ರಜನೀಕಾಂತ್ ಕೊಚಡಯಾನ್ ಕನ್ನಡದಲ್ಲೂ ಬಿಡುಗಡೆ ?

ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಕೊಚಡಯಾನ್ ಚಿತ್ರದ ನಿರ್ಮಾಪಕರು ನಾಲ್ಕು ಭಾಷೆಗಳಲ್ಲಿ ಚಿತ್ರವನ್ನು ರಿಲೀಸ್ ಮಾಡಲು ನಿರ್ಧರಿಸಿದ್ದು ನಾಲ್ಕನೇ ಭಾಷೆ ಯಾವುದೆನ್ನುವ ಚರ್ಚೆ ಸಿನಿಮಾ ವಲಯದಲ್ಲಿ ತಾರಕಕ್ಕೇರಿದೆ. ಕೆಲವರ ಪ್ರಕಾರ ಇದು ಇಂಗ್ಲಿಷ್ ನಲ್ಲಿ ಇನ್ನೊಬ್ಬರ ಪ್ರಕಾರ ಮಲಯಾಳಂನಲ್ಲಿ.
ಚಿತ್ರದ ನಿರ್ಮಾಪಕರು ಇದುವರೆಗೆ ಆ ಗುಟ್ಟನ್ನು ಬಹಿರಂಗ ಪಡಿಸಲಿಲ್ಲ. ಸೂಪರ್ ಸ್ಟಾರ್ ರಜನೀಕಾಂತ್ ಗೆ ಜಪಾನ್ ನಲ್ಲಿ ಬಹಳಷ್ಟು ಅಭಿಮಾನಿಗಳಿರುವುದರಿಂದ ಜಪಾನಿ ಭಾಷೆಯಲ್ಲಿ ಕೊಚಾಡಿಯನ್ ಬಿಡುಗಡೆಗೊಳ್ಳಲಿದೆ ಎನ್ನುತ್ತಿದ್ದರೆ, ಬಹಳಷ್ಟು ಮಂದಿ ರಜನಿ ಕರ್ನಾಟಕದವರು ಆಗಿರುವುದರಿಂದ ಕನ್ನಡದಲ್ಲಿ ಈ ಚಿತ್ರ ಬಿಡುಗಡೆಗೊಳ್ಳುತ್ತಿದೆ ಎನ್ನುತ್ತಿದ್ದಾರೆ.
ಒಟ್ಟಿನಲ್ಲಿ ಸದ್ಯಕ್ಕೆ ಇದಕ್ಕೆ ಉತ್ತರ ನೀಡಬಲ್ಲವರು ನಿರ್ಮಾಪಕರು ಬಿಟ್ಟರೆ ಸ್ವತಃ ರಜನೀಕಾಂತ್. ಆದರೆ ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಕ್ಕೆ ನಿಷೇಧ ಇರುವುದರಿಂದ ಇದು ಎಷ್ಟರ ಮಟ್ಟಿಗೆ ಸಾಧ್ಯವೋ ತಿಳಿಯದು. ರಜನೀಕಾಂತ್, ದೀಪಿಕಾ ಪಡುಕೋಣೆ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಕೊಚಡಯಾನ್ ಚಿತ್ರವನ್ನು ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ನಿರ್ದೇಶಿಸಲಿದ್ದಾರೆ.


Click it and Unblock the Notifications











