ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾದಲ್ಲಿ ನೆಗೆಟಿವ್ ವಿಮರ್ಶೆ; ಇದು ಆನ್‌ಲೈನ್ ಯುದ್ಧವೇ?

ಯಾವುದೇ ಚಿತ್ರರಂಗವಿದ್ದರೂ ವಿಮರ್ಶೆ ಅಂದರೆ ಬೆಚ್ಚಿ ಬೀಳುತ್ತಾರೆ. ನ್ಯೂಸ್‌ಪೇಪರ್, ನ್ಯೂಸ್ ಚಾನೆಲ್, ವೆಬ್‌ಸೈಟ್‌ಗಳಲ್ಲಿ ಮೊದಲ ದಿನದಿಂದಲೇ ವಿಮರ್ಶೆ ಮಾಡಲಾಗುತ್ತೆ. ಸಿನಿಮಾ ನೋಡಿ ಪ್ಲಸ್ ಏನು? ಮೈನಸ್ ಏನು? ಅನ್ನೋದನ್ನು ಚರ್ಚೆ ಮಾಡಲಾಗುತ್ತೆ. ಆದರೆ, ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಂನಂತಹ ಸೋಶಿಯಲ್ ಮೀಡಿಯಾ ವೇದಿಕೆಗಳು ಜನಪ್ರಿಯವಾಗುತ್ತಿದ್ದಂತೆ ಯಾರು ಬೇಕಾದರೂ ವಿಮರ್ಶೆ ಮಾಡಬಹುದು ಎಂಬಂತಾಗಿದೆ.

ಇದು ಸಿನಿಮಾ ಮಂದಿಯನ್ನು ಬಹು ದಿನಗಳಿಂದ ಕಾಡುತ್ತಿರುವ ಪ್ರಶ್ನೆ. ಕನ್ನಡ ಚಿತ್ರರಂಗ ಸೇರಿದಂತೆ ಭಾರತದ ಪ್ರಮುಖ ಚಿತ್ರರಂಗ ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಂನಂತಹ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ವಿಮರ್ಶೆ ಮಾಡುವುದನ್ನು ನಿಲ್ಲಿಸಬೇಕು ಎಂಬ ಧ್ವನಿ ಕೇಳಿ ಬರುತ್ತಿದೆ. ಇದಕ್ಕೆ ಸಿನಿಮಾರಂಗದ ಬಹುತೇಕ ಮಂದಿ ಸಮ್ಮತಿಯನ್ನೂ ಸೂಚಿಸಿದ್ದಾರೆ.

YouTube Facebook amp amp Instagram Negative Reviews on Big Films Is It called an Online War

ಆದರೆ, ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ನೆಗೆಟಿವ್ ರಿವ್ಯೂ ಹಿಂದೆ ಸಂಚು ಇದೆಯಾ? ಒಂದು ಸಿನಿಮಾವನ್ನು ತುಳಿಯುವುದಕ್ಕೆ ಇನ್ನೊಂದು ನಿರ್ಮಾಣ ಸಂಸ್ಥೆ ಇದನ್ನು ಅಸ್ತ್ರವಾಗಿ ಬಳಸುತ್ತಿದೆಯೇ? ನೆಗೆಟಿವ್ ವಿಮರ್ಶೆಗಳು ನಿಜಕ್ಕೂ ನಿರ್ಮಾಪಕರ ಮೇಲೆ ಎಂತಹ ಪರಿಣಾಮ ಬೀರುತ್ತೆ. ಹಾಗಿದ್ದರೆ ವಿಮರ್ಶೆಯನ್ನು ಮಾಡ ಬಾರದೇ? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಲೇ ಇದೆ.

