18, 28, 42, ಮೂರು ಶೇಡ್‌ನಲ್ಲಿ ರಚಿತಾ ರಾಮ್; ನಿದ್ದೆ ಕೆಡಿಸಲಿರೋ ಡಿಂಪಲ್ ಕ್ವೀನ್

ದುನಿಯಾ ವಿಜಯ್ ಜೊತೆ ರಚಿತಾ ರಾಮ್ ಎರಡನೇ ಬಾರಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ದುನಿಯಾ ವಿಜಯ್ ಅವರ ಪುತ್ರಿ ರಿತಾನ್ಯಾ (ಮೋನಿಕಾ) ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಂದೆ ಹಾಗೂ ಮಗಳು ಒಟ್ಟಿಗೆ ನಟಿಸುತ್ತಿರುವ ಮೊದಲ ಸಿನಿಮಾವಿದೆ. 'ಕಾಟೇರ'ದಂತಹ ಬ್ಲಾಕ್ ಬಸ್ಟರ್ ಸಿನಿಮಾಗೆ ಕಥೆ ಬರೆದಿದ್ದ ಜಡೇಶ್ ಹಂಪಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ದುನಿಯಾ ವಿಜಯ್, ಪುತ್ರಿ ರಿತಾನ್ಯಾ ಹಾಗೂ ರಚಿತಾ ರಾಮ್ ಜೋಡಿಯಾಗಿ ನಟಿಸುತ್ತಿರುವ ಈ ಸಿನಿಮಾ ಕೆಲವು ದಿನಗಳ ಹಿಂದಷ್ಟೇ ಸೆಟ್ಟೇರಿತ್ತು. ಈಗ ಸದ್ದಿಲ್ಲದೆ ಸಿನಿಮಾದ ಶೂಟಿಂಗ್ ಕೂಡ ನಡೆಯುತ್ತಿದೆ. ಆದರೂ, ಸಿನಿಮಾ ಟೈಟಲ್ ಮಾತ್ರ ರಿವೀಲ್ ಆಗಿಲ್ಲ. ಆದ್ರೀಗ ಸ್ಯಾಂಡಲ್‌ವುಡ್ ವಲಯದಲ್ಲಿ ದುನಿಯಾ ವಿಜಯ್ ಹೊಸ ಟೈಟಲ್ ಬಗ್ಗೆ ಚರ್ಚೆಯಾಗುತ್ತಿದೆ.

Actress Rachita Ram will be seen in three shades with Duniya Vijay in her new movie

ಅದೇ ಇನ್ನೊಂದು ಕಡೆ ರಚಿತಾ ರಾಮ್ ಪಾತ್ರದ ಬಗ್ಗೆನೂ ಕೆಲವು ವದಂತಿಗಳು ಓಡಾಡುತ್ತಿವೆ. ಈಗಾಗಳೇ ರಚಿತಾ ರಾಮ್ 40 ದಾಟಿದ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಆರಂಭದಲ್ಲಿಯೇ ಚಿತ್ರತಂಡ ಹೇಳಿಕೊಂಡಿತ್ತು. ಆದರೆ, ಡಿಂಪಲ್ ಕ್ವೀನ್ ಪಾತ್ರದ ಬಗ್ಗೆ ಇನ್ನೂ ರಿವೀಲ್ ಆಗಿರಲಿಲ್ಲ. ಆದರೆ, ಈ ಸಿನಿಮಾದಲ್ಲಿ ರಚಿತಾ ರಾಮ್ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ವಿಜಯ್-ರಚಿತಾ ಸಿನಿಮಾದ ಟೈಟಲ್ ಏನು?

