'ಕ್ರಾಂತಿ' ಹಿಂದೆನೇ 'ವೀರಮದಕರಿ' ಸದ್ದು: 'RVMN' ಬಗ್ಗೆ ಏನಿದು ಖಬರ್?

ದರ್ಶನ್ ಸಿನಿಮಾ 'ಕ್ರಾಂತಿ' ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. 22 ತಿಂಗಳ ಬಳಿಕ ತೆರೆಕಂಡಿರೋ ದರ್ಶನ್ ಸಿನಿಮಾವನ್ನು ನೋಡಿ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ತೆರೆಮೇಲಾಗುತ್ತಿರುವ ಶಿಕ್ಷಣ 'ಕ್ರಾಂತಿ'ಯನ್ನು ನೋಡಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ.

'ಕ್ರಾಂತಿ' ಮೂರನೇ ದಿನ ಪ್ರದರ್ಶನ ಕಾಣುತ್ತಿದೆ. ಸಿನಿಮಾಗೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರೂ, ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿರಲಿಲ್ಲ. ಆದರೆ, ಎರಡನೇ ದಿನ ಕೊಂಚ ಹಿನ್ನಡೆ ಅನುಭವಿಸಿದೆ. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸುದ್ದಿಯೊಂದು ಸೌಂಡು ಮಾಡುತ್ತಿದೆ.

ದರ್ಶನ್ ಹಾಗೂ ರಾಜೇಂದ್ರ ಸಿಂಗ್ ಬಾಬು ಕಾಂಬಿನೇಷನ್‌ನಲ್ಲಿ ಸೆಟ್ಟೇರಬೇಕಿದ್ದ ಸಿನಿಮಾ ಬಗ್ಗೆ ಮತ್ತೆ ಗೆಲ್ಲೆದ್ದಿದೆ. ಮತ್ತೆ ಆರಂಭ ಆಗುವ ಸೂಚನೆಯೂ ಸಿಗುತ್ತಿದೆ. ಅಷ್ಟಕ್ಕೂ 'ವೀರ ಮದಕರಿ ನಾಯಕ' ಸಿನಿಮಾ ಸೆಟ್ಟೇರುತ್ತಾ? ಈ ಬಾರಿ ಸಿನಿಮಾ ಅನೌನ್ಸ್ ಆಗೋದು ಪಕ್ಕಾನಾ? ಅಸಲಿಗೆ ಮ್ಯಾಟರ್‌ ಏನು ಅಂತ ತಿಳಿಯುವುದಕ್ಕೆ ಮುಂದೆ ಓದಿ.

ದರ್ಶನ್ 'RVMN' ಬಗ್ಗೆ ಏನಿದು ಖಬರ್?

ದರ್ಶನ್ 'RVMN' ಬಗ್ಗೆ ಏನಿದು ಖಬರ್?

ಕೊರೊನಾ ಬಾರದೇ ಹೋಗಿದ್ದರೆ, ದರ್ಶನ್ ಇಷ್ಟೊತ್ತಿಗೆ 'ವೀರ ಮದಕರಿ ನಾಯಕ'ನ ಅವತಾರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಕೊರೊನಾ, ಲಾಕ್‌ಡೌನ್ ಅಂತ ಆ ಸಿನಿಮಾ ನಿಂತು ಹೋಗಿತ್ತು. ಮುಂದಿನ ದಿನಗಳಲ್ಲಿ ಈ ಸಿನಿಮಾ ಬಗ್ಗೆ ಆಲೋಚನೆ ಮಾಡುತ್ತೇವೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಈಗ 'ಕ್ರಾಂತಿ' ಬಿಡುಗಡೆಯಾದ ಎರಡು ದಿನಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಇದೇ ಸಿನಿಮಾ ಬಗ್ಗೆ ಚರ್ಚೆಯಾಗುತ್ತಿದೆ.

ಫೆಬ್ರವರಿ 16ಕ್ಕೆ ಅಪ್‌ಡೇಟ್ ಏನು?

ಫೆಬ್ರವರಿ 16ಕ್ಕೆ ಅಪ್‌ಡೇಟ್ ಏನು?