ಮುಂದೆ ಓದಿ

ಸೋಶಿಯಲ್ ಮೀಡಿಯಾಗಳಲ್ಲಿ ನೆಗೆಟಿವ್ ವಿಮರ್ಶೆಯ ಹಿನ್ನೆಲೆಯೇನು?
ಸಿನಿಮಾ ಟಾರ್ಗೆಟ್ ಮಾಡುವುದಕ್ಕೆ ಸೋಶಿಯಲ್ ಮೀಡಿಯಾ ಬಳಕೆ
ಚಿತ್ರರಂಗದಲ್ಲಿರುವವರಿಂದಲೇ ಆನ್‌ಲೈನ್‌ ಯುದ್ಧಗಳು ನಡೆಯುತ್ತವೆಯೇ?
ಯೂಟ್ಯೂಬ್, ಫೇಸ್‌ಬುಕ್ ನೆಗೆಟಿವ್ ವಿಮರ್ಶೆ ಹಿಂದೆ ಹಣ ನಂಟಿದೆಯೇ?

ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಹಲವು ನಿರ್ಮಾಪಕರು ಆನ್‌ಲೈನ್‌ನ ನೆಗೆಟಿವ್ ವಿಮರ್ಶೆಗಳಿಗೆ ಬೆಚ್ಚಿಬಿದ್ದಿದ್ದಾರೆ. ಕೆಲವರು ಆಕ್ರೋಶವನ್ನು ಹೊರ ಹಾಕಿದ್ದಾರೆ. ಅದರಲ್ಲಿ ಕನ್ನಡ ನಿರ್ದೇಶಕ ಕಮ್ ನಿರ್ಮಾಪಕ ಆರ್.ಚಂದ್ರು ಕೂಡ ಒಬ್ಬರು. 'ಕಬ್ಜ' ಸಿನಿಮಾ ರಿಲೀಸ್ ಆದ ವೇಳೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಟ್ರೋಲ್ ಮಾಡಲಾಗಿತ್ತು. ನೆಗೆಟಿವ್ ರಿವ್ಯೂ ಮಾಡಲಾಗಿತ್ತು. ಇದಕ್ಕೆ ಆರ್‌.ಚಂದ್ರು ಬೇರೆಯದ್ದೇ ಆಂಗಲ್ ಕೊಟ್ಟಿದ್ದಾರೆ. ಫಿಲ್ಮಿ ಬೀಟ್ ಕನ್ನಡಕ್ಕೆ ಜೊತೆ ಹೊಸ ಆಯಾಮವನ್ನು ಹಂಚಿಕೊಂಡಿದ್ದಾರೆ.

"ಇವತ್ತು ಸಿನಿಮಾ ಮಾಡೋದು ತುಂಬಾನೇ ಸುಲಭ ಆಗಿದೆ. ಇವತ್ತು ಕಷ್ಟ ಪಟ್ಟು ಸಿನಿಮಾ ಮಾಡಿದವನು ಗೆಲ್ಲುತ್ತಾನೋ ಇಲ್ಲವೋ ಗೊತ್ತಿಲ್ಲ. ಸಿನಿಮಾವನ್ನು ನೀಟ್ ಆಗಿ ಪ್ರಮೋಷನ್ ಮಾಡಿ, ಜನರ ಮೈಂಡ್ ಸೆಟ್ ಮಾಡಿ ಸಿನಿಮಾ ಮಾಡಿದರೆ ಗೆಲ್ಲುವಂತಹ ಕಾಲವಿದು. ಆನ್‌ಲೈನ್‌ನಲ್ಲಿ ಯಾರು ಸ್ಟ್ರಾಂಗ್ ಆಗಿ ಇರುತ್ತಾರೆ ಅವರಷ್ಟೇ ಇಲ್ಲಿ ಉಳಿದುಕೊಳ್ಳುವುದಕ್ಕೆ ಸಾಧ್ಯ." ಎನ್ನುತ್ತಾರೆ ಆರ್.ಚಂದ್ರು.

