ರಾಜಮೌಳಿಗೆ ಮಹೇಶ್ ಬಾಬು ಜೊತೆ ಮತ್ತೊಬ್ಬ ಸೂಪರ್‌ಸ್ಟಾರ್ ಬೇಕಂತೆ?; ಮತ್ತೊಂದು ಮಲ್ಟಿಸ್ಟಾರರ್ ಸಿನಿಮಾನಾ?

ರಾಜಮೌಳಿ RRR ಸಿನಿಮಾ ಬಿಡುಗಡೆ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಮಾರ್ಚ್ 25ಕ್ಕೆ ಮೆಗಾ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಜೂ.ಎನ್‌ಟಿಆರ್ ಹಾಗೂ ರಾಮ್‌ಚರಣ್ ತೇಜಾ ಜೊತೆಯಾಗಿ ನಟಿಸಿದ ಈ ಸಿನಿಮಾ ಈಗಾಗಲೇ ಹಲವು ಕುತೂಹಲವನ್ನು ಹುಟ್ಟಾಕಿದೆ. ಮಲ್ಟಿಸ್ಟಾರರ್ ಸಿನಿಮಾ ಹೇಗಿರಬಹುದು? ಇಬ್ಬರಿಗೂ ಎಷ್ಟು ಪ್ರಾಮುಖ್ಯತೆ ನೀಡಿರಬಹುದು? ಎಂಬ ಪ್ರಶ್ನೆ ಇಬ್ಬರ ಫ್ಯಾನ್ಸ್‌ನಲ್ಲೂ ಓಡುತ್ತಿರುತ್ತೆ. ಸಿನಿಮಾ ಬಿಡುಗಡೆ ಬಳಿಕ ಸ್ವಲ್ಪ ಎಡವಟ್ಟು ಆದರೂ, ರಾಜಮೌಳಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತೆ. ಹೀಗಿದ್ದರೂ ರಾಜಮೌಳಿ ಮತ್ತೊಂದು ಮಲ್ಟಿಸ್ಟಾರರ್ ಸಿನಿಮಾಗೆ ಸಜ್ಜಾಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

RRR ಸಿನಿಮಾ ಬಳಿಕ ರಾಜಮೌಳಿ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬುಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮಾತನ್ನು ಸ್ವತ: ರಾಜಮೌಳಿ ಸ್ಪಷ್ಟ ಪಡಿಸಿದ್ದಾರೆ. ಮಹೇಶ್ ಬಾಬು 29ನೇ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಲಿದ್ದಾರೆ. ತೆರೆಮರೆಯಲ್ಲಿ ಈ ಸಿನಿಮಾಗೆ ಈಗಾಗಲೇ ತಯಾರಿ ಕೂಡ ನಡೆಯುತ್ತಿದೆ. ರಾಜಮೌಳಿ ಹಾಗೂ ಮಹೇಶ್ ಬಾಬು ಇಬ್ಬರೂ ಅಧಿಕೃತವಾಗಿ ಸಿನಿಮಾ ಅನೌನ್ಸ್ ಮಾಡುವುದಷ್ಟೇ ಬಾಕಿ. ಈ ಮಧ್ಯೆ ಮಹೇಶ್ ಬಾಬು ಮತ್ತೊಬ್ಬ ಹೀರೋ ಹುಡುಕುತ್ತಿದ್ದಾರೆ ಅನ್ನುವ ಮಾತು ಹೇಳಿಬರುತ್ತಿದೆ.

