'ಬ್ಯಾಡ್ ಮ್ಯಾನರ್ಸ್' ಇಂಟ್ರುಡಕ್ಷನ್ ಸಾಂಗ್‌ಗೆ 'ಜಾಕಿ' ಟಚ್: ಒಂದು ಹಾಡಿಗೆ ಖರ್ಚಾಗಿದ್ದೆಷ್ಟು?
ಸ್ಯಾಂಡಲ್‌ವುಡ್‌ನಲ್ಲಿ ಡ್ಯಾನ್ಸ್ ಅಂದರೆ ಬೆಚ್ಚಿಬೀಳುವ ಸೂಪರ್‌ಸ್ಟಾರ್‌ಗಳಿದ್ದಾರೆ. ಅಪ್‌ಕಮಿಂಗ್ ಸ್ಟಾರ್‌ಗಳಿದ್ದಾರೆ. ಇಂಟ್ರುಡಕ್ಷನ್ ಸಾಂಗ್‌ನಲ್ಲಿ ಅದೆಷ್ಟೇ ಬಿಲ್ಡಪ್ ಕೊಡು ಅಂದ್ರೂ ಕೊಟ್ಟು ಬಿಡುತ್ತಾರೆ. ಆದರೆ, ಹೆಜ್ಜೆ ಹಾಕು ಅಂದ್ರೆ ಮಾತ್ರ ಹಿಂದೆ ಸರಿದು ಬಿಡುತ್ತಾರೆ. ಸುದೀಪ್, ದರ್ಶನ್ ಇಬ್ಬರೂ ಡ್ಯಾನ್ಸ್ ಅಂದ್ರೇನೆ ಆಗೋದಿಲ್ಲ ಅಂತ ಈಗಲೇ ಹೇಳಿಕೊಂಡಿದ್ದಾರೆ. ಇವರೊಂದಿಗೆ ಇನ್ನು ಕೆಲ ಸ್ಟಾರ್‌ಗಳು ಡ್ಯಾನ್ಸ್ ಮಾಡಿದ್ದನ್ನೇ ಅಭಿಮಾನಿಗಳು ನೋಡಿಲ್ಲ. ಇನ್ನು ಇತ್ತೀಚೆಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರೋ ನಟರು ಕೂಡ ಡ್ಯಾನ್ಸ್ ಮಾಡಿದ್ದೇ ಇಲ್ಲ. ಇಂತಹವ್ರಲ್ಲಿ ಮರಿ ರೆಬೆಲ್ ಸ್ಟಾರ್ ಅಂಬರೀಶ್ ಕೂಡ ಒಬ್ಬರು.
ರೆಬೆಲ್ ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾ 'ಬ್ಯಾಡ್ ಮ್ಯಾನರ್ಸ್' ಶೂಟಿಂಗ್ ಇತ್ತೀಚೆಗೆ ಮುಗಿದಿದೆ. ದುನಿಯಾ ಸೂರಿ ಕಳೆದ ಎರಡೂವರೆ ವರ್ಷಗಳಿಂದ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಈ ಸಿನಿಮಾದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ಮಧ್ಯೆ ಸ್ಯಾಂಡಲ್‌ವುಡ್‌ನಲ್ಲಿ 'ಬ್ಯಾಡ್ ಮ್ಯಾನರ್ಸ್' ಇಂಟ್ರುಡಕ್ಷನ್ ಸಾಂಗ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಹಾಡಿಗಾಗಿ ಮಾಡಿದ ಖರ್ಚು, ಸೆಟ್ಟುಗಳು, ಅಭಿಷೇಕ್ ಡ್ಯಾನ್ಸ್ ಮೂವ್ಮೆಂಟ್ ಈ ಚರ್ಚೆಗೆ ಪ್ರಮುಖ ಕಾರಣ.

'ಬ್ಯಾಡ್ ಮ್ಯಾನರ್ಸ್' ಸಾಂಗ್‌ಗೆ 'ಜಾಕಿ' ಟಚ್
ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾ ಶೂಟಿಂಗ್‌ಗೆ ತುಂಬಾನೇ ಸಮಯ ಹಿಡಿದಿದೆ. ದುನಿಯಾ ಸೂರಿ ನಿಧಾನವಾಗಿ ಈ ಸಿನಿಮಾವನ್ನು ಶೂಟ್ ಮಾಡಿದ್ದಾರೆ. ಅಭಿಷೇಕ್ ಅಂಬರೀಶ್ ಕೂಡ ಅಷ್ಟೇ ಕೂಲ್ ಆಗಿಯೇ ಶೂಟಿಂಗ್ ಮುಗಿಸಿದ್ದಾರೆ. ಆದರೆ, ಸುಕ್ಕಾ ಸೂರಿ ಸಿನಿಮಾದಲ್ಲಿ ಹೀರೊಗಾಗಿ ಒಂದು ಇಂಟ್ರುಡಕ್ಷನ್ ಸಾಂಗ್ ಪ್ಲ್ಯಾನ್ ಮಾಡಿದ್ದರು. ಅದು ಪಕ್ಕಾ ಅಪ್ಪು ಹಾಗೂ ದುನಿಯಾ ಸೂರಿ ಕಾಂಬಿನೇಷನ್‌ನಲ್ಲಿ ಬಂದ 'ಜಾಕಿ' ಸಿನಿಮಾದ ಟೈಟಲ್ ಟ್ರ್ಯಾಕ್ ಅನ್ನು ನೆನಪಿಸುವಂತಿದೆಯಂತೆ.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ನಿರ್ದೇಶಕ ದುನಿಯಾ ಸೂರಿ ಆಕ್ಷನ್ ಕಟ್ ಹೇಳಿದ ಸಿನಿಮಾವಿದು. 'ಜಾಕಿ' ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇಮೇಜ್ ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿತ್ತು. ಅದರಲ್ಲೂ ಹಾಡುಗಳು ಸಂಚಲನವನ್ನೇ ಸೃಷ್ಟಿಸಿದ್ದವು. ಅದರಲ್ಲೂ ಸೆಟ್ಟಲ್ಲಿ ಶೂಟ್ ಮಾಡಿದ್ದ ಜಾಕಿ ಟೈಟಲ್ ಟ್ರ್ಯಾಕ್ ಸಾಂಗ್ ಪುನೀತ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದ್ದವು. ಈಗ ಅದೇ ಹಾಡನ್ನು ನೆನಪಿಸುವಂತಹ ಹಾಡನ್ನು 'ಬ್ಯಾಡ್ ಮ್ಯಾನರ್ಸ್'ನಲ್ಲಿ ಇಡಲಾಗಿದ್ದು, ಅದಕ್ಕಾಗಿ ಸಿಕ್ಕಾಪಟ್ಟೆ ಹಣವನ್ನು ಖರ್ಚು ಮಾಡಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ.

