Year ender 2024: ವಿಶ್ವದಲ್ಲೇ ಅತೀ ಹೆಚ್ಚು ಫಾಲೋವರ್ಸ್ ಗಳಿಕೆ ಕಂಡ ಸೋಶಿಯಲ್ ಮೀಡಿಯ ಕುಬೇರರು ಇವರೇ!
ಸೋಶಿಯಲ್ ಮೀಡಿಯಾ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರೀಲ್ಸ್, ವಿಡಿಯೋ ಹಾಗೂ ಕ್ರಿಯೇಟಿವ್ ಕಂಟೆಂಟ್‌ಗಳಿಂದ ಫಾಲೋವರ್ಸ್‌ಗಳ ಸಂಖ್ಯೆನೂ ಹೆಚ್ಚಾಗುತ್ತಿದೆ. ಆರಂಭದಲ್ಲಿ ಈ ಕ್ರೇಜ್ ರೀಲ್ಸ್‌ಗಷ್ಟೇ ಸೀಮಿತವಾಗಿತ್ತು. ಆದ್ರೀಗ ಇದೊಂದು ಉದ್ಯಮವಾಗಿ ಬೆಳೆದು ನಿಂತಿದೆ. ವಿಶ್ವದಲ್ಲಿರುವ ಅದೆಷ್ಟೋ ಮಂದಿ ಸೋಶಿಯಲ್ ಮೀಡಿಯಾದಿಂದಲೇ ಕುಬೇರರಾಗಿದ್ದಾರೆ.
ವಿಶ್ವದಲ್ಲಿ ಸೋಶಿಯಲ್ ಮೀಡಿಯಾ ನಂಬಿಕೊಂಡೇ ಜಗತ್ತಿನ ಶ್ರೀಮಂತರ ಪಟ್ಟಿ ಸೇರಿದ್ದಾರೆ. 2024ರಲ್ಲಿ ಕಳೆದ ಬಾರಿಗಿಂತ ಹೆಚ್ಚಾಗಿ ಜನರು ಸೋಶಿಯಲ್ ಮೀಡಿಯಾವನ್ನು ಬಳಸಿದ್ದಾರೆ. ಇದರಿಂದ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ಸ್ ನಿರೀಕ್ಷೆಗೂ ಮೀರಿದ ಹಣವನ್ನು ಗಳಿಸಿದ್ದಾರೆ. ವಿಶ್ವದ ಮೂಲೆ ಮೂಲೆಯಲ್ಲಿ ಇರುವ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ಸ್ ಹಲವು ಪ್ಲಾಪ್‌ಫಾರ್ಮ್‌ಗಳಿಂದ ಹಣವನ್ನು ಗಳಿಸುತ್ತಾರೆ.

ಇವುಗಳಲ್ಲಿ ತುಂಬಾ ಜನಪ್ರಿಯ ಅಂತ ಅನಿಸಿಕೊಂಡಿರುವುದು ಯುಟ್ಯೂಬ್, ಟಿಕ್ ಟಾಕ್ ಮತ್ತು ಇನ್‌ಸ್ಟಾಗ್ರಾಂ. ಇದರೊಂದಿಗೆ ಇನ್ನೂ ಹಲವು ಪ್ಲಾಟ್‌ಫಾರ್ಮ್‌ಗಳು ಕ್ರಿಯೇಟರ್‌ಗಳಿವೆ ವೇದಿಕೆಯನ್ನು ಮಾಡಿಕೊಡುತ್ತಿವೆ. 2024ರಲ್ಲಿ ಕೆಲವು ಸೋಶಿಯಲ್ ಮೀಡಿಯಾ ಪರ್ಸನಾಲಿಟಿಗಳ ಸಂಪಾದನೆ ಕೇಳಿದರೆ ಅಚ್ಚರಿ ಪಡುತ್ತೀರ. ವಿಶ್ವದಲ್ಲಿ ಸಾಮಾಜಿಕ ಜಾಲತಾಣದಿಂದಲೇ ಅತೀ ಹೆಚ್ಚು ಗಳಿಕೆ ಕಂಡ ಕಂಟೆಂಟ್ ಕ್ರಿಯೇಟರ್ಸ್ ಹಾಗೂ ಇನ್ಫ್ಯೂಯೆನ್ಸರ್ಸ್‌ಗಳನ್ನು ಪೋರ್ಬ್ಸ್ ಪಟ್ಟಿ ಮಾಡಿದೆ. ಅದರ ಲಿಸ್ಟ್ ಇಲ್ಲಿದೆ.
