For Quick Alerts
  ALLOW NOTIFICATIONS  
  For Daily Alerts

  ಯಾರು ಆಟ ಆಡುವುದಿಲ್ಲವೋ ಅವರಿಗೆ ಬದುಕಿನ ಆಟ ಆಡಲು ಆಗಲ್ಲ: ರಾಕಿ ಬಾಯ್ ಯಶ್

  |

  ಯುವಕರಿಗೆ ಸ್ಪೂರ್ತಿ ತುಂಬುವ ಸ್ಯಾಂಡಲ್‌ವುಡ್ ನಟರಲ್ಲಿ ರಾಕಿ ಭಾಯ್ ಸದಾ ಮುಂದೆ ಇರುತ್ತಾರೆ. ಯಶ್ ಆಡುವ ಒಂದೊಂದು ಮಾತಿನಿಂದಲೂ ಯುವಕರು ಪ್ರೇರಿತರಾಗಿದ್ದಾರೆ. ಕೆಜಿಎಫ್ ನಟನ ಸಿನಿಮಾ ಬದುಕು ಎಷ್ಟು ಸ್ಪೂರ್ತಿನೋ.. ಹಾಗೇ ರಾಕಿ ಬಾಯ್ ಮಾತುಗಳು ಕೂಡ ಅಷ್ಟೇ ಸ್ಪೂರ್ತಿದಾಯಕ. ನಿನ್ನೆ( ನವೆಂಬರ್ 20) ನಡೆದ ಇಂಡಿಯನ್ ನ್ಯಾಷನಲ್ ಬಾಸ್ಕೆಟ್ ಬಾಲ್ ಲೀಗ್‌ನಲ್ಲಿ ಆಡಿದ ಮಾತುಗಳು ಕ್ರೀಡಾ ಪಟುಗಳಿಗೆ ಹೊಸ ಹುಮ್ಮಸ್ಸು ನೀಡಿದೆ.

  ಇಂಡಿಯನ್ ನ್ಯಾಷನಲ್ ಬಾಸ್ಕೆಟ್ ಬಾಲ್ ಲೀಗ್‌ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಯಶ್ ಭಾಗವಹಿಸಿದ್ದರು. ಇವರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಗಾಯಕ ವಿಜಯ್ ಪ್ರಕಾಶ್ ಕೂಡ ಭಾಗವಹಿಸಿದ್ದರು. ಈ ವೇಳೆ ಯಶ್ ಕ್ರೀಡೆ ಹಾಗೂ ಬದುಕಿಗಿರುವ ನಂಟಿನ ಬಗ್ಗೆ ಆಡಿದ ಮಾತು ಯುವಕರ ಹೃದಯ ಗೆದ್ದಿದೆ.

  ಬದುಕಿನ ಆಟ ಆಡಲು ಕ್ರೀಡೆ ಮುಖ್ಯ

  ಬದುಕಿನ ಆಟ ಆಡಲು ಕ್ರೀಡೆ ಮುಖ್ಯ

  ಬಾಸ್ಕೆಟ್ ಬಾಲ್ ಪ್ರೇಮಿಗಳಿಗಾಗಿ ಇಂಡಿಯನ್ ನ್ಯಾಷನಲ್ ಬಾಸ್ಕೆಟ್ ಬಾಲ್ ಲೀಗ್ ಪಂದ್ಯಾವಳಿಗಳು ಉದ್ಘಾಟನೆಗೊಂಡಿದೆ. ಈ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆಗ ಕ್ರೀಡೆ ಹಾಗೂ ಬದುಕಿನ ಬಗ್ಗೆ ಯಶ್ ಯುವಕರಿಗೆ ಪಾಠ ಮಾಡಿದ್ದಾರೆ. "ಯಾರು ಜೀವನದಲ್ಲಿ ಆಟ ಆಡುವುದಿಲ್ಲವೋ, ಅವರು ಮುಂದೆ ಬದುಕಿನ ಆಟ ಆಡಲು ಆಗುವುದಿಲ್ಲ. ಯಾಕಂದ್ರೆ, ಸೋಲು ಗೆಲುವುವನ್ನು ಸಮಾನವಾಗಿ ತೆಗೆದುಕೊಂಡು ಹೋಗಲು ಯಾರು ಕಲಿಯುತ್ತಾರೋ ಅವರು ಬದುಕನ್ನು ಮುಂದೆ ತೆಗೆದುಕೊಂಡು ಹೋಗಲು ಸಾಧ್ಯ. ಅದನ್ನು ಕಲಿಸುವುದು ಕ್ರೀಡೆ ಮಾತ್ರ." ಎಂದು ಯಶ್ ಹೇಳಿದ್ದಾರೆ.