YouTube Facebook amp amp Instagram Negative Reviews on Big Films Is It called an Online War

ಆರ್‌. ಚಂದ್ರು 'ಕಬ್ಜ' ಸಿನಿಮಾ ಮಾಡಿದಾಗ ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಯೂಟ್ಯೂಬ್ ಹಾಗೂ ಫೇಸ್‌ಬುಕ್ ಮೂಲಕ ನೆಗೆಟಿವ್ ವಿಮರ್ಶೆಗಳನ್ನೇ ತುಂಬಿ ತುಳುಕಿದ್ದವು. ಇದರಿಂದ ಆರ್‌.ಚಂದ್ರುಗೆ ಸಿಕ್ಕಾಪಟ್ಟೆ ನಷ್ಟ ಆಗಿತ್ತು ಎಂದು ಒಪ್ಪಿಕೊಂಡಿದ್ದಾರೆ. "ಒಂದು ಸಣ್ಣ ವಿಮರ್ಶೆಯಿಂದ ನನಗಾದ ತೇಜೋವಧೆ ಭಾರೀ ಪರಿಣಾಮ ಬೀರಿತು. ಆನ್‌ಲೈನ್‌ನಲ್ಲಿ ವಾರ್ ರೀತಿ ಸೃಷ್ಟಿಯಾಗಿತ್ತು. ಬ್ಯುಸಿನೆಸ್‌ ಮಾಡಿ ಗೆದ್ದಿದ್ದೀನಿ. ದುಡ್ಡು ಬಂದಿದೆ ಎಲ್ಲವೂ ಸೂಪರ್. ಕಬ್ಜ ಮೇಕಿಂಗ್ ಎಲ್ಲವೂ ಚೆನ್ನಾಗಿತ್ತು. ಆದರೆ, ಬಿಡುಗಡೆಯಾಗುತ್ತಿದ್ದಂತೆ ಒಂದು ಬ್ಯಾಡ್ ವೇವ್ ಕ್ರಿಯೇಟ್ ಮಾಡಿದ್ದರು. ಇದು ತುಂಬಾನೇ ಎಫೆಕ್ಟ್ ಆಯ್ತು." ಎನ್ನುತ್ತಾರೆ.

"ಕಾಣದ ಕೈಗಳು ಕೆಲಸ ಮಾಡುತ್ತವೆ"

ಆರ್‌.ಚಂದ್ರು ಪ್ರಕಾರ, ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿದ್ದಂತೆ ಕೆಲವು ಕಾಣದ ಕೈಗಳು ತೆರೆಮರೆಯಲ್ಲಿ ಸಿನಿಮಾ ಸೋಲಿಸುವುದಕ್ಕೆ ಕೆಲಸ ಮಾಡುತ್ತವೆ ಎನ್ನುತ್ತಾರೆ. "ಯೂಟ್ಯೂಬ್‌ನವರಿಗೆ, ಫೇಸ್‌ಬುಕ್ ಅವರಿಗೆ, ಇನ್‌ಸ್ಟಾಗ್ರಾಂ ಅವರಿಗೆ ಗೊತ್ತಿಲ್ಲದ ಹಾಗೇ ಕೆಲವು ಕಾಣದ ಕೈಗಳು ಕೆಲಸ ಮಾಡುತ್ತವೆ. ಮೊದಲು ಓಡಿ ಗೆಲ್ಲುತ್ತಿದ್ದರು. ಈಗ ಓಡಿ ಗೆಲ್ಲಲ್ಲ. ಓಡುತ್ತಿರುವವನಿಗೆ ಬೀಳಿಸಿ, ಆರಾಮಾಗಿ ನಡೆದುಕೊಂಡು ಹೋಗಿ ಗೆಲ್ಲುವಂತಹ ವಾತಾವರಣವಿದೆ. ಇಲ್ಲಿ ಓಡುವುದರ ಜೊತೆ ಪಕ್ಕದಲ್ಲಿ ಇದ್ದವನನ್ನು ಗಮನಿಸುತ್ತಿದ್ದರೆ ಮಾತ್ರ ಸಿನಿಮಾ ಹಿಟ್ ಆಗುತ್ತೆ." ಎಂದು ಆರ್‌.ಚಂದ್ರು ಪ್ರತಿಕ್ರಿಯಿಸಿದ್ದಾರೆ.

