Exclusive: ಯಶ್-ನರ್ತನ್ ಸಿನಿಮಾಗೆ ಮುಹೂರ್ತ ಫಿಕ್ಸ್: ಮುಂದಿನ ತಿಂಗಳು ಲಾಂಚ್?

'ಕೆಜಿಎಫ್' ಸಿನಿಮಾ ಕೇವಲ ಸ್ಯಾಂಡಲ್‌ವುಡ್‌ಗಷ್ಟೇ ಅಲ್ಲ. ಯಶ್‌ ಕರಿಯರ್‌ಗೂ ಹೊಸ ತಿರುವು ಕೊಟ್ಟಿದೆ. ಯಶ್ ನ್ಯಾಷನಲ್‌ ಸ್ಟಾರ್ ಆಗುವುದಕ್ಕೂ 'ಕೆಜಿಎಫ್' ಸಿನಿಮಾನೇ ಕಾರಣ. ಯಶ್ ಕಳೆದ ಆರು ವರ್ಷಗಳಿಂದ 'ಕೆಜಿಎಫ್' ಫ್ರಾಂಚೈಸಿಯಲ್ಲಿ ನಟಿಸಿದ್ದು ಬಿಟ್ಟರೆ, ಬೇರಾವುದೇ ಸಿನಿಮಾ ಬಗ್ಗೆನೂ ತಲೆ ಕೆಡಿಸಿಕೊಂಡಿಲ್ಲ.

ಈಗ 'ಕೆಜಿಎಫ್ 2' ರಿಲೀಸ್ ಆಗಿದೆ. ಬಾಕ್ಸಾಫೀಸ್‌ನಲ್ಲಿ ಸೂಪರ್‌ ಸಕ್ಸಸ್‌ ಕಂಡು ಹೊಸ ದಾಖಲೆಗಳನ್ನು ಬರೆದಿದೆ. ಇಷ್ಟೆಲ್ಲಾ ಆದರೂ, ಯಶ್ ಮುಂದಿನ ಸಿನಿಮಾ ಬಗ್ಗೆ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಈಗ ಯಶ್ ಅಡ್ಡಾದಿಂದ ಚಿಕ್ಕದೊಂದು ಸುದ್ದಿ ಸೈಲೆಂಟಾಗಿ ಹರಿದಾಡುತ್ತಿದೆ.

ಯಶ್ ಮುಂದಿನ ಸಿನಿಮಾಗೆ ನರ್ತನ್ ಆಕ್ಷನ್ ಕಟ್ ಹೇಳುತ್ತಿರುವುದು ಬಹುತೇಕ ಕನ್ಫರ್ಮ್ ಆಗಿದ್ಯಂತೆ. ಅದಕ್ಕೆ ಆರು ಸಿನಿಮಾಗಳ ಬಳಿಕ ಯಶ್ ಹೊಸ ಸಿನಿಮಾವೊಂದು ಸೆಟ್ಟೇರುವುದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅಷ್ಟಕ್ಕೂ ಯಶ್ ಹಾಗೂ ನರ್ತನ್ ಕಾಂಬಿನೇಷನ್ ಸಿನಿಮಾ ಮುಂದಿನ ತಿಂಗಳು ಲಾಂಚ್ ಆಗಲಿದೆ. ಈ ಹೊಸ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಯಶ್ ಮುಂದಿನ ಸಿನಿಮಾ ಮುಹೂರ್ತ ಫಿಕ್ಸ್

ಯಶ್ ಮುಂದಿನ ಸಿನಿಮಾ ಮುಹೂರ್ತ ಫಿಕ್ಸ್

ರಾಕಿ ಭಾಯ್ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, 'ಕೆಜಿಎಫ್ 2' ರಿಲೀಸ್ ಆಗಿ 50 ದಿನಗಳತ್ತ ಮುನ್ನುಗ್ಗುತ್ತಿದೆ. ಈ ವೇಳೆ ಯಶ್ ಮುಂದಿನ ಸಿನಿಮಾ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದೆ. ರಾಕಿ ಹೊಸ ಸಿನಿಮಾ ಶೀಘ್ರದಲ್ಲಿಯೇ ಅನೌನ್ಸ್ ಆಗಲಿದೆ. ಮುಂದಿನ ತಿಂಗಳು ಯಶ್ ಹಾಗೂ ನರ್ತನ್ ಸಿನಿಮಾಗೆ ಮುಹೂರ್ತ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ. ಇಡೀ ಚಿತ್ರತಂಡಕ್ಕೆ ಈಗಾಗಲೇ ಸಂದೇಶ ಕೂಡ ರವಾನೆಯಾಗಿದ್ಯಂತೆ.

