'ಲೈಗರ್' ಹೀನಾಯ ಸೋಲಿನ ಬಳಿಕ ಹೊಸ ಸಿನಿಮಾಗೆ ವಿಜಯ್ ದೇವರಕೊಂಡ ಗ್ರೀನ್ ಸಿಗ್ನಲ್?

ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿ ಹೊರ ಹೊಮ್ಮುವ ಎಲ್ಲಾ ಸಾಧ್ಯನೂ ಇತ್ತು. ಅದಕ್ಕೆ ಪುರಿ ಜಗನ್ನಾಥ್ ನಿರ್ದೇಶಿಸಿದ 'ಲೈಗರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಬೇಕಿತ್ತು.

'ಲೈಗರ್' ಅದೆಷ್ಟೇ ದೊಡ್ಡ ಸ್ಟಾರ್ ಕಾಸ್ಟ್ ಇದ್ದರೂ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿಬಿಡ್ತು. ಇಲ್ಲಿಂದ ವಿಜಯ್ ದೇವರಕೊಂಡ ಮತ್ತೊಂದು ಸಿನಿಮಾವನ್ನು ಒಪ್ಪಿಕೊಳ್ಳುವುದಕ್ಕೆ ಹಿಂದೆ-ಮುಂದೆ ನೋಡುತ್ತಿದ್ದರು.

ಸದ್ಯ ಟಾಲಿವುಡ್‌ನಲ್ಲಿ ವಿಜಯ್ ದೇವರಕೊಂಡ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಾಗಿದೆ. ದೊಡ್ಡ ಪ್ರೊಡಕ್ಷನ್ ಸಂಸ್ಥೆ ವಿಜಯ್‌ ಸಿನಿಮಾ ನಿರ್ಮಾಣ ಮಾಡಲಿದೆ ಅನ್ನೋ ಹರಿದಾಡುತ್ತಿದೆ. ಹಾಗಿದ್ದರೆ. ಟಾಲಿವುಡ್ ರೌಡಿಗೆ ಆಕ್ಷನ್ ಕಟ್ ಹೇಳುವ ಆ ನಿರ್ದೇಶಕ ಯಾರು? ಸಿನಿಮಾ ಕಥೆಯೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಟಾಲಿವುಡ್‌ ರೌಡಿಗೆ ಡೈರೆಕ್ಟರ್ ಯಾರು?

ಟಾಲಿವುಡ್‌ ರೌಡಿಗೆ ಡೈರೆಕ್ಟರ್ ಯಾರು?

ಟಾಲಿವುಡ್‌ನ ಸಕ್ಸಸ್‌ಫುಲ್ ಡೈರೆಕ್ಟರ್‌ಗಳಲ್ಲಿ ಹರೀಶ್ ಶಂಕರ್ ಕೂಡ ಒಬ್ಬರು. ಹರೀಶ್ ಶಂಕರ್ ಹಾಗೂ ಪವನ್ ಕಲ್ಯಾಣ್ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳು ಎಬ್ಬಿಸಿವೆ. ಇದೇ ನಿರ್ದೇಶಕ ಟಾಲಿವುಡ್ ರೌಡಿ ವಿಜಯ್ ದೇವರಕೊಂಡಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರಂತೆ. ಲೈಗರ್ ಸೋಲಿನ ಬಳಿಕ ವಿಜಯ್ ದೇವರಕೊಂಡ ಕೂಡ ಒಂದೊಳ್ಳೆ ಸ್ಕ್ರಿಪ್ಟ್ ಅನ್ನು ಹುಡುಕುತ್ತಿದ್ದು, ಹರೀಶ್ ಶಂಕರ್ ಕಥೆ ಇಷ್ಟ ಆಗಿದ್ಯಂತೆ.

