ಆಫರ್‌ಗಳಿಗಾಗಿ ದುಬಾರಿ ಸಂಭಾವನೆ ಇಳಿಸಿಕೊಂಡ್ರಾ ಪೂಜಾ ಹೆಗ್ಡೆ? ಸಿನಿಮಾ ಮಂದಿ ಹೇಳೋದೇನು?

ಕೇವಲ ಎರಡು ವರ್ಷಗಳ ಹಿಂದಷ್ಟೇ ಪೂಜಾ ಹೆಗ್ಡೆ ಟಾಲಿವುಡ್‌ನ ನಂ 1 ಹೀರೊಯಿನ್ ಆಗಿದ್ದರು. ಟಾಲಿವುಡ್‌ ಸೂಪರ್‌ಸ್ಟಾರ್‌ ಸಿನಿಮಾಗಳಿಗೆ ನಟಿ ಪೂಜಾ ಹೆಗ್ಡೆನೇ ನಾಯಕಿಯಾಗಬೇಕಿತ್ತು. ಅದೇ ಎರಡು ವರ್ಷಗಳ ಅಂತರದಲ್ಲಿ ಎಲ್ಲಾ ಬದಲಾಗಿಬಿಟ್ಟಿದೆ.

'ಅಲಾ ವೈಕುಂಠಪುರಮುಲೋ' ಪೂಜಾ ಹೆಗ್ಡೆಯ ಕೊನೆಯ ಬ್ಲಾಕ್‌ಬಸ್ಟರ್ ಸಿನಿಮಾ. ಇಲ್ಲಿಂದ ಪೂಜಾ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಖಾಡೆ ಮಲಗುತ್ತಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೂಪರ್‌ಸ್ಟಾರ್ ಸಿನಿಮಾಗಳಲ್ಲಿ ನಟಿಸಿದರೂ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತು ಸುಣ್ಣವಾಗಿತ್ತು.

ಅದ್ಯಾವಾಗ ಪೂಜಾ ಹೆಗ್ಡೆ ಒಂದರ ಹಿಂದೊಂದು ಫ್ಲಾಪ್ ಸಿನಿಮಾಗಳನ್ನು ಕೊಟ್ರೋ ಅಲ್ಲಿಂದ ಪರಿಸ್ಥಿತಿನೇ ಬದಲಾಗಿಬಿಟ್ಟಿದೆ. ಈಗ ಆಫರ್ ಗಿಟ್ಟಿಸಿಕೊಡುವುದಕ್ಕೆ ಪೂಜಾ ಹೆಗ್ಡೆ ತನ್ನ ಸಂಭಾವನೆಯನ್ನೇ ಕಡಿಮೆ ಮಾಡಿಕೊಂಡಿದ್ದಾರಂತೆ. ಟಾಲಿವುಡ್‌ನಲ್ಲಿ ಇಂತಹದ್ದೊಂದು ಸುದ್ದಿ ಬೇಜಾನ್ ಸದ್ದು ಮಾಡುತ್ತಿದೆ. ಅಸಲಿಗೆ ಏನಿದು ಸುದ್ದಿ?

ಪೂಜಾ–ಹೆಗ್ಡೆ ಉತ್ತರ ದಕ್ಷಿಣದಲ್ಲಿ ಬ್ಯುಸಿ?

ಪೂಜಾ–ಹೆಗ್ಡೆ ಉತ್ತರ ದಕ್ಷಿಣದಲ್ಲಿ ಬ್ಯುಸಿ?

ಪೂಜಾ ಹೆಗ್ಡೆ ನಿರಂತರವಾಗಿ ಫ್ಲಾಪ್ ಸಿನಿಮಾಗಳನ್ನು ಕೊಟ್ಟಿದ್ದನ್ನು ಅಲ್ಲಗೆಳೆಯುವಂತಿಲ್ಲ. ಆದರೂ, ಕೈಯಲ್ಲಿ ಸಿನಿಮಾ ಇಲ್ಲ ಅನ್ನುವಂತೇನು ಇಲ್ಲ. ಬಾಲಿವುಡ್‌ನಲ್ಲಿ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ 'ಕಿಸಿ ಕಿ ಭಾಯ್ ಕಿಸಿ ಕಾ ಜಾನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗೇ ಟಾಲಿವುಡ್‌ನಲ್ಲಿ ಸೂಪರ್‌ಸ್ಟಾರ್ ಮಹೇಶ್ ಬಾಬು ಸಿನಿಮಾಗೆ ಲೀಡ್ ಹೀರೊಯಿನ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ತ್ರಿಮಿಕ್ರಮ್ ನಿರ್ದೇಶನ ಮಾಡುತ್ತಿದ್ದಾರೆ. ಇವೆರಡು ಸಿನಿಮಾಗಳು ಬಿಟ್ಟರೆ ಮತ್ಯಾವುದೇ ಹೊಸ ಪ್ರಾಜೆಕ್ಟ್ ಕೈಯಲ್ಲಿ ಇಲ್ಲ. ಹೀಗಾಗಿ ಹೊಸ ಆಫರ್‌ಗಳನ್ನು ಗಿಟ್ಟಿಸಿಕೊಳ್ಳುವುದಕ್ಕೆ ಪೂಜಾ ಹೆಗ್ಡೆ ಸಂಭಾವನೆಯನ್ನೇ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದ ಸುದ್ದಿ ಹರಿದಾಡುತ್ತಿದೆ.

