ಬಾಲಯ್ಯ ಒಪ್ಪಿಲ್ಲ.. ಚಿರುನೂ ಒಪ್ಪಿಲ್ಲ.. 'ಲೈಗರ್' ಸೋಲಿನ ಕಹಿಯಲ್ಲೇ 'ಇಸ್ಮಾರ್ಟ್ ಶಂಕರ್' ಸೀಕ್ವೆಲ್ ಶುರು?

ಒಂದು ಕಾಲದಲ್ಲಿ ಪುರಿ ಜಗನ್ನಾಥ್ ಸಿನಿಮಾ ನೋಡೋಕೆ ಸಿನಿಮಾ ಪ್ರೇಮಿಗಳು ಕಾದು ಕೂರುತ್ತಿದ್ದರು. ಪಕ್ಕಾ ಮಾಸ್ ಸಿನಿಮಾಗಳನ್ನು ಮಾಡುವುದರಲ್ಲಿ ಈ ನಿರ್ದೇಶಕನನ್ನು ಮೀರಿಸುವವರೇ ಯಾರೂ ಇರಲಿಲ್ಲ. ಅದೇನು ಟ್ವಿಸ್ಟ್? ಅದೇನು ಡೈಲಾಗ್ಸ್. ಪುರಿ ಜಗನ್ನಾಥ್‌ಗಾಗಿ ಒಂದು ಕಾಲದಲ್ಲಿ ಟಾಲಿವುಡ್ ಸೂಪರ್‌ಸ್ಟಾರ್‌ಗಳೇ ಕ್ಯೂನಲ್ಲಿ ನಿಲ್ಲುತ್ತಿದ್ದರು. ಆದ್ರೀಗ ಕಾಲ ಬದಲಾಗಿದೆ. ಪುರಿ ಜಗನ್ನಾಥ್ ಒಂದರ ಹಿಂದೊಂದು ಫ್ಲಾಪ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಯಾವೊಬ್ಬ ಸೂಪರ್‌ಸ್ಟಾರ್ ಕೂಡ ಈ ನಿರ್ದೇಶನಿಗೆ ಕಾಲ್‌ಶೀಟ್ ಕೊಡುವುದಕ್ಕೆ ಸಿದ್ಧರಿಲ್ಲ.

ಅದರಲ್ಲೂ ವಿಜಯ್ ದೇವರಕೊಂಡ ಜೊತೆ ಕೈ ಜೋಡಿಸಿ 'ಲೈಗರ್' ಸಿನಿಮಾ ನಿರ್ಮಿಸಿ, ನಿರ್ದೇಶನ ಕೂಡ ಮಾಡಿದ್ದರು. ಇವರಿಬ್ಬರ ಜೋಡಿ ತೆರೆಮೇಲೆ ಮೋಡಿ ಮಾಡುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಬಿಡುಗಡೆಗೂ ಮುನ್ನ ಸಿನಿಮಾಗೆ ಎಲ್ಲಾ ಕಡೆ ಸಿಕ್ಕಾಪಟ್ಟೆ ಕ್ರೇಜ ಇತ್ತು. 'ಲೈಗರ್' ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್‌ ಇಬ್ಬರ ವೃತ್ತಿ ಬದುಕಿಗೂ ಹೊಸ ತಿರುವು ಕೊಟ್ಟೇ ಕೊಡುತ್ತೆ ಎಂದು ನಂಬಲಾಗಿತ್ತು. ಒಂದೇ ದಿನ ಎಲ್ಲಾ ತಲೆಕೆಳಗಾಗಿಬಿಡ್ತು.

After Liger Puri Jagannadh Next Movie With Ram Pothineni That is sequel of Ismart Shankar

'ಲೈಗರ್' ಫಸ್ಟ್ ಡೇ ಫಸ್ಟ್ ಶೋ ನೋಡಿದವರೇ ಜನರು ನೆಗೆಟಿವ್ ಫೀಡ್‌ಬ್ಯಾಕ್ ಕೊಡಲು ಆರಂಭಿಸಿದ್ದರು. ಜನರಿಗೆ ಈ ಸಿನಿಮಾ ಇಷ್ಟ ಆಗಿರಲಿಲ್ಲ. ಪುರಿ ಜಗನ್ನಾಥ್ ನಿರ್ದೇಶನದ ಬಗ್ಗೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್‌ಗಳನ್ನು ಕೊಡುವುದಕ್ಕೆ ಆರಂಭಿಸಿದ್ದರು. ಮೊದಲ ದಿನದಿಂದಲೇ ಬಾಕ್ಸಾಫೀಸ್‌ನಲ್ಲಿ ಹಿನ್ನೆಡೆ ಅನುಭವಿಸಿತ್ತು. ವಿಜಯ್ ದೇವರಕೊಂಡ ಜೊತೆನೇ ಮಾಡಬೇಕಿದ್ದ ಸಿನಿಮಾ ನಿಂತು ಹೋಯ್ತು. ಪುರಿ ಜಗನ್ನಾಥ್ ಹೀರೊಗಳ ಕಾಲ್‌ಶೀಟ್‌ಗಾಗಿ ಅಲೆದಾಡಬೇಕಾದ ಸ್ಥಿತಿ ನಿರ್ಮಾಣ ಆಗಿತ್ತು. ಈಗ ಕೊನೆಗೂ ಟಾಲಿವುಡ್‌ನ ಸ್ಟಾರ್ ನಟ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಇಂತಹದ್ದೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.

