ಎರಡು ಸಿನಿಮಾ ಸೋಲಿನಿಂದ ನಾಗ ಚೈತನ್ಯಗೆ ಶಾಕ್: ಮುಂದಿನ ಹೆಜ್ಜೆಯೇನು?

ಅಕ್ಕಿನೇನಿ ಕುಟುಂಬದ ಕುಡಿ ನಾಗ ಚೈತನ್ಯ ಟಾಲಿವುಡ್‌ನಲ್ಲಿ ಒಳ್ಳೆ ಹೆಸರಿದೆ. ಅಕ್ಕಿನೇನಿ ಕುಟುಂಬದಲ್ಲಿ ನಾಗಾರ್ಜುನ ಬಳಿಕ ಹೀರೊ ಆಗಿ ಗುರುತಿಸಿಕೊಂಡಿರೋ ನಟ. ವಿವಾದಗಳಿಂದ ದೂರ ಉಳಿಯಲು ಪ್ರಯತ್ನ ಪಟ್ಟರೂ ಇತ್ತೀಚೆಗೆ ಅದು ಸಾಧ್ಯವಾಗುತ್ತಿಲ್ಲ. ಅದರಲ್ಲೂ ವಿಚ್ಛೇದನದ ಬಳಿಕವಂತೂ ನಾಗ ಚೈತನ್ಯ ಸದಾ ಸುದ್ದಿಯಲ್ಲಿರೋ ನಟನಾಗಿದ್ದಾರೆ.

ಮಾಜಿ ಪತ್ನಿ ಸಮಂತಾ ಜೊತೆ ನಾಗ ಚೈತನ್ಯ ವಿಚ್ಛೇದನ ಪಡೆದಾಗಿನಿಂದ ವೈಯಕ್ತಿಕ ಬದುಕಿನ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಆದರೆ, ನಾಗ ಚೈತನ್ಯ ಇದ್ಯಾವುದರ ಬಗ್ಗೆನೂ ತಲೆ ಕೆಡಿಸಿಕೊಂಡಿಲ್ಲ. ಆದ್ರೀಗ ಎರಡು ಸಿನಿಮಾಗಳ ಸೋಲಿನಿಂದ ತಲೆಕಡಿಸಿಕೊಂಡಿದ್ದಾರಂತೆ. ಇಂತಹದ್ದೊಂದು ಸುದ್ದಿ ಟಾಲಿವುಡ್‌ನಲ್ಲಿ ಓಡಾಡುತ್ತಿದೆ.

After Thank You and Laal Singh Chaddha Failure Naga Chaitanya In Depression

ಸತತ ಎರಡು ಸಿನಿಮಾ ಸೋಲು

ನಾಗಚೈತನ್ಯ ತಮ್ಮ ವೈಯುಕ್ತಿಕ ಬದುಕಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದ್ರೀಗ ಎರಡು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋತಿದ್ದರಿಂದ ಕಂಗಾಲಾಗಿದ್ದರಂತೆ. ಲಾಲ್ ಸಿಂಗ್ ಚಡ್ಡ ಹಾಗೂ ಥ್ಯಾಂಕ್ ಯೂ ಸಿನಿಮಾ ಮಕಾಡೆ ಮಲಗಿದ ಬಳಿಕ ಖಿನ್ನತೆಗೊಳಗಾಗಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಆಮಿರ್ ಖಾನ್ ಅಂತ ದಿಗ್ಗಜನ ಸಿನಿಮಾ 'ಲಾಲ್ ಸಿಂಗ್ ಚಡ್ಡ' ಮೂಲಕ ಬಾಲಿವುಡ್‌ಗೆ ಪ್ರವೇಶ ಮಾಡಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತೆ. ಕೋಟಿ ಕೋಟಿ ಹಣ ಕೊಳ್ಳೆ ಹೊಡೆಯುತ್ತೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ, ಸಿನಿಮಾ ಸೋತಿದ್ದರಿಂದ ನಾಗ ಚೈತನ್ಯ ಶಾಕ್‌ನಲ್ಲಿದ್ದಾರಂತೆ.

ಚಿತ್ರರಂಗಕ್ಕೆ ಬಂದು 13 ವರ್ಷ

ಟಾಲಿವುಡ್ ಮನ್ಮಥ ನಾಗಾರ್ಜುನ ಪುತ್ರ ನಾಗ ಚೈತನ್ಯ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 13 ವರ್ಷಗಳಾಗಿವೆ. 'ಜೋಶ್' ಸಿನಿಮಾ ಮೂಲಕ ನಾಗ ಚೈತನ್ಯ 2009 ರಲ್ಲಿ ಗ್ರ್ಯಾಂಡ್ ಆಗಿ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಅಕ್ಕಿನೇನಿ ಕುಟುಂಬದಿಂದ ಬಂದ ಹೀರೊಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತವೇ ಸಿಕ್ಕಿತ್ತು. ಆದರೆ, ಮೊದಲ ಸಿನಿಮಾ ರಿಲೀಸ್ ಆದ ಬಳಿಕ ಸೋಲುಂಡಿತ್ತು. ಆದರೆ, ಚೈತನ್ಯ ಬಾಳಲ್ಲಿ ಸಮಂತಾ ಬಂದ ಬಳಿಕ ಅದೃಷ್ಟ ಕುಲಾಯಿಸಿತ್ತು.

After Thank You and Laal Singh Chaddha Failure Naga Chaitanya In Depression

ಇವರಿಬ್ಬರ ಕಾಂಬಿನೇಷನ್‌ನಲ್ಲಿ ಹಲವು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದವು. ಆದರೆ, ದಿಲ್ ರಾಜು ಅಂತ ನಿರ್ಮಾಪಕನ 'ಥ್ಯಾಂಕ್ ಯೂ' ಹಾಗೂ ಆಮಿರ್ ಖಾನ್ ಅಂತಹ ಸೂಪರ್‌ಸ್ಟಾರ್ ಸಿನಿಮಾದಲ್ಲಿ ನಟಿಸಿದರೂ, ನಾಗ ಚೈತನ್ಯ ಕಮಾಲ್ ಮಾಡಲು ಸಾಧ್ಯವಾಗಲಿಲ್ಲ.

Recommended Video

Daali Dhananjay | ಆ ಒಂದು ನೆನಪು ಕಾಡತ್ತೆ | SIIMA Awards| Rana Daggubati *Press Meet

ಹೀಗಾಗಿ ಮುಂದಿನ ವೃತ್ತಿ ಬದುಕನ್ನು ಹೇಗೆ ತೆಗೆದುಕೊಂಡು ಹೋಗಬೇಕು ಎಂಬ ಬಗ್ಗೆ ಚಿಂತಿತರಾಗಿದ್ದಾರೆ ಎನ್ನಲಾಗಿದೆ. ಸದ್ಯ ಟಾಲಿವುಡ್‌ನಲ್ಲಿ ನಾಗ ಚೈತನ್ಯ ಬಗ್ಗೆ ಇದೇ ಚರ್ಚೆಯಾಗುತ್ತಿದ್ದು, ಮುಂದೆ ಯಾವ ರೀತಿ ಹೆಜ್ಜೆ ಇಡುತ್ತಾರೆ ಎನ್ನುವುದೇ ಪ್ರಶ್ನೆಯಾಗಿದೆ.

More from Filmibeat

English summary
After Thank You and Laal Singh Chaddha Failure Naga Chaitanya In Depression, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X