ಮಹೇಶ್ ಬಾಬು ಜೊತೆ ಮತ್ತೊಬ್ಬ ಹೀರೊ ಹುಡುಕಾಟ

ಮಹೇಶ್ ಬಾಬು ಜೊತೆ ಮತ್ತೊಬ್ಬ ಹೀರೊ ಹುಡುಕಾಟ

ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಸಿನಿಮಾ ಯಾವಾಗ ರಿಲೀಸ್ ಆಗುತ್ತೋ? ಅದನ್ನು ನಾವು ಯಾವಾಗ ನೋಡುತ್ತೇವೋ? ಅನ್ನುವ ಕಾತುರ ಇಬ್ಬರ ಅಭಿಮಾನಿಗಳಲ್ಲೂ ಇದೆ. ಇಷ್ಟು ದಿನ ರಾಜಮೌಳಿ ಸಿನಿಮಾದಲ್ಲಿ ಮಹೇಶ್ ಬಾಬು ಏಕೈಕ ಹೀರೋ ಅಂದುಕೊಂಡಿದ್ದರು. ಆದರೆ, ಈಗ ಜಕ್ಕಣ್ಣ ಮಹೇಶ್ ಬಾಬು ಜೊತೆ ಮತ್ತೊಬ್ಬ ಹೀರೋ ಹುಡುಕಾಟದಲ್ಲಿ ಇದ್ದಾರಂತೆ. ವಿಜಯೇಂದ್ರ ಪ್ರಸಾದ್ ಬರೆದ ಕಥೆ ಮತ್ತೊಬ್ಬ ಹೀರೋವನ್ನು ಡಿಮ್ಯಾಂಡ್ ಮಾಡುತ್ತಿದೆಯಂತೆ.

ಒಂದೇ ಸಿನಿಮಾದಲ್ಲಿ ಇಬ್ಬರು ಸೂಪರ್‌ಸ್ಟಾರ್?

ಒಂದೇ ಸಿನಿಮಾದಲ್ಲಿ ಇಬ್ಬರು ಸೂಪರ್‌ಸ್ಟಾರ್?

ಮಹೇಶ್ ಬಾಬು ಹಾಗೂ ರಾಜಮೌಳಿ ಸಿನಿಮಾಗೆ ವಿಜಯೇಂದ್ರ ಪ್ರಸಾದ್ ಕಥೆ ಹಣೆಯುತ್ತಿದ್ದಾರೆ. ಪ್ರೀ ಪ್ರೊಡಕ್ಷನ್ ವೇಳೆ ವಿಜಯೇಂದ್ರ ಪ್ರಸಾದ್‌ಗೆ ಮಹೇಶ್ ಬಾಬು ಜೊತೆ ಮತ್ತೊಬ್ಬ ಸೂಪರ್ ಸ್ಟಾರ್ ಬೇಕು ಅಂತ ಅನಿಸುತ್ತಿದೆಯಂತೆ. ಹೀಗಾಗಿ ರಾಜಮೌಳಿ ಬಳಿ ಈ ವಿಷಯ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಟಾಲಿವುಡ್‌ನಲ್ಲಿ ಮಹೇಶ್ ಬಾಬು-ರಾಜಮೌಳಿ ಜೋಡಿ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದ್ದು ಸಿನಿಮಾ ಆರಂಭ ಆಗುತ್ತಿರುವುದನ್ನು ಎದುರು ನೋಡುತ್ತಿದ್ದಾರೆ. ಅಷ್ಟರಲ್ಲೇ ಮತ್ತೊಬ್ಬ ಹೀರೋ ಎಂಟ್ರಿ ಬಗ್ಗೆ ಗುಲ್ಲೆದ್ದಿದೆ.

