ಕೆವಿಎನ್ ಪ್ರೊಡಕ್ಷನ್ಸ್‌ಗೆ ರಾಜ್ ಬಿ ಶೆಟ್ಟಿ ಸಿನಿಮಾ? 'ಕೆಡಿ' ರಿಲೀಸ್ ಬೆನ್ನಲ್ಲೇ ಗುಲ್ಲೆದ್ದಿತು ಹೊಸ ಸಿನಿಮಾ?

ಕೆವಿಎನ್ ಪ್ರೊಡಕ್ಷನ್ಸ್ ನಿನ್ನೆಯಷ್ಟೇ ಬಹು ಕೋಟಿ ವೆಚ್ಚದ 'ಕೆಡಿ ದಿ ಡೆವಿಲ್' ಸಿನಿಮಾವನ್ನು ಅದ್ದೂರಿಯಾಗಿ ರಿಲೀಸ್ ಮಾಡಿದೆ. ಜೋಗಿ ಪ್ರೇಮ್-ಧ್ರುವ ಸರ್ಜಾ ಕಾಂಬಿನೇಷನ್ ಸಿನಿಮಾ ಥಿಯೇಟರ್‌ಗಳಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಕೊನೆಗೂ ಕೆವಿಎನ್‌ ನಿರ್ಮಾಣ ಸಂಸ್ಥೆಗೆ ಅಂಟಿಕೊಂಡಿದ್ದ ಕಳಂಕ ಕಳಚಿ ಬಿದ್ದಿದೆ. ಈ ಸಂಸ್ಥೆ ನಿರ್ಮಾಣ ಮಾಡಿರುವ ಸಿನಿಮಾಗಳು ರಿಲೀಸ್ ಆಗೋದಿಲ್ಲ ಅನ್ನೋ ಹಣೆಪಟ್ಟಿಯನ್ನು ಹೊತ್ತಿತ್ತು. 'ಕೆಡಿ' ಮೂಲಕ ಈಗ ಆ ಕಳಂಕವನ್ನು ಕಳಸಿಕೊಂಡಿದೆ.

ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಇನ್ನೂ ಒಂದು ಸುದ್ದಿ ಹರಿದಾಡುತ್ತಿತ್ತು. ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಬಿಟ್ಟು ಕೆವಿಎನ್ ಪ್ರೊಡಕ್ಷನ್ ಹೊಸ ಪ್ರಾಜೆಕ್ಟ್‌ಗಳಿಗೆ ಕೈ ಹಾಕುತ್ತಿಲ್ಲ. 'ಜನ ನಾಯಗನ್', 'ಟಾಕ್ಸಿಕ್' ಹಾಗೂ 'ಕೆಡಿ'ಗೆ ಕೆವಿಎನ್ ಸುಸ್ತಾಗಿದ್ದು, ಮತ್ತೆ ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡುವುದು ಅನುಮಾನ ಎಂಬ ಸುದ್ದಿ ಹಬ್ಬಿಸಿದ್ದರು. ಈ ಎಲ್ಲಾ ವದಂತಿಗಳನ್ನು ಕೆವಿಎನ್ ತಲೆ ಕೆಳಗೆ ಮಾಡಿದೆ.

After KD The Devil release buzz is that Raj B Shetty doing film for KVN Productions

ಇತ್ತೀಚೆಗೆ ಶಿವಣ್ಣ ಹಾಗೂ ಪವನ್ ಒಡೆಯರ್ ಕಾಂಬಿನೇಷನ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಮುಹೂರ್ತ ಮಾಡಿತ್ತು. ಈ ಮೂಲಕ ವದಂತಿಗಳಿಗೆ ತಿರುಗೇಟು ಕೊಟ್ಟಿತ್ತು. ಅದರ ಜೊತೆಗೆ ಇನ್ನೂ ಒಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ರಾಜ್‌ ಬಿ ಶೆಟ್ಟಿ ಜೊತೆ ಇದೇ ಸಂಸ್ಥೆ ಸದ್ದಿಲ್ಲದೆ ಸಿನಿಮಾ ಮಾಡುತ್ತಿದೆ. ಈಗಾಗಲೇ ಸಿನಿಮಾದ ಶೂಟಿಂಗ್ ಕೂಡ ಶುರುವಾಗಿದೆ.

ಕೆವಿಎನ್-ರಾಜ್ ಬಿ ಶೆಟ್ಟಿ ಸಿನಿಮಾ?