ಮಿಸ್ಟರ್ ಬೀಸ್ಸ್ (Mr.Beast)
ವಿಶ್ವದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿರುವ ಕಂಟೆಂಟ್ ಕ್ರಿಯೇಟರ್ ಮಿಸ್ಟರ್ ಬೀಸ್ಟ್. ಅಂದ್ಹಾಗೆ ಈತನ ನಿಜವಾದ ಹೆಸರು ಜಿಮ್ಮಿ ಡೋನಾಲ್ಡ್‌ಸನ್. ಸದ್ಯ ಎಲ್ಲಾ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳನ್ನೂ ಸೇರಿಸಿದರೆ 500 ಮಿಲಿಯನ್‌ಗೂ ಅಧಿಕ ಮಂದಿ ಇತನನ್ನು ಫಾಲೋ ಮಾಡುತ್ತಿದ್ದಾರೆ. ಯೂಟ್ಯೂನ್‌ನಲ್ಲಿ 320 ಮಿಲಿಯನ್ ಚಂದಾದಾರು ಇದ್ದಾರೆ. ತನ್ನ ಚಾನೆಲ್‌ನಲ್ಲಿ ಡೇಂಜರಸ್ ಸ್ಟಂಟ್‌ಗಳ ಮೇಲೆ ವಿಡಿಯೋ ಮಾಡಿ ಹಾಕುತ್ತಾನೆ. ಈತನ ಸಂಪಾದನೆ ಒಟ್ಟು 85 ಮಿಲಿಯನ್ ಡಾಲರ್ ಎಂದು ಫೋರ್ಬ್ಸ್ ಹೇಳಿದೆ.

ಧರ್ ಮನ್ (Dhar Mann)
ಭಾರತೀಯ ಮೂಲದ ಅಮೆರಿಕದ ನಿವಾಸಿ ಧರ್ ಮನ್ ಅಥವಾ ಧರ್ಮಿಂದರ್ ಮನ್ ಎರಡನೇ ಸ್ಥಾನದಲ್ಲಿದ್ದಾರೆ. ಇವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸುಮಾರು 120 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಕೇವಲ ಯೂಟ್ಯೂಬ್‌ನಿಂದಲೇ 23 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ. ಬಹುತೇಕ ಶಾರ್ಟ್ ಫಿಲ್ಸ್‌ಗಳನ್ನು ಇವರ ಯೂಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡುತ್ತೆ. ಫೋರ್ಬ್ಸ್ ಪ್ರಕಾರ ಕಳೆದ ವರ್ಷ ಧರ್ ಮನ್ 45 ಮಿಲಿಯನ್ ಡಾಲರ್ ಹಣವನ್ನು ಗೂಗಲ್ ಆಡ್‌ಸೆನ್ಸ್‌ನಿಂದ ಗಳಿಸಿದ್ದಾರೆ.
