Year ender 2024: ಈ ವರ್ಷ ಯೂಟ್ಯೂಬ್‌ನಲ್ಲಿ ಅತೀ ಹೆಚ್ಚು ವೀವ್ಸ್ ಪಡೆದ ಟ್ರೈಲರ್‌ಗಳು ಇವೇನೆ!

ಇತ್ತೀಚೆಗೆ ಸಿನಿಮಾಗಳಷ್ಟೇ ಅಲ್ಲ. ವೆಬ್‌ ಸೀರಿಸ್‌ಗಳು ಕೂಡ ಟೀಸರ್ ಹಾಗೂ ಟ್ರೈಲರ್ ರಿಲೀಸ್ ಮಾಡುವುದಕ್ಕೆ ಮುಂದಾಗಿದೆ. ಹೀಗಾಗಿ ಸಿನಿಮಾ ಮಂದಿ ಕಾಂಪಿಟೇಷನ್‌ಗೆ ಬಿದ್ದು ಟ್ರೈಲರ್ ಕಟ್ ಮಾಡುತ್ತಿವೆ. ಕೇವಲ ಬಾಕ್ಸಾಫೀಸ್‌ನಲ್ಲಷ್ಟೇ ಅಲ್ಲ. ಟ್ರೈಲರ್ ಕೂಡ ವೀವ್ಸ್‌ನಲ್ಲಿ ದಾಖಲೆ ಬರೆಯಬೇಕು ಅಂತ ಹಠ ಬೀಳುತ್ತಾರೆ. ಸಿನಿಮಾ ಬಿಡುಗಡೆಯಾದ್ಮೇಲೆ ಬಾಕ್ಸಾಫೀಸ್ ಲೆಕ್ಕಾಚಾರ ಆಗಿದ್ದರೆ, ಅದಕ್ಕೂ ಮುನ್ನ ಟ್ರೈಲರ್‌, ಟೀಸರ್ ಮೂಲಕ ದಾಖಲೆ ಬರೆಯುವುದಕ್ಕೆ ನಿಂತಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾಗಳು ಸದ್ದು ಮಾಡುವುದಕ್ಕೆ ಶುರು ಮಾಡಿದಾಗ ಟ್ರೈಲರ್‌ಗಳ ದಾಖಲೆಗಳ ಮೇಲೆ ಕಣ್ಣು ಇಡಲಾಯ್ತು. ಸಿನಿಮಾ ತಂಡಗಳು ಕೂಡ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. 'ಕೆಜಿಎಫ್' ಸಿನಿಮಾ ರಿಲೀಸ್ ವೇಳೆ ಈ ಟ್ರೆಂಡ್ ಇನ್ನೂ ತಾರಕ್ಕೇರಿತ್ತು. ಅಲ್ಲಿಂದ ಇನ್ನೂ ಈ ಟ್ರೆಂಡ್ ಮುಂದುವರೆದಿದೆ.

Year ender 2024 Heeramandi fighter to Kalki 2898AD most viewed hindi trailers on youtube

2024 ಕೂಡ ಬಾಲಿವುಡ್ ಮಂದಿಗೆ ಲಾಭ ತಂದು ಕೊಟ್ಟ ವರ್ಷ. ಈ ವರ್ಷ ರಿಲೀಸ್ ಆದ ಸಿನಿಮಾ ಹಾಗೂ ಟೀಸರ್‌ಗಳು ಬೇಜಾನ್ ಸದ್ದು ಮಾಡಿವೆ. ಅದರಲ್ಲೂ ಯೂಟ್ಯೂನ್ ದಾಖಲೆ ಲೆಕ್ಕದಲ್ಲಿ ವೀವ್ಸ್ ಅನ್ನು ಪಡೆದುಕೊಂಡಿವೆ. ಈ ವರ್ಷ 2024ರಲ್ಲಿ ಯೂಟ್ಯೂಬ್‌ಬಲ್ಲಿ ದಾಖಲೆ ವೀವ್ಸ್ ಪಡೆದ ಹಿಂದಿ ಸಿನಿಮಾ ಹಾಗೂ ವೆಬ್ ಸೀರಿಸ್ ಟ್ರೈಲರ್‌ಗಳನ್ನ ವೀವ್ಸ್ ಲೆಕ್ಕಚಾರದ ಪಟ್ಟಿ ಇಲ್ಲಿದೆ.

