For Quick Alerts
  ALLOW NOTIFICATIONS  
  For Daily Alerts

  ವಿಚ್ಛೇದನ ಪಡೆದ ನಾಗ ಚೈತನ್ಯ ಹೊಸ ಗರ್ಲ್‌ಫ್ರೆಂಡ್ ಪ್ರಿಯಾ ಭವಾನಿ ಶಂಕರ್

  |

  ನಾಗಚೈತನ್ಯ ಹಾಗೂ ಸಮಂತಾ ದಾಂಪತ್ಯ ವಿಚ್ಛೇದನದಲ್ಲಿ ಅಂತ್ಯ ಕಂಡಿದ್ದು ಗೊತ್ತಿರುವ ಸಂಗತಿ. ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿದ್ದ ಈ ಜೋಡಿ ಬೇರೆಯಾಗಿದ್ದು ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಯಾವುದು ಆಗಬಾರದು ಅಂದುಕೊಂಡಿದ್ದರೋ ಅದೇ ಇಬ್ಬರ ಜೀವನದಲ್ಲಿ ನಡೆದು ಹೋಗಿದೆ. ಈಗ ನಾಗಚೈತ್ಯ ಹಾಗೂ ಸಮಂತಾ ನಾನೊಂದು ತೀರ. ನೀನೊಂದು ತೀರಾ ಅಂತ ಜೀವನ ನಡೆಸುತ್ತಿದ್ದಾರೆ.

  ನಾಗ ಚೈತನ್ಯ ಹಾಗೂ ಸಮಂತಾ ಇಬ್ಬರೂ ಪರಸ್ಪರ ಒಡಂಬಡಿಕೆಯಿಂದ ವಿಚ್ಛೇದನ ಪಡೆಯುತ್ತಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದರು. ಈ ಮೂಲಕ ಹಲವು ದಿನಗಳಿಂದ ಎದ್ದಿದ್ದ ಗಾಳಿ ಸುದ್ದಿಗೆ ಇಬ್ಬರೂ ಒಂದೇ ಸಮಯದಲ್ಲಿ ಬ್ರೇಕ್ ಹಾಕಿ, ನಿಜ ಮಾಡಿದ್ದರು. ಸದ್ಯ ಈ ಜೋಡಿ ಕಹಿ ಘಟನೆಯನ್ನು ಮರೆತು ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ, ಈ ಮಧ್ಯೆ ನಾಗಚೈತನ್ಯಗೆ ಹೊಸ ಗರ್ಲ್‌ ಫ್ರೆಂಡ್ ಸಿಕ್ಕಿದ್ದಾಳೆ ಅನ್ನುವುದು ಟಾಲಿವುಡ್‌ನಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

  ನಾಗ ಚೈತನ್ಯ ಪ್ರಿಯತಮೆ ಪ್ರಿಯಾ

  ನಾಗ ಚೈತನ್ಯ ಪ್ರಿಯತಮೆ ಪ್ರಿಯಾ

  ನಾಗ ಚೈತನ್ಯ ಹೊಸ ಗರ್ಲ್‌ಫ್ರೆಂಡ್ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆ ಆಗುತ್ತಿರುವುದು ನಿಜ. ನಾಗ ಚೈತನ್ಯಕ್ಕೆ ಹೊಸ ಗೆಳತಿ ಸಿಕ್ಕಿರುವುದೂ ಅಷ್ಟೇ ನಿಜ. ಆದರೆ, ರಿಯಲ್‌ ಲೈಫ್‌ನಲ್ಲಿ ಅಲ್ಲ. ರೀಲ್‌ ಲೈಫ್‌ನಲ್ಲಿ ಅನ್ನುವ ಮಾತು ಹರಿದಾಡುತ್ತಿದೆ. ಅಮೆಜಾನ್‌ ಪ್ರೈಂ ಒರಿಜಿನಲ್ ವೆಬ್ ಸಿರೀಸ್‌ಗಾಗಿ ನಾಗಚೈತನ್ಯ ನಿರ್ದೇಶಕ ವಿಕ್ರಮ್ ಕೆ ಕುಮಾರ್ ತಂಡವನ್ನು ಸೇರಿಕೊಂಡಿದ್ದಾರೆ. ಈ ವೆಬ್ ಸೀರಿಸ್‌ನ ಚಿತ್ರೀಕರಣ ಮುಂದಿನ ವರ್ಷದಿಂದ ಆರಂಭ ಆಗಲಿದೆ. ಈ ಮಧ್ಯೆ ನಿರ್ದೇಶಕರು ನಾಗಚೈತನ್ಯಗಾಗಿ ಗರ್ಲ್‌ಫ್ರೆಂಡ್ ಅನ್ನು ಹುಡುಕಿದ್ದು, ಆಕೆಯ ಹೆಸರು ಪ್ರಿಯಾ ಶಂಕರ್ ಭವಾನಿ ಎನ್ನಲಾಗಿದೆ.

  ಪ್ರಿಯಾ ಭವಾನಿ ಶಂಕರ್ ಯಾರು?

