ದಳಪತಿ ವಿಜಯ್ ಕೊನೆಯ ಸಿನಿಮಾಗೆ ವಿಶಾಲ್ ಆಕ್ಷನ್ ಕಟ್ ಹೇಳ್ತಾರಾ? ಏನಿದು ಹೊಸ ಸುದ್ದಿ?

ದಳಪತಿ ವಿಜಯ್ ರಾಜಕೀಯಕ್ಕೆ ಧುಮುಕುವುದಾಗಿ ಈಗಾಗಲೇ ಅನೌನ್ಸ್ ಮಾಡಿದ್ದಾರೆ. ತಮ್ಮ ರಾಜಕೀಯ ಪಕ್ಷವನ್ನೂ ಅನೌನ್ಸ್ ಮಾಡಿದ್ದಾರೆ. ಈ ಬೆನ್ನಲ್ಲೇ ಇನ್ನು ಎರಡೇ ಎರಡು ಸಿನಿಮಾಗಳಲ್ಲಿ ದಳಪತಿ ವಿಜಯ್ ನಟಿಸುತ್ತಾರೆ ಅನ್ನುವ ಸುದ್ದಿಯನ್ನೇ ಅರಗಿಸಿಕೊಳ್ಳುವುದಕ್ಕೆ ಅವರ ಅಭಿಮಾನಿಗಳಿಗೆ ಸಾಧ್ಯವಾಗಿಲ್ಲ. ಹೀಗಿರುವಾಗ ಹೊಸ ಸುದ್ದಿಯೊಂದು ತಮಿಳು ನಾಡಿನಲ್ಲಿ ಹರಿದಾಡುತ್ತಿದೆ.

ದಳಪತಿ ವಿಜಯ್ ನಟನೆಯ 69ನೇ ಸಿನಿಮಾ ಬಳಿಕ ಸಂಪೂರ್ಣವಾಗಿ ರಾಜಕೀಯಕ್ಕೆ ಧುಮುಕಲಿದ್ದಾರೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ದಳಪತಿ ವಿಜಯ್ ಪಕ್ಷ ಸ್ಪರ್ಧಿಸಲಿದೆ. ಹೀಗಾಗಿ ಹೆಚ್ಚು ಕಡಿಮೆ ಎರಡು ವರ್ಷಗಳ ಕಾಲ ತಮಿಳುನಾಡಿನ ಜನರ ಜೊತೆ ಬೆರೆಯುವುದಕ್ಕೆ ನಿರ್ಧರಿಸಿದ್ದಾರೆ. ಹೀಗಾಗಿ 69ನೇ ಸಿನಿಮಾವೇ ಕೊನೆ ಎಂದು ಹೇಳಲಾಗುತ್ತಿದೆ.

Actor vishal wants to direct Thalapathy Vijay trending in tamil nadu

ಈ ಮಧ್ಯೆ 69ನೇ ಸಿನಿಮಾವನ್ನು ಯಾರು ನಿರ್ದೇಶನ ಮಾಡುತ್ತಾರೆ ಅನ್ನೋ ಸುದ್ದಿನೂ ಚರ್ಚೆಯಾಗುತ್ತಿದೆ. ತಮಿಳಿನ ಖ್ಯಾತ ನಿರ್ದೇಶಕರ ಹೆಸರುಗಳು ಬಂದು ಹೋಗಿವೆ. ಕಾರ್ತಿಕ್ ಸುಬ್ಬರಾಜ್ಮ, ಬಳಿಕ ವೆಟ್ರಿಮಾರನ್ ಹೆಸರು ಓಡಾಡುತ್ತಿದೆ. ಇವರೊಂದಿಗೆ ತಮಿಳಿನ ಮತ್ತೊಬ್ಬ ಸ್ಟಾರ್ ನಟ ವಿಶಾಲ್ ಕೂಡ ದಳಪತಿ ವಿಜಯ್‌ ಕೊನೆಯ ಸಿನಿಮಾ ನಿರ್ದೇಶನ ಮಾಡಬೇಕು ಅನ್ನುವ ಆಸೆ ವ್ಯಕ್ತ ಪಡಿಸಿದ್ದಾರೆ ಅನ್ನುವ ಸುದ್ದಿ ಹಬ್ಬಿದೆ.

