Sapthami Gowda: 'ಕಾಂತಾರ 1' ರೇಸ್‌ನಿಂದ ಸಪ್ತಮಿ ಗೌಡ ಔಟ್? ಉಳಿದವರು ಮೂರು ಮಂದಿ!
ರಿಷಬ್ ಶೆಟ್ಟಿಯನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ್ದು 'ಕಾಂತಾರ'. ಕನ್ನಡ ಪ್ರೇಕ್ಷಕರಿಗಂತಲೇ ಮಾಡಿದ ಈ ಸಿನಿಮಾ ಪ್ಯಾನ್ಸ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿತ್ತು. ಈ ಸಿನಿಮಾದ ಜನಪ್ರಿಯತೆಯನ್ನು ಕಂಡು ಪರಭಾಷೆಗಳಿಗೂ ಡಬ್ ಮಾಡಿ ಬಿಡುಗಡೆ ಮಾಡಿದ್ದು ಹೊಸ ವಿಷಯವೇನಲ್ಲ. ಇಲ್ಲಿಂದ 'ಕಾಂತಾರ' ಸಿನಿಮಾ ಬಗ್ಗೆ ದೇಶಾದ್ಯಂತ ಸಂಚಲನ ಮೂಡಿಸಿತ್ತು.
ದೇಶದ ಉದ್ದಗಲಕ್ಕೂ ಸಿಕ್ಕಿದ ಜನಪ್ರಿಯತೆಯನ್ನು ಮನಗಂಡ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹಾಗೂ ರಿಷಬ್ ಶೆಟ್ಟಿ 'ಕಾಂತಾರ' ಪ್ರೀಕ್ವೆಲ್‌ಗೆ ಕೈ ಹಾಕಿರೋದು ಗೊತ್ತೇ ಇದೆ. ಈಗಾಗಲೇ ರಿಷಬ್ ಶೆಟ್ಟಿಯ ಫಸ್ಟ್ ಲುಕ್ ಕೂಡ ಹೊರಬಿದ್ದಿದೆ. ಈ ಮಧ್ಯೆ ರಿಷಬ್ ಶೆಟ್ಟಿಗೆ ನಾಯಕಿ ಯಾರಾಗುತ್ತಾರೆ ಅನ್ನೋ ಕುತೂಹಲ ಹುಟ್ಟಿಕೊಂಡಿತ್ತು.

'ಕಾಂತಾರ' ಪ್ರೀಕ್ವೆಲ್ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ನಾಯಕಿಯರ ಬಗ್ಗೆ ಕುತೂಹಲ ಹೆಚ್ಚಿದೆ. ಕೆಲವು ದಿನಗಳ ಹಿಂದಷ್ಟೇ ಹೊಂಬಾಳೆ ಫಿಲ್ಮ್ಸ್ ನಾಲ್ಕು ಮಂದಿ ನಾಯಕಿಯರ ಬಗ್ಗೆ ಆಸಕ್ತಿ ತೋರುತ್ತಿದೆ ಎಂದು ಸುದ್ದಿ ಓಡಾಡಿತ್ತು. ಸಾಯಿ ಪಲ್ಲವಿ, ಆಲಿಯಾ ಭಟ್, ಸಪ್ತಮಿಗೌಡ, ರುಕ್ಮಿಣಿ ವಸಂತ್ ಈ ಮೂವರು ನಟಿಯರ ಹೆಸರುಗಳು ಓಡಾಡಿದ್ದವು. ಇವರಲ್ಲಿ ಸಪ್ತಮಿ ಗೌಡ ಸಿನಿಮಾದಿಂದ ಹೊರಬಿದ್ದಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಅಷ್ಟಕ್ಕೂ ಸಪ್ತಮಿ ಗೌಡ 'ಕಾಂತಾರ'ದಿಂದ ಹೊರಬಿದ್ದಿದ್ದು ನಿಜವೇ?
