ಮತ್ತೆ ಹಳೆಯದ್ದೆಲ್ಲವನ್ನೂ ಮರೆಯುತ್ತಾರಾ ಅಮೀರ್ ಖಾನ್? ಬಾಲಿವುಡ್‌ನಲ್ಲಿ ಹೀಗೊಂದು ಸುದ್ದಿ...

ಎ.ಆರ್. ಮುರುಗದಾಸ್ ನಿರ್ದೇಶನದ ತಮಿಳು ಚಿತ್ರ 'ಘಜಿನಿ' ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಬಳಿಕ 2008ರಲ್ಲಿ ಅದರ ಹಿಂದಿ ರೀಮೇಕ್‌ನಲ್ಲಿ ಅಮೀರ್ ಖಾನ್ ನಟಿಸಿದ್ದರು. ಬಾಲಿವುಡ್‌ನಲ್ಲಿ 100 ಕೋಟಿ ರೂ. ಕ್ಲಬ್‌ ದಾಟಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

Recommended Video

ಬದಲಾಗಬೇಕಿದೆ ಜನರ ಯೋಚನಾ ಲಹರಿ | FIlmibeat Kannada

ಮರೆವಿನ ಸಮಸ್ಯೆಯ ಕುರಿತಾದ ಕಥೆಯುಳ್ಳ ಸಿನಿಮಾವನ್ನು 12 ವರ್ಷ ಕಳೆದರೂ ಸಿನಿಪ್ರಿಯರು ಮಾತ್ರ ಮರೆತಿರಲಿಲ್ಲ. ಈಗ ಮತ್ತೆ 'ಘಜಿನಿ' ಬಿಟೌನ್‌ನಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣವಾಗಿರುವುದು ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಮಾಡಿರುವ ಟ್ವೀಟ್.

'ಈ ಪೋಸ್ಟ್ 'ಘಜಿನಿ' ಕುರಿತು ಇರಬೇಕಾಗಿತ್ತು. ಆದರೆ ನಾವು ಏನು ಮಾಡಬೇಕೆಂದು ಬಯಸಿದ್ದೆವೋ ಅದನ್ನು ಮರೆತಿದ್ದೇವೆ. ಘಜಿನಿಯನ್ನು ದೂಷಿಸಿ' ಎಂದು ಟ್ವೀಟ್ ಮಾಡಲಾಗಿದೆ. ಈ ಟ್ವೀಟ್‌ನಲ್ಲಿ ಅಮೀರ್ ಖಾನ್ ಅವರನ್ನು ಟ್ಯಾಗ್ ಮಾಡಲಾಗಿದೆ.

ಘಜಿನಿ 2 ಟ್ರೆಂಡಿಂಗ್

ಈ ಪೋಸ್ಟ್ ಬಾಲಿವುಡ್‌ನಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ಎಲ್ಲರ ಕಣ್ಣೂ ಈಗ ಅಮೀರ್ ಖಾನ್ ಅವರತ್ತ ನೆಟ್ಟಿದೆ. ಈಗಾಗಲೇ ಅಮೀರ್ ಖಾನ್ ಅಭಿಮಾನಿಗಳು ಘಜಿನಿ2 ಎಂಬ ಹ್ಯಾಷ್ ಟ್ಯಾಗ್‌ಅನ್ನು ಬಳಸಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ. ಅಮೀರ್ ಖಾನ್ 'ಘಜಿನಿ 2' ಮಾಡಲಿದ್ದಾರೆ ಎಂಬ ಊಹಾಪೋಹ ಹರಿದಾಡುತ್ತಿದೆ.

ವಿಕ್ರಂ ವೇದ ರೀಮೇಕ್?

ವಿಕ್ರಂ ವೇದ ರೀಮೇಕ್?

ಇಷ್ಟೇ ಅಲ್ಲ, ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. 'ಘಜಿನಿ 2' ತಮಿಳಿನ ಸೂಪರ್ ಹಿಟ್ ಸಿನಿಮಾ 'ವಿಕ್ರಂ ವೇದ' (2017) ರೀಮೇಕ್ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೂಲ ಚಿತ್ರದಲ್ಲಿ ಆರ್. ಮಾಧವನ್ ಮತ್ತು ವಿಜಯ್ ಸೇತುಪತಿ ನಟಿಸಿದ್ದರು.

ಜನ್ಮದಿನದಂದು ಘೋಷಣೆ?

ಜನ್ಮದಿನದಂದು ಘೋಷಣೆ?

ಮಾರ್ಚ್ 14 ಅಮೀರ್ ಖಾನ್ ಜನ್ಮದಿನ. ಕಳೆದ ವರ್ಷ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಅಮೀರ್ ಖಾನ್, 'ಲಾಲ್ ಸಿಂಗ್ ಚಡ್ಡಾ' ಚಿತ್ರವನ್ನು ಘೋಷಿಸಿದ್ದರು. ಈ ಬಾರಿ ಅವರ ಅಭಿಮಾನಿಗಳು ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಮಾಡಿರುವ ಕುತೂಹಲಕಾರಿ ಟ್ವೀಟ್‌ಅನ್ನು ಅಮೀರ್ ಖಾನ್ ಜನ್ಮದಿನಕ್ಕೆ ನಂಟು ಹಾಕುತ್ತಿದ್ದಾರೆ. ತಮ್ಮ 55ನೇ ಜನ್ಮದಿನದಂದು ಅಮೀರ್ ಘಜಿನಿಯ ಹೊಸ ಪ್ರಾಜೆಕ್ಟ್ ಘೋಷಿಸಲಿದ್ದಾರೆ ಎಂದು ನಿರೀಕ್ಷಿಸಿದ್ದಾರೆ.

ಸಂಜಯ್ ಸಿಂಘಾನಿಯಾ ಅವತಾರ

ಈ ವದಂತಿಗಳಿಗೆ ಪುಷ್ಟಿ ನೀಡುವಂತೆ ಅಮೀರ್ ಖಾನ್ ಅವರ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದರಲ್ಲಿ ಅಮೀರ್, ಸೂಟ್ ಬೂಟ್ ಧರಿಸಿದ ಅವತಾರದಲ್ಲಿ ಸಿಗಾರ್‌ನಿಂದ ಹೊಗೆ ಬಿಡುತ್ತಿರುವುದು ಕಂಡಿತ್ತು. ಈ ಲುಕ್ 'ಘಜಿನಿ' ಚಿತ್ರದ ಸಂಜಯ್ ಸಿಂಘಾನಿಯಾ ಪಾತ್ರವನ್ನೇ ಹೋಲುತ್ತಿತ್ತು. ಹೀಗಾಗಿ ಅಮೀರ್ ಘಜಿನಿಯ ಮತ್ತೊಂದು ಅವತರಣಿಕೆಯಲ್ಲಿ ನಟಿಸಲಿದ್ದಾರೆ ಎನ್ನುವ ರೂಮರ್‌ಗಳಿಗೆ ರೆಕ್ಕೆಪುಕ್ಕ ಬಂದಂತಾಗಿದೆ.

More from Filmibeat

English summary
Ghajini 2 is trending in twitter after Reliance Entertainment's tweet. Aamir Khan may announce his new movie on his birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X