ಇಂಟ್ರುಡಕ್ಷನ್ ಸಾಂಗ್‌ಗೆ ಬರೋಬ್ಬರಿ 1 ಕೋಟಿ ರೂ.
'ಬ್ಯಾಡ್ ಮ್ಯಾನರ್ಸ್' ಸಿನಿಮಾದ ಇಂಟ್ರುಡಕ್ಷನ್ ಸಾಂಗ್‌ಗೆ ಬರೋಬ್ಬರಿ ಒಂದು ಕೋಟಿ ರೂ. ಖರ್ಚು ಮಾಡಲಾಗಿದ್ಯಂತೆ. ಈ ಹಾಡಿಗಾಗಿ ಸುಮಾರು ಮೂರು ದುಬಾರಿ ಸೆಟ್‌ಗಳನ್ನು ಹಾಕಲಾಗಿತ್ತು. ಎರಡೆರಡು ಸ್ಟುಡಿಯೋಗಳಲ್ಲಿ ಸೆಟ್ ಹಾಕಿ ಇಂಟ್ರುಡಕ್ಷನ್ ಸಾಂಗ್ ಅನ್ನು ಶೂಟ್ ಮಾಡಲಾಗಿದ್ಯಂತೆ. ಸುಮಾರು ಆರು ದಿನಗಳ ಕಾಲ ಅಭಿಷೇಕ್ ಅಂಬರೀಶ್ ಇಂಟ್ರುಡಕ್ಷನ್ ಸಾಂಗ್ ಅನ್ನು ಶೂಟ್ ಮಾಡಲಾಗಿದ್ಯಂತೆ.
ಅಭಿಷೇಕ್ ಅಂಬರೀಶ್ ಈ ಹಾಡಿಗಾಗಿ ಸುಮಾರು ಒಂದು ತಿಂಗಳ ಕಾಲ ಪ್ರಾಕ್ಟಿಸ್ ಮಾಡಿದ್ದಾರೆ. ಆ ಬಳಿಕವಷ್ಟೇ ಈ ಹಾಡನ್ನು ಶೂಟ್ ಮಾಡಲಾಗಿತ್ತು. ಕೊರಿಯೋಗ್ರಾಫರ್ ಧನು 'ಬ್ಯಾಡ್ ಮ್ಯಾನರ್ಸ್' ಇಂಟ್ರುಡಕ್ಷನ್ ಸಾಂಗ್ ಅನ್ನು ಶೂಟಿಂಗ್ ಮಾಡಿದ್ದಾರೆ. ಈ ಹಾಡಿನಲ್ಲಿ ಅಭಿಷೇಕ್ ಅಂಬರೀಶ್ ಜಬರ್ದಸ್ತ್ ಸ್ಟೆಪ್ಟ್ ಹಾಕುವುದನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದಾಗಿದೆ.
'ಬ್ಯಾಡ್ ಮ್ಯಾನರ್ಸ್' ಸಿನಿಮಾವನ್ನು ಸುಮಾರು 160ಕ್ಕೂ ಹೆಚ್ಚು ಸಿನಿಮಾಗಳ ಕಾಲ ಶೂಟಿಂಗ್ ಮಾಡಲಾಗಿದೆ. ಅಭಿಷೇಕ್ ಎರಡನೇ ಸಿನಿಮಾಗೇ ಈ ಮಟ್ಟಿಗೆ ಹಣ ಖರ್ಚು ಮಾಡಿ ಸಿನಿಮಾ ಮಾಡಿ ಇಂಟ್ರುಡಕ್ಷನ್ ಸಾಂಗ್ ಶೂಟ್ ಮಾಡಲಾಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ರುಧ್ರ ಅನ್ನೋ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಚರಣ್ ರಾಜ್ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.
ಅಭಿಷೇಕ್ ಅಂಬರೀಶ್ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್, ಪ್ರಿಯಾಂಕಾ ಕುಮಾರ್ ನಟಿಸಿದ್ದಾರೆ. ಇವರೊಂದಿಗೆ 'ಟಗರು' ಖ್ಯಾತಿಯ ಚರಣ್ ರಾಜ್ ಸಂಗೀತ ಸಂಯೋಚನೆ ಮಾಡಿದ್ದಾರೆ. ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾ ಪಕ್ಕ ಆಕ್ಷನ್ ಥ್ರಿಲ್ಲರ್ ಸಿನಿಮಾ.


Click it and Unblock the Notifications











