'ಬಿಲ್ಲಾ ರಂಗ ಬಾಷಾ' ಸೆಟ್‌ನಲ್ಲಿ ಕಿಚ್ಚನಿಗೊಂದು ಮನೆ ಕಟ್ಟಿದ ಟೀಮ್? ಇದು ಸಿನಿಮಾಗಂತೂ ಅಲ್ವೇ ಅಲ್ಲ!

'ಮ್ಯಾಕ್ಸ್' ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಕಿಚ್ಚ ಸುದೀಪ್ ಮತ್ತೊಂದು ಸಿನಿಮಾಗೆ ರೆಡಿಯಾಗುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಲಿದೆ. ಕಿಚ್ಚ ಸುದೀಪ್ ವೃತ್ತಿ ಬದುಕಿನಲ್ಲಿಯೇ ಇದೊಂದು ಟರ್ನಿಂಗ್ ಪಾಯಿಂಟ್ ಸಿನಿಮಾ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. 'ಬಿಲ್ಲ ರಂಗ ಭಾಷಾ' ಸಿನಿಮಾಗೆ ಅನುಪ್ ಭಂಡಾರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಇನ್ನೇನು ಸಿನಿಮಾ ಆರಂಭ ಆಗುವುದಕ್ಕೂ ಮುನ್ನ 'ಬಿಲ್ಲ ರಂಗ ಭಾಷಾ' ಸಿನಿಮಾ ಸೆಟ್‌ನಿಂದ ಇಂಟ್ರೆಸ್ಟಿಂಗ್ ಸುದ್ದಿಯೊಂದು ಹರಿದಾಡುತ್ತಿದೆ. ಕಿಚ್ಚ ಸುದೀಪ್‌ಗಾಗಿ ಸೆಟ್‌ನಲ್ಲಿಯೇ ಒಂದು ಮನೆಯನ್ನು ನಿರ್ಮಾಣ ಮಾಡಲಿದ್ಯಂತೆ ಟೀಮ್. ಇಂತಹದ್ದೊಂದು ಪ್ರಯತ್ನ ಬಹುಶ: ಭಾರತೀಯ ಚಿತ್ರರಂಗ ಇತಿಹಾಸದಲ್ಲಿಯೇ ಮೊದಲು ಇರಬಹುದೇನೋ?

A house is being built for Kiccha Sudeep on the sets of the movie Billa Ranga Basha

ಹೌದು, 'ಬಿಲ್ಲ ರಂಗ ಬಾಷಾ' ಸಿನಿಮಾಗಾಗಿ ಕನಕಪುರ ಸಮೀಪ ಬೃಹತ್ ಸೆಟ್‌ ಒಂದನ್ನು ನಿರ್ಮಾಣ ಮಾಡಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಕಿಚ್ಚ ಸುದೀಪ್ ಸೇರಿದಂತೆ ಇಡೀ ತಂಡ ಸೆಟ್‌ ನಿರ್ಮಾಣದ ತಯಾರಿಯಲ್ಲಿಯೇ ಇತ್ತು. ಈ ಸಂಬಂಧ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನೂ ಸುದೀಪ್ ಭೇಟಿಯಾಗಿದ್ದರು. ಕನಕಪುರ ಬಳಿ ಸೆಟ್ ನಿರ್ಮಿಸುವುದಕ್ಕೆ ಎಲ್ಲಾ ರೀತಿಯಿಂದಲೂ ಅನುಮತಿಯನ್ನು ಪಡೆಯಲಾಗಿದೆ ಎನ್ನಲಾಗಿದೆ. ಹಾಗಿದ್ಮೇಲೆ ಸೆಟ್‌ನಲ್ಲಿ ಕಿಚ್ಚನಿಗಾಗಿ ಮನೆಯನ್ನು ನಿರ್ಮಿಸುತ್ತಿರುವುದು ಯಾಕೆ? ತಿಳಿಯಲು ಮುಂದೆ ಓದಿ.

'ಮ್ಯಾಕ್ಸ್' ಬಾಕ್ಸಾಫೀಸ್‌ನಲ್ಲಿ ಮ್ಯಾಕ್ಸಿಮಂ ದೋಚಿದ ಬಳಿಕ ಕಿಚ್ಚ ಸುದೀಪ್ ಆಲೋಚನೆಗಳೇ ಬದಲಾಗಿದೆ. 'ಮ್ಯಾಕ್ಸ್' ಅಂತಹ ಹಿಟ್ ಸಿನಿಮಾ ಕೊಟ್ಟ ಬಳಿಕ ಮುಂದಿನ ಸಿನಿಮಾ ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಹಿಟ್ ಆಗಬೇಕು. ಆ ಕಾರಣಕ್ಕೆ ಕಿಚ್ಚ ಹಾಗೂ ಅವರ ತಂಡ ಬಿಡುವಿಲ್ಲದೆ ಪ್ರೀ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕಂಪ್ಲೀಟ್ ಎಲ್ಲಾ ತಯಾರಿಗಳನ್ನು ಮಾಡಿಕೊಂಡ ಬಳಿಕವೇ ಅಖಾಡಕ್ಕೆ ಇಳಿಯುತ್ತಿದ್ದಾರೆ.