ಪವನ್ ಕಲ್ಯಾಣ್ ಹಿಂದೆ ಸರಿದ್ದಕ್ಕೆ ವಿಜಯ್ ಎಂಟ್ರಿ

ಪವನ್ ಕಲ್ಯಾಣ್ ಹಿಂದೆ ಸರಿದ್ದಕ್ಕೆ ವಿಜಯ್ ಎಂಟ್ರಿ

ಹರೀಶ್ ಶಂಕರ್ 'ಭವದೀಡು ಭಗತ್ ಸಿಂಗ್' ಅನ್ನೋ ಸಿನಿಮಾವನ್ನು ನಿರ್ದೇಶನ ಮಾಡಬೇಕಿತ್ತು. ಈ ಸಿನಿಮಾದಲ್ಲಿ ಟಾಲಿವುಡ್ ಪವರ್‌ ಸ್ಟಾರ್ ಪವನ್ ಕಲ್ಯಾಣ್ ನಟಿಸಬೇಕಿತ್ತು. ಆದರೆ, ರಾಜಕೀಯದಲ್ಲಿ ಸಕ್ರಿಯರಾಗಿರುವ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್ ಸಿನಿಮಾದಿಂದ ಹಿಂದೆ ಸರಿದಿದ್ದಾರೆ. ಈ ಬೆನ್ನಲ್ಲೇ ಹರೀಶ್ ಶಂಕರ್ ಹೊಸ ಸ್ಕ್ರಿಪ್ಟ್‌ಗೆ ಹೊಸ ಸ್ಟಾರ್ ಅನ್ನು ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ವಿಜಯ್ ದೇವರಕೊಂಡಗೆ ಕಥೆ ಹೇಳಿದ್ದು, ಅದು ಇಷ್ಟವಾದ ಬೆನ್ನಲ್ಲೇ ವಿಜಯ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಸಲ್ಮಾನ್‌ ಖಾನ್‌ ಡೇಟ್ ಸಿಕ್ಕಿಲ್ಲ

ಸಲ್ಮಾನ್‌ ಖಾನ್‌ ಡೇಟ್ ಸಿಕ್ಕಿಲ್ಲ

ವಿಜಯ್ ದೇವರಕೊಂಡಗಿಂತ ಮುಂಚೆ ಹಲವು ಸ್ಟಾರ್ ನಟರನ್ನು ಸಂಪರ್ಕಿಸಿದ್ದರು. ಈ ಮಧ್ಯೆ 'ಭವದೀಡು ಭಗತ್ ಸಿಂಗ್' ಸಿನಿಮಾ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್‌ ಡೇಟ್ ಪಡೆಯಲು ಒದ್ದಾಡಿದ್ದರಂತೆ. ಆದರೆ, ಸಲ್ಮಾನ್ ಖಾನ್ ಒಪ್ಪಿಕೊಳ್ಳಲಿಲ್ಲ ಅನ್ನೋದು ಸುದ್ದಿನೂ ಇದೆ. ಆಗಲೇ ವಿಜಯ್ ದೇವರಕೊಂಡಗೆ ಕಥೆ ಹೇಳಿದ್ದು, ಪಕ್ಕಾ ಕಮರ್ಷಿಯಲ್ ಸ್ಟೋರಿಗೆ ವಿಜಯ್ ಮನಸೋತಿದ್ದಾರಂತೆ. ಈ ಸಿನಿಮಾವನ್ನು 'ಪುಷ್ಪ' ಸಿನಿಮಾ ನಿರ್ಮಾಣ ಮಾಡಿದ್ದ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದೆ.

ವಿಜಯ್ ದೇವರಕೊಂಡ ಜೊತೆ 'ಖುಷಿ'

ವಿಜಯ್ ದೇವರಕೊಂಡ ಜೊತೆ 'ಖುಷಿ'

'ಲೈಗರ್' ಸಿನಿಮಾ ಸೋತಿದ್ದೇನೋ ನಿಜ. ಹಾಗಂತ ವಿಜಯ್ ದೇವರಕೊಂಡ ಬಳಿ ಮತ್ತೊಂದು ಸಿನಿಮಾವಿದೆ. ಅದುವೇ 'ಖುಷಿ'. ಇದೇ ಮೊದಲ ಬಾರಿಗೆ ವಿಜಯ್ ದೇವರಕೊಂಡ ಹಾಗೂ ಸಮಂತಾ ಜೊತೆಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ ಸದ್ಯಕ್ಕೆ ನಿಂತಿದ್ದು, ಸಮಂತಾ ಸಂಪೂರ್ಣ ಗುಣಮುಖರಾದ ಬಳಿಕ ಶೂಟಿಂಗ್ ಮತ್ತೆ ಶುರುವಾಗಲಿದೆ. 'ಖುಷಿ' ಮುಗಿಯುತ್ತಿದ್ದಂತೆ ವಿಜಯ್ ದೇವರಕೊಂಡ ಹೊಸ ಸಿನಿಮಾ ಆರಂಭ ಆಗಲಿದೆ ಅನ್ನೋದು ಟಾಲಿವುಡ್‌ನಲ್ಲಿ ಟಾಕ್.

More from Filmibeat

English summary
After Liger disaster Vijay Devarakonda New Movie Confirmed With Harish Shankar, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X