For Quick Alerts
  ALLOW NOTIFICATIONS  
  For Daily Alerts

  ನಟಿ ಪ್ರೇಮಾ ಮೇಲೆ ಹಾರಾಡಿದ ಗಾಸಿಪ್ ಗೂಬೆ

  By ಉದಯರವಿ
  |

  ಕನ್ನಡ ಚಿತ್ರರಂಗದ ಅತ್ಯಪೂರ್ವ ನಟಿ ಪ್ರೇಮಾ. ಸಾಫ್ಟ್ ವೇರ್ ಇಂಜಿನಿಯರ್ ಜೀವನ್ ಅಪ್ಪಚ್ಚು ಅವರನ್ನು ವರಿಸಿದ ಬಳಿಕ ಆಗಾಗ ಬಣ್ಣಹಚ್ಚುತ್ತಿದ್ದಾರೆ. ಸರಿಸುಮಾರು 50 ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದರೂ ಯಾವುದೇ ವಾದ ವಿವಾದ, ಗಾಳಿಮಾತು, ಗಾಸಿಪ್ ಗಳಿಂದ ದೂರ ಇದ್ದರು.

  ಈಗ ಅಂತಹ ಮಂದಾರ ಹೂವಿನಂತಹ ನಟಿ ಮೇಲೂ ಗಾಸಿಪ್ ಸುದ್ದಿಯೊಂದನ್ನು ಹರಿಯಬಿಡಲಾಗಿದೆ. ಅದೇನೆಂದರೆ ಪ್ರೇಮಾ ಅವರಿಗೆ ಆರೋಗ್ಯ ಸರಿ ಇಲ್ಲ. ಹಾಗಾಗಿ ಅವರು ಚಿತ್ರಗಳಲ್ಲಿ ಅಭಿನಯಿಸುತ್ತಿಲ್ಲ ಎಂಬುದು. 'ಶಿಶಿರ' ಚಿತ್ರದ ಬಳಿಕ ಅವರು ಬಣ್ಣ ಹಚ್ಚದೇ ಇರುವುದು, ಈ ಗಾಸಿಪ್ ಸುದ್ದಿ ಹರಡಲು ಕಾರಣವಾಗಿದೆ.

  ಆದರೆ ಪ್ರೇಮಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ತಾವು ಆರೋಗ್ಯವಾಗಿಯೇ ಇದ್ದೇವೆ. ತಮ್ಮ ಗಂಡನ ಜೊತೆ ಹ್ಯಾಪಿಯಾಗಿಯೇ ಜೀವನ ಕಳೆಯುತ್ತಿದ್ದೇನೆ. ಪ್ರತಿನಿತ್ಯ ಯೋಗಾಭ್ಯಾಸ ಮಾಡುತ್ತಿದ್ದು ತಾವು ಸುಖವಾಗಿದ್ದೇವೆ" ಎಂದಿದ್ದಾರೆ.

  ತಮಗೆ ಹಲವಾರು ಅವಕಾಶಗಳು ಬರುತ್ತಿದ್ದರೂ ಯಾವುದನ್ನೂ ಒಪ್ಪಿಕೊಳ್ಳುತ್ತಿಲ್ಲ. ಕಾರಣ ಅವೆಲ್ಲಾ ಸೀದಾ ಸಾದಾ ಪಾತ್ರಗಳು. ತಾನೀಗ ಕ್ರಿಯಾಶೀಲ, ಸವಾಲಿನ ಪಾತ್ರಗಳ ನಿರೀಕ್ಷೆಯಲ್ಲಿದ್ದೇನೆ. ತಮ್ಮ ವೃತ್ತಿ ಬದುಕಿನಲ್ಲಿ ಶ್ರೀದೇವಿ ಹಾಗೂ ಸ್ಮಿತಾ ಪಾಟೀಲ್ ಪೋಷಿಸಿದಂತಹ ಪಾತ್ರಗಳನ್ನು ಬಯಸುತ್ತಿದ್ದೇನೆ ಎಂದಿದ್ದಾರೆ.

  ವೃತ್ತಿ ಬದುಕಿನಲ್ಲಿ ಒಂದು ಹಂತಕ್ಕೆ ಏರಿದ ಮೇಲೆ ಪಾತ್ರಗಳ ಆಯ್ಕೆಯಲ್ಲೂ ವೈವಿಧ್ಯತೆ ಇರಬೇಕು. ತಾವು ಆ ರೀತಿಯ ವೈವಿಧ್ಯಮಯ ಪಾತ್ರಗಳನ್ನು ನಿರೀಕ್ಷಿಸುತ್ತಿದ್ದೇವೆ. ಆ ರೀತಿಯ ಪಾತ್ರಗಳು ಬರುತ್ತಿಲ್ಲ. ಹಾಗಾಗಿ ತಾವು ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿಲ್ಲ ಎಂದಿದ್ದಾರೆ ಪ್ರೇಮಾ.

  ಬರೋಬ್ಬರಿ 15 ವರ್ಷಗಳ ಕಾಲ ನಾಯಕಿಯಾಗಿ ಚಿತ್ರರಂಗದಲ್ಲಿದ್ದ ಪ್ರೇಮಾ, ದಶಕಗಳ ಕಾಲ ಯಶಸ್ವಿ ಹೀರೋಯಿನ್ ಆಗಿ ಮೆರೆದವರು. ಈಗವರು ನಿರೀಕ್ಷಿಸುತ್ತಿರುವ ಪಾತ್ರಗಳು ಪ್ರಬುದ್ಧವಾಗಿರಬೇಕು ಎಂದು ಬಯಸಿದ್ದಾರೆ ಅಷ್ಟೆ. ಈ ಹಿಂದೆ ಪ್ರೇಮಾ ಅವರಿಗೆ ತಾಯಿ ಪಾತ್ರ ಅವಕಾಶ ಬಂದಿತ್ತು. ಅದು ಸುದ್ದಿ ಇಂಟರೆಸ್ಟಿಂಗ್ ಆಗಿದೆ ಓದಿ.

  English summary
  Kannada actress Prema upset over rumour that her health condition is bad and not keeping fine. The actress ruled out the such comments. She said, I am hale and healthy. I am having a good family life with my husband.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X