Year Ender 2024: ಬುಕ್ ಮೈ ಶೋನಲ್ಲಿ ಅತೀ ಹೆಚ್ಚು ಟಿಕೆಟ್ ಸೇಲ್ ಆದ ಭಾರತದ ಸಿನಿಮಾಗಳು ಇವೇನೆ

ಈಗಂತೂ ಜನರು ಸಿನಿಮಾ ನೋಡುವ ಪರಿ ಸಂಪೂರ್ಣವಾಗಿ ಬದಲಾಗಿದೆ. ಈ ಹಿಂದೆ ಇದ್ದ ಹಾಗೆ ಥಿಯೇಟರ್‌ ಮುಂದೆ ಸಾಲುಗಟ್ಟಿ ನಿಂತು ಟಿಕೆಟ್‌ ಖರೀದಿ ಮಾಡುವ ಕಾಲ ಯಾವಾಗಲೋ ಹೊರಟು ಹೋಗಿದೆ. ಕೈಯಲ್ಲಿ ಮೊಬೈಲ್ ಬಂದ್ಮೇಲೆ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿ ಮಾಡಲು ಇಷ್ಟ ಪಡುತ್ತಾರೆ.

ಇದೊಂದು ಒಂದು ರೀತಿ ಸಿನಿಮಾ ಮಂದಿಗೂ ನಿಖರವಾದ ಲೆಕ್ಕ ಸಿಗುತ್ತಿದೆ. ತಮ್ಮ ಸಿನಿಮಾ ನೋಡುವುದಕ್ಕೆ ಎಷ್ಟು ಮಂದಿ ಚಿತ್ರಮಂದಿರಕ್ಕೆ ಬಂದಿದ್ದಾರೆ? ಎಷ್ಟು ಟಿಕೆಟ್‌ಗಳು ಸೇಲ್ ಆಗಿವೆ ಅನ್ನೋ ಅಂಕಿ ಅಂಶಗಳು ಕೈಗೆಟುಕುತ್ತಿವೆ.

ಬುಕ್ ಮೈ ಶೋ ಸದ್ಯ ಆನ್‌ಲೈನ್‌ನಲ್ಲಿ ಟಿಕೆಟ್ ಮಾಡುವ ಲಿಸ್ಟ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತದಾದ್ಯಂತ ಅತೀ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡುವ ವೇದಿಕೆಯಾಗಿದೆ. ಸಿನಿಮಾ ಮಂದಿಗೆ ಬುಕ್‌ ಮೈ ಶೋ ಅಂಕಿ ಅಂಶಗಳನ್ನು ದಾಖಲೆಗಳಾಗಿ ಪರಿಗಣಿಸುತ್ತಿದೆ. ಅಡ್ವಾನ್ಸ್ ಬುಕಿಂಗ್‌ನಿಂದ ಹಿಡಿದ ಪೇಯ್ಡ್ ಪ್ರೀಮಿಯರ್‌ವರೆಗೂ ಸಿನಿಮಾ ಮಂದಿ ಬುಕ್‌ ಮೈ ಶೋ ಮೇಲೆ ಡಿಪೆಂಡ್ ಆಗಿದ್ದಾರೆ.

Year Ender 2024 Here is the top-10 ticket sales of Indian films of 2024 on Book My Show

ಹೀಗಾಗಿ ಕಳೆದ ಕೆಲವು ವರ್ಷಳಿಂದ ಬುಕ್ ಮೈ ಶೋನಲ್ಲಿ ಯಾವ ಸಿನಿಮಾಗಳು ಎಷ್ಟೆಷ್ಟು ಟಿಕೆಟ್‌ಗಳನ್ನು ಮಾರಾಟ ಮಾಡಿದೆ ಅನ್ನೋ ಪ್ರತಿಷ್ಠೆಯಾಗಿದೆ. ಸೂಪರ್‌ಸ್ಟಾರ್‌ ನಟಿಸಿದ ಸಿನಿಮಾಗಳ ತಂಡ ಇಂತಹದ್ದೊಂದು ದಾಖಲೆಗಳನ್ನು ಬಿಡುಗಡೆ ಮಾಡುತ್ತೆ. ಈ ವರ್ಷ (2024) ಯಾವ ಸಿನಿಮಾ ಇಲ್ಲಿವರೆಗೂ ಅತೀ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ ಅನ್ನೋ ಲಿಸ್ಟ್ ಕೂಡ ಈಗ ಹೊರಬಿದ್ದಿದೆ.

ಆನ್‌ಲೈನ್ ಬುಕಿಂಗ್‌ಗೆ ರೆಸ್ಪಾನ್ಸ್ ಹೇಗಿದೆ?

ಈಗ ಜನರು ಥಿಯೇಟರ್ ಮುಂದೆ ಟಿಕೆಟ್‌ಗಳನ್ನು ಖರೀದಿ ಮಾಡುಲು ಕ್ಯೂ ನಿಲ್ಲುವುದಕ್ಕೆ ಸಿದ್ಧರಿಲ್ಲ. ಹೀಗಾಗಿ ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿ ಮಾಡುವವರ ಸಂಖ್ಯೆ ಪ್ರತಿ ಏರಿಕೆಯಾಗುತ್ತಿದೆ. ಕೆಲವು ಚಿತ್ರಮಂದಿರಗಳಲ್ಲಿ ಶೇ.90ರಷ್ಟು ಮಂದಿ ಆನ್‌ಲೈನ್ ಬುಕಿಂಗ್ ಮೂಲಕವೇ ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಒಂದು ಚಿತ್ರಮಂದಿರದ ಸೀಟಿಂಗ್ ಕ್ಯಾಪಾಸಿಟಿ 1000 ಇದ್ದರೆ, ಸುಮಾರು 900 ಟಿಕೆಟ್‌ಗಳು ಆನ್‌ಲೈನ್‌ನಲ್ಲಿಯೇ ಸೇಲ್ ಆಗುತ್ತವೆ.

