'ದಂಗಲ್' ನಟಿ ಫಾತಿಮಾ ಜೊತೆ ಆಮಿರ್ ಖಾನ್ ವಿವಾಹ: 3 ಮದುವೆಯ ಅಸಲಿಯತ್ತೇನು?
ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಮೂರನೇ ಮದುವೆ ಆಗಿದ್ದಾರೆ ಅನ್ನುವ ಸುದ್ದಿ ಕಳೆದೆರಡು ದಿನಗಳಿಂದ ಓಡಾಡುತ್ತಿತ್ತು. ಅದೂ ರಹಸ್ಯವಾಗಿ ವಿವಾಹವಾಗಿದ್ದಾರೆ ಎನ್ನಲಾಗಿತ್ತು. ಈ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ ಸ್ವತ: ಆಮಿರ್ ಖಾನ್ ಈ ಬಗ್ಗೆ ಏನಾದರೂ ಸುಳಿವು ನೀಡುತ್ತಾರಾ ಅಂತ ಕಾದಿದ್ದಷ್ಟೇ ಬಂತು. ಸೂಪರ್‌ಸ್ಟಾರ್ ಮದುವೆ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.
ಆಮಿರ್ ಖಾನ್ ಸಿನಿಮಾ ಬಿಟ್ಟರೆ, ತನ್ನ ವೈಯುಕ್ತಿಕ ಜೀವನದ ಬಗ್ಗೆ ಹೆಚ್ಚಾಗಿ ಎಲ್ಲೂ ಮಾತಾಡುವುದಿಲ್ಲ. ಆದರೆ, ಸೂಪರ್‌ಸ್ಟಾರ್ ಆಗಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಈ ನಟನನ್ನು ಅವರ ಅಭಿಮಾನಿಗಳೇ ಬಿಟ್ಟಿಲ್ಲ. ಆಮಿರ್ ಖಾನ್ ಸಿನಿಮಾದಿಂದ ಹಿಡಿದು ಪ್ರತಿಯೊಂದು ವಿಚಾರವನ್ನೂ ಸೋಶಿಯಲ್ ಮೀಡಿಯಾದಲ್ಲಿ ಅವರೇ ಶೇರ್ ಮಾಡುತ್ತಾರೆ. ಸದ್ಯ ಆಮಿರ್ ಖಾನ್ ಟ್ರೋಲ್‌ನಲ್ಲಿರುವುದು ಅವರ ಸಿನಿಮಾ ವಿಚಾರಕ್ಕಲ್ಲ. ಬದಲಾಗಿ ಅವರ ಮೂರನೇ ಮದುವೆ ವಿಷಯಕ್ಕೆ ಟ್ರೋಲ್ ಆಗುತ್ತಿದ್ದಾರೆ.

ಆಮಿರ್ ಖಾನ್ 3ನೇ ಮದುವೆ ಆಯ್ತಾ?
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಈಗ ಪರ್ಫೆಕ್ಷನಿಸ್ಟ್ ಆಗಿ ಉಳಿದಿಲ್ಲ. ಆಮಿರ್ ಖಾನ್ ಎರಡನೇ ಪತ್ನಿಗೂ ವಿಚ್ಛೇದನ ನೀಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆನೇ ಆಗಿತ್ತು. ಕಿರಣ್ ರಾವ್‌ಗೆ ಡಿವೋರ್ಸ್ ನೀಡಿದ್ದೇ ಮೂರನೇ ಮದುವೆಯಾಗಲು ಎಂಬ ಮಾತುಗಳು ಹರಿದಾಡಿದ್ದವು. ಆದ್ರೀಗ ಕಳೆದ ಎರಡು ದಿನಗಳಿಂದ ಆಮಿರ್ ಖಾನ್ ಗುಟ್ಟಾಗಿ ಮದುವೆ ಆಗಿ ಬಿಟ್ಟಿದ್ದಾರೆ ಎನ್ನುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡಿತ್ತು. ಸಾಲದ್ದಕ್ಕೆ ಇಬ್ಬರು ಜೊತೆಗಿರುವ ಪೋಟೊ ಕೂಡ ಶೇರ್ ಆಗಿತ್ತು.