  ಸೋಲು ಗೆಲುವಿನ ಮಧ್ಯೆ ಆಟ ಆಡ್ಬೇಕು

  ಸೋಲು ಗೆಲುವಿನ ಮಧ್ಯೆ ಆಟ ಆಡ್ಬೇಕು

  "ಇವತ್ತು ಸೋತಿರಬಹುದು ನಾಳೆ ಗೆಲ್ತೀವಿ. ನಾಳೆ ಗೆದ್ದಿರಬಹುದು ನಾಡಿದ್ದು ಮತ್ತೆ ಸೋಲ್ತಿವಿ. ಸೋಲು ಗೆಲುವಿನ ಮಧ್ಯೆ ಆಟ ಆಡ್ಬೇಕು. ಒಬ್ಬರನ್ನೊಬ್ಬರು ಹೇಗೆ ಪರಸ್ಪರ ಬೆಂಬಲಿಸಿ ಹೇಗೆ ಟೀಮ್ ವರ್ಕ್ ಕಲಿತಿವೋ.. ಅದನ್ನು ತುಂಬಾನೇ ಚಿಕ್ಕ ವಯಸ್ಸಿಗೆ ಕಲಿಸುವುದು ಕ್ರೀಡೆ." ಎಂದು ಯಶ್ ಹೇಳಿದ್ದಾರೆ. ಭಾರತದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ. ಕ್ರೀಡೆ ಬದುಕನ್ನು ಕಟ್ಟಿಕೊಡುತ್ತೆ ಅನ್ನುವುದನ್ನು ಮನವರಿಕೆ ಮಾಡಿಕೊಡಬೇಕು ಎಂದು ರಾಕಿ ಬಾಯ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

  ಮಕ್ಕಳಿಗೆ ಬದುಕಿನ ದಾರಿ ತೋರಿಸಬೇಕು

  ಮಕ್ಕಳಿಗೆ ಬದುಕಿನ ದಾರಿ ತೋರಿಸಬೇಕು

  ಭಾರತದಲ್ಲಿ ಮಕ್ಕಳಿಗೆ ಕ್ರೀಡೆ ಮೇಲೆ ಆಸಕ್ತಿ ಇದ್ದರೂ ಪೋಷಕರು ಪ್ರೋತ್ಸಾಹ ನೀಡುವುದಿಲ್ಲ. ಹೀಗಾಗಿ ಕೌನ್ಸಿಲಿಂಗ್ ಮಕ್ಕಳಿಗಲ್ಲ ಪೋಷಕರಿಗೆ ಬೇಕು ಅಂತ ಯಶ್ ಕಿವಿ ಮಾತು ಹೇಳಿದ್ದಾರೆ. "ಸ್ಪೋರ್ಟ್ಸ್ ಆಡಿಕೊಂಡು ಮಕ್ಕಳು ಬದುಕಬಹುದು ಅನ್ನುವ ದಾರಿ ನೀವು ತೋರಿಸಿದಾಗ, ಮಕ್ಕಳು ಆಟ ಆಡುವುದಕ್ಕೆ ರೆಡಿ ಇದ್ದಾರೆ. ನಮ್ಮ ದೇಶದಲ್ಲಿ ಆ ಒಂದು ಕೆಲಸ ಆಗಲಿ ಎಂದು ನಾನು ಬೇಡಿಕೊಳ್ಳುತ್ತೇನೆ. ಬಾಸ್ಕೆಟ್ ಬಾಲ್ ಶುರುವಾಗಲಿ, ತುಂಬಾ ವಿಷಯದಲ್ಲಿ ನಮ್ಮ ದೇಶ ಹೈಡ್ ಆಗಿದೆ. ಏನಾದರೂ ಒಂದು ಗೆದ್ದರೆ ನಮ್ಮ ದೇಶದಲ್ಲಿ ತಪ್ಪು ಅಂತಾರೆ. ಆದರೆ, ಇಲ್ಲ.. ವಿಶ್ವದೆಲ್ಲೆಡೆ ನೋಡಿದ್ರೆ, ಕ್ರೀಡೆ ಅನ್ನುವುದು ಸಂಪಾದನೆ ಮಾಡುವುದೇ ಆಗಿದೆ." ಎಂದಿದ್ದಾರೆ ರಾಕಿ ಬಾಯ್.

   ಅಪ್ಪು ಹಾಡಿಗೆ ಸಿಎಂ ಮನವಿ

  ಅಪ್ಪು ಹಾಡಿಗೆ ಸಿಎಂ ಮನವಿ

  ಇಂಡಿಯನ್ ನ್ಯಾಷನಲ್ ಬಾಸ್ಕೆಟ್ ಬಾಲ್ ಲೀಗ್‌ನಲ್ಲಿ ಯಶ್ ಜೊತೆ ಗಾಯಕ ವಿಜಯ್ ಪ್ರಕಾಶ್ ಕೂಡ ಮುಖ್ಯ ಅತಿಥಿಯಾಗಿ ಬಂದಿದ್ದರು. ಈ ವೇಳೆ ಕ್ರೀಡಾಪಟುಗಳಿಗೆ ತಾವೇ ಹಾಡಿದ ಜೈ ಹೋ ಹಾಡು ಹಾಡಿ ರಂಜಿಸಿದರು. ಆಗ ಸಿ ಎಂ ಬಸವರಾಜ್ ಬೊಮ್ಮಾಯಿ ಪುನೀತ್ ರಾಜ್‌ಕುಮಾರ್ ನಟಿಸಿದ ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ ಹಾಡನ್ನು ಹಾಡುವಂತೆ ಮನವಿ ಮಾಡಿಕೊಂಡರು. ಬಳಿಕ ವಿಜಯ್ ಪ್ರಕಾಶ್ ಅಪ್ಪು ನೆನಪಿಗಾಗಿ ಬೊಂಬೆ ಹೇಳುತೈತೆ ಹಾಡು ಹಾಡಿದರು.

  English summary
  KGF Star Yash says sports will teach you about life in Indian national basketball league's inauguration. C M basavaraj bommai, singer vijay prakash also present in the inauguration. In this occasion Vijay prakash sung bombe song from Rajakumara.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X