ಪೂಜಾ ಹೆಗ್ಡೆ ಸಂಭಾವನೆಗೆ ಕತ್ತರಿ

ಪೂಜಾ ಹೆಗ್ಡೆ ಸಂಭಾವನೆಗೆ ಕತ್ತರಿ

ಪೂಜಾ ಹೆಗ್ಡೆ ಕೈಯಲ್ಲಿ ಎರಡು ಸೂಪರ್‌ಸ್ಟಾರ್ ಸಿನಿಮಾಗಳಿವೆ. ಈ ಎರಡೂ ಸಿನಿಮಾಗಳೂ ಗಲ್ಲಲೇ ಬೇಕಿದೆ. ಒಂದ್ವೇಳೆ ಇವೂ ಮಕಾಡೆ ಮಲಗಿದೆ, ಪೂಜಾ ಹೆಗ್ಡೆಗೆ ಸಂಕಷ್ಟ ಕಟ್ಟಿಟ್ಟ ಬುತ್ತಿನೇ. ಅದಕ್ಕೆ ತನ್ನ ಸಂಭಾವನೆಯನ್ನೇ ಕಡಿಮೆ ಮಾಡಿಕೊಳ್ಳುವುದಕ್ಕೆ ನಿರ್ಧಾರ ಮಾಡಿದ್ದಾರೆ ಅಂತ ಟಾಲಿವುಡ್ ಮಾಧ್ಯಮಗಳು ವರದಿ ಮಾಡಿದೆ. ಬರೋಬ್ಬರಿ ಬ್ಯಾಕ್ ಟು ಬ್ಯಾಕ್ 4 ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತಿದ್ದರಿಂದ ಸಂಭಾವನೆ ಕಡಿತಗೊಳಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಎದುರಾಗಿದ್ಯಂತೆ.

ಪೂಜಾ ಹೆಗ್ಡೆ ಸಂಭಾವನೆ ಎಷ್ಟು?

ಪೂಜಾ ಹೆಗ್ಡೆ ಸಂಭಾವನೆ ಎಷ್ಟು?

ಪೂಜಾ ಹೆಗ್ಡೆ ಟಾಲಿವುಡ್‌ನ ನಂ 1 ನಟಿ ಅನ್ನೋ ಪಟ್ಟಕ್ಕೆ ಏರಿದ್ದಾಗ, ಭಾರಿ ಸಂಭಾವನೆ ಕೇಳುತ್ತಿದ್ದರಂತೆ. ಟಾಲಿವುಡ್ ಮೂಲಗಳ ಪ್ರಕಾರ, ಪೂಜಾ ಹೆಗ್ಡೆ ಸರಿ ಸುಮಾರು 3 ರಿಂದ 3.5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರಂತೆ. ಆದ್ರೀಗ ಸಿನಿಮಾ ಸೋತಿದ್ದರಿಂದ ಆಫರ್‌ಗಳಿಗೋಸ್ಕರ ತಾನಾಗಿಯೇ ಸಂಭಾವನೆ ಕಡಿಮೆ ಮಾಡಿಕೊಂಡಿದ್ದಾರೆ ಅಂತ ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ.

2 ಸಿನಿಮಾದಿಂದ ಪೂಜಾ ಹೆಗ್ಡೆ ಔಟ್

2 ಸಿನಿಮಾದಿಂದ ಪೂಜಾ ಹೆಗ್ಡೆ ಔಟ್

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿರೋ ಪೂಜಾ ಹೆಗ್ಡೆ ಈಗ ಸಿನಿಮಾ ಮಂದಿ ಪಾಲಿಗೆ ಫ್ಲಾಪ್ ಸ್ಟಾರ್. ಚಿರಂಜೀವಿ ರಾಮ್ ಚರಣ್ ಅಭಿನಯದ 'ಆಚಾರ್ಯ', ಪ್ರಭಾಸ್ ನಟನೆಯ 'ರಾಧೆಶ್ಯಾಮ್', ರಣ್‌ವೀರ್ ಸಿಂಗ್ ಸಿನಿಮಾ 'ಸರ್ಕಸ್', ದಳಪತಿ ವಿಜಯ್ ಸಿನಿಮಾ 'ಬೀಸ್ಟ್' ಇಷ್ಟರಲ್ಲೂ ನಟಿಸಿದ್ದರು. ಅವೆಲ್ಲವೂ ಬಾಕ್ಸಾಫೀಸ್‌ನಲ್ಲಿ ಸೋತಿವೆ. ಅಲ್ಲದೆ 'ಭವದೀಯುಡು ಭಗತ್ ಸಿಂಗ್' ಸಿನಿಮಾದಿಂದ ಕೈ ಬಿಟ್ಟಿದ್ದು, ವಿಜಯ್ ದೇವರಕೊಂಡ ಜೊತೆ ನಟಿಸಬೇಕಿದ್ದ ಸಿನಿಮಾ 'ಜನಗನಮನ' ನಿಂತೇ ಹೋಗಿದೆ. ಹೀಗಾಗಿ ಮಹೇಶ್ ಬಾಬು ಜೊತೆ ನಟಿಸುತ್ತಿರೋ ಸಿನಿಮಾ ಗೆದ್ದರೆ, ಪೂಜಾ ಹೆಗ್ಡೆ ಖದರ್ ಮತ್ತೆ ಹೆಚ್ಚಾಗಬಹುದು.

More from Filmibeat

English summary
Actress Pooja Hegde Reduced Her Remuneration After Back to Back Flops, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X