ಮ್ಯಾಟ್ ರೈಫ್ (Matt Rife)
ಫೋರ್ಬ್ಸ್ ಪ್ರಕಾರ ಕಾಮೆಡಿಯನ್ ಮ್ಯಾಟ್ ರೈಫ್ ಮೂರನೇ ಸ್ಥಾನದಲ್ಲಿ ಇದ್ದಾರೆ. ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಜನಪ್ರಿಯರಾಗಿರುವ ಇವರಿಗೆ 30 ಮಿಲಿಯನ್‌ಗೂ ಅಧಿಕ ಮಂದಿ ಫಾಲೋವರ್ಸ್ ಇದ್ದಾರೆ. ಅಷ್ಟೇ ಅಲ್ಲದೆ ನೆಟ್‌ಫ್ಲಿಕ್ಸ್‌ನಲ್ಲಿ ಶೋಗಳನ್ನು ನೀಡುತ್ತಿದ್ದಾರೆ. ಹಾಗೇ ವಿಶ್ವದ ಮೂಲೆ ಮೂಲೆಯಲ್ಲಿ ಮ್ಯಾಟ್ ರೈಫ್ ಶೋಗಳನ್ನು ನೀಡುತ್ತಾರೆ. ಇದರಿಂದ ಸುಮಾರು 50 ಮಿಲಿಯನ್ ಡಾಲರ್ ಸಂಪಾದನೆ ಮಾಡಿದ್ದಾರೆ.
ಚಾರ್ಲಿ ಡಿ'ಅಮೆಲಿಯೊ (Charli D'Amelio)
ತನ್ನ ಡ್ಯಾನ್ಸ್ ವಿಡಿಯೋಗಳಿಂದಲೇ ಫಾಲೋವರ್ಸ್ ಅನ್ನು ಹೊಂದಿರುವವರು ಚಾರ್ಲಿ ಡಿ'ಅಮೆಲಿಯೊ. ತನ್ನ 18ನೇ ವಯಸ್ಸಿನಲ್ಲೇ ಟಿಕ್ ಟಾಕ್‌ನಲ್ಲಿ ಫೇಮಸ್ ಆಗಿದ್ದ ಚಾರ್ಲಿ ಡಿ'ಅಮೆಲಿಯೊ ಇಂದಿಗೂ ಅದೇ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ. ಸುಮಾರು 213 ಫಾಲೋವರ್ಸ್ ಹೊಂದಿರುವ ಈಕೆ 23.50 ಮಿಲಿಯನ್ ಡಾಲರ್ ಸಂಪಾದನೆ ಮಾಡುತ್ತಾರೆ. ಇಷ್ಟೇ ಅಲ್ಲ ನಾಲ್ಕು ಉದ್ಯಮಗಳನ್ನು ಕೂಡ ನಡೆಸುತ್ತಿದ್ದಾರೆ.
ಸ್ಟೋಕ್ಸ್ ಟ್ವಿನ್ಸ್ (Stokes Twins)
ಅತೀ ವೇಗವಾಗಿ ಬೆಳವಣಿಗೆಯಾಗುತ್ತಿರುವ ಯೂಟ್ಯೂಬ್ ಚಾನೆಲ್‌ಗಳಲ್ಲಿ ಸ್ಟೋಕ್ಸ್ ಟ್ವಿನ್ಸ್ ಕೂಡ ಒಂದು. ಚಾಲೆಂಜ್, ಹೈಡ್ ಅಂಡ್ ಸೀಕ್ ಅಂತಜ ವಿಡಿಯೋಗಳು ಸಖತ್ ಸದ್ದು ಮಾಡುತ್ತಿವೆ. ಇವರ ಬಳಿ ಯೂಟ್ಯೂಬ್, ಟಿಕ್‌ಟಾಕ್, ಇನ್‌ಸ್ಟಾಗ್ರಾಂನಿಂದ 113.7 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಹೆಚ್ಚು ಕಡಿಮೆ 40 ಮಿಲಿಯನ್ ವೀವ್ಸ್ ಮಾಡುತ್ತಿದ್ದಾರೆ. ಈ ಚಾನೆಲ್‌ಗಳಿಂದ 20 ಮಿಲಿಯನ್ ಡಾಲರ್ ಸಂಪಾದಿಸುತ್ತಿದ್ದಾರೆ.


Click it and Unblock the Notifications