A house is being built for Kiccha Sudeep on the sets of the movie Billa Ranga Basha

ಸದ್ಯ ಸಿಸಿಎಲ್ 2025 ಮೂಡ್‌ನಲ್ಲಿ ಇರುವ ಕಿಚ್ಚ ಆ ಕಡೆಗೆ ಗಮನ ಹರಿಸುತ್ತಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಇದೂವರೆಗೂ ಉತ್ತಮ ಪ್ರದರ್ಶನ ನೀಡಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು, ಒಂದರಲ್ಲಿ ಸೋಲನ್ನು ಕಂಡಿದೆ. ಈಗಾಗಲೇ ಸೆಮಿಪೈನಲ್ಲೂ ಎಂಟ್ರಿ ಕೊಟ್ಟಿದೆ. ಮುಂದಿನ ವೀಕೆಂಡ್‌ನಲ್ಲಿ ಸೆಮಿ ಫೈನಲ್ ಗೆದ್ದರೆ, ಫೈನಲ್ ಪಂದ್ಯ ಆಡಲಿದೆ. ಅಲ್ಲಿಗೆ ಸಿಸಿಎಲ್ ಕಮಿಟ್ಮೆಂಟ್‌ ಮುಗಿಯಲಿದೆ. ಆ ಬಳಿಕ ಸೀದಾ 'ಬಿಲ್ಲ ರಂಗ ಬಾಷಾ' ಸಿನಿಮಾ ತಂಡವನ್ನು ಸೇರಿಕೊಳ್ಳಲಿದ್ದಾರೆ.

'ಬಿಲ್ಲ ರಂಗ ಬಾಷಾ' ಸಿನಿಮಾ ಅಡ್ಡಾದಲ್ಲಿ ಇಂತಹದ್ದೊಂದು ಸುದ್ದಿ ಓಡಾಡುತ್ತಿದೆ. ಸಿನಿಮಾಗಾಗಿ ನಿರ್ಮಾಣ ಮಾಡಿದ ಸೆಟ್‌ನಲ್ಲಿಯೇ ಕಿಚ್ಚ ಸುದೀಪ್‌ಗಾಗಿ ಒಂದು ಮನೆಯನ್ನು ನಿರ್ಮಾಣ ಮಾಡಲಿದ್ಯಂತೆ ತಂಡ. ಅವರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಅಲ್ಲಿ ಇರಲಿವೆ. ಅಷ್ಟಕ್ಕೂ ಸೆಟ್‌ನಲ್ಲಿ ಕಿಚ್ಚನಿಗ್ಯಾಕೆ ಮನೆ ಅನ್ನೋ ಅನುಮಾನ ಮೂಡುವುದು ಸಹಜ. ಆದರೆ, ಅದಕ್ಕೊಂದು ಬಲವಾದ ಕಾರಣವಿದೆ. ಕಿಚ್ಚನ ಸಲಹೆಯಂತೆಯೇ ಚಿತ್ರತಂಡ ಈ ನಿರ್ಧಾರವನ್ನು ತೆಗೆದುಕೊಂಡಿದೆಯಂತೆ.

ಕಿಚ್ಚ ಸುದೀಪ್ 'ಬಿಲ್ಲ ರಂಗ ಬಾಷಾ' ಸೆಟ್‌ನಲ್ಲಿ ನಿರ್ಮಾಣ ಆಗುವ ಮನೆಯಲ್ಲಿ ಉಳಿದುಕೊಳ್ಳಲಿದ್ದಾರೆ. ಶೂಟಿಂಗ್ ಮುಗಿದ ಬಳಿಕ ಅವರು ಬೆಂಗಳೂರಿನಲ್ಲಿ ಇರುವ ಸ್ವಂತ ಮನೆಗೆ ಬರುವುದಿಲ್ಲ. ಅಲ್ಲೇ ಉಳಿದುಕೊಳ್ಳಲಿದ್ದಾರೆ. ಯಾವಾಗೆಲ್ಲ ಶೂಟಿಂಗ್ ನಡೆಯುತ್ತೋ ಅಷ್ಟೂ ದಿನ ಅದೇ ಮನೆಯಲ್ಲಿ ಇರುತ್ತಾರೆ. ಪ್ರತಿ ದಿನ ಶೂಟಿಂಗ್ ಮುಗಿದ ಬಳಿಕ ಚಿತ್ರತಂಡದೊಂದಿಗೆ ಸೀನ್‌ಗಳ ಬಗ್ಗೆ ಬಗ್ಗೆ ಚರ್ಚೆ, ಪ್ರಯಾಣದ ಸಮಯ ಎಲ್ಲವನ್ನೂ ಉಳಿಸುವುದಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಾಗಿದೆ. ಸದ್ಯ ಈ ಬಗ್ಗೆ ಇನ್ನೂ ತಂಡ ಅಧಿಕೃತ ಮಾಹಿತಿ ನೀಡಬೇಕಿದೆ.

More from Filmibeat

English summary
Kichcha Sudeep to stay on set during Billa Ranga Basha movie shooting. Here is why?
Read more about: sudeep house movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X