ದರ್ಶನ್‌ಗೆ ಮರುಜನ್ಮ ನೀಡಿದ್ದ 'ಸಾರಥಿ' ಸಿನಿಮಾ ನಿರ್ಮಿಸಿದ್ದ ನಿರ್ಮಾಪಕ ಕೆ.ವಿ. ಸತ್ಯ ಪ್ರಕಾಶ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬರೋಬ್ಬರಿ 12 ವರ್ಷಗಳ ಬಳಿಕ ಮತ್ತೆ ನಿರ್ಮಾಣಕ್ಕೆ ಕೈ ಹಾಕಿದ್ದು, ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ದುನಿಯಾ ವಿಜಯ್ ನಟಿಸುತ್ತಿರುವ 29ನೇ ಸಿನಿಮಾ ಅನ್ನೋದು ವಿಶೇಷ.

ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಜೋಡಿಯ ಈ ಸಿನಿಮಾದ ಟೈಟಲ್ ಬಗ್ಗೆ ಚಿತ್ರರಂಗದಲ್ಲಿ ಚರ್ಚೆಯಾಗುತ್ತಿದೆ. ಜಡೇಶ್ ಹಂಪಿ ನಿರ್ದೇಶಿಸುತ್ತಿರುವ ಈ ಸಿನಿಮಾಗೆ 'ರಾಚಯ್ಯ' ಅಂತ ಟೈಟಲ್ ಇಟ್ಟಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಸದ್ಯ ಈ ಟೈಟಲ್ ಚಿತ್ರರಂಗದಲ್ಲಿ ಸೋರಿಕೆಯಾಗಿದ್ದು, ಟೀಮ್ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ, ಸಿನಿಮಾ ಮಂದಿ ಮಾತ್ರ ಇದೇ ಟೈಟಲ್ ಅಂತ ಹೇಳಿಕೊಳ್ಳುತ್ತಿದ್ದಾರೆ.

Actress Rachita Ram will be seen in three shades with Duniya Vijay in her new movie

18,28,42 ಮೂರು ಶೇಡ್‌ಗಳಲ್ಲಿ ರಚಿತಾ

ಈಗಾಗಲೇ ರಚಿತಾ ರಾಮ್ ವಿಭಿನ್ನ ಪಾತ್ರಗಳಿರುವ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಇಂತಹದ್ದೇ ಸಾಲಿಗೆ ಈ ಕೂಡ ಸಿನಿಮಾ ಸೇರುತ್ತಿದೆ. ಇದೂವರೆಗೂ ಚಿತ್ರತಂಡ ವಯಸ್ಸು 40 ದಾಟಿದ ಮಹಿಳೆಯ ಪಾತ್ರದಲ್ಲಿ ರಚಿತಾ ರಾಮ್ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ, ಇವರ ರಚಿತಾ ರಾಮ್ ಮೂರು ವಿಭಿನ್ನ ವಯಸ್ಸಿನ ಅಂತರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಮೊದಲು 18ರ ಹರೆಯದ ಯುವತಿಯಾಗಿ ರಚಿತಾ ರಾಮ್ ಲಂಗ ಧಾವಣಿ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಗೇ 28ನೇ ವಯಸ್ಸಿನ ಯುವತಿಯಾಗಿಯೂ ಪ್ರತ್ಯಕ್ಷ ಆಗಲಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ 42ನೇ ವಯಸ್ಸಿನ ಮಹಿಳೆ, ಒಂದು ಮಗುವಿನ ತಾಯಿಯ ಪಾತ್ರದಲ್ಲಿ ಡಿಂಪಲ್ ಕ್ಷೀನ್ ಕಾಣಿಸಿಕೊಳ್ಳಲಿದ್ದಾರೆ ಅಂತ ಆಪ್ತ ಮೂಲಗಳು ಹೇಳಿದೆ. ಆದರೆ, ಇದೂವರೆಗೂ ಚಿತ್ರತಂಡ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಈ ಸಿನಿಮಾ ಕೂಡ 90ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು, ನಿರ್ದೇಶಕ ಜಡೇಶ್ ಹಂಪಿ ಕಂಡಿರುವ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ.

More from Filmibeat

English summary
Rachita Ram three shades in Duniya Vijay movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X