ಸದ್ಯ ದಳಪತಿ ವಿಜಯ್ ವೆಂಕಟ್ ಪ್ರಭು ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ವಿಜಯ್ ತಂದೆ ಹಾಗೂ ಮಗನ ಪಾತ್ರದಲ್ಲಿ ನಟಿಸುತ್ತಿದ್ದಾರೆಂದು ನಿರ್ದೇಶಕ ವೆಂಕಟ್ ಪ್ರಭು ಸಿನಿಮಾದ ಪೋಸ್ಟರ್ ಮೂಲಕ ಘೋಷಣೆ ಮಾಡಿದ್ದರು. ಇದರೊಂದಿಗೆ ಇನ್ನು ಎರಡು ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಾರೆ ಎನ್ನಲಾಗಿದೆ. ಒಂದು 'ಕೋಡ್' ಇನ್ನೊಂದು ದಳಪತಿ 69ನೇ ಸಿನಿಮಾ. ಈ ಎರಡು ಸಿನಿಮಾ ಬಳಿಕ ನಟನೆಗೆ ಬ್ರೇಕ್ ಕೊಡಲಿದ್ದಾರೆ.

ಈಗಾಗಲೇ ದಳಪತಿ 69ನೇ ಸಿನಿಮಾಗೆ ತೆಲುಗಿನ ಡಿವಿವಿ ನಿರ್ಮಾಣ ಸಂಸ್ಥೆ ಹಣ ಹೂಡಲಿದೆ ಎಂದು ಹೇಳಲಾಗುತ್ತಿದೆ. ಡಿವಿವಿ ಸಂಸ್ಥೆ ರಾಜಮೌಳಿ ನಿರ್ದೇಶಿಸಿದ RRR ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಈಗ ಇದೇ ಸಂಸ್ಥೆ ದಳಪತಿ ವಿಜಯ್ ಸಿನಿಮಾಗೆ ಹಣ ಹೂಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಸಿಕ್ಕಿಲ್ಲ.

ಈ ಮಧ್ಯೆ ದಳಪತಿ ವಿಜಯ್ ಸಿನಿಮಾವನ್ನು ನಿರ್ದೇಶನ ಮಾಡಲು ವಿಶಾಲ್ ಆಸೆ ಪಟ್ಟಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ಈಗಾಗಲೇ ದಳಪತಿ ವಿಜಯ್ ಎರಡೂ ಸಿನಿಮಾಗಳಿಗೂ ನಿರ್ದೇಶಕರು ಫಿಕ್ಸ್ ಆಗಿದ್ದಾರೆ ಅನ್ನೋದು ಮಾಹಿತಿ. ಹೀಗಾಗಿ ವಿಶಾಲ್‌ಗೆ ಈ ಅವಕಾಶ ಸಿಗೋದು ಅನುಮಾನ ಎನ್ನಲಾಗಿದೆ. ಹಾಗೇ ಒಂದು ವೇಳೆ ವಿಜಯ್ 2026 ಎಲೆಕ್ಷನ್‌ನಲ್ಲಿ ಸೋತು ಮತ್ತೆ ಚಿತ್ರರಂಗಕ್ಕೆ ಬಂದರೆ, ಆಗ ಅವಕಾಶ ಸಿಗಬಹುದೇನೋ ಅಂತ ಮಾತಾಡಿಕೊಳ್ಳುತ್ತಿದ್ದಾರೆ.

More from Filmibeat

English summary
Actor vishal wants to direct Thalapathy Vijay trending in tamil nadu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X