ಮತ್ತೆ ಬಣ್ಣ ಹಚ್ಚೇ ಬಿಟ್ಟರು ಮೋಹಕತಾರೆ ರಮ್ಯಾ: ಸ್ಯಾಂಡಲ್‌ವುಡ್‌ಗೆ ಪದ್ಮಾವತಿ ಎಂಟ್ರಿ?

ಮೋಹಕತಾರೆ ರಮ್ಯಾಗೆ ಇನ್ನೂ ಅಭಿಮಾನಿಗಳೇನು ಕಮ್ಮಿಯಾಗಿಲ್ಲ. ಹೆಚ್ಚು-ಕಡಿಮೆ ಆರು ವರ್ಷಗಳಿಂದ ಸಿನಿಮಾದಿಂದ ದೂರನೇ ಉಳಿದಿದ್ದರು. ರಾಜಕೀಯದ ಕಡೆಗೆ ಹೆಚ್ಚು ಒಲವು ಬೆಳೆಸಿಕೊಂಡಿದ್ದ ಮೋಹಕತಾರೆ ರಮ್ಯಾ ಈಗ ಮತ್ತೆ ಸಿನಿಮಾಗಳಲ್ಲಿ ನಟಿಸಲು ಮನಸ್ಸು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ರಮ್ಯಾ ಈಗಾಗಲೇ ಕನ್ನಡದ ಸಿನಿಮಾವೊಂದಕ್ಕೆ ಬಣ್ಣ ಹಚ್ಚಿ ಆಗಿದೆ.

ರಮ್ಯಾ ಮತ್ತೆ ಸಿನಿಮಾದಲ್ಲಿ ನಟಿಸಬೇಕು. ಅವರನ್ನು ಸಿನಿಮಾ ಪರದೆ ಮೇಲೆ ಮತ್ತೆ ನೋಡಬೇಕು ಎಂಬ ಹಂಬಲ ಅವರ ಅಭಿಮಾನಿಗಳಲ್ಲಿದೆ. ಹಲವು ದಿನಗಳಿಂದ ರಮ್ಯಾ ಕಮ್ ಬ್ಯಾಕ್ ಮಾಡಬೇಕು ಅಂತ ಸಿನಿಪ್ರಿಯರು ಒತ್ತಡ ಹಾಕುತ್ತಿದ್ದರು. ಅವರ ಒತ್ತಾಯದಂತೆ ಮೋಹಕ ತಾರೆ ಸ್ಯಾಂಡಲ್‌ವುಡ್‌ ಸಿನಿಮಾವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

ಅದೆಷ್ಟೇ ಒತ್ತಡ ಬಂದರೂ ರಮ್ಯಾ ಮಾತ್ರ ಮತ್ತೆ ಸಿನಿಮಾ ಹಾಗೂ ರಾಜಕೀಯದಲ್ಲಿ ಕಾಣಿಸಿಕೊಳ್ಳುವುದಿಲ್ಲವೆಂದು ಹೇಳುತ್ತಿದ್ದರು. ಆದರೆ, ಕನ್ನಡ ಸಿನಿಮಾ ತಂಡವೊಂದು ರಮ್ಯಾ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಶೀಘ್ರದಲ್ಲಿ ಮೋಹಕತಾರೆಯನ್ನು ತೆರೆಮೇಲೆ ನೋಡಬಹುದು ಎನ್ನುತ್ತಿದೆ ಸ್ಯಾಂಡಲ್‌ವುಡ್‌. ಅಷ್ಟಕ್ಕೂ ರಮ್ಯಾ ಕಮ್ ಬ್ಯಾಕ್ ಮಾಡಿರುವ ಬಗ್ಗೆ ಸ್ಯಾಂಡಲ್‌ವುಡ್‌ ಏನಂತಿದೆ ಅಂತ ತಿಳಿಯಲು ಮುಂದೆ ಓದಿ.

ಸ್ಯಾಂಡಲ್‌ವುಡ್‌ಗೆ ಮೋಹಕ ತಾರೆ ಕಮ್‌ ಬ್ಯಾಕ್

ಸ್ಯಾಂಡಲ್‌ವುಡ್‌ಗೆ ಮೋಹಕ ತಾರೆ ಕಮ್‌ ಬ್ಯಾಕ್

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಸಿನಿಮಾವೊಂದರಲ್ಲಿ ಅತಿಥಿ ಪಾತ್ರದಲ್ಲಿ ಈಗಾಗಲೇ ನಟಿಸಿದ್ದಾರೆ ಎನ್ನುವ ಮಾತು ಸ್ಯಾಂಡಲ್‌ವುಡ್‌ನಲ್ಲಿ ಕೇಳಿ ಬರುತ್ತಿದೆ. ಕಮ್ ಬ್ಯಾಕ್ ಸಿನಿಮಾದಲ್ಲಿ ರಮ್ಯಾ ಇದೂವರೆಗೂ ಮಾಡದ ಪಾತ್ರವೊಂದರಲ್ಲಿ ನಟಿಸಿದ್ದು, ಪಾತ್ರ ಚಿಕ್ಕದಿದ್ದರೂ, ಸಿನಿಮಾದ ಹೈಲೈಟ್ ಈ ಪಾತ್ರವೇ ಆಗಿರುತ್ತಂತೆ. ಇಂತಹದ್ದೊಂದು ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದೆ.

