ಜೋಗಯ್ಯನ ಮೇಲೆ ಬಿತ್ತು ಕೋರ್ಟ್ ಕೇಸ್

ಜೋಗಯ್ಯ ಚಿತ್ರವನ್ನು 3ಡಿ ತಂತ್ರಜ್ಞಾನದಲ್ಲಿ ನೋಡಬೇಕೆಂದು ಬಯಸಿದ್ದ ಅಭಿಮಾನಿಯೊಬ್ಬ ನಿರಾಸೆಗೆ ಒಳಗಾಗಿ ಕೋರ್ಟ್ ಮೆಟ್ಟಲೇರಿದ್ದಾನೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ರಾಜೇಶ್ ಎನ್ನುವ ಅಭಿಮಾನಿ ತುಮಕೂರಿನ ಗ್ರಾಹಕರ ನ್ಯಾಯಾಲಯದಲ್ಲಿ ದಾವಾ ಹೂಡಿ ರು. 2.1 ಲಕ್ಷ ಪರಿಹಾರ ನೀಡಬೇಕೆಂದಿದ್ದಾನೆ.

ಜೋಗಯ್ಯ ಚಿತ್ರದ ಒಂದು ಹಾಡು ಮತ್ತು ಒಂದು ಫೈಟ್ ದೃಶ್ಯವನ್ನು 3ಡಿ ತಂತ್ರಜ್ಞಾನದಲ್ಲಿ ತೋರಿಸಲಾಗುವುದು ಎಂದು ನಿರ್ದೇಶಕ ಪ್ರೇಮ್ ಸಿಕ್ಕಸಿಕ್ಕಲೆಲ್ಲಾ ಡಂಗುರ ಸಾರಿದ್ದರು. ಅಲ್ಲದೆ ಜಾಹೀರಾತು ಕೂಡಾ ನೀಡಿದ್ದರು. ಇದನ್ನು ನಂಬಿ ಮೂರು ಚಿತ್ರಮಂದಿರದಲ್ಲಿ ಜೋಗಯ್ಯ ಚಿತ್ರವನ್ನು ವೀಕ್ಷಿಸಿ ನಿರಾಶೆಗೆ ಒಳಗಾಗಿ ರಾಜೇಶ್ ಸೀದಾ ಗ್ರಾಹಕರ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾನೆ.

ಮೂರು ಚಿತ್ರಮಂದಿರದ ಮಾಲೀಕರು ತಲಾ ಎಪ್ಪತ್ತು ಸಾವಿರ ಪರಿಹಾರ ನೀಡಬೇಕು. ಚಿತ್ರದ ಕೆಲ ದೃಶ್ಯಗಳನ್ನು 3ಡಿ ಯಲ್ಲಿ ನೋಡಬೇಕೆಂದು ಬಯಸಿದ್ದ ನನಗೆ ಮೋಸ ಆಗಿದೆ. ಇದರಿಂದ ನನ್ನ ಒಂಬತ್ತು ಗಂಟೆ ಸಮಯ ಕೂಡಾ ವ್ಯರ್ಥವಾಗಿದೆ. 3ಡಿ ಪ್ರದರ್ಶನಕ್ಕಾಗಿ ಚಿತ್ರಮಂದಿರ ಕೂಡಾ ಟಿಕೆಟ್ ಬೆಲೆ ಜಾಸ್ತಿ ಮಾಡಿತ್ತು ಎಂದು ಅಭಿಮಾನಿ ರಾಜೇಶ್ ಬೇಸರ ವ್ಯಕ್ತಪಡಿಸಿದ್ದಾನೆ.

ಆಯ್ದ ಚಿತ್ರಮಂದಿರಗಳಲ್ಲಿ ಮಾತ್ರ ಈ ವ್ಯವಸ್ಥೆ ಇರುತ್ತದೆ ಎಂದು ಈ ಹಿಂದೆ ಕೂಡ ಹೇಳಿಕೆ ನೀಡಿದ್ದೆ. 3ಡಿ ವ್ಯವಸ್ಥೆ ಇಲ್ಲದೆ ಟಿಕೆಟ್ ಬೆಲೆ ಜಾಸ್ತಿ ಮಾಡಿದ್ದರೆ ಅದು ತಪ್ಪು ಎಂದು ಹೇಳಿರುವ ನಿರ್ದೇಶಕ ಪ್ರೇಮ್ ನುಣುಚಿ ಕೊಂಡಿದ್ದಾರೆ. ರಾಜೇಶ್ ಬಹುಶಃ ಶಿವರಾಜ್‌ಕುಮಾರ್ ಅವರ ಕಟ್ಟಾ ಅಭಿಮಾನಿ ಇರಬೇಕೆಂಬುವುದು ನಿರ್ಮಾಪಕಿ ರಕ್ಷಿತಾ ಅಂಬೋಣ.

More from Filmibeat

English summary
A fan from Sira taluk filed a case in Tumkur Consumer court for not shown 3D scenes of Kannada movie Jogayya. He is demanding Rs.2.1 lakh rupee compensation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X