ಟ್ರೇಲರ್ ವೀವ್ಸ್ ಮೇಲ್ಯಾಕೆ ಕಣ್ಣು

ಇದು ಸೋಶಿಯಲ್ ಮೀಡಿಯಾ ಜಮಾನ. ಈ ಜಮಾನದಲ್ಲಿ ಸಿನಿಮಾ ಮಂದಿ ಇದನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಯೂಟ್ಯೂಬ್, ಫೇಸ್‌ಬುಕ್ ಅಂತ ಅವರ ಸಿಕ್ಕ ವೇದಿಕೆಗಳಲ್ಲೆಲ್ಲ ಟ್ರೈಲರ್ ಬಿಡುತ್ತಿದ್ದಾರೆ. ಇದರಿಂದ ಪ್ರೇಕ್ಷಕರಲ್ಲಿ ಆ ಸಿನಿಮಾ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಬಹುದು ಅನ್ನೋದು ನಂಬಿಕೆ. ಟ್ರೈಲರ್‌ಗಳು ಹಿಟ್ ಆದರೆ, ಪ್ರೇಕ್ಷಕರನ್ನು ಥಿಯೇಟರ್‌ಗೆ ಎಳೆದುಕೊಂಡು ಬರಬಹುದು. ಈ ವರ್ಷ ಕೂಡ ಸಿನಿಮಾ ಹಾಗೂ ವೆಬ್ ಸೀರಿಸ್ ಟ್ರೇಲರ್‌ಗಳು ಕೋಟಿ ಲೆಕ್ಕದಲ್ಲಿ ವೀವ್ಸ್ ಪಡೆದುಕೊಂಡಿವೆ.

ಟಾಪ್‌ 10 to 6 ಟ್ರೈಲರ್‌ಗಳು

ಹಿಂದಿ ಭಾಷೆಯ ವೆಬ್ ಸೀರಿಸ್‌ಗಳು ಸಿನಿಮಾಗಳನ್ನೂ ಮೀರಿಸಿವೆ. ಅದರಲ್ಲೂ ಅತೀ ಹೆಚ್ಚು ವೀವ್ಸ್ ಪಡೆದ ಮೊದಲ 10 ಟ್ರೈಲರ್‌ಗಳು ಸಿನಿಮಾ ಕ್ರೇಜ್ ಹುಟ್ಟಾಕುವಲ್ಲಿ ಯಶಸ್ವಿಯಾಗಿತ್ತು. ಕೋಟಿ ಕೋಟಿ ಲೆಕ್ಕದಲ್ಲಿ ವೀವ್ಸ್ ಅನ್ನು ಪಡೆದುಕೊಂಡಿತ್ತು. ಅಂತಹ ಟಾಪ್ 10 ಟ್ರೈಲರ್‌ಗಳ ಪಟ್ಟಿ ಇಲ್ಲಿದೆ. ಅದರಲ್ಲಿ ಟಾಪ್ 10 ಸ್ಥಾನದಿಂದ ಟಾಪ್ 5 ಸ್ಥಾನದವರೆಗಿನ ಟ್ರೈಲರ್‌ಗಳು ಹಾಗೂ ಅವುಗಳು ಪಡೆದ ವೀವ್ಸ್ ಇಲ್ಲಿದೆ.

