'ಯಾರೇ ನೀನು ಚೆಲುವೆ' ನಟಿ ಸಂಗೀತ ಸಿನಿಮಾ ಬಿಟ್ಟಿದ್ದೇಕೆ? ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ?

ಸಿನಿಮಾದಲ್ಲಿ ಲಾಂಗ್ ಡಿಸ್ಟೆನ್ಸ್ ಪ್ರೇಮಕಥೆಗಳನ್ನು ನೋಡುವುದಕ್ಕೆ ಒಂದು ಖುಷಿ. ಇಂತಹ ಸಿನಿಮಾಗಳು ಸಿನಿ ಪ್ರೇಮಿಗಳ ಮನಸ್ಸಿನಲ್ಲಿ ಇಂದಿಗೂ ಹಾಗೇ ಉಳಿದುಬಿಟ್ಟಿದೆ. ಇಂತಹ ಸಿನಿಮಾಗಳಲ್ಲೊಂದು 'ಯಾರೇ ನೀನು ಚೆಲುವೆ'.

ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಸಖತ್ ಆಗಿಯೇ ಸದ್ದು ಮಾಡಿತ್ತು. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ನಾಯಕಿಯ ಪರಿಚಯ ಆಗಿತ್ತು. ಅವರೇ ಸಂಗೀತಾ ಮಾಧವನ್ ನಾಯರ್ (Sangita Madhavan Nair).

yaare-neenu-cheluve-sangita-madhavn-nair

'ಯಾರೇ ನೀನು ಚೆಲುವೆ' ಸಿನಿಮಾ ರಿಲೀಸ್ ಆದಾಗ ಸಂಗೀತಾ ಅದೆಷ್ಟೋ ಹುಡುಗರ ಕನಸಿನ ರಾಣಿಯಾಗಿದ್ದರು. 1998ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಕಮಲಿ ಪಾತ್ರದಲ್ಲಿ ಸಂಗೀತಾ ಮಾಧವನ್ ನಾಯರ್ ಮಿಂಚಿದ್ದರು. ಈ ಸಿನಿಮಾ ರಿಲೀಸ್ ಆಗಿ ಎರಡೇ ವರ್ಷ ಚಿತ್ರರಂಗದಿಂದ 14 ವರ್ಷಗಳ ಕಾಲ ದೂರವೇ ಉಳಿದು ಉಳಿದಿದ್ದರು. ಈಗ ಮತ್ತೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.

14 ವರ್ಷ ಚಿತ್ರರಂಗದಿಂದ ಸಂಗೀತ ದೂರ

2000ದಲ್ಲಿ ತೆರೆಕಂಡಿದ್ದ 'ಕನಲ್ ಕಿರೀಡಂ' ಅನ್ನೋ ಮಲಯಾಳಂ ಸಿನಿಮಾದಲ್ಲೇ ಕೊನೆಯದಾಗಿ ನಟಿಸಿದ್ದರು. ಕಾರಣ, ತಮಿಳಿನ ಛಾಯಾಗ್ರಾಹಕ ಎಸ್ ಸರಣವನ್ ಅವರೊಂದಿಗೆ ವಿವಾಹವಾಗಿದ್ದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾದಿಂದ ಸಂಪೂರ್ಣವಾಗಿ ದೂರವಾಗಿಬಿಟ್ಟಿರು. 2002ರಲ್ಲಿ ಇವರಿಗೆ ಮಗಳು ಜನಿಸಿದ್ದರು. ಹೀಗಾಗಿ ಆಕೆಯ ಸಲುವಾಗಿ ಚಿತ್ರರಂಗದಿಂದ ದೂರ ಉಳಿದಿದ್ದಾಗಿ ಹೇಳಿಕೊಂಡಿದ್ದರು.