ಸಪ್ತಮಿ ಗೌಡ ನಟಿಸಿದ ಮೂರುನೇ ಕನ್ನಡ ಸಿನಿಮಾ ಕಳೆದ ವಾರವಷ್ಟೇ ರಿಲೀಸ್ ಆಗಿದೆ. ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಪ್ತಮಿ ಗೌಡ ಪಾತ್ರವನ್ನು ಅವರ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಇದೇ ಬೆನ್ನಲ್ಲೇ 'ಕಾಂತಾರ ಚಾಪ್ಟರ್ 1'ಗೂ ಸಪ್ತಮಿ ಗೌಡ ಆಯ್ಕೆ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೀಗ ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯರ ರೇಸ್‌ನಲ್ಲಿ ಹೊರಬಿದ್ದಿದ್ದಾರೆ ಎನ್ನಲಾಗಿದೆ.
'ಕಾಂತಾರ' ಸಿನಿಮಾದಲ್ಲಿ ರಿಷಬ್ ಶೆಟ್ಟಿಯಷ್ಟೇ ಸಪ್ತಮಿ ಗೌಡಗೂ ಜನಪ್ರಿಯತೆ ಸಿಕ್ಕಿತ್ತು. ಹೀಗಾಗಿ ಪ್ರೀಕ್ವೆಲ್‌ನಲ್ಲೂ ಸಪ್ತಮಿ ಗೌಡ ನಟಿಸಿದರೆ, ಸಿನಿಮಾಗೆ ಪ್ಲಾಸ್ ಪಾಯಿಂಟ್ ಆಗುವ ಎಲ್ಲಾ ಸಾಧ್ಯತೆಯಿದೆ ಇತ್ತು. ಆದ್ರೀಗ ಸಪ್ತಮಿ ಗೌಡ ಅವರೇ 'ಕಾಂತಾರ' ಪ್ರೀಕ್ವೆಲ್‌ನಲ್ಲಿ ನಟಿಸುತ್ತಿಲ್ಲ ಎಂದು ಕೆಲವೆಡೆ ಹೇಳಿಕೊಂಡಿದ್ದಾರೆಂದು ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣವೇನು ಅನ್ನೋದು ಇನ್ನಷ್ಟೇ ಹೊರಬೀಳಬೇಕಿದೆ.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿಯೇ ಸಪ್ತಮಿ ಗೌಡ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗಾಗಿ ಸಂಸ್ಥೆಯೇ ಆಸಕ್ತಿ ತೋರಿಸಿರದೇ ಇರುವ ಸಾಧ್ಯತೆನೂ ಇದೆ. ಇನ್ನೊಂದು ಕಡೆ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ 'ಕಾಂತಾರ'ಗೆ ಬೇರೆ ನಾಯಕಿಯನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ.
ಸದ್ಯ 'ಕಾಂತಾರ' ಸಿನಿಮಾದಲ್ಲಿ ಮೂರು ಮಂದಿ ನಾಯಕಿಯರು ರೇಸ್‌ನಲ್ಲಿ ಇದ್ದಾರೆ. ಶಾರ್ಟ್ ಲಿಸ್ಟ್ ಆದವರಲ್ಲಿ ಆಲಿಯಾ ಭಟ್, ಸಾಯಿ ಪಲ್ಲವಿ ಹಾಗೂ ರುಕ್ಮಿಣಿ ವಸಂತ್ ಉಳಿದುಕೊಂಡಿದ್ದು, ಈ ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಇಲ್ಲವೇ ಸಪ್ತಮಿ ಗೌಡ ಸ್ಥಾನದಲ್ಲಿ ಇನ್ನೊಬ್ಬ ನಟಿ ಬಂದರೂ ಬರಬಹುದು ಎಂದು ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಇನ್ನೇ ಕೆಲವೇ ದಿನಗಳಲ್ಲಿ ಹೊಂಬಾಳೆ ಫಿಲ್ಮ್ಸ್, ರಿಷಬ್ ಶೆಟ್ಟಿ ಸಿನಿಮಾದ ನಾಯಕಿ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಬಹುದು.


Click it and Unblock the Notifications