ಕಮ್ ಬ್ಯಾಕ್ ಬಗ್ಗೆ ರಮ್ಯಾ ಗಪ್ ಚುಪ್

ಕಮ್ ಬ್ಯಾಕ್ ಬಗ್ಗೆ ರಮ್ಯಾ ಗಪ್ ಚುಪ್

ರಮ್ಯಾ ಕನ್ನಡದ ಸಿನಿಮಾವೊಂದಕ್ಕೆ ಬಣ್ಣ ಹಚ್ಚಿರುವುದು ನಿಜ. ಆದರೆ, ಯಾವ ಸಿನಿಮಾ ಅನ್ನುವ ಗುಟ್ಟನ್ನು ಸ್ಯಾಂಡಲ್‌ವುಡ್ ಬಿಟ್ಟುಕೊಡುತ್ತಿಲ್ಲ. ಈ ವಿಷಯದ ಬಗ್ಗೆ ರಮ್ಯಾ ಕೂಡ ಗಪ್‌ಚುಪ್ ಆಗಿದ್ದಾರೆ. ಇನ್ನೊಂದು ಕಡೆ ಚಿತ್ರತಂಡ ಕೂಡ ಸುಳಿವು ಬಿಟ್ಟು ಕೊಡುತ್ತಿಲ್ಲ. ಸಿನಿಮಾ ಪ್ರಚಾರದ ವೇಳೆ ಈ ವಿಷಯವನ್ನು ರಿವೀಲ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಕಾರಣಕ್ಕೆ ರಮ್ಯಾ ಸೂಪರ್‌ಸ್ಟಾರ್ ಸಿನಿಮಾದಲ್ಲಿ ನಟಿಸಿದ್ದಾರಾ ? ಹೊಸ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರಾ? ಇಲ್ಲ ಪ್ಯಾನ್ ಇಂಡಿಯಾ ಸಿನಿಮಾನಾ ಅನ್ನೋದು ಇನ್ನಷ್ಟೆ ಗೊತ್ತಾಗಬೇಕಿದೆ.

ರಮ್ಯಾಗೆ ಸಿನಿಮಾಗೆ ಇನ್ನೂ ಒಲವಿಲ್ಲ

ರಮ್ಯಾಗೆ ಸಿನಿಮಾಗೆ ಇನ್ನೂ ಒಲವಿಲ್ಲ

ಮೋಹಕ ತಾರೆಯ ಮತ್ತೆ ಸಿನಿಮಾದಲ್ಲಿ ನಟಿಸೋ ಬಗ್ಗೆ ಯೋಚನೆ ಮಾಡಿಲ್ಲ. ಅದ್ಧೂರಿ ರೀ- ಎಂಟ್ರಿ ಬಗ್ಗೆ ರಮ್ಯಾ ಇನ್ನು ಗಂಭೀರವಾಗಿ ಯೋಚಿಸಿಲ್ಲ. ಸಿನಿಮಾದಲ್ಲಿ ನಟಿಸುವ ಬಗ್ಗೆ ರಮ್ಯಾ ಇನ್ನೂ ಅಷ್ಟಾಗಿ ಒಲವು ತೋರುತ್ತಿಲ್ಲ ಅನ್ನೋದು ಸ್ಯಾಂಡಲ್‌ವುಡ್ ಮೂಲಗಳಿಂದ ಕೇಳಿಬರುತ್ತಿರುವ ಮ್ಯಾಟರ್. ಆದರೆ, ಈಗಾಗಲೇ ಬಣ್ಣ ಹಚ್ಚಿರುವ ರಮ್ಯಾ ಸಿನಿಮಾವನ್ನು ಗಂಭೀರವಾಗಿ ಪರಿಗಣಿಸಿದರೆ, ಅವರ ಎಂಟ್ರಿ ಹೇಗಿರುತ್ತೆ ಅನ್ನೋದು ಕುತೂಹಲ ಅಭಿಮಾನಿಗಳಿಗಿದೆ.

ಪುನೀತ್ ಜೊತೆ ಕಮ್ ಬ್ಯಾಕ್

ಪುನೀತ್ ಜೊತೆ ಕಮ್ ಬ್ಯಾಕ್

ರಮ್ಯಾ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಸಿನಿಮಾ ಕಮ್ ಬ್ಯಾಕ್ ಮಾಡಿ ಅಂತ ಒತ್ತಡ ಹಾಕುತ್ತಲೇ ಇದ್ದಾರೆ. ಈ ಕಾರಣಕ್ಕೆ ಪುನೀತ್ ಜೊತೆ ಮತ್ತೆ ಕಮ್‌ ಬ್ಯಾಕ್ ಮಾಡುವ ಬಗ್ಗೆ ರಮ್ಯಾ ಕನಸು ಕಂಡಿದ್ದರು. ಅಷ್ಟರಲ್ಲಿಯೇ ಅಪ್ಪು ಅಗಲಿಕೆ ಆ ಎಲ್ಲಾ ಕನಸುಗಳಿಗೆ ತಣ್ಣೀರು ಎರಚಿತ್ತು. ಇಷ್ಟೇ ಅಲ್ಲದೆ, ಇತ್ತೀಚೆಗೆ ಸ್ಯಾಂಡಲ್‌ವುಡ್‌ನ ಹಲವು ಸಂಭ್ರಮಗಳಲ್ಲಿ ಮೋಹಕತಾರೆ ಕಾಣಿಸಿಕೊಂಡಿದ್ದರು. ಕೊನೆಗೂ ಮತ್ತೆ ಬಣ್ಣ ಹಚ್ಚಿರುವ ರಮ್ಯಾ, ಗ್ರ್ಯಾಂಡ್‌ ಕಮ್ ಬ್ಯಾಕ್ ಬಗ್ಗೆ ಯಾವಾಗಾ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನುವುದು ಸದ್ಯ ಕುತೂಹಲ ಕೆರಳಿಸಿದೆ.

More from Filmibeat

English summary
After 6 years Sandalwood Queen Ramya Re-Entry to the Cinema, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X