'ದಂಗಲ್' ನಟಿ ಜೊತೆ ಆಮಿರ್ ಮದುವೆ
ಆಮಿರ್ ಖಾನ್ ಎರಡನೇ ಪತ್ನಿ ಕಿರಣ್ ರಾವ್‌ಗೆ ವಿಚ್ಛೇದನ ನೀಡಿದಾಗೇ ಬಾಲಿವುಡ್ ನಟಿಯ ಹೆಸರು ತಳುಕು ಹಾಕಿಕೊಂಡಿತ್ತು. ಆಮಿರ್ 'ದಂಗಲ್' ಸಿನಿಮಾದಲ್ಲಿ ತನ್ನೊಟ್ಟಿಗೆ ನಟಿಸಿದ ನಟಿ ಫಾತಿಮಾ ಸನಾ ಶೇಖ್ ಅವರನ್ನು ಡೇಟ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಭಾರಿ ಸದ್ದು ಮಾಡಿತ್ತು. ಆದರೆ, ಈ ಸುದ್ದಿಗಳ ಬಗ್ಗೆ ಆಮಿರ್ ಖಾನ್, ಫಾತಿಮಾ ಸನಾ ಶೇಖ್ ಹಾಗೂ ಕಿರಣ್ ರಾವ್ ಮೂವರು ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಒಂದೆರಡು ದಿನಗಳ ಹಿಂದೆ 'ಶ್ರೀ ರಾಷ್ಟ್ರೀಯ ರಜಪೂತ್ ಕರಣಿ ಸೇನಾ' ಎನ್ನುವ ಖಾತೆಯಲ್ಲಿ ಆಮಿರ್ ಖಾನ್ ಹಾಗೂ ಸಾನಾ ಫೋಟೊ ಶೇರ್ ಮಾಡಿ, ಮದುವೆಯಾಗಿದ್ದರೆ ಎಂಬ ಸುದ್ದಿಯನ್ನು ಶೇರ್ ಮಾಡಲಾಗಿತ್ತು.

ಮಗಳ ಪಾತ್ರ ಮಾಡಿದವರನ್ನೇ ವಿವಾಹವಾದ ಆಮಿರ್
'ದಂಗಲ್' ಸಿನಿಮಾದಲ್ಲಿ ಫಾತಿಮಾ ಸನಾ ಶೇಖ್, ಆಮಿರ್ ಮಗಳ ಪಾತ್ರದಲ್ಲಿ ನಟಿಸಿದ್ದರು. ಈಗ ಅದೇ ನಟಿಯೊಂದಿಗೆ ಮೂರನೇ ವಿವಾಹವಾಗಿದ್ದಾರೆ ಎಂದು 'ಶ್ರೀ ರಾಷ್ಟ್ರೀಯ ರಜಪೂತ್ ಕರಣಿ ಸೇನಾ' ಖಾತೆಯಲ್ಲಿ ಬರೆಯಲಾಗಿತ್ತು. ಆದರೆ, ಆಮಿರ್ ರಹಸ್ಯವಾಗಿ ಮೂರನೇ ಬಾರಿ ಮದುವೆಯಾಗಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಯಾಕಂದ್ರೆ, ಈ ಖಾತೆಯಲ್ಲಿ ಶೇರ್ ಮಾಡಿದ ಫೋಟೊವನ್ನು ನಕಲು ಮಾಡಲಾಗಿದೆ. ಆಮಿರ್ ಖಾನ್ ಎರಡನೇ ಪತ್ನಿ ಕಿರಣ್ ರಾವ್ ಜೊತೆ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮದುವೆ ಸಮಾರಂಭಕ್ಕೆ ಹೋಗಿದ್ದಾಗ ಕ್ಯಾಮರಾಗೆ ಪೋಸ್ ಕೊಟ್ಟ ಫೋಟೊಗೆ ಫಾತಿಮಾ ಮುಖ ಜೋಡಿಸಲಾಗಿದೆ.

ಆಮಿರ್ ಖಾನ್ ವಿಚ್ಛೇದನದ ಬಳಿಕ ಟೀಕೆ
2021 ಜುಲೈನಲ್ಲಿ ಆಮಿರ್ ಖಾನ್ ಎರಡನೇ ಪತ್ನಿ ಕಿರಣ್ ರಾವ್‌ಗೆ ವಿಚ್ಛೇದನ ನೀಡಿದ್ದರು. ಅಲ್ಲಿಂದ ಆಮಿರ್ ಖಾನ್ ಹಾಗೂ ಕಿರಣ್ ರಾವ್ ಅವರ ಬಗ್ಗೆ ಊಹಾಪೋಹಗಳು ಹರಿದಾಡುವುದಕ್ಕೆ ಶುರುವಾಗಿತ್ತು. ಆಮಿರ್ ಖಾನ್ ಹಾಗೂ ಫಾತಿಮಾ ಸನಾ ಶೇಖ್ ಎರಡು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದು, ಆಮಿರ್ ಹಾಗೂ ಕಿರಣ್ ರಾವ್ ವಿಚ್ಛೇದನಕ್ಕೆ ಫಾತಿಮಾನೇ ಕಾರಣ ಎಂದು ಟೀಕೆ ಮಾಡಲಾಗಿತ್ತು.


Click it and Unblock the Notifications