ಸೋಶಿಯಲ್ ಮೀಡಿಯಾಗಳಲ್ಲಿ 'ವೀರ ಮದಕರಿ ನಾಯಕ' ಸಿನಿಮಾದ ಅಪ್‌ಡೇಟ್ ಸಿಗುತ್ತೆ ಅಂತ ಸುದ್ದಿಯಾಗುತ್ತಿದೆ. ಜೊತೆಗೊಂದು ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದೆ. ಇದರಲ್ಲಿ ರಾಕ್‌ಲೈನ್ ಪ್ರೊಡಕ್ಷನ್ ನಿರ್ಮಾಣ, ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಅಂತ ಹೇಳಲಾಗಿದ್ದು, ಫೆಬ್ರವರಿ 16ಕ್ಕೆ ಅನೌನ್ಸ್‌ಮೆಂಟ್ ಇದೆ ಎನ್ನಲಾಗಿದೆ. ಅಂದ್ಹಾಗೆ ಇದು ಫ್ಯಾನ್ ಮೇಡ್ ಪೋಸ್ಟರ್ ಆಗಿದ್ದರೂ, ಇದರಿಂದ ದರ್ಶನ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ಸೆಟ್ಟೇರಬೇಕಿತ್ತು 'ವೀರ ಮದಕರಿ ನಾಯಕ'

ಸೆಟ್ಟೇರಬೇಕಿತ್ತು 'ವೀರ ಮದಕರಿ ನಾಯಕ'

ದರ್ಶನ್ 'ವೀರ ಮದಕರಿ ನಾಯಕ' ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಬ್ಯಾಕ್‌ಗ್ರೌಂಡ್‌ನಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸ್ಕ್ರಿಪ್ ಕೂಡ ಮಾಡಿಟ್ಟುಕೊಂಡಿದ್ದರು. ಇನ್ನೇನು ಸಿನಿಮಾ ಆರಂಭ ಆಗೇ ಬಿಡ್ತು ಅಂತ ಎಲ್ಲರೂ ಭಾವಿಸಿದ್ದರು. ಇದಕ್ಕಿದ್ದಂತೆ 'ವೀರ ಮದಕರಿ ನಾಯಕ' ಸಿನಿಮಾದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ಅನೌನ್ಸ್ ಮಾಡಲಾಗಿತ್ತು. ಈ ಬೆನ್ನಲ್ಲೇ ತರುಣ್ ಸುಧೀರ್ ನಿರ್ದೇಶಿಸುತ್ತಿರುವ ದರ್ಶನ್ 56ನೇ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.

'RVMN' ಸಿನಿಮಾ ವಿರುದ್ಧ ಕಿಚ್ಚನ ಫ್ಯಾನ್ಸ್ ಆಕ್ರೋಶ

'RVMN' ಸಿನಿಮಾ ವಿರುದ್ಧ ಕಿಚ್ಚನ ಫ್ಯಾನ್ಸ್ ಆಕ್ರೋಶ

ದರ್ಶನ್ 'ವೀರ ಮದಕರಿ ನಾಯಕ' ಸಿನಿಮಾ ಅನೌನ್ಸ್ ಮಾಡುತ್ತಿದ್ದಂತೆ ಚಿತ್ರದುರ್ಗ ಸೇರಿದಂತೆ ಹಲವೆಡೆಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಕಿಚ್ಚ ಸುದೀಪ್ ಈ ಪಾತ್ರದಲ್ಲಿ ನಟಿಸಬೇಕು ಅಂತ ಆ ಸಮಾಜದ ಮುಖಂಡರು ಹೇಳಿಕೆಗಳನ್ನು ನೀಡಿದ್ದರು. ಇದರೊಂದಿಗೆ ಕಿಚ್ಚ ಫ್ಯಾನ್ಸ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಈಗ ಮತ್ತೆ 'ವೀರ ಮದಕರಿ ನಾಯಕ' ಸದ್ದು ಕೇಳಿಬರುತ್ತಿದೆ.

More from Filmibeat

English summary
According To Social Media, February 16th Darshan Movie Veera Madakari Nayaka Update, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X