Year ender 2024:ಈ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ ವಿಡಿಯೋಗಳು ಇವೇನೆ!
2024 ಸೋಶಿಯಲ್ ಮೀಡಿಯಾ ಜಮಾನ. ಇಲ್ಲಿ ಟ್ಯಾಲೆಂಟ್ ಇದ್ದವರು ಗೆದ್ದು ಬೀಗಿದ್ದಾರೆ. ಸಾಮಾಜಿಕ ಜಾಲತಾಣವನ್ನೇ ಬಂಡವಾಳ ಮಾಡಿಕೊಂಡು ಹವಾ ಎಬ್ಬಿಸಿದ್ದರು. ಪ್ರತಿ ವರ್ಷದಂತೆ ಈ ವರ್ಷ ಕೂಡ ಕೆಲವು ಪ್ರತಿಭೆಗಳು ಫೇಮಸ್ ಆಗಿವೆ. ರೀಲ್ಸ್ ಮಾಡುತ್ತಾ ಕರ್ನಾಟಕದಾದ್ಯಂತ ಸಿಕ್ಕಾಪಟ್ಟೆ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದರು. ಒಂದಷ್ಟು ದಿನ ಅಂತೂ ಇವರದ್ದೇ ಹವಾ.
ಇಂದಿನ ಡಿಜಿಟಲ್ ಯುಗದಲ್ಲಿ ರೀಲ್ಸ್ ಮಾಡೋದು, ವಿಡಿಯೋ ವೈರಲ್ ಮಾಡೋದು ಟೈಂ ಪಾಸ್ ಅಲ್ಲ. ಇದರಿಂದ ಯುವಕರು ಹಣವನ್ನು ಸಂಪಾದನೆ ಕೂಡ ಮಾಡುತ್ತಿದ್ದಾರೆ. ಇದೇ ವೈರಲ್ ವಿಡಿಯೋಗಳು ಅದ್ಯಾವ ಮಟ್ಟಿಗೆ ಫೇಮಸ್ ಆಗಿತ್ತು ಅಂದರೆ, ಈ ವಿಡಿಯೋದಿಂದ ಇನ್ನಷ್ಟು ಕಂಟೆಂಟ್ ಕ್ರಿಯೇಟ್ ಆದವು. ಈ ವರ್ಷ ವೈರಲ್ ಆದ ವಿಡಿಯೋಗಳು ಯಾವುವು ಅಂತ ನೋಡುವುದಾದರೆ,

ರಾಹುಲ್ಲಾ-ಬೆಳ್ಳುಳ್ಳಿ ಕಬಾಬ್
2024ರಲ್ಲಿ ವೈರಲ್ ವಿಡಿಯೋಗಳಿಗೇನು ಕಮ್ಮಿಯಿಲ್ಲ. ಅದರಲ್ಲಿ ಪ್ರಮುಖವಾಗಿ ಗಮನ ಸೆಳೆದಿದ್ದು 'ರಾಹುಲ್ಲಾ ಅಲ್ಲಾಡಸಪ್ಪ' ಹಾಗೂ ಬೆಳ್ಳುಳ್ಳಿ ಕಬಾಬ್. ಮಾಜಿ ಮೇಕಪ್‌ಮ್ಯಾನ್ ಹಾಗೂ ಹೋಟೆಲ್ ಉದ್ಯಮಿ ಚಂದ್ರು ಯೂಟ್ಯೂಬ್‌ನಲ್ಲಿ ಅಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ವೇಳೆ ಚಂದ್ರು ಅವರ ಮಾತಿನ ಶೈಲಿಗೆ ಮರುಳಾಗಿದ್ದರು. ಸಹಾಯಕನಿಗೆ "ರಾಹುಲ್ಲಾ ಅಲ್ಲಾಡಿಸಪ್ಪ" ಅಂತ ಹೇಳಿದ ಡೈಲಾಗ್ ಫೇಮಸ್ ಆಗಿತ್ತು. ಹಾಗೇ 'ಬೆಳ್ಳುಳ್ಳಿ ಕಬಾಬ್' ನಾನ್ ವೆಬ್ ಪ್ರಿಯರ ಬಾಯಲ್ಲಿ ಫೇಮಸ್ ಆಗಿತ್ತು.

