'ಸು ಫ್ರಮ್ ಸೋ' ರವಿಯಣ್ಣನ ಹೊಸ ಸಿನಿಮಾದ ಟೈಟಲ್ ಏನು ಗೊತ್ತೇ? ಶ್ರೀರಾಮಚಂದ್ರ ಏನಿದು ಕಥೆ?

'ಸು ಫ್ರಮ್ ಸೋ' ಕನ್ನಡ ಚಿತ್ರರಂಗದ ದಿಕ್ಕನೇ ಬದಲಿಸಿದ ಸಿನಿಮಾ. ಕಮ್ಮಿ ಬಜೆಟ್‌ನ ಸಿನಿಮಾವೊಂದು ಕೇವಲ ಕಂಟೆಂಟ್‌ನಿಂದಲೇ ಮೆಗಾ ಬ್ಲಾಕ್‌ ಬಸ್ಟರ್ ಆಗಿದ್ದು ಇತಿಹಾಸ. ಕನ್ನಡ ಚಿತ್ರರಂಗ ಅದೆಷ್ಟೋ ಅಚ್ಚರಿಗೆ ಸಾಕ್ಷಿಯಾಗಿದೆ. ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಅದೊಂದು ದಾಖಲೆ ಬರೆದಿತ್ತು.

ಈ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳನ್ನು ಪರಿಚಯಿಸಿತ್ತು. ಅದರಲ್ಲಿ ರವಿಯಣ್ಣ ಪಾತ್ರ ಕನ್ನಡಿಗರ ಮನಸ್ಸು ಗೆದ್ದಿತ್ತು. ಈ ಪಾತ್ರದಲ್ಲಿ ಶನೀಲ್ ಗೌತಮ್ ನಟಿಸಿದ್ದರು. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ರೈಟರ್ ಆಗಿ ಗುರುತಿಸಿಕೊಂಡಿರುವ ಶನೀಲ್ ಗೌತಮ್ 'ಸು ಫ್ರಮ್ ಸೋ' ಸಿನಿಮಾ ಮೂಲಕ ನಾಯಕನಾಗಿ ಬಡ್ತಿ ಪಡೆದಿದ್ದರು. ಮೆಗಾ ಹಿಟ್ ಕೊಟ್ಟ ಬಳಿಕ ಹೊಸ ಸಿನಿಮಾ ಬಗ್ಗೆ ಸುಳಿವು ಇರಲಿಲ್ಲ. ಆದ್ರೀಗ ಸದ್ದಿಲ್ಲದೆ ಒಂದು ಸಿನಿಮಾದ ಶೂಟಿಂಗ್ ನಡೆಯುತ್ತಿದೆ ಎಂದು ಸಿನಿಮಾ ಮಂದಿ ಸುದ್ದಿ ಹಬ್ಬಿಸಿದ್ದಾರೆ.

After Su From So Ravi Anna fame Shaneel Gautham new movie title as Srirama Chandra

ಶನೀಲ್ ಗೌತಮ್ ಕನ್ನಡದ ಜನಪ್ರಿಯ ಸಿನಿಮಾಗಳಿಗೆ ರೈಟರ್ ಆಗಿ ಗುರುತಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶಿಸಿದ 'ಕಾಂತಾರ' ಸಿನಿಮಾದಲ್ಲಿ ನಟಿಸಿದ್ದಷ್ಟೇ ಅಲ್ಲದೆ, ಲೇಖಕರಾಗಿಯೂ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ರಿಷಬ್ ಶೆಟ್ಟಿ ಅನೌನ್ಸ್ ಮಾಡಿದ ಎರಡನೇ ಅಧ್ಯಾಯ ಪ್ರಾಜೆಕ್ಟ್‌ನಲ್ಲಿಯೂ ಇವರಿದ್ದಾರೆ. ಈ ಗ್ಯಾಪ್‌ನಲ್ಲಿ ಶನೀಲ್ ಗೌತಮ್ ಹೊಸ ಸಿನಿಮಾದ ಟೈಟಲ್‌ನಿಂದ ಹಿಡಿದು ಸ್ಟಾರ್‌ ಕಾಸ್ಟ್ ಬಗ್ಗೆ ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಅದೇನು ಅಂತ ನೋಡುವುದಕ್ಕೆ ಮುಂದೆ ಓದಿ.

