ವಿಷ್ಣುವರ್ಧನ ವೀಕ್ಷಿಸಿದ ವಿವೇಕ್ ಒಬೆರಾಯ್

ಡಿಸೆಂಬರ್ 3ರಂದು ಸಂಜೆ ವಿವೇಕ್ ಒಬೆರಾಯ್ ಕರ್ನಾಟಕಕ್ಕೆ ಬಂದಿದ್ದರು. ಕಿಚ್ಚ ಸುದೀಪ್ ಅಭಿನಯದ 'ವಿಷ್ಣುವರ್ಧನ' ಚಿತ್ರ ವೀಕ್ಷಿಸಿದ್ದಾರೆ ಎನ್ನುತ್ತವೆ ಗಾಂಧಿನಗರದ ಮೂಲಗಳು. ಯಾವ ಥಿಯೇಟರ್, ಯಾರ ಜೊತೆ ಮತ್ತು ಸುದೀಪ್ ಇವರ ಜೊತೆಗಿದ್ರಾ ಎನ್ನುವ ಪ್ರಶ್ತ್ನೆಗೆ ಸದ್ಯ ಉತ್ತರವಿಲ್ಲ.
ರಾಮಗೋಪಾಲ್ ವರ್ಮಾ ನಿರ್ದೇಶನದ ರಕ್ತಚರಿತೆ ಚಿತ್ರದಲ್ಲಿ ಸುದೀಪ್ ಮತ್ತು ವಿವೇಕ್ ಇಬ್ಬರೂ ಒಟ್ಟಾಗಿ ನಟಿಸಿದ್ದರು. ಹೀಗೆ ಸ್ನೇಹಿತರಾಗಿರುವ ಇವರು ಸದ್ಯ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿರುವ ವಿಷ್ಣುವರ್ಧನ ಚಿತ್ರವನ್ನು ನೋಡಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಸೋನುಸೂದ್ ಸಹ ಖಳನಟನಾಗಿ ನಟಿಸಿರುವುದರಿಂದ ವಿವೇಕ್ ಅಪಾರ ನಿರೀಕ್ಷೆ ಇಟ್ಟು ಚಿತ್ರ ವೀಕ್ಷಿಸಿದ್ದಾರೆ ಎಂದು ಹೇಳಲಾಗುತ್ತಿದೆ.
More from Filmibeat
English summary
Gandhinagara sources saays, Bollywood actor Vivek Oberoi watched Kannada movie Vishnuvardhana starring Sudeep on December 3rd.


Click it and Unblock the Notifications











