ಕರಣ್ ಜೋಹರ್ ಆಫೀಸ್ ಮೆಟ್ಟಿಲೇರಿದ ರಶ್ಮಿಕಾ: ವಿಜಯ್ ದೇವರಕೊಂಡ ಕಡೆ ಬೊಟ್ಟು ತೋರಿದ ನೆಟ್ಟಿಗರು?

'ಪುಷ್ಪ' ಯಶಸ್ಸಿನ ಬಳಿಕ ಮುಂಬೈಗೆ ಬಂದಿಳಿದಿದ್ದ ರಶ್ಮಿಕಾ ಮಂದಣ್ಣ ಟ್ರೋಲ್‌ಗೆ ಒಳಗಾಗಿದ್ದರು. ನೆಟ್ಟಿಗರು ರಶ್ಮಿಕಾ ಮಂದಣ್ಣ ತೊಟ್ಟ ತುಂಡು ಉಡುಗೆಯನ್ನಿಟ್ಟುಕೊಂಡು ಟ್ರೋಲ್ ಮಾಡಿದ್ದರು. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಟಿಯೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇದು ರಶ್ಮಿಕಾ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಶ್ರೀವಲ್ಲಿ ಅಲಿಯಾಸ್ ರಶ್ಮಿಕಾ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಆಫೀಸ್‌ಗೆ ಭೇಟಿ ನೀಡಿದ್ದಾರೆ. ಎಲ್ಲಾ ಕಡೆನೂ ಇದೇ ಸುದ್ದಿ ಹರಿದಾಡುತ್ತಿದೆ.

ರಶ್ಮಿಕಾ ಮಂದಣ್ಣ ಬಾಲಿವುಡ್ ಸ್ಟಾರ್ ನಿರ್ಮಾಪಕ ಕರಣ್ ಜೋಹರ್ ಆಫೀಸ್‌ಗೆ ಭೇಟಿ ನೀಡಿದ್ದು ಟಾಕ್ ಆಫ್ ದಿ ಟೌನ್ ಆಗಿದೆ. ಕರಣ್ ಜೋಹರ್ ನಿರ್ಮಾಣ ಸಂಸ್ಥೆಯ ಮುಂದಿನ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಲೀಡ್ ರೋಲ್‌ನಲ್ಲಿ ನಟಿಸುವುದು ಫಿಕ್ಸ್ ಅನ್ನುವ ಮಾತು ಬಾಲಿವುಡ್ ಗಲ್ಲಿಯಲ್ಲಿ ಹರಿದಾಡುತ್ತಿರುವ ಸುದ್ದಿ. ಅಷ್ಟಕ್ಕೂ ರಶ್ಮಿಕಾ ಹಾಗೂ ಕರಣ್ ಭೇಟಿ ಬಗ್ಗೆ ತಿಳಿಯುವುದಕ್ಕೂ ಮುನ್ನ ವಿಜಯ್ ದೇವರಕೊಂಡ ಹೆಸರು ಹರಿದಾಡುತ್ತಿರುವುದು ಯಾಕೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ರಶ್ಮಿಕಾ-ಕರಣ್ ಭೇಟಿ ಮಧ್ಯೆ ವಿಜಯ್ ಹೆಸರೇಕೆ?

ಒಂದು ಕಡೆ ರಶ್ಮಿಕಾ ಮಂದಣ್ಣ ಹಾಗೂ ಕರಣ್ ಜೋಹರ್ ಭೇಟಿ ಬಗ್ಗೆನೇ ಚರ್ಚೆ ನಡೆಯುತ್ತಿದೆ. ಅದೆ ಇನ್ನೊಂದು ಕಡೆ ಈ ಭೇಟಿಗೆ ವಿಜಯ್ ದೇವರಕೊಂಡನೇ ಕಾರಣ ಅನ್ನುವುದು ಬಾಲಿವುಡ್‌ನ ಕೇಳಿ ಬರುತ್ತಿರುವ ಮತ್ತೊಂದು ಸುದ್ದಿ. ಕರಣ್ ಜೋಹರ್ ಸಹ-ನಿರ್ಮಾಣವಿರುವ 'ಲೈಗರ್' ಚಿತ್ರದಲ್ಲಿ ವಿಜಯ್ ದೇವರಕೊಂಡ ನಟಿಸುತ್ತಿದ್ದಾರೆ. ಹೀಗಾಗಿ ಇಬ್ಬರ ನಡುವೆ ಉತ್ತಮ ಒಡನಾಟವಿದೆ. ಹೀಗಾಗಿ ರಶ್ಮಿಕಾಗೆ ಮತ್ತೊಂದು ಬಾಲಿವುಡ್ ಸಿನಿಮಾ ಕೊಡಿಸಲು ವಿಜಯ್ ದೇವರಕೊಂಡ ನಿರ್ಮಾಪಕ ಕರಣ್ ಹೋಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