'ಸು ಫ್ರಮ್ ಸೋ' ಬಳಿಕ ರಾಜ್ ಬಿ ಶೆಟ್ಟಿ ಮತ್ತೊಂದು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆ ಸಿನಿಮಾಗೆ ಶನೀಲ್ ಗೌತಮ್ ಹೀರೋ. ಹೀಗಾಗಲೇ ಸಿನಿಮಾ ಕಥೆ ಎಲ್ಲಾ ಲಾಕ್ ಆಗಿ, ಶೂಟಿಂಗ್ ಕೂಡ ಶುರುವಾಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಈ ಬಾರಿ ರಾಜ್‌ ಬಿ ಶೆಟ್ಟಿಗೆ ನಿರ್ಮಾಪಕ ಗಂಗಾಧರ್ ಸಾಥ್ ನೀಡಿದ್ದು, ಈಗಾಗಲೇ ಮಂಗಳೂರು ಭಾಗದಲ್ಲಿ ಸಿನಿಮಾದಲ್ಲಿ 10 ದಿನಗಳ ಕಾಲ ಶೂಟಿಂಗ್ ಕೂಡ ನಡೆದಿದೆ ಅನ್ನೋ ಮಾತು ಹೇಳಿ ಬರುತ್ತಿದೆ. ಒಟ್ಟು 45 ದಿನಗಳ ಪ್ರಾಜೆಕ್ಟ್ ಇದು ಎನ್ನಲಾಗಿದೆ.

ರವಿಯಣ್ಣನಾಗಿ ಫೇಮಸ್ ಆಗಿರುವ ಶನೀಲ್ ಗೌತಮ್‌ಗೆ ಒಳ್ಳೊಳ್ಳೆ ಆಫರ್‌ಗಳು ಬರುತ್ತಿವೆ. ಅದರಲ್ಲಿ ರಾಜ್‌ ಬಿ ಶೆಟ್ಟಿ ಹಾಗೂ ಗಂಗಾಧರ್ ನಿರ್ಮಾಣ ಮಾಡುತ್ತಿರುವ ಸಿನಿಮಾ ಕೂಡ ಒಂದು. ಈಗಾಗಲೇ ಶನೀಲ್ ಗೌತಮ್ ಕೂಡ ಮಾಧ್ಯಮಗಳಿಗೆ ಕನ್ಫರ್ಮ್ ಮಾಡಿದ್ದಾರೆ. ಅಂದ್ಹಾಗೆ ಈ ಸಿನಿಮಾಗೆ ಟೈಟಲ್ ಕೂಡ ಫಿಕ್ಸ್ ಮಾಡಲಾಗಿದ್ಯಂತೆ. 'ಶ್ರೀರಾಮ-ಚಂದ್ರ' ಎಂದು ಶೀರ್ಷಿಕೆ ಇಡಲಾಗಿದೆ ಎಂದು ಗಾಂಧಿನಗರದಲ್ಲಿ ಸುದ್ದಿ ಹಬ್ಬಿದೆ.

After Su From So Ravi Anna fame Shaneel Gautham new movie title as Srirama Chandra

ಶನೀಲ್ ಗೌತಮ್ ಪಾತ್ರದ ಬಗ್ಗೆ, ಸಿನಿಮಾದ ಕತೆಯ ಬಗ್ಗೆ ಸುಳಿವು ಇಲ್ಲ. ಆದರೆ, ಕಳೆದ ವರ್ಷ ರಿಲೀಸ್ ಆಗಿದ್ದ ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ 'ಫಾರೆಸ್ಟ್'ಗೆ ಆಕ್ಷನ್ ಕಟ್ ಹೇಳಿದ್ದ ಚಂದ್ರ ಮೋಹನ್ ಈ ಸಿನಿಮಾವನ್ನೂ ನಿರ್ದೇಶನ ಮಾಡುತ್ತಿದ್ದಾರೆ. ಆದರೆ, ಈ ಸಿನಿಮಾದ ಟೈಟಲ್ ಬಗ್ಗೆ ಶನೀಲ್ ಗೌತಮ್ ಆಗಲಿ, ರಾಜ್ ಬಿ ಶೆಟ್ಟಿ ಆಗಲಿ ಇಲ್ಲಾ ಸಿನಿಮಾ ತಂಡವಾಗಲಿ ಸುಳಿವನ್ನು ಬಿಟ್ಟು ಕೊಟ್ಟಿಲ್ಲ.

ಶನೀಲ್ ಗೌತಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಸು ಫ್ರಮ್ ಸೋ' ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ರಾಜ್ ಬಿ ಶೆಟ್ಟಿ ನಿರ್ಮಾಣದ ಜೊತೆಗೆ ಸ್ವಾಮೀಜಿ ಪಾತ್ರದಲ್ಲಿಯೂ ನಟಸಿದ್ದರು. ಈ ಸಿನಿಮಾದಲ್ಲಿಯೂ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರಾ? ಇಲ್ಲಾ ಕೇವಲ ನಿರ್ಮಾಪಕರಾಗಿ ಅಷ್ಟೇ ಉಳಿದುಕೊಂಡಿದ್ದಾರಾ? ಟೀಮ್ ಇಟ್ಟಿರೋದು ಟೈಟಲ್ ಇದೇನಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

English summary
After Su From So Ravi Anna fame Shaneel Gautham new movie title as Srirama Chandra.
Read more about: raj b shetty kannada movie actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X