10. ಕಲ್ಕಿ 2898 ಎಡಿ 331 ಮಿಲಿಯನ್
9. ಚಂದು ಚಾಂಪಿಯನ್ 411 ಮಿಲಿಯನ್
8. ಮೈದಾನ್ 424 ಮಿಲಿಯನ್
7. ಮರ್ಡರ್ ಮುಬಾರಕ್ 424.45 ಮಿಲಿಯನ್
6 ಫೈಟರ್ 513 ಮಿಲಿಯನ್

Year ender 2024 Heeramandi fighter to Kalki 2898AD most viewed hindi trailers on youtube

ಟಾಪ್ 5 to 1 ಟ್ರೈಲರ್‌ಗಳು

ಬಾಲಿವುಡ್‌ನಲ್ಲಿ ಅತಿ ಹೆಚ್ಚು ವೀವ್ಸ್ ಪಡೆದ ಟ್ರೈಲರ್‌ಗಳಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ 'ಹೀರಾಮಂಡಿ' ಟ್ರೈಲರ್ ಟಾಪ್‌ ಸ್ಥಾನದಲ್ಲಿದೆ. ಶಾಹಿದ್ ಕಪೂರ್ ಹಾಗೂ ಕೃತಿ ಸನನ್ ಸಿನಿಮಾ 'ತೇರಿ ಬಾತೋ ಮೆ ಐಸಾ ಉಜ್ಞಾ ಜಿಯಾ', 'ಇಂಡಿಯನ್ ಪೊಲೀಸ್ ಪೋರ್ಸ್ 1', 'ಬಡೆ ಮಿಯ್ಯಾ ಚೋಟೆ ಮಿಯ್ಯಾ', 'ಅಮರ್ ಸಿಂಗ್ ಚಮ್ಕೀಲ', ಟಾಪ್ 5 ಸ್ಥಾನದಲ್ಲಿದೆ.

5. ಅಮರ್ ಸಿಂಗ್ ಚಮ್ಮಿಲ 519 ಮಿಲಿಯನ್
4.ಬಡೆ ಮಿಯ್ಯಾ ಚೋಟೆ ಮಿಯ್ಯಾ 529 ಮಿಲಿಯನ್
3.ಇಂಡಿಯನ್ ಪೊಲೀಸ್ ಫೋರ್ಸ್ 1 537 ಮಿಲಿಯನ್
2.ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ 593 ಮಿಲಿಯನ್
1.ಹೀರಾಮಂಡಿ: ಡೈಮಂಡ್ ಬಜಾರ್ 759 ಮಿಲಿಯನ್

ಟ್ರೈಲರ್‌ ಸದ್ದು.. ಸಿನಿಮಾಗೆ ಸೋಲು

2024ರಲ್ಲಿ ಬಾಲಿವುಡ್ ಮಂದಿಗೆ ಸಕ್ಸಸ್ ಸಿಕ್ಕಿದೆ. ಆದರೆ, ಯೂಟ್ಯೂಬ್‌ನಲ್ಲಿ ಸದ್ದು ಮಾಡಿದ ಟ್ರೇಲರ್‌ಗಳು, ಬಾಕ್ಸಾಫೀಸ್‌ನಲ್ಲಿ ಸೋತಿವೆ. ಅದರಲ್ಲೂ ಟಾಪ್‌ 5ನಲ್ಲಿರುವ ಸಿನಿಮಾ ಹಾಗೂ ವೆಬ್‌ ಸೀರಿಸ್‌ಗಳು ಬಾಕ್ಸಾಫೀಸ್‌ನಲ್ಲಿ ಸೋತಿವೆ. ಹೀಗಾಗಿ ಟ್ರೈಲರ್‌ಗಳಿಗೆ ಸಿಗುವ ವೀವ್ಸ್ ಸಿನಿಮಾ ಮಂದಿಯನ್ನು ಗೆಲ್ಲಿಸಿಲ್ಲ. ಆದರೆ, ದಕ್ಷಿಣ ಭಾರತದ ಸಿನಿಮಾಗಳ ಕಥೆ ಬೇರೆನೇ ಇದೆ.

More from Filmibeat

English summary
Year ender 2024: Top 10 Most Viewed Hindi Trailers On YouTube;
Read more about: year ender 2024 bollywood trailer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X