ಮಲಯಾಳಂ ಸಿನಿಮಾ ಮೂಲಕ ಕಮ್‌ಬ್ಯಾಕ್

14 ವರ್ಷ ಮಗಳಿಗಾಗಿ ಚಿತ್ರರಂಗದಿಂದ ದೂರವಿದ್ದ ಸಂಗೀತಾ 2014ರಲ್ಲಿ 'ನಾಗರ ವಾರಿಧಿ ನಡುವಿಲ್ ನಂ' ಅನ್ನೋ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಅದೇ ಸೌಂದರ್ಯ, ಅದೇ ಮುಗ್ಧತೆಯೊಂದಿಗೆ ಚಿತ್ರರಂಗಕ್ಕೆ ಮರಳಿದ್ದರು. ಇನ್ನೇನು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾರೆ ಅಂತಲೇ ಫ್ಯಾನ್ಸ್ ಅಂದುಕೊಂಡಿದ್ದರು. ಆದರೆ, ಮತ್ತೆ ಸಿನಿಮಾಗಳಲ್ಲಿ ನಟಿಸಲೇ ಇಲ್ಲ. ಹಾಗಂತೆ ಚಿತ್ರರಂಗದಿಂದ ದೂರವಾಗಿರಲಿಲ್ಲ. ಪತಿ ಛಾಯಾಗ್ರಹಣ ಮಾಡುತ್ತಿದ್ದ ಸಿನಿಮಾಗಳಿಗೆ ಸಹಾಯಕಿಯಾಗಿ ಕೆಲಸ ಮಾಡಿದ್ದರು.

yaare-neenu-cheluve-sangita-madhavn-nair

ಕನ್ನಡದಲ್ಲಿ ನಟಿಸಿದ್ದು 3 ಸಿನಿಮಾ

'ಯಾರೇ ನೀನು ಚಲುವೆ'ನೇ ಸಂಗೀತಾ ನಟಿಸಿದ ಮೊದಲ ಕನ್ನಡ ಸಿನಿಮಾ ಅಂದುಕೊಂಡವರೇ ಹೆಚ್ಚು. ಆದರೆ, ಕ್ರೇಜಿಸ್ಟಾರ್ ನಟಿಸಿ, ನಿರ್ದೇಶಿಸಿದ್ದ 'ಶಾಂತಿ ಕ್ರಾಂತಿ' ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದರು. ನಾಯಕಿಯಾಗಿ ಅದೇ ನಟನೊಂದಿಗೆ 'ಯಾರೇ ನೀನು ಚೆಲುವೆ' ಕಾಣಿಸಿಕೊಂಡರು. ಈ ಸಿನಿಮಾ ಸೂಪರ್ ಹಿಟ್ ಆಯ್ತು. ಬಳಿಕ 2000ದಲ್ಲಿ ಶಿವಣ್ಣ ನಟಿಸಿದ್ದ 'ಯಾರೇ ನೀ ಅಭಿಮಾನಿ' ಸಿನಿಮಾಗೆ ನಾಯಕಿಯಾದರು. ಆದರೆ, ಈ ಸಿನಿಮಾ ಗೆಲ್ಲಲಿಲ್ಲ. ಇಲ್ಲಿಂದ ಮತ್ಯಾವುದೇ ಕನ್ನಡ ಸಿನಿಮಾದಲ್ಲೂ ನಟಿಸಲಿಲ್ಲ.

'ಚಾವರ್' ಸಿನಿಮಾ ಮೂಲಕ ಕಮ್‌ಬ್ಯಾಕ್

'ಯಾರೇ ನೀನು ಚೆಲುವೆ' ನಟಿ ಸಂಗೀತಾ ಮಾಧವನ್ ನಾಯರ್ ಮಲಯಾಳಂ ಸಿನಿಮಾ ಮೂಲಕ ಎರಡನೇ ಬಾರಿ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಅದುವೇ 'ಚಾವರ್'. ಕುಂಚಾಕೋ ಬೋಬನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಸಂಗೀತಾ ನಟಿಸುತ್ತಿದ್ದಾರೆ. ಇದು ನಾಳೆ (ಸೆಪ್ಟೆಂಬರ್ 28) ರಿಲೀಸ್ ಆಗುತ್ತಿದೆ.

More from Filmibeat

English summary
V Ravichandran Movie Yaare Neenu Cheluve actress Sangita Madhavan Nair returns with Chaaver
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X