 ಬಾಲಿವುಡ್ ಸಿನಿಮಾದಲ್ಲಿ ರಶ್ಮಿಕಾ- ವಿಜಯ್ ನಟನೆ

ಬಾಲಿವುಡ್ ಸಿನಿಮಾದಲ್ಲಿ ರಶ್ಮಿಕಾ- ವಿಜಯ್ ನಟನೆ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಟಾಲಿವುಡ್‌ನ ಹಿಟ್ ಜೋಡಿ ಅಂತ ಸಾಬೀತಾಗಿದೆ. ಇವರಿಬ್ಬರ 'ಡಿಯರ್ ಕಾಮ್ರೇಡ್' ಸಿನಿಮಾ ರಿಲೀಸ್ ಆದಾಗ, ಕರಣ್ ಜೋಹರ್ ಆ ಸಿನಿಮಾವನ್ನು ಬಾಲಿವುಡ್‌ನಲ್ಲಿ ರಿಲೀಸ್ ಮಾಡಲು ಮುಂದಾಗಿದ್ದರು. ಬಳಿಕ ಈ ಐಡಿಯಾವನ್ನು ಕೈ ಬಿಟ್ಟು, ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡುತ್ತಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಬಾಲಿವುಡ್‌ನಲ್ಲಿ ಈಗ ಹೆಜ್ಜೆಯೂರಿದ್ದಾರೆ. ಹೀಗಾಗಿ ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡುವ ಸಾಧ್ಯತೆಯಿದೆ.

 'ಪುಷ್ಪ' ಸಿನಿಮಾ ಮೆಚ್ಚಿದ ಕರಣ್

'ಪುಷ್ಪ' ಸಿನಿಮಾ ಮೆಚ್ಚಿದ ಕರಣ್

ರಶ್ಮಿಕಾ ಮಂದಣ್ಣ ಹಾಗೂ ಅಲ್ಲೂ ಅರ್ಜುನ್ ಅಭಿನಯದ 'ಪುಷ್ಪ' ಸಿನಿಮಾ ನೋಡಿ ಕರಣ್ ಜೋಹರ್ ಹೊಗಳಿಕೊಂಡಾಡಿದ್ದರು. ಟ್ವಿಟರ್‌ನಲ್ಲಿ ಸುಕುಮಾರ್‌ ನಿರ್ದೇಶನವನ್ನು ಮೆಚ್ಚಿದ್ದರು. ಈ ಬೆನ್ನಲ್ಲೇ ಈಗ ರಶ್ಮಿಕಾರನ್ನು ತನ್ನ ಆಫೀಸ್‌ಗೆ ಕರೆಸಿಕೊಂಡಿದ್ದಾರೆ. ಕರಣ್ ಜೋಹರ್ ಆಫೀಸ್‌ಗೆ ಯಾವುದೇ ನಟ-ನಟಿಯರು ಭೇಟಿ ನೀಡಿದರೆ, ಅವರಿಗೊಂದು ಸಿನಿಮಾ ಮಾಡುವುದು ಗ್ಯಾರಂಟಿ. ಈ ಕಾರಣಕ್ಕಾಗಿಯೇ ಕರಣ್‌ ಜೋಹರ್ ತಮ್ಮ ಮುಂದಿನ ಸಿನಿಮಾದಲ್ಲಿ ರಶ್ಮಿಕಾಗೆ ಆಫರ್ ಮಾಡಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.

 ಕರಣ್ ಜೊತೆ ರಶ್ಮಿಕಾ 3ನೇ ಸಿನಿಮಾ?

ಕರಣ್ ಜೊತೆ ರಶ್ಮಿಕಾ 3ನೇ ಸಿನಿಮಾ?

ರಶ್ಮಿಕಾ ಮಂದಣ್ಣ ಈಗಾಗಲೇ ಎರಡು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಮಿತಾಬ್ ಬಚ್ಚನ್ ಅಭಿನಯದ 'ಗುಡ್ ಬೈ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ 'ಮಿಷನ್ ಮಜ್ನು' ಚಿತ್ರಕ್ಕೂ ರಶ್ಮಿಕಾನೇ ನಾಯಕಿ. ಮತ್ತೊಂದು ವಿಷಯ ಏನಂದರೆ, ನಟ ಸಿದ್ದಾರ್ಥ್ ಮಲ್ಹೋತ್ರಾ ನಿರ್ಮಾಪಕ ಕರಣ್ ಜೋಹರ್‌ಗೆ ತೀರಾ ಆತ್ಮೀಯ. ಕರಣ್‌ ಜೋಹರ್‌ಗೆ ಸ್ವತ: ಸಿದ್ಧಾರ್ಥ್ ನಟಿ ರಶ್ಮಿಕಾಗೆ ಆಫರ್ ಕೊಡಿಸುವ ಸಾಧ್ಯತೆನೂ ಇದೆ ಅಂತ ಬಾಲಿವುಡ್ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.

More from Filmibeat

English summary
After brutally trolled Rashmika Mandanna spotted at Karan Johar office Vijay Devarakonda is the reason. The actress visit to the Dharma Production’s offices has left everyone wonder.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X