ರಾಜಮೌಳಿ ನಿರ್ಧಾರವೇ ಅಂತಿಮ

ರಾಜಮೌಳಿ ನಿರ್ಧಾರವೇ ಅಂತಿಮ

ಮಹೇಶ್ ಬಾಬುಗಾಗಿ ಹೆಣೆಯುತ್ತಿರುವ ಕಥೆಯಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ವಿಜಯೇಂದ್ರ ಪ್ರಸಾದ್ ಹಾಗೂ ರಾಜಮೌಳಿ ಕೂತು ಕಥೆಯ ಫೈನಲ್ ವರ್ಷನ್ ಅನ್ನು ಲಾಕ್ ಮಾಡಲಿದ್ದಾರೆ. ಆದರೆ, ಈ ಹಂತದಲ್ಲಿ ರಾಜಮೌಳಿ ಹಾಗೂ ವಿಜಯೇಂದ್ರ ಪ್ರಸಾದ್ ಇಬ್ಬರಿಗೂ ಮತ್ತೊಬ್ಬ ಹೀರೋ ಬೇಕು ಅಂತ ಅನಿಸಿದೆ. ಈ ಕಾರಣಕ್ಕೆ ಟಾಲಿವುಡ್‌ನ ಟಾಪ್ ಸ್ಟಾರ್‌ ಅನ್ನು ಮಹೇಶ್ ಬಾಬು ಸಿನಿಮಾಗೆ ಕರೆದುಕೊಂಡು ಬರಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. RRR ಬಿಡುಗಡೆಯಾಗುತ್ತಿದ್ದಂತೆ ಹುಡುಕಾಟ ಆರಂಭ ಆಗಲಿದೆ ಎನ್ನಲಾಗುತ್ತಿದೆ.

ಮಲ್ಟಿಸ್ಟಾರರ್ ಚಿತ್ರಕ್ಕೆ ಏನಂತಾರೆ ಪ್ರಿನ್ಸ್?

ಮಲ್ಟಿಸ್ಟಾರರ್ ಚಿತ್ರಕ್ಕೆ ಏನಂತಾರೆ ಪ್ರಿನ್ಸ್?

ಪ್ರಿನ್ಸ್ ಮಹೇಶ್ ಬಾಬು ಮಲ್ಟಿಸ್ಟಾರರ್ ಸಿನಿಮಾದಲ್ಲಿ ನಟಿಸಿದ್ದು ತೀರಾ ವಿರಳ. ಹಿಂದೊಮ್ಮೆ ಮಲ್ಟಿಸ್ಟಾರರ್ ಸಿನಿಮಾದಲ್ಲಿ ನಟಿಸುವುದಿಲ್ಲವೆಂದು ಮಹೇಶ್ ಬಾಬು ಹೇಳಿದ್ದರು. ಟಾಲಿವುಡ್‌ನಲ್ಲಿ ತಮ್ಮ ಹೀರೋಗಾಗಿ ಅಭಿಮಾನಿಗಳು ಪ್ರಾಣ ಬೇಕಾದರೂ ಕೊಡ್ತಾರೆ. ಇಂತಹ ಅಭಿಮಾನಿಗಖು ಇರುವುದರಿಂದ ಮತ್ತೊಬ್ಬ ಹೀರೋ ಜೊತೆ ನಟಿಸಿದರೆ, ಇಬ್ಬರು ಹೀರೋಗಳ ನಡುವಿನ ಕಾಳಗಕ್ಕೆ ಕಾರಣ ಆಗಬಹುದು ಎಂಬ ಆತಂಕ. ಕೆಲವೊಮ್ಮೆ ಮಹೇಶ್ ಬಾಬು ಸಿನಿಮಾದ ನಾಯಕಿ ಯಾರಾಗಬೇಕು ಅನ್ನುವ ಅಭಿಪ್ರಾಯವನ್ನು ಮುಲಾಜಿಲ್ಲದೆ ಕೊಡ್ತಾರೆ. ಹೀಗಾಗಿ ಮಹೇಶ್ ಬಾಬು ಹಾಗೂ ರಾಜಮೌಳಿ ಮಲ್ಟಿಸ್ಟಾರರ್ ಸಿನಿಮಾ ಬಗ್ಗೆ ಗೊಂದಲವಿದೆ.

More from Filmibeat

English summary
After RRR Rajamouli and Mahesh Babu movie is a Multistarrer. Vijayendra Prasad writing script, that needs another hero.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X