Take a Poll

ಕ್ರೇಜಿ ಪ್ರಾಜೆಕ್ಟ್‌ಗಳೇ ಟಾರ್ಗೆಟ್

ಇನ್ನು ಚಿತ್ರರಂಗದಲ್ಲಿ ಕೆಲವು ಆನ್‌ಲೈನ್ ಮೀಡಿಯಾಗಳನ್ನು ಬಳಸಿಕೊಂಡು ಕ್ರೇಜ್ ಹುಟ್ಟಾಕಿದ ಪ್ರಾಜೆಕ್ಟ್‌ಗಳನ್ನೇ ಟಾರ್ಗೆಟ್ ಮಾಡಲಾಗುತ್ತೆ. ಅದರಲ್ಲಿ ಬ್ಯುಸಿನೆಸ್ ಕೂಡ ಅಡಗಿರುತ್ತೆ ಅನ್ನೋದು ಆರ್‌.ಚಂದ್ರು ವಾದ. "ಕ್ರೇಜಿ ಪ್ರಾಜೆಕ್ಟ್‌ಗಳನ್ನು ಟಾರ್ಗೆಟ್ ಮಾಡುತ್ತಾರೆ. ಒಂದು ಸ್ವದೇಶಿ ಬ್ರ್ಯಾಂಡ್ ಇರುತ್ತೆ. ಅದರ ಪಕ್ಕ ಇಂಟರ್‌ನ್ಯಾಷನಲ್ ಬ್ರ್ಯಾಂಡ್ ಬರುತ್ತೆ. ಅದಾಗಲೇ ಟ್ರೆಂಡ್‌ನಲ್ಲಿರುವ ಸ್ವದೇಶಿ ಬ್ರ್ಯಾಂಡ್‌ ಅನ್ನು ಮುಗಿಸಿದರೇ ಮಾತ್ರ ಅದು ತನ್ನ ಮಾರ್ಕೆಟ್ ಅನ್ನು ವಿಸ್ತರಿಸಿಕೊಳ್ಳುವುದಕ್ಕೆ ಸಾಧ್ಯ. ಹೀಗಾಗಿ ಆನ್‌ಲೈನ್‌ ಅನ್ನು ವೆಪನ್ ಆಗಿ ಬಳಸಿಕೊಳ್ಳುತ್ತಾರೆ. ಅಂದರೆ, ಓಟಿಟಿಯವರು ತೆಗೆದುಕೊಳ್ಳುವುದೇ 10 ಸಿನಿಮಾ. ಅದರಲ್ಲಿ ಒಬ್ಬ ನಿರ್ಮಾಪಕರದ್ದೇ 5 ಸಿನಿಮಾಗಳು ಸೇಲ್ ಆಗುತ್ತಿರುತ್ತೆ. ಇವರ ಜೊತೆ ಬೇರೆ ನಿರ್ಮಾಪಕರ ಸಿನಿಮಾಗಳೂ ಬಂದರೆ ಎಲ್ಲಿ ಅವರ ಸಿನಿಮಾಗಳಿಗೆ ಪೈಪೋಟಿ ಹೆಚ್ಚಾಗುತ್ತೋ ಎನ್ನುವ ಭಯವಿರುತ್ತೆ. ಈ ಕಾರಣಕ್ಕೆ ಓಡುತ್ತಿರುವ ಸಿನಿಮಾಗೆ ಆನ್‌ಲೈನ್‌ನಲ್ಲಿ ಅಪಪ್ರಚಾರ ಮಾಡಿಸುತ್ತಾರೆ." ಎನ್ನುತ್ತಾರೆ.

More from Filmibeat

English summary
Inside Story: YouTube, Facebook, and Instagram are flooded with negative reviews on big films. Raising questions online war between production houses in film industry.
Read more about: r chandru online reviews
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X