ಕೊನೆಗೂ ಲಾಕ್ ಆಯ್ತು ನರ್ತನ್ ಸ್ಕ್ರಿಪ್ಟ್

ಕೊನೆಗೂ ಲಾಕ್ ಆಯ್ತು ನರ್ತನ್ ಸ್ಕ್ರಿಪ್ಟ್

'ಮಫ್ತಿ' ಬಳಿಕ ನರ್ತನ್ ಹೊಸ ಸಿನಿಮಾ ಯಶ್ ಜೊತೆಗೆ ಎಂಬ ಸದ್ದಿ ಹರಿದಾಡಿತ್ತು. ಇತ್ತ 'ಕೆಜಿಎಫ್ 2' ಸಿನಿಮಾ ಶೂಟಿಂಗ್ ಆಗುತ್ತಿದ್ದರೆ, ಅತ್ತ ಮುಂದಿನ ಸಿನಿಮಾಗೆ ಸ್ಕ್ರಿಪ್ಟ್ ನಡೆಯುತ್ತಿತ್ತು. 'ಕೆಜಿಎಫ್ 2' ಸಿನಿಮಾ ಶೂಟಿಂಗ್ ಮುಗಿದು ದಾಖಲೆ ಬರೆದರೂ, ರಾಕಿ ಭಾಯ್ ಹೊಸ ಸಿನಿಮಾದ ಬಗ್ಗೆ ಕ್ಲಾರಿಟಿನೇ ಇರಲಿಲ್ಲ. ನರ್ತನ್‌ ಸ್ಕ್ರಿಪ್ಟ್‌ಗೆ ಯಶ್ ಇನ್ನೂಗ್ರೀನ್ ಸಿಗ್ನಲ್ ಎನ್ನುವ ಮಾತು ಕೇಳಿ ಬಂದಿತ್ತು. ಇನ್ನೊಂದು ಕಡೆ ನಿರ್ದೇಶಕ ನರ್ತನ್, ಯಶ್ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡಿತ್ತು. ಆದ್ರೀಗ ಆ ಎಲ್ಲಾ ಊಹಾ-ಪೋಹಗಳಿಗೆ ತೆರೆಬಿದ್ದಿದ್ದು, ಜೂನ್ ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದ್ಯಂತೆ.

ನರ್ತನ್‌ಗೆ ಯಶ್ ಗ್ರೀನ್ ಸಿಗ್ನಲ್

ನರ್ತನ್‌ಗೆ ಯಶ್ ಗ್ರೀನ್ ಸಿಗ್ನಲ್

ರಾಕಿ ಭಾಯ್‌ಗಾಗಿ ನರ್ತನ್ ಕಳೆದೆರಡು ವರ್ಷಗಳಿಂದ ಸ್ಕ್ರಿಪ್ಟ್ ಮಾಡುತ್ತಿದ್ದಾರೆ. ಆದರೆ, ಕಥೆ ಓಕೆ ಆಗಿದ್ದರೂ, ಸ್ಕ್ರೀನ್ ಪ್ಲೇ ಕೆಲಸ ನಡೆಯುತ್ತಲೇ ಇತ್ತು. ಕೊನೆಗೂ ಯಶ್‌ಗೆ ಸಿನಿಮಾದ ಕತೆ ಇಷ್ಟ ಆಗಿದ್ದು, ನರ್ತನ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ನರ್ತನ್ ಕೂಡ ತನ್ನ ತಂಡಕ್ಕೆ ಮುಂದಿನ ತಿಂಗಳು ರೆಡಿಯಿರುವಂತೆ ಸೂಚನೆ ನೀಡಿದ್ದಾರೆ ಅನ್ನುವ ಮಾತು ಕೇಳಿಬರುತ್ತಿದೆ.

'ಮಫ್ತಿ' ಬಳಿಕ ಯಶ್ ಸಿನಿಮಾಗೆ ಕೆಲಸ

'ಮಫ್ತಿ' ಬಳಿಕ ಯಶ್ ಸಿನಿಮಾಗೆ ಕೆಲಸ

ಶಿವಣ್ಣ ಹಾಗೂ ಶ್ರೀಮುರಳಿ ನಟನೆಯ ಸಿನಿಮಾ 'ಮಫ್ತಿ' ಸ್ಯಾಂಡಲ್‌ವುಡ್‌ನ ಬ್ಲಾಕ್‌ ಬಸ್ಟರ್ ಸಿನಿಮಾಗಳಲ್ಲೊಂದು. ಮೊದಲನೇ ಸಿನಿಮಾದಲ್ಲಿಯೇ ನರ್ತನ್ ನಿರ್ದೇಶನ ಯಶ್‌ಗೆ ಇಷ್ಟ ಆಗಿತ್ತು. ಅಲ್ಲಿಂದ ಯಶ್‌ ಸಿನಿಮಾಗಾಗಿ ನರ್ತನ್ ಸ್ಕ್ರಿಪ್ಟ್ ಮಾಡುತ್ತಲೇ ಇದ್ದರು. ಮಧ್ಯೆ 'ಮಫ್ತಿ' ಸಿನಿಮಾವನ್ನುತಮಿಳಿನಲ್ಲಿ ಮಾಡುವುದಕ್ಕೆ ಮುಂದಾಗಿದ್ದರೂ, ಆ ಸಿನಿಮಾ ಹೊರಬಂದಿದ್ದರು. ಇಷ್ಟು ದಿನ ಕಾದಿದ್ದಕ್ಕೂ ಯಶ್ ಸಿನಿಮಾ ಸೆಟ್ಟೇರುವ ಲಕ್ಷಣ ಗೋಚರವಾಗುತ್ತಿದೆ.

More from Filmibeat

English summary
After KGF 2 Yash Next Movie with Narthan Will Stat From June Month , Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X