Year Ender 2024 Here is the top-10 ticket sales of Indian films of 2024 on Book My Show

'ಪುಷ್ಪ 2'ದ ಅತೀ ಹೆಚ್ಚು ಟಿಕೆಟ್‌ಗಳು ಸೇಲ್

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಕಾಂಬಿನೇಷನ್ ಸಿನಿಮಾ 'ಪುಷ್ಪ 2' 2024ರಲ್ಲಿ ಇಲ್ಲಿವರೆಗೂ ಅತೀ ಹೆಚ್ಚು ಟಿಕೆಟ್‌ಗಳನ್ನು ಸೇಲ್ ಮಾಡಿದೆ. ಬುಕ್‌ ಮೈ ಶೋ ದಾಖಲೆಗಳ ಪ್ರಕಾರ 'ಪುಷ್ಪ 2' ಸಿನಿಮಾ ಡಿಸೆಂಬರ್ 14ರವರೆಗೂ ಸುಮಾರು 14 ಮಿಲಿಯನ್ ಟಿಕೆಟ್‌ಗಳನ್ನು ಸೇಲ್ ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತೀ ಹೆಚ್ಚು ಟಿಕೆಟ್ ಮಾಡಿದ ಸಿನಿಮಾ ಆಗಬಹುದೆಂದು ಲೆಕ್ಕಾಚಾರ ಹಾಕಲಾಗುತ್ತಿದೆ.

ಟಾಪ್ 10 ಸಿನಿಮಾಗಳು ಯಾವುವು?

2024ರಲ್ಲಿ ಬುಕ್ ಮೈ ಶೋನಲ್ಲಿ ಅತೀ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದ ಪಟ್ಟಿಯಲ್ಲಿ ದಕ್ಷಿಣ ಭಾರತದ ಸಿನಿಮಾಗಳೇ ಹೆಚ್ಚಿವೆ. ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳು ಈ ಪಟ್ಟಿಯಲ್ಲಿ ಇದ್ದರೆ, ಬಾಲಿವುಡ್‌ನಿಂದ ಮೂರು ಸಿನಿಮಾಗಳಿವೆ. 2024ರಲ್ಲಿ ಬುಕ್‌ ಮೈ ಶೋನಲ್ಲಿ ಅತೀ ಹೆಚ್ಚು ಟಿಕೆಟ್ ಸೇಲ್ ಆದ ಟಾಪ್‌ 10 ಸಿನಿಮಾಗಳ ಪಟ್ಟಿ ಇಲ್ಲಿದೆ.

'ಪುಷ್ಪ 2' 14 ಮಿಲಿಯನ್ (ಡಿ.14)
ಕಲ್ಕಿ 2898AD 13.14 ಮಿಲಿಯನ್
ಸ್ಕ್ರೀ 2 11.40 ಮಿಲಿಯನ್
ಅಮರನ್ 4.89 ಮಿಲಿಯನ್
ದೇವರ 4.80 ಮಿಲಿಯನ್
ಹನುಮಾನ್ 4.72 ಮಿಲಿಯನ್
ಭೂಲ್ ಭುಲಯ್ಯ 3 4.67 ಮಿಲಿಯನ್
ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ 4.51 ಮಿಲಿಯನ್
ಮಂಜುಮ್ಮೆಲ್ ಬಾಯ್ಸ್ 4.30 ಮಿಲಿಯನ್
ಸಿಂಗಂ ಅಗೇನ್ 3.77 ಮಿಲಿಯನ್

ಅತೀ ಹೆಚ್ಚು ಟಿಕೆಟ್ ಸೇಲ್ ಆದ ಸಿನಿಮಾಗಳು

ಇದೂವರೆ ಬುಕ್ ಮೈ ಶೋನಲ್ಲಿ ಅತೀ ಹೆಚ್ಚು ಟಿಕೆಟ್‌ಗಳನ್ನು ಸೇಲ್ ಮಾಡಿ ದಾಖಲೆ ಬರೆದ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ 'ಕೆಜಿಎಫ್ 2' ಇದ್ದು 17.7 ಮಿಲಿಯನ್ ಟಿಕೆಟ್ಸ್ ಸೇಲ್ ಆಗಿತ್ತು. ಎರಡನೇ ಸ್ಥಾನದಲ್ಲಿ 'ಬಾಹುಬಲಿ 2' 16 ಮಿಲಿಯನ್ ಟಿಕೆಟ್ ಸೇಲ್ ಆಗಿತ್ತು. ಈಗ ಮೂರನೇ ಸ್ಥಾನದಲ್ಲಿ 'ಪುಷ್ಪ 2' ಇದ್ದು 14 ಮಿಲಿಯನ್ ಟಿಕೆಟ್‌ಗಳು ಇದೂವರೆಗೂ ಸೇಲ್ ಆಗಿದೆ.

More from Filmibeat

English summary
Year Ender 2024: Here is the top-10 ticket sales of Indian films of 2024 on Book My Show;
Read more about: year ender 2024 movies tickets
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X