನಿರ್ದೇಶಕ ಕೂಡ ಸಂಗೊಳ್ಳಿರಾಯಣ್ಣ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು. ಅವರೇ ಎಸ್.ನಾರಾಯಣ್.
ಎಸ್.ನಾರಾಯಣ್ಣ ಹಾಗೂ ವಿಷ್ಣುವರ್ಧನ್ ಕಾಂಬಿನೇಷನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲುತ್ತಿತ್ತು. ಅದೇ ಈ ಕಾರಣಕ್ಕೆ ಸ್ಕ್ರಿಪ್ಟ್ ಮಾಡಿ ವಿಷ್ಣುದಾದಗೆ ಮತ್ತೊಮ್ಮೆ ಅಪ್ರೋಚ್ ಮಾಡಿದ್ದರು. ಆಗಲೂ ವಿಷ್ಣುವರ್ಧನ್ ಅವರು ಒಪ್ಪಿಲಿಲ್ಲ. ಆಕ್ಷನ್ ದೃಶ್ಯಗಳಲ್ಲೆಲ್ಲಾ ತುಂಬಾ ಪರ್ಫೆಕ್ಟ್ ಆಗಿರಬೇಕು ಈಗ ಅದು ಸಾಧ್ಯವಿಲ್ಲ ಎಂದು ಹೇಳಿದ್ದನ್ನು ಎಸ್.ನಾರಾಯಣ್ ಇತ್ತೀಚೆಗೆ ಚಿತ್ರಲೋಕ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.


Click it and Unblock the Notifications