ಸಿನಿಮಾರಂಗ ಅಂದ್ಮೇಲೆ ನೂರೆಂಟು ಗಾಳಿ ಸುದ್ದಿಗಳು ಓಡಾಡುತ್ತಲೇ ಇರುತ್ತವೆ. ದಿನಕ್ಕೊಂದು ಸುದ್ದಿ ಸಂಚಲನ ಸೃಷ್ಟಿಸುತ್ತಲೇ ಇರುತ್ತೆ. ಈಗ ಕೆವಿಎನ್ ಸಿನಿಮಾ ರಿಲೀಸ್ ಆಗಿರುವ ಬೆನ್ನಲ್ಲೇ ರಾಜ್ ಬಿ ಶೆಟ್ಟಿ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಕಾಂಬಿನೇಷನ್ ಸಿನಿಮಾ ಬಗ್ಗೆ ಗಾಂಧಿನಗರದಲ್ಲಿ ಗುಲ್ಲೆದ್ದಿದ್ದೆ. ರಾಜ್‌ ಬಿ ಶೆಟ್ಟಿ ಈ ಸಿನಿಮಾವನ್ನು ಸದ್ದಿಲ್ಲದೆ ಶೂಟ್ ಮಾಡುತ್ತಿದ್ದಾರೆಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಅಂದ್ಹಾಗೆ ಈ ಬಗ್ಗೆ ಕೆವಿಎನ್ ಅಥವಾ ರಾಜ್ ಬಿ ಶೆಟ್ಟಿ ಇಬ್ಬರೂ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ.

ರಾಜ್ ಬಿ ಶೆಟ್ಟಿ ನಿರ್ದೇಶನ?

ಹೌದು, ಕೆವಿಎನ್ ನಿರ್ಮಾಣ ಮಾಡುತ್ತಿರುವ ಸಿನಿಮಾವನ್ನು ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರಂತೆ. ಈಗಾಗಲೇ ಸುಮಾರು ಸಿನಿಮಾದ ಹಲವು ಭಾಗದ ಶೂಟಿಂಗ್ ಅನ್ನು ಕಂಪ್ಲೀಟ್ ಮಾಡಿದ್ದು, ಕೊನೆಯ ಹಂತದ ಚಿತ್ರೀಕರಣವೊಂದೇ ಬಾಕಿ ಉಳಿದಿದೆ ಎಂದು ಹೇಳಲಾಗುತ್ತಿದೆ. ಬಹಳ ದಿನಗಳ ಬಳಿಕ ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡುತ್ತಿರೋದ್ರಿಂದ ಸ್ಯಾಂಡಲ್‌ವುಡ್ ಮಂದಿ ಕಣ್ಣು ಈ ಪ್ರಾಜೆಕ್ಟ್ ಮೇಲೆ ಬಿದ್ದಿದೆ.

ಹಾರರ್ ಕಾಮಿಡಿ ಅಂತೆ

ಕೆವಿಎನ್ ಪ್ರೊಡಕ್ಷನ್ಸ್‌ಗೆ ರಾಜ್‌ ಬಿ ಶೆಟ್ಟಿ ಮಾಡುತ್ತಿರುವ ಸಿನಿಮಾ ಹಾರರ್-ಕಾಮಿಡಿ ಜಾನರ್ ಎಂದು ಹೇಳಲಾಗುತ್ತಿದೆ. 'ಸು ಫ್ರಮ್ ಸೋ' ಸಿನಿಮಾದ ಯಶಸ್ಸಿನ ಬಳಿಕ ರಾಜ್ ಬಿ ಶೆಟ್ಟಿ ಆಕ್ಷನ್ ಕಟ್ ಹೇಳುವುದಕ್ಕೆ ಹಾರರ್ ಕಾಮಿಡಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆಂಬ ಪುಕಾರು ಕೂಡ ಹಬ್ಬಿದೆ. ಕೆವಿಎನ್ ಈ ಸಿನಿಮಾವನ್ನು ಸುಮಾರು 12 ರಿಂದ 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದೆ ಎಂದು ಹೇಳಲಾಗಿದೆ.

'ಸು ಫ್ರಮ್ ಸೋ' ಆದ್ಮೇಲೆ..

ಕನ್ನಡ ಚಿತ್ರರಂಗದಲ್ಲಿ ಸಂಚಲವನ್ನು ಸೃಷ್ಟಿಸಿದ 'ಸು ಫ್ರಮ್ ಸೋ' ರಾಜ್ ಬಿ ಶೆಟ್ಟಿಗೆ ಸಖತ್ ಒಳ್ಳೆಯ ಯಶಸ್ಸು ಕೊಟ್ಟಿತ್ತು. ನಟನಾಗಿ, ನಿರ್ಮಾಪಕನಾಗಿ ಗೆದ್ದಿದ್ದ ರಾಜ್ ಬಿ ಶೆಟ್ಟಿ ಆ ನಂತರ ನಟಿಸಿದ ಸಿನಿಮಾಗಳು ಅಷ್ಟಾಗಿ ಕೈ ಹಿಡಿಯಲಿಲ್ಲ. '45' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋಲುಂಡಿತ್ತು. ಹಾಗೇ ರವಿವರ್ಮಾ ನಿರ್ಮಾಣದ 'ರಕ್ಕಸಪುರದೋಳ್' ಹಾಗೂ 'ಲಾಂಡ್‌ಲಾರ್ಡ್' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಸದ್ದು ಮಾಡಲಿಲ್ಲ. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೊಸ ಟ್ರೆಂಡಿಂಗ್ ಸಿನಿಮಾ ಕೊಡುತ್ತಾರಾ? ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ.

English summary
After KD The Devil release buzz is that Raj B Shetty doing film for KVN Productions.
Read more about: raj b shetty kannada movie gossip
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X