  ಪ್ರಿಯಾ ಭವಾನಿ ಶಂಕರ್ ಯಾರು?

  ಪ್ರಿಯಾ ಭವಾನಿ ಶಂಕರ್ ತಮಿಳು ನಟಿ. ಸುದ್ದಿ ನಿರೂಪಣೆಯಿಂದ ಕೆಲಸ ಆರಂಭಿಸಿದ್ದ ಈಕೆ, ಬಳಿಕ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ. 'ಕಲ್ಯಾಣಂ ಮುದಂ ಕಾದಲ್ ವರೈ' ಅನ್ನುವ ಜನಪ್ರಿಯ ಧಾರಾವಾಹಿ ಕೈಯನ್ನು ಸಿನಿಮಾವರೆಗೂ ಕರೆದುಕೊಂಡು ಬಂದಿತ್ತು. 2017ರಲ್ಲಿ 'ಮೇಯಾಧ ಮಾನ್' ಅನ್ನುವ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇಲ್ಲಿಂದ ಹಿಂತಿರುಗಿ ನೋಡದ ನಟಿಯ ಕೈಯಲ್ಲಿ ಸುಮಾರು 10 ಸಿನಿಮಾಗಳಿವೆ. ಇತ್ತೀಚೆಗೆ 'ಟೈ ಎನ್ನ ಬಾಸ್' ಅನ್ನುವ ವೆಬ್ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದರು. ಇದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿತ್ತು. ಈಗ ಮತ್ತೊಂದು ವೆಬ್‌ ಸಿರೀಸ್ ಇದೇ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗುತ್ತಿದೆ. ನಾಗ ಚೈತನ್ಯ ಗರ್ಲ್‌ಫ್ರೆಂಡ್ ಆಗಿ ಪ್ರಿಯಾ ಭವಾನಿ ಶಂಕರ್ ನಟಿಸುತ್ತಿದ್ದಾರೆ.

  ತಮಿಳು ನಟಿಯೊಂದಿಗೆ ನಾಗಚೈತನ್ಯ ನಟನೆ

  ತಮಿಳು ನಟಿಯೊಂದಿಗೆ ನಾಗಚೈತನ್ಯ ನಟನೆ

  ನಾಗಚೈತನ್ಯ ಬಹುತೇಕ ತಮಿಳು ನಟಿಯೊಂದಿಗೆ ಹೆಚ್ಚು ನಟಿಸಿದ್ದಾರೆ. ಮಾಜಿ ಪತ್ನಿ ಸಮಂತಾ ಮೂಲ ತಮಿಳು ನಾಡು. ಇವರೊಂದಿಗೆ ನಾಗಚೈತನ್ಯ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊನೆ ಸಿನಿಮಾ ಮಜಿಲಿ ಕೂಡ ಸೂಪರ್ ಹಿಟ್ ಆಗಿತ್ತು. ಕೆಲವು ತಿಂಗಳ ಹಿಂದಷ್ಟೇ ತೆರೆಕಂಡ ಲವ್‌ ಸ್ಟೋರಿಯ ನಾಯಕಿ ಕೂಡ ಸಾಯಿ ಪಲ್ಲವಿ. ಇವರಲ್ಲದೆ, ಕೀರ್ತಿ ಸುರೇಶ್, ಶೃತಿ ಹಾಸನ್ ಜೊತೆಯಲ್ಲೂ ನಾಗಚೈತನ್ಯ ನಟಿಸಿದ್ದಾರೆ. ಈಗ ಇದೇ ಮೊದಲ ಬಾರಿಗೆ ಪ್ರಿಯಾ ಭವಾನಿ ಶಂಕರ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ.

  ನಾಗ ಚೈತನ್ಯಗೆ ಕೀರ್ತಿ ಶೆಟ್ಟಿ ನಾಯಕಿ

  ನಾಗ ಚೈತನ್ಯಗೆ ಕೀರ್ತಿ ಶೆಟ್ಟಿ ನಾಯಕಿ

  ಸದ್ಯ ನಾಗ ಚೈತನ್ಯ ಈಗ ಫ್ಯಾಂಟಸಿ ಡ್ರಾಮ ಬಂಗಾರರಾಜು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಾಗಾರ್ಜುನ ಹಾಗೂ ರಮ್ಯಾ ಕೃಷ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಸಿನಿಮಾದಲ್ಲಿ ನಾಗ ಚೈತನ್ಯ ಕೂಡ ನಟಿಸುತ್ತಿದ್ದು, ಉಪ್ಪೇನಾ, ಶ್ಯಾಮ್ ಸಿಂಘ ರಾಯ್ ಸಿನಿಮಾದ ನಾಯಕಿ, ಕರಾವಳಿ ಬ್ಯೂಟಿ ಕೀರ್ತಿ ಶೆಟ್ಟಿ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.

  English summary
  Tamil actress Priya Bhavani Shankar will be playing the female lead with Naga chaithanya. She will be seen playing the role of Naga Chaitanya’ girl friend.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X