ಓಡ್ರೋ ಓಡ್ರೋ ಇದು ಸರ್ಜಾ ಅಡ್ಡಾ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮನೆಯ ಮುಂದೆ ಅಭಿಮಾನಿಯೊಬ್ಬರು "ಓಡ್ರೋ ಓಡ್ರೋ ಇದು ಸರ್ಜಾ ಅಡ್ಡಾ.." ಎಂದು ಹಾಡಿದ ವಿಡಿಯೋ ವೈರಲ್ ಆಗಿತ್ತು. ಈ ಹಾಡನ್ನು ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಇನ್ನು ಹಲವು ವಿಡಿಯೋಗಳು ಹುಟ್ಟಿಕೊಂಡವು. ಸ್ವತ: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾನ್ಸ್ ಹಾಡಿಗೆ ಫಿದಾ ಆಗಿದ್ದರು.

ಶೆಡ್ಡಿಗೆ ಹೋಗೋಣ ಬಾ
ರೇಣುಕಾಸ್ವಾಮಿ ಹತ್ಯೆ ಪ್ರಕರಣ ಚಿತ್ರರಂಗವನ್ನು ಬೆಚ್ಚಿಬೀಳಿಸಿತ್ತು. ದರ್ಶನ್ ಬಂಧನದ ಬಳಿಕ ರೇಣುಕಾಸ್ವಾಮಿ ಕೊಲೆಯಾಗಿದ್ದ ಪಟ್ಟಣಗೆರೆ ಶೆಡ್ ಕೂಡ ಅಷ್ಟೇ ಫೇಮಸ್ ಆಗಿತ್ತು. ಪಟ್ಟಣಗೆರೆ ಶೆಟ್ಟಿ ಅದ್ಯಾವಾಗ ವೈರಲ್ ಆಯ್ತೋ. ಅಲ್ಲಿಂದ "ಶೆಡ್ಡಿಗೆ ಹೋಗೋಣ ಬಾ." ಅನ್ನೋದ ಪದ ಕೂಡ ಎಲ್ಲರ ಬಾಯಲ್ಲೂ ಕಾಮಿಡಿ ಪೀಸ್ ಆಗಿತ್ತು. ತಮಾಷೆಯ ಪದವಾಗಿಬಿಟ್ಟಿತ್ತು.

ಕರಿಮಣಿ ಮಾಲೀಕ ನೀನಲ್ಲ
ಉತ್ತರ ಕರ್ನಾಟಕದ ಪ್ರತಿಭೆ ಉಪೇಂದ್ರ ಸಿನಿಮಾದ "ಏನಿಲ್ಲ..ಏನಿಲ್ಲ.. ಕರಿಮಣಿ ಮಾಲೀಕ ನೀನಲ್ಲ" ಅನ್ನೋ ಹಾಡನ್ನಿಟ್ಟುಕೊಂಡು ಟ್ರೋಲ್ ಮಾಡಿದ್ದರು. ಸಿನಿಮಾ ರಿಲೀಸ್ ಆಗಿದೆ 25 ವರ್ಷಗಳ ಬಳಿಕ 'ಉಪೇಂದ್ರ' ಸಿನಿಮಾದ ಈ ಹಾಡು ಮತ್ತೆ ವೈರಲ್ ಆಗಿತ್ತು. ರೀಲ್ಸ್ ಅನ್ನು ಇಟ್ಟುಕೊಂಡು ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಕನಕ ಎಂಬುವವರು ಜನಪ್ರಿಯಾಗಿದ್ದಾರೆ.

ಜಾಲಿ.. ಜಾಲಿ ಎಲ್ಲಾ ಜಾಲಿ
ಇದು ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿದ 'ಭೀಮ' ಸಿನಿಮಾದ ಫೇಮಸ್ ಡೈಲಾಗ್. ಸಿನಿಮಾ ರಿಲೀಸ್ ಆದ ಬಳಿಕ "ಜಾಲಿ.. ಜಾಲಿ ಎಲ್ಲಾ ಜಾಲಿ" ಅನ್ನುವ ಡೈಲಾಗ್ ವೈರಲ್ ಆಯ್ತು. ಅದೇ ಡೈಲಾಗ್ ಹೇಳಿದ ವ್ಯಕ್ತಿ ಕೂಡ ಅಷ್ಟೇ ಫೇಮಸ್ ಆಗಿದ್ದಾರೆ. ಈಗಂತೂ ಜನರ ಬಾಯಲ್ಲೂ ಜಾಲಿ ಜಾಲಿ ಡೈಲಾಗ್ ಹರಿದಾಡುತ್ತಿದೆ. ಇಂತಹ ಇನ್ನೂ ಹಲವು ವಿಡಿಯೋಗಳು, ಡೈಲಾಗ್‌ಗಳು, ರೀಲ್ಸ್‌ಗಳು 2024ರಲ್ಲಿ ಸದ್ದು ಮಾಡಿವೆ.


Click it and Unblock the Notifications