ಪುರಿ ಜಗನ್ನಾಥ್ ಸೋಲಿನ ಕಹಿಯನ್ನು ಮರೆತು ಹೊಸ ಸಿನಿಮಾದ ನಿರ್ದೇಶನಕ್ಕೆ ಕೈ ಹಾಕಿದ್ದಾರಂತೆ. ಟಾಲಿವುಡ್‌ ಸ್ಟಾರ್ ನಟ ರಾಮ್ ಪೋತಿನೇನಿ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಶೀಘ್ರದಲ್ಲಿಯೇ ಸಿನಿಮಾ ಸೆಟ್ಟೇರಲಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಅಂದ್ಹಾಗೆ ಈ ಸಿನಿಮಾ ರಾಮ್‌ ಪೋತಿನೇನಿಗೆ ಪುರಿ ಜಗನ್ನಾಥ್ ನಿರ್ದೇಶಿಸಿದ್ದ 'ಇಸ್ಮಾರ್ಟ್ ಶಂಕರ್' ಸಿನಿಮಾ ಸೀಕ್ವೆಲ್ ಎಂದು ಹೇಳಲಾಗುತ್ತಿದೆ.ಈ ಸಿನಿಮಾಗೆ ಈಗಾಗಲೇ ಟೈಟಲ್ ಕೂಡ ಫಿಕ್ಸ್ ಆಗಿದ್ಯಂತೆ. ಪುರಿ ಜಗನ್ನಾಥ್ ಹಾಗೂ ರಾಮ್ ಪೋತಿನೇನಿ ಕಾಂಬಿನೇಷನ್ ಸಿನಿಮಾ 'ಉಸ್ತಾದ್ ಇಸ್ಮಾರ್ಟ್ ಶಂಕರ್' ಟೈಟಲ್ ಇಡಲಾಗಿದ್ಯಂತೆ.

After Liger Puri Jagannadh Next Movie With Ram Pothineni That is sequel of Ismart Shankar

ಈ ಸಿನಿಮಾಗೂ ಮುನ್ನ ಪುರಿ ಜಗನ್ನಾಥ್ ಟಾಲಿವುಡ್ ಹಲವು ನಿರ್ದೇಶಕರ ಹಿಂದೆ ಅಲೆದಾಡಿದ್ದಾರೆ. ಯಾರೊಬ್ಬರು ಇವರೊಂದಿಗೆ ಕೆಲಸ ಮಾಡಲು ಒಪ್ಪಿಕೊಂಡಿಲ್ಲ. ಮೊದಲು ವಿಜಯ್ ದೇವರಕೊಂಡ ಸಿನಿಮಾ 'ಜನಗನಮನ' ಅರ್ಧಕ್ಕೆ ನಿಲ್ಲಿಸಬೇಕಾಯ್ತು. ಹಾಗೇ ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಿರೋ ಬಾಲಕೃಷ್ಣಗೂ ಕಥೆ ಹೇಳಿದ್ದರಂತೆ. ಅಲ್ಲೂ ಗ್ರೀನ್ ಸಿಕ್ಕಿರಲಿಲ್ಲ. ಹಾಗೇ ಮೆಗಾಸ್ಟಾರ್ ಚಿರಂಜೀವಿ ಹಾಗೂ ರವಿತೇಜಾಗೂ ಕಥೆ ಹೇಳಿದ್ದರು. ಅದೂ ಕೂಡ ವರ್ಕ್‌ಔಟ್ ಆಗಿರಲಿಲ್ಲ.

ಕೊನೆಗೂ 'ಇಸ್ಮಾರ್ಟ್ ಶಂಕರ್' ಮತ್ತೆ ಒಂದಾಗಿದೆ ಎಂದು ಟಾಲಿವುಡ್ ಮಾತಾಡಿಕೊಳ್ಳುತ್ತಿದೆ. ಅಂದ್ಹಾಗೆ ಈ ಸಿನಿಮಾ ಮುಂಬೈ ಹಿನ್ನೆಲೆಯಲ್ಲಿ ನಡೆಯಲಿದೆ ಅನ್ನೋದು ಸುದ್ದಿ. ಹೀಗಾಗಿ 'ಲೈಗರ್‌'ನಂತೆ ಇದೂ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗುವ ಸಾಧ್ಯತೆಯಿದೆ ಎಂದು ಸುದ್ದಿಯಾಗಿದೆ. ಆದರೆ, ಈ ಬಗ್ಗೆ ಇಬ್ಬರೂ ಅಧಿಕೃತವಾಗಿ ಹೇಳಿಕೆಗಳನ್ನು ನೀಡಿಲ್ಲ.

More from Filmibeat

English summary
After Liger Puri Jagannadh Next Movie With Ram Pothineni